ಅಡಿಕೆ – ಈ ಸಾವಯವ ಗೊಬ್ಬರಗಳಿಂದ ಅಧಿಕ ಇಳುವರಿ ಸಾಧ್ಯ.
ಅಡಿಕೆ ಇರಲಿ ಅಥವಾ ಇನ್ಯಾವುದೇ ಬೆಳೆಯಿರಲಿ, ರಸ ಗೊಬ್ಬರಗಳ ಬದಲು ನೈಸರ್ಗಿಕ ಸಸ್ಯ ಜನ್ಯ ವಸ್ತುಗಳನ್ನೇ ಬಳಸಿಯೂ ಉತ್ತಮ ಇಳುವರಿ ಪಡೆಯಬಹುದು. ಸಾಮಾನ್ಯ ಇಳುವರಿಗೆ ನಾವು ಸಾಂಪ್ರದಾಯಿಕವಾಗಿ ಬಳಸುತ್ತಾ ಬಂದಿರುವ ಕೊಟ್ಟಿಗೆ ಗೊಬ್ಬರ, ಕುರಿ ಆಡು ಗೊಬ್ಬರಗಳು ಸಾಕು. ಅಧಿಕ ಇಳುವರಿ ಬೇಕಾದರೆ ಸಸ್ಯ ಜನ್ಯ ಗೊಬ್ಬರ , ಪ್ರಾಣಿಜನ್ಯ ಸಾವಯವ ವಸ್ತುಗಳನ್ನು ಬಳಸಬೇಕಾಗುತ್ತದೆ. ಉತ್ಪಾದನಾ ವೆಚ್ಚ ಮಾತ್ರ ಸ್ವಲ್ಪ ಹೆಚ್ಚಾಗಬಹುದು. ರಸ ಗೊಬ್ಬರಗಳು ಒಮ್ಮೆಗೆ ಉತ್ತಮ ಫಲಿತಾಂಶ ಕೊಡಬಹುದು. ಆದರೆ ಅದು ಧೀರ್ಘ ಕಾಲದ ತನಕ…
