
ಕೊಕ್ಕೋ ಬೆಳೆಗೆ ಶಿಲೀಂದ್ರನಾಶಕ ಸಿಂಪರಣೆ ಏಕೆ ಅಗತ್ಯ ?
ಮಳೆಗಾಲದಲ್ಲಿ ಕೊಕ್ಕೋ ಬೆಳೆ ಉಳಿಸಿಕೊಳ್ಳಬೇಕಾದರೆ ಶಿಲೀಂದ್ರ ನಾಶಕದ ಸಿಂಪರಣೆ ಅತ್ಯಗತ್ಯ. ಕೊಕ್ಕೋ ಬೆಳೆ ಶಿಲೀಂದ್ರ ರೋಗಕ್ಕೆ ಬೇಗ ತುತ್ತಾಗುವ ಬೆಳೆಯಾಗಿದ್ದು…
ಮಳೆಗಾಲದಲ್ಲಿ ಕೊಕ್ಕೋ ಬೆಳೆ ಉಳಿಸಿಕೊಳ್ಳಬೇಕಾದರೆ ಶಿಲೀಂದ್ರ ನಾಶಕದ ಸಿಂಪರಣೆ ಅತ್ಯಗತ್ಯ. ಕೊಕ್ಕೋ ಬೆಳೆ ಶಿಲೀಂದ್ರ ರೋಗಕ್ಕೆ ಬೇಗ ತುತ್ತಾಗುವ ಬೆಳೆಯಾಗಿದ್ದು ಮಳೆಗಾಲ ಪೂರ್ವದಲ್ಲೇ ಸಿಂಪರಣೆ ಮಾಡಿದರೆ ಉತ್ತಮ. ಮಳೆಗಾಲ ಮುಗಿಯುವ ತನಕ ತಿಂಗಳಿಗೆ ಒಮ್ಮೆಯಂತೆ ಬೋರ್ಡೋ ದ್ರಾವಣ ಅಥವಾ ಇನ್ನಿತರ ಶಿಲೀಂದ್ರ ನಾಶಕವನ್ನು ಸಿಂಪಡಿಸುತ್ತಾ ಇದ್ದರೆ ಉತ್ತಮ ಫಸಲು ಪಡೆಯಬಹುದು. ಕೊಕ್ಕೋ ಎಂಬುದು ವರ್ಷ ಪೂರ್ತಿ ಬೆಳೆ ಇರುವ ಮಿಶ್ರ ಬೆಳೆ . ಕೆಲವು ಸೀಸನ್ ಗಳಲ್ಲಿ ಸ್ವಲ್ಪ ಕಡಿಮೆಯಾಗಬಹುದು. ಕೆಲವು ಸೀಸನ್ ನಲ್ಲಿ ಹೆಚ್ಚಾಗಬಹುದು. ಆದರೆ…
ನಮ್ಮ ಸುತ್ತಮುತ್ತ ಎಲ್ಲಾ ಕಡೆಯಲ್ಲಿ ಕಾಣಸಿಗುತ್ತಿದ್ದ ಹುತ್ತಗಳು ಈಗ ಅಪರೂಪವಾಗಲಾರಂಭಿಸಿದೆ. ಇದು ನಮ್ಮ ಹೊಲದ ಮಣ್ಣು ಸಾವಯವ ಅಂಶ ಕಳೆದುಕೊಡಿರುವುದರ ಸೂಚನೆ. ಬಯಲು ಸೀಮೆಯ ಕಡೆ, ಕಾಡು ಇರುವಲ್ಲಿ ಮಾನವ ಹಸ್ತಕ್ಷೇಪ ಇಲ್ಲದ ಕಡೆ ಸ್ವಲ್ಪ ಮಟ್ಟಿಗೆ ಹುತ್ತಗಳು ಕಾಣಸಿಕ್ಕರೆ ಉಳಿದೆಡೆ ಹುತ್ತಗಳಿಲ್ಲ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುತ್ತಗಳ ಸಂಖ್ಯೆಯೇ ಕ್ಷೀಣಿಸುತ್ತಿದೆ! ಹುತ್ತಗಳು ಇಲ್ಲದಿದ್ದರೆ ಗೆದ್ದಳು ಇಲ್ಲವಲ್ಲಾ ಒಳ್ಳೆಯದೇ ಅಯಿತಲ್ಲಾ ಎಂದು ಭಾವಿಸಬೇಡಿ. ಹುತ್ತಗಳು ನಮ್ಮ ಭೂಮಿಯ ಫಲವತ್ತತೆಯ ಸಂಕೇತ. ಹುತ್ತಗಳು ಬೆಳೆಯುವುದು ಭೂಮಿಯಲ್ಲಿರುವ ಸಾವಯವ…
