ಮಣ್ಣಿಗೆ ಕ್ಯಾಲ್ಸಿಯಂ ಬಳಕೆ — pH ಸಮತೋಲನ ಮತ್ತು ಸಸ್ಯ ಪೋಷಣೆಗೆ ಬೇರೆ ಬೇರೆ.
ಕೃಷಿಯಲ್ಲಿ ಕ್ಯಾಲ್ಸಿಯಂ ಎರಡು ರೀತಿಯ ಕೆಲಸ ಮಾಡುತ್ತದೆ — ಇದು ಮಣ್ಣು ಶುದ್ಧೀಕರಣಕಾರಕ (Soil conditioner pH ) ಆಗಿಯೂ, ಸಸ್ಯ ಪೋಷಕಾಂಶ ಆಗಿಯೂ ಕೆಲಸ ಮಾಡುತ್ತದೆ.ಅನೇಕ ರೈತರು ಲೈಮ್ ಅಥವಾ ಡೊಲೊಮೈಟ್ ಬಳಸಿ ಕ್ಯಾಲ್ಸಿಯಂ ಪೂರೈಸುತ್ತಾರೆ. ಆದರೆ ಎಲ್ಲಾ ಕ್ಯಾಲ್ಸಿಯಂ ಮೂಲಗಳು ಒಂದೇ ರೀತಿ ಕಾರ್ಯನಿರ್ವಹಿಸುವುದಿಲ್ಲ. ಕೆಲವು ಮಣ್ಣಿನ ಅಮ್ಲತ್ವವನ್ನು ಸರಿಪಡಿಸಲು (pH correction) ಉಪಯೋಗವಾಗುತ್ತವೆ, ಇನ್ನು ಕೆಲವು ಸಸ್ಯಕ್ಕೆ ನೇರವಾಗಿ ಕ್ಯಾಲ್ಸಿಯಂ ಪೋಷಣೆ ನೀಡಲು ಉಪಯೋಗವಾಗುತ್ತವೆ. ಈ ವ್ಯತ್ಯಾಸವನ್ನು ಅರಿತುಕೊಳ್ಳುವುದು ಬೆಳೆ ಫಲಿತಾಂಶ ಮತ್ತು…
