ಡ್ರಿಪ್ ಇರಿಗೇಶನ್ ಅಳವಡಿಸಿದ ಅಡಿಕೆ ತೋಟ

ಡ್ರಿಪ್ ಇರಿಗೇಶನ್ ವ್ಯವಸ್ಥೆಯಲ್ಲಿ ಬ್ಲಾಕ್ ಆಗದಂತೆ ಮಾಡುವ ಸರಳ ವಿಧಾನ

ಬಹಳ ಜನ ರೈತರು ಡ್ರಿಪ್ ಮಾಡಿದರೆ ಅದು ಬ್ಲಾಕ್ ಆಗುತ್ತದೆ, ನೀರು ಸರಿಯಾಗಿ ಹೋಗದೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ. ಬ್ಲಾಕ್ ಆಗುವುದಕ್ಕೆ ಕಾರಣವನ್ನು ಗುರುತಿಸಿ ಅದಕ್ಕೆ ಬೇಕಾಗುವ ಸರಳ ಪರಿಹಾರಗಳನ್ನು ಮಾಡಿದರೆ  ಅದು ಸಮಸ್ಯೆಯೇ ಆಗದು. ಡ್ರಿಪ್ ಇರಿಗೇಶನ್ ವ್ಯವಸ್ಥೆಯಲ್ಲಿ ಕಣ್ಣಿಗೆ ಕಾಣದ ಕೆಲವು ಲವಣಗಳು ಸ್ವಲ್ಪ ಸ್ವಲ್ಪವೇ ಆಂಟಿಕೊಂಡು ನೀರು ಹರಿಯುವ  ದ್ವಾರವನ್ನು ಮುಚ್ಚುತ್ತದೆ. ಇದು ಹೆಚ್ಚಿನವರು ಅನುಭವಿಸುವ ಸಮಸ್ಯೆ. ಈ ಲವಣಗಳನ್ನು ಕಾಲ ಕಾಲಕ್ಕೆ ಅನುಗುಣವಾಗಿ ಸ್ವಚ್ಚತೆ ಮಾಡುತ್ತಿದ್ದರೆ ಆ ಸಮಸ್ಯೆಯಿಂದ ಪಾರಾಗಬಹುದು. ಮಳೆಗಾಲದಲ್ಲಿ ಯಾರೂ…

Read more

ಬೋರ್ ವೆಲ್ ಕೊರೆಯುವಾಗ ನೀರು ಎಲ್ಲಿಂದ ಬರುತ್ತದೆ?

ಜನ ಬೋರ್  ವೆಲ್ ಎಂದರೆ ಭೂಮಿಯ ಅಥವಾ ಬಂಡೆಯ ಎಡೆಯಲ್ಲಿ  ಅಂತರ್ಗಾಮೀ ನದಿಗಳೇ ಇದೆ ಎಂದು ತಿಳಿದಿದ್ದಾರೆ. ಆದರೆ ವಾಸ್ತವಿಕತೆ ಬೇರೆಯೇ ಇದೆ.ಭೂಮಿಯಲ್ಲಿ ಬಂಡೆಯ ಬಿರುಕುಗಳ ಎಡೆಯಲ್ಲಿ ಜಿನುಗುವ ನೀರು ಇರುತ್ತದೆ. ಇದೆಲ್ಲಾ ಒಟ್ಟುಗೂಡುತ್ತಾ ದೊಡ್ದ ಪ್ರಮಾಣದ ನೀರಾಗುತ್ತದೆಯೇ ಹೊರತು “ ದಂಡು” ಅಥವಾ ನದಿ ಇರುವುದಿಲ್ಲ. ಹಾಗಿದ್ದರೆ ಏನಿದೆ ಒಳಗೆ? ನೀವು ಎಲ್ಲಿಯಾದರೂ ಬೆಟ್ಟದ ಬದಿಯಲ್ಲಿ ನೀರು ಹೊರಬರುವ ಚಿಲುಮೆಯನ್ನು ಕಂಡದ್ದಿದೆಯೇ? ಕಂಡಿದ್ದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿರಿ. ಅದು ಹೇಗೆ ಹೊರ ಬರುತ್ತದೆ. ಎಲ್ಲಿಂದ ಬರುತ್ತದೆ. ಅದರ…

Read more
ಹನಿ ನೀರಾವರಿ ಸಾಧನ

ಹನಿ ನೀರಾವರಿ ಅಳವಡಿಸಿಕೊಳ್ಳುವಾಗ ನೀವು ತಿಳಿದಿರಬೇಕಾದ ವಿಷಯಗಳು.

ಈ ವರ್ಷ ಬಹಳಷ್ಟು ಜನ ಅಡಿಕೆ ತೋಟ ಮಾಡುತ್ತಿದ್ದಾರೆ. ಹೆಚ್ಚಿನವರ ಆಯ್ಕೆ ಹನಿ ನೀರಾವರಿ. ಜನ ನೀರು ಉಳಿತಾಯದ ಕಡೆಗೆ ಹೆಚ್ಚಿನ ಗಮನ ಕೊಡುವಷ್ಟು ಮುಂದುವರಿದದ್ದು ಸಂತೋಷದ ವಿಚಾರ. ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳುವಾಗ, ಅಳವಡಿಸುವವರ ಜೊತೆಗೆ ನಾವೂ ಸ್ವಲ್ಪ ಅದರ ಸೂಕ್ಷ್ಮ ವಿಷಯಗಳನ್ನು ತಿಳಿದಿದ್ದರೆ ಬಹಳ ಒಳ್ಳೆಯದು. ಹನಿ ನೀರಾವರಿ ಎಂದರೆ ಲಭ್ಯವಿರುವ ನೀರನ್ನು ಎಲ್ಲೆಲ್ಲಿ ಬೆಳೆಗಳಿವೆಯೋ ಅಲ್ಲಿಗೆ ತಲುಪಿಸಿ ಆ ಸಸ್ಯಕ್ಕೆ ದಿನಕ್ಕೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಕೊಡುವ ವ್ಯವಸ್ಥೆ. ಇಲ್ಲಿ…

Read more
ತೋಟಕ್ಕೆ ಮಣ್ಣು – Fresh soil

ತೋಟಕ್ಕೆ ಹೇಗೆ ಮಣ್ಣು ಹಾಕಬೇಕು- ಯಾವ ಮಣ್ಣು ಸೂಕ್ತ ?

ಅಡಿಕೆ ತೋಟಕ್ಕೆ ಮಣ್ಣು ಹಾಕುವುದು ನಾವೆಲ್ಲಾ ಮಾಡುವ ಒಂದು ಪ್ರಮುಖ ಬೇಸಾಯ ಕ್ರಮ. ಮಣ್ಣು ಹಾಕುವ ಪದ್ದತಿ ಒಳ್ಳೆಯದು. ಅದರೆ ಹಾಕುