ಮರ ಹಾವಸೆ

ಈ ಸಸ್ಯಗಳಲ್ಲಿದೆ ಉತ್ತಮ ಪೋಷಕಾಂಶ.

ನಮ್ಮ ಸುತ್ತಮುತ್ತ ಅದೆಷ್ಟೋ  ವೈವಿಧ್ಯಮಯ ಸಸ್ಯಗಳು ಇವೆ. ಇವುಗಳ ಬಗ್ಗೆ ನಮಗೆ ಹೆಚ್ಚಿನ ತಿಳುವಳಿಕೆ ಇರುವುದಿಲ್ಲ. ಕೆಲವು ತಿಳಿದವರು ಇದನ್ನು ಬಳಸುತ್ತಾರೆ. ಇಂತದ್ದರಲ್ಲಿ ಒಂದು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡು ಬರುವ ಒಂದು ಸಸ್ಯ ವರ್ಗ ಮೋಸ್ (moss) ಅಥವಾ ಮರ ಹಾವಸೆ. ಇದು Bryophytes ಪ್ರಬೇಧಕ್ಕೆ ಸೇರಿದ ಸಸ್ಯ ವರ್ಗ.  ಇದು ಮರ ಹಾವಸೆ: ಮರ ಹಾವಸೆಯಲ್ಲಿ ನೂರಾರು (129) ವಿಧಗಳಿವೆ. ಇವುಗಳಲ್ಲಿ ಕೆಲವು ಮಳೆ ಕಾಡುಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಪಶ್ಚಿಮ ಘಟ್ಟ…

Read more
ಕೀಟನಾಶಕ ಸಿಂಪಡಿಸುತ್ತೀರಾ? ಹಾಗಾದರೆ ಸುರಕ್ಷತೆ ಬಗ್ಗೆ ತಿಳಿದುಕೊಂಡಿರಿ

ಕೀಟನಾಶಕ ಸಿಂಪಡಿಸುತ್ತೀರಾ? ಹಾಗಾದರೆ ಸುರಕ್ಷತೆ ಬಗ್ಗೆ ತಿಳಿದುಕೊಂಡಿರಿ.

ಪ್ರತೀಯೊಬ್ಬ ಕೃಷಿಕರೂ ಒಂದಲ್ಲ ಒಂದು ಬೆಳೆಗೆ ಕೀಟನಾಶಕ ಸಿಂಪಡಿಸುತ್ತಾರೆ. ಸಿಂಪಡಿಸುವವರು ಕೀಟನಾಶಕದಿಂದ ಆಗುವ ಯಾವುದೇ ಅನಾಹುತಗಳಿಗೆ ಮೊದಲ ಬಲಿಪಶುಗಳು. ಆದುದರಿಂದ ರೈತರೇ ಮೊದಲು ಜಾಗರೂಕತೆ ವಹಿಸಬೇಕು. ಕೀಟನಾಶದ ಬಳಕೆ ಪ್ರಮಾಣ, ಅದರ ಜೊತೆಗೆ ಕೊಟ್ಟಿರುವ ಹಸ್ತ ಪ್ರತಿ ಇತ್ಯಾದಿಗಳನ್ನು ಸರಿಯಾಗಿ ತಿಳಿದುಕೊಂಡು ಸುರಕ್ಷತೆಯಿಂದ  ಬಳಸಬೇಕು. ರಾಸಾಯನಿಕ ಕೀಟ – ರೋಗ ನಾಶಕ ಗೊಬ್ಬರಗಳ ಬಗ್ಗೆ  ಸಮಾಜ ಅಪಸ್ವರ ಎತ್ತಲು ಕೃಷಿಕರಾದ ನಾವೂ ಕಾರಣರು. ನಮ್ಮ ಕೃಷಿ ಜ್ಞಾನದಲ್ಲಿ ಬೆಳೆ ಪೊಷಕ,ಸಂರಕ್ಷಕಗಳನ್ನು ವೈಜ್ಞಾನಿಕವಾಗಿ ಹೇಗೆ ಬಳಕೆ ಮಾಡಬೇಕೆಂಬುದು ತಿಳಿದಿಲ್ಲ….