ಹೆಚ್ಚಿನವರು ಇದನ್ನು ಕಳೆ ಎಂದು ದೂಷಿಸುತ್ತಾರೆ. ಪ್ರಕೃತಿ ತನ್ನ ಉಳಿವಿಗಾಗಿ ಕೆಲವು ಜೀವ ಸಂಕುಲಗಳನ್ನು ಸೃಷ್ಟಿಸುತ್ತಲೇ ಇರುತ್ತದೆ. ಅಂಥಹ ಒಂದು ಕೊಡುಗೆಯೇ ಈ ಸಸ್ಯ. ಒಂದು ವೇಳೆ ಈ ಬಳ್ಳಿ ಅಥವಾ ಗಿಡ ಬಾರದೆ ಇರುತ್ತಿದ್ದರೆ ಇಂದು ಏನಾಗುತ್ತಿತ್ತು? ಇದರಿಂದ ಪ್ರಯೋಜನ ಪಡೆದುಕೊಳ್ಳುವುದಾದರೆ ಎಷ್ಟೆಲ್ಲಾ ಇದೆ ಎಂಬುದರ ಕುರಿತಾಗಿ ಸ್ವಲ್ಪ ವಿವರಗಳು ಇಲ್ಲಿದೆ. ಹಳದಿ ಸೇವಂತಿಗೆ ಬಳ್ಳಿ ಇದು ಇಲ್ಲದ ಜಾಗವೇ ಇಲ್ಲ. ಹೇಗೆ ಬಂತು ಎಲ್ಲಿಂದ ಬಂತು ಎಂಬುದರ ಹುಡುಕಾಟ ಇನ್ನು ಆಗಬೇಕು. ಆದರೆ ಇದು…
ಮಣ್ಣು ತನ್ನ ಪಲವತ್ತತೆಯನ್ನು ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಿದೆ. ಜನ ಸಾವಯವ ಗೊಬ್ಬರ ಕಡಿಮೆಯಾಗಿ ಹೀಗಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ಇದು ಸ್ವಲ್ಪ ಮಟ್ಟಿಗೆ ಸರಿಯಾದರೂ ಅದರ ಜೊತೆಗೆ ಇನ್ನೂ ಒಂದು ಕಾರಣ ಇದೆ. ಅದು ಕಳೆನಾಶಕಗಳ ಬಳಕೆ. ಕಳೆನಾಶಕಗಳನ್ನು ಬಳಸಿದಲ್ಲಿ ಮಣ್ಣಿನ ರಚನೆ ಹಾಳಾಗುತ್ತದೆ. ಅದು ಹೇಗೆ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಕಳೆನಾಶಕ ಇದು ತೋಟವನ್ನು ಚೊಕ್ಕವಾಗಿರಿಸುತ್ತದೆ. ಒಡಾಡುವುದಕ್ಕೆ, ಸುಲಭ ಎಂಬುದು ನಮ್ಮ ಅಭಿಪ್ರಾಯ. ಕಳೆಗಳು ಬೆಳೆಗೆ ಪೂರೈಸಿದ ಪೋಷಕಗಳನ್ನು ಬೇಗ ಕಬಳಿಸುತ್ತದೆ, ಇದರಿಂದಾಗಿ…
ತರಕಾರಿಗಳಿಗೆ, ಹಣ್ಣು ಹಂಪಲುಗಳಿಗೆ ಇರುವೆಗಳು ಬರುವುದು ಸಾಮಾನ್ಯ. ಕೆಂಪು ಇರುವೆಗಳ ಉಪಟಳಕ್ಕೆ ಯಾವುದನ್ನೂ ಬೆಳೆಯುವುದು ಬೇಡ ಎನ್ನಿಸುತ್ತದೆ. ವಿಚಿತ್ರ ವಿಚಿತ್ರ ಇರುವೆಗಳು ನಾವು ಬೆಳೆದ ಫಲಕ್ಕೆ ತೊಂದರೆ ಮಾಡುತ್ತವೆ. ಯಾಕೆ ಇವುಗಳು ರೈತರ ಬೆಳೆಗೆ ತೊಂದರೆ ಮಾಡುತ್ತವೆ. ಅವು ಯಾಕೆ ಬರುವುದು ಇದಕ್ಕೆಲ್ಲಾ ಉತ್ತರ ಇಲ್ಲಿದೆ. ಇವು ಬರಬೇಕಾದರೆ ಯಾವುದಾದರೂ ಕಾರಣ ಇರಬೇಕು. ಗಾಳಿ ಬಾರದೆ ಎಲೆ ಅಲ್ಲಾಡಲಿಕ್ಕಿಲ್ಲ. ಸಿಹಿ ಇಲ್ಲದೆ ಇರುವೆ ಬರಲಿಕ್ಕಿಲ್ಲ ಎಂಬ ಮಾತಿದೆ. ಇವುಗಳು ಬೆಳೆಗೆ ತೊಂದರೆ ಮಾಡಲು ಬರುವುದೋ ಅಥವಾ ಅವು…