Read more
ಕಳೆ ಸೇವಂತಿಗೆ ಸಸ್ಯ

ಕಳೆ ಸೇವಂತಿಗೆ ಸಸ್ಯದ  ಸ್ವಾಭಾವಿಕ ನಿಯಂತ್ರಣ ಸಾಧ್ಯ.

ಯಾವುದೇ ಒಂದು ಸಸ್ಯ  ಶಾಶ್ವತವಾಗಿ ಉಳಿಯುವುದೇ ಇಲ್ಲ. ಸಸ್ಯಗಳನ್ನು  ಭೂಮಿಯಿಂದ ನಿರ್ಮೂಲನೆ ಮಾಡಲು ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲ. ಮನುಷ್ಯ ಏನಾದರೂ ಮಾಡಿದರೆ ಅದು ತಾತ್ಕಾಲಿಕ ಮಾತ್ರ. ಕಳೆ ನಾಶಕ ಹೊಡೆದರೆ 2 ತಿಂಗಳಲ್ಲಿ ಮತ್ತೆ ಬೆಳೆಯುತ್ತದೆ. ಕೈಯಿಂದ ಕಿತ್ತರೆ ಮತ್ತೆ ಒಂದು ವಾರದಲ್ಲಿ ಚಿಗುರುತ್ತದೆ. ಯಂತ್ರದಿಂದ ಕಿತ್ತರೆ ಸಹ ಹೀಗೆಯೇ. ಆದರೆ ಅನಾದಿ ಕಾಲದಿಂದಲೂ ಒಂದೊಂದು ಕಳೆಯಂತೆ ಬಾಧಿಸುವ ಸಸ್ಯ ಅಥವಾ ಹುಲ್ಲು ಸಸ್ಯ ಹುಟ್ಟಿ ಮೆರೆದು ತನ್ನಷ್ಟಕ್ಕೆ ಅಳಿದು ಮತ್ತೊಂದು ಬಂದು ಚಕ್ರ ಮುಂದುವರಿಯುತ್ತಲೇ ಇದೆ….

Read more
ಬೊರ್‍ವೆಲ್ ಕೆಲಸ

ಬೋರ್ವೆಲ್ ಗೆ ಪಂಪು ಇಳಿಸುವ ಬಗ್ಗೆ ಮಾಹಿತಿ.

ಇಂದು ಕೃಷಿ ನೀರಾವರಿಗೆ, ಮನೆಬಳಕೆಯ ನೀರಿಗೆ ಎಲ್ಲದಕ್ಕೂ ಬೋರ್ವೆಲ್ ಮೂಲವೇ ಆದಾರ. ಕೊಳವೆ ಬಾವಿಯನ್ನು ತೋಡುವಾಗ ನೀರು ಸಿಗುತ್ತದೆ.  ಆದರೆ ಬಾವಿಯೊಳಗೆ ನೀರು ಎಷ್ಟು ಇದೆ, ಎಷ್ಟು ತೆಗೆಯಲು ಸಾಧ್ಯ ಎಂಬುದನ್ನು ಮೇಲಿನಿಂದು ನೋಡಿ ಲೆಕ್ಕಾಚಾರ ಹಾಕಲಿಕ್ಕೆ ಆಗುವುದಿಲ್ಲ. ಪಂಪು ಇಳಿಸಿ ನೀರನ್ನು ಹೊರ ತರಬೇಕು. ಎಷ್ಟು ಆಳಕ್ಕೆ ಪಂಪು ಇಳಿಸಬೇಕು.  ಎಷ್ಟು ಅಶ್ವ ಶಕ್ತಿ ಇವೆಲ್ಲದರ ಮಾಹಿತಿ ಇಲ್ಲಿದೆ. ಹೆಚ್ಚಿನವರು ಕೊಳವೆ ಬಾವಿ ತೋಡುತ್ತಾರೆ. ಸುಮಾರು 500 ಅಡಿ ಹೋಗಿದೆ, ಪಂಪು ಎಷ್ಟು ಇಳಿಸಬೇಕು ಎಂಬ…

Read more
ಮಳೆಗಾಲಕ್ಕೆ ಮುಂಚೆ ಬಸಿಗಾಲುವೆ ಸ್ವಚ್ಚ ಮಾಡಬೇಕಾದದ್ದು ಅಗತ್ಯ ಕೆಲಸ

ಮಳೆಗಾಲಕ್ಕೆ ಮುಂಚೆ ಅಡಿಕೆ ತೋಟದಲ್ಲಿ ಮಾಡಬೇಕಾದ ಅಗತ್ಯ ಕೆಲಸಗಳು.

ಇನ್ನೇನು ಮಳೆಗಾಲ ಬರುವುದಕ್ಕೆ ಹೆಚ್ಚು ಸಮಯ ಇಲ್ಲ. ಅಡಿಕೆ ತೋಟದಲ್ಲಿ ಈಗ ನೀವು ಮಾಡಬೇಕಾದ ಕೆಲವು ಕೆಲಸಗಳು ತೋಟದ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮಳೆಗಾಲದಲ್ಲಿ ಯಾವ ಕೆಲಸವನ್ನೂ ಓರಣವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಕೆಲಸಗಾರರ ಲಭ್ಯತೆಯೂ ಕಡಿಮೆ ಇರುತ್ತದೆ. ಇದಕ್ಕಿಂತೆಲ್ಲಾ ಮುಖ್ಯವಾಗಿ ಮಳೆಗಾಲದಲ್ಲಿ ಮಾಡಲೇ ಬಾರದ ಕೆಲವು ಕೆಲಸಗಳಿವೆ ಅದನ್ನು ಈಗಲೇ ಮಾಡುವುದು ಬಹಳ ಒಳ್ಳೆಯದು. ಈ ಸಮಯದಲ್ಲಿ  ಕಳೆ ತೆಗೆಯುವುದು, ಬಸಿ ಗಾಲುವೆ ಸ್ವಚ್ಚ ಮಾಡುವುದು ಮಾಡಿದರೆ ಉದುರಿ ಹೆಕ್ಕಲು ಸಿಕ್ಕದ ಅಡಿಕೆ ಸಿಗುತ್ತದೆ. ಅದರಿಂದ…

Read more
ಫಲವತ್ತಾದ ಮೇಲ್ಮಣ್ಣು

ಮೇಲ್ಮಣ್ಣು ಉಳಿದರೆ ಮಾತ್ರ ಕೃಷಿ ಲಾಭದಾಯಕ .

ಮೇಲುಮಣ್ಣು ಉತ್ತಮವಾಗಿದ್ದರೆ ಮಾತ್ರ ಕೃಷಿ ಕೈ ಹಿಡಿದೀತು. ಒಂದು ವೇಳೆ ಮೇಲು ಮಣ್ಣು ಕೊಚ್ಚಣೆ ಅಧಿಕವಾಗಿದ್ದರೆ ಅಲ್ಲಿ ಕೃಷಿ ಮಾಡುವುದು ಲಾಭದಾಯಕವಲ್ಲ.ಮೇಲು ಮಣ್ಣು ಉಳಿಸಲು ಮತ್ತು ರಚನೆಯಾಗುವ ರೀತಿಯ ಬೇಸಾಯ ಕ್ರಮಗಳನ್ನು ಅನುಸರಿಸುವುದು ಕೃಷಿಕರ ಆದ್ಯ ಕರ್ತವ್ಯ.       ಮೇಲು ಮಣ್ಣು ಹೇಗಿರುತ್ತದೆ: ಒಂದು ಹಿಡಿ ಮಣ್ಣು ಕೈಯಲ್ಲಿ ಹಿಡಿದರೆ ಅದು ಲಾಡಿನಂತೆ ಉಂಡೆ ಕಟ್ಟಲು ಬರಬೇಕು. ಅಂಟು ಆಂಟಾದ ಕಪ್ಪು ಮಿಶ್ರ ಬಣ್ಣದ, ಅರೆ ಬರೆ ಸಾವಯವ ವಸ್ತುಗಳು ಕೊಳೆಯುತ್ತಿರುವ ಸ್ಥಿತಿಯಲ್ಲಿ ಮೇಲು ಮಣ್ಣು…

Read more
ದಾಳಿಂಭೆ ಪ್ಯಾಕಿಂಗ್

ಹಣ್ಣು ಹಂಪಲುಗಳನ್ನು ಹೀಗೆ ಪ್ಯಾಕಿಂಗ್ ಮಾಡಿ – ಹಾಳಾಗದು.

ಪಪ್ಪಾಯಿಯ ಬಲಿತ ಕಾಯಿಯನ್ನು ಕೊಯ್ದು ಕಾಗದ ಸುತ್ತಿ ಪ್ಯಾಕಿಂಗ್ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಮಾವನ್ನು  ಭತ್ತದ ಹುಲ್ಲಿನಲ್ಲಿ ಪ್ಯಾಕಿಂಗ್ ಮಾಡುತ್ತಾರೆ. ಕಾರಣ ಹಣ್ಣು ಹಂಪಲುಗಳು ಹಣ್ಣಾಗುವ ಸಮಯದಲ್ಲಿ ಏಕ ರೀತಿಯ ತಾಪಮಾನ ಇರಬೇಕು. ಅದು ತಂಪೂ ಆಗಬಾರದು. ಬಿಸಿಯೂ ಆಗಬಾರದು. ಹಣ್ಣು ಆಗುವ ತನಕ ಇದನ್ನು ಕಾಯ್ದುಕೊಂಡರೆ  ಹಾಳಾಗದೇ ಹಣ್ಣಾಗುತ್ತದೆ. ಹಣ್ಣು ಹಂಪಲುಗಳಿಗೆ ಒಂದು  ಸಣ್ಣ ನೊಣ ( ಕಣ್ಣಿನ ಸುತ್ತ ಹಾರುವಂತದ್ದು) ಕುಳಿತರೆ ಸಾಕು ಅದು ಬೇಗ ಹಾಳಾಗುತ್ತದೆ. ಅದನ್ನು ತಡೆಯಲು ಈ ರಕ್ಸಣೆ ಅಗತ್ಯ. …

Read more
ಮಾವು ಸ್ಪೆಶಲ್ ಬಳಸಿದ ಮಾವು

ಮಾವು ಬೆಳೆಯುವವರು ಇದನ್ನು ಬಳಸಿದರೆ ಭಾರೀ ಫಲಿತಾಂಶ.

ಮಾವು ಬೆಳೆಯುವವರು ಎಷ್ಟೇ ಹೂ ಬಿಟ್ಟರೂ ಬಹಳಷ್ಟು ಕಾಯಿಗಳನ್ನು ಕಳೆದುಕೊಳ್ಳುವುದು ಸಾಮಾನ್ಯ. ಬಲಿಯುವ ತನಕ ಉದುರಿ ಹಾಳಾಗುವ  ಪ್ರಮಾಣ ಅರ್ಧಕ್ಕರ್ಧ. ಇದಕ್ಕೆಲ್ಲಾ ಕಾರಣ ಸಸ್ಯದ ಧಾರಣಾ ಸಾಮರ್ಥ್ಯ. ಸಸ್ಯಕ್ಕೆ ಶಕ್ತಿ ಇದ್ದರೆ ಹೆಚ್ಚು ಫಲವನ್ನು ಆಧರಿಸುತ್ತದೆ. ಇಲ್ಲವಾದರೆ ರೋಗ, ಕೀಟಗಳ ಮೂಲಕ, ಶಾರೀರಿಕ ಅಸಮತೋಲನದ ಮೂಲಕ ಉದುರಿ ನಷ್ಟವಾಗುತ್ತದೆ. ಅದನ್ನು ಸರಿಪಡಿಸಲು ಒಂದು ಪೋಷಕಾಂಶ ಮಿಶ್ರಣದ ಸಿಂಪರಣೆ  ಮಾಡಬಹುದು. ಇದು ಗರಿಷ್ಟ ಪ್ರಮಾಣದಲ್ಲಿ ಕಾಯಿಗಳನ್ನು ಉಳಿಸುತ್ತದೆ. ಮಾವು ಸ್ಪೆಷಲ್  Mango special ಎಂಬ ಪೋಷಕಾಂಶ ಮಿಶ್ರಣ, ಸಸ್ಯ…

Read more
arecanut spray

ಮಿಡಿ ಅಡಿಕೆ ಉದುರುತ್ತಿದೆಯೇ ? ಈ ಸಿಂಪರಣೆ ಮಾಡಿ.

ಮಿಡಿ ಅಡಿಕೆ ಉದುರುವ ಸಮಸ್ಯೆ ಇದ್ದಲ್ಲಿ ಅದಕ್ಕೆ ಕೀಟನಾಶಕ , ಶಿಲೀಂದ್ರ ನಾಶಕ ಸಿಂಪರಣೆ  ಮಾಡುವ ಮುಂಚೆ ಒಮ್ಮೆ ಅಥವಾ ಎರಡು ಬಾರಿ ಪೋಷಕಾಂಶ ಸಿಂಪರಣೆ ಮಾಡಿ. ಬಹುತೇಕ ಮಿಡಿ ಉದುವುದು ಆಹಾರದ ಕೊರತೆಯಿಂದ. ಸುಮ್ಮನೆ ಕೀಟನಾಶಕ, ಶಿಲೀಂದ್ರ ನಾಶಕ ಬಳಸಿ ಖರ್ಚು ಮಾಡುವ ಬದಲು ಮಿತ ಖರ್ಚಿನಲ್ಲಿ ಇದನ್ನು ಮಾಡಿ ನೊಡಿ. ಒಂದು ಇನ್ಟಂಟ್ ಆಹಾರವಾಗಿ ಇದು ಕೆಲಸ ಮಾಡಿ ಮಿಡಿ ಉದುರುವುದನ್ನು ಕಡಿಮೆ ಮಾಡುತ್ತದೆ. . ಯಾವುದೇ ಬೆಳೆಯಲ್ಲಿ ಎಳೆ ಕಾಯಿಗಳು ಉದುರುವುದು, ರೋಗ…

Read more

ಬೇಸಿಗೆಯಲ್ಲಿ ಗೊಬ್ಬರಗಳನ್ನು ಕೊಡುವುದರಿಂದ ಭಾರೀ ಲಾಭವಿದೆ.

ಬೇಸಿಗೆ ಕಾಲದಲ್ಲಿ ಸಸ್ಯ ಬೆಳವಣಿಗೆ ಚುರುಕಾಗಿರುತ್ತದೆ. ಅದಕ್ಕಾಗಿ ಬೇಸಿಗೆಯಲ್ಲಿ ನೀರಾವರಿ ಇರುವ ಬೆಳೆಗಳಿಗೆ ಗೊಬ್ಬರ ಕೊಡುವುದು ಉತ್ತಮ. ಯಾವಾಗಲೂ ಹಸಿವಿದ್ದಾಗ ಉಣ್ಣಬೇಕು. ಬಾಯಾರಿದಾಗ ನೀರು ಕುಡಿಯಬೇಕು. ಇದೇ ಸಿದ್ದಾಂತದಲ್ಲಿ  ಸಸ್ಯ ಪೋಷಣೆಯೂ ನಡೆಯಬೇಕು. ಸಸ್ಯಗಳು ಹೆಚ್ಚು ಬಾಯಾರಿಕೆ ಮತ್ತು ಹಸಿವಿನಿಂದ plant’s need  ಇರುವುದು ಬೇಸಿಗೆಯ ಕಾಲದಲ್ಲಿ. ಈಗ ಅವುಗಳಿಗೆ ನೀರನ್ನೂ ಪೋಷಕಗಳನ್ನೂ ಕೊಡುವುದರಿಂದ ಅವುಗಳ ಬೆಳವಣಿಗೆಗೆ ತುಂಬಾ ಪ್ರಯೋಜನವಾಗುತ್ತದೆ. ಸಸ್ಯಗಳು ನಾವು ಕೊಡುವ ನೀರು, ಗೊಬ್ಬರಕ್ಕೆ ಚೆನ್ನಾಗಿ ಸ್ಪಂದಿಸಿ ಸ್ವೀಕರಿಸುತ್ತವೆ. ನಾವೆಲ್ಲಾ ಬೆಳೆಗಳಿಗೆ ಗೊಬ್ಬರ ಕೊಡಲು…

Read more
error: Content is protected !!