ಅಡಿಕೆ ಮರಗಳು ಗಾಳಿಗೆ, ರೋಗಕ್ಕೆ ತುತ್ತಾಗಿ ಸತ್ತರೆ ಅಂತಹ ಮರಗಳನ್ನು ತಕ್ಷಣ ಕಡಿದು ಸೂಕ್ತ ವಿಲೇವಾರಿ ಮಾಡಬೇಕು. ಈ ವರ್ಷ ಶಿರ ಕೊಳೆ ಬಂದು, ಗಾಳಿಗೆ ಭಾರೀ ಪ್ರಮಾಣದಲ್ಲಿ ಮರಗಳು ಅರ್ಧರ್ಧ ತುಂಡಾಗಿ ಬಿದ್ದಿದೆ. ರೈತರು ಅದನ್ನು ಹಾಗೆಯೇ ಬಿಡುತ್ತಾರೆ. ಅದನ್ನು ಕಡಿಯದೆ ಹಾಗೆಯೇ ಬಿಟ್ಟರೆ ಏನಾಗುತ್ತದೆ ಈ ಬಗ್ಗೆ ವಿಸ್ತೃತ ಲೇಖನ ಇದು. ಸತ್ತ ಮರಮಟ್ಟು,ಮನುಷ್ಯ , ಪ್ರಾಣಿ ಯಾವುದಿದ್ದರೂ ಅದನ್ನು ತಕ್ಷಣ ಸೂಕ್ತ ವಿಲೇವಾರಿ ಮಾಡಬೇಕು. ಅದನ್ನು ಹಾಗೆಯೇ ಉಳಿಸಿಕೊಂಡರೆ ಅದರಿಂದ ಜೀವ ಇರುವಂತದ್ದಕ್ಕೆ…
ಬೇರು ಹುಳ white grub ಅಡಿಕೆ ಬೆಳೆಗೆ ಅತೀ ದೊಡ್ಡ ಶತ್ರು ಎಂತಲೇ ಹೇಳಬಹುದು. ಇದು ಬರೇ ಅಡಿಕೆ ಬೆಳೆಗೆ ಮಾತ್ರವಲ್ಲ.ಕಬ್ಬು, ತೆಂಗು ಹಾಗೆಯೇ ಇನ್ನಿತರ ಮರಮಟ್ಟು ಬೆಳೆಗಳಿಗೂ ಇದು ತೊಂದರೆ ಮಾಡುತ್ತದೆ. ಮರಗಳ ಕಾಂಡ ಕೊರಕ, ಗೆಲ್ಲು ಕೊರಕ, ಬೇರು ತಿನ್ನುವ ಹುಳಗಳ ತೊಂದರೆ ಈ ಸಮಯದಲ್ಲೇ ಜಾಸ್ತಿ. ಇದನ್ನು ನೀವೂ ಗಮನಿಸಿರಬಹುದು. ಕಾರಣ ಇಷ್ಟೇ. ಈ ಸಮಯದಲ್ಲಿ ಜೂನ್ , ಜುಲೈ ತಿಂಗಳಲ್ಲಿ ದುಂಬಿಗಳು ಮೊಟ್ಟೆ ಇಟ್ಟದ್ದು ಮರಿಗಳಾಗಿ ತಮ್ಮ ಆಹಾರ ಸೇವನೆ ಕೆಲಸ…
ಗ್ಲೆರಿಸೀಡಿಯಾ ಗೆಲ್ಲು ನೆಟ್ಟು ಕರಿಮೆಣಸಿನ ಬಳ್ಳಿಯನ್ನು ಬಿಟ್ಟರೆ ಚೆನ್ನಾಗಿ ಬೆಳೆಯುತ್ತದೆ. ಇದರಿಂದ ಕೊಯಿಲು ಮಾಡಲು ಕಷ್ಟವಿಲ್ಲ. ಹಿಂದೆ ನಮ್ಮಲ್ಲಿ ಹಾಲುವಾಣ ಮರಗಳಿಗೆ ಮೆಣಸಿನ ಬಳ್ಳಿ ಹಬ್ಬಿಸುತ್ತಿದ್ದರು. ಕ್ರಮೇಣ ಅಡಿಕೆ, ತೆಂಗಿನ ಮರ ಹಾಗೆಯೇ ಇನ್ನಿತರ ಕಾಡು ಮರಮಟ್ಟುಗಳಿಗೆ ಬಳ್ಳಿ ಹಬ್ಬಿಸುವುದು ಪ್ರಾರಂಭವಾಯಿತು. ಈ ಮರಮಟ್ಟುಗಳಲ್ಲಿ ಬಳ್ಳಿ ಉತ್ತಮವಾಗಿ ಹಬ್ಬುತ್ತದೆಯಾದರೂ ಕೊಯಿಲು ಕೆಲಸ ಕಷ್ಟವಾಗಲಾರಂಭಿಸಿದೆ. ಅದಕ್ಕೊಂದು ಪರಿಹಾರ ಹುಡುಕುವ ನಿಟ್ಟಿನಲ್ಲಿ ಬೇರೆ ಬೇರೆ ಪ್ರಯೋಗಗಳು ನಡೆಯುತ್ತಿವೆ. ಅವುಗಳಲ್ಲಿ ಒಂದು ಗ್ಲೆರಿಸೀಡಿಯಾ ಸಸ್ಯ. ಈ ಸಸ್ಯಕ್ಕೆ ಕರಿಮೆಣಸಿನ ಬಳ್ಳಿ ಹಬ್ಬಿಸುವುದರಿಂದ…
ಅಡಿಕೆ ಮರಗಳಲ್ಲಿ ಶಿರ ಒಣಗಿ ಕೊಳೆಯುವ ಸಮಸ್ಯೆ ಬಹಳ ಹಿಂದಿನಿಂದಲೂ ಇದ್ದದ್ದು. ಕೆಲವು ವರ್ಷ ಹೆಚ್ಚಾಗುತ್ತದೆ. ಕೆಲವು ವರ್ಷ ಗೌಣವಾಗಿರುತ್ತದೆ. ಈ ವರ್ಷ ಇದು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುತ್ತಿದ್ದು, ಬೆಳೆಗಾರರು ಯಾಕೆ ಹೀಗಾಗುತ್ತಿದೆ ಎಂದು ಗಾಬರಿಯಾಗಿದ್ದರೆ. ಇದು ಒಂದು ಶಿಲೀಂದ್ರ ರೋಗವಾಗಿದ್ದು, ಸರಿಯಾದ ನಿರ್ವಹಣೆ ವಿಧಾನಗಳಿಂದ ಬಾರದಂತೆ ಮಾಡುವುದು ಸಾಧ್ಯ.ಇದನ್ನು ತೆಂಡೆ ರೋಗ ಎಂದು ಕೆಲವರು ಹೇಳುವುದಿದೆ. ತೆಂಡೆ, ಅಥವಾ ಚೆಂಡೆ ರೋಗ ಎಂದರೆ ಮಲೆನಾಡಿನಲ್ಲಿ ಕಂಡುಬರುವ ಹಿಡಿಮುಂಡಿಗೆ ಅಥವಾ ಬಂದ್ ರೋಗ. ಇದು ಶಿರ ಕೊಳೆಯುವ…
ಭಾರತದ ಕೃಷಿಗೆ TATA ದವರ ಕೊಡುಗೆ ಏನು ಎಂದರೆ TATA ಉತ್ಪನ್ನಗಳು.RATHAN TATA ಅವರ ಯುಗ ಅಂತ್ಯವಾಗಿದೆ. ಆದರೆ ಅವರ ಕೊಡುಗೆ ಅಜರಾಮರವಾಗಿದೆ. ಕೃಷಿಕರಿಗೂ ಟಾಟಾ ಸಂಸ್ಥೆ ಬಹಳಷ್ಟು ಕೊಡುಗೆಯನ್ನು ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬೇಕು. Tata Trust ಮೂಲಕ ಭಾತರದ ರೈತರಿಗೆ ಟಾಟಾ ಸಂಸ್ಥೆ ಭಾರೀ ಕೊಡುಗೆಯನ್ನು ಕೊಟ್ಟಿದೆ. ಒಮ್ಮೊಮ್ಮೆ ಹೀಗೆ ಅನ್ನಿಸುತ್ತದೆ. ರತನ್ ಟಾಟಾ ರಂತಹ ನಿಸ್ವಾರ್ಥ ವ್ಯಕಿಗಳಿಗೆ ಆಯುಸ್ಸು ಕೊಡುವವರು ಚಿರಂಜೀವಿಯಾಗಿ ಬದುಕುವ ಆಯುಸ್ಸು ಕೊಡುವುದಿಲ್ಲ ಎಂದು. ಸುಮ್ಮನೆ ಅನ್ನದಂಡ ಭೂಮಿಗೆ ಭಾರ ಎಂಬಂತಿರುವವರಿಗೆ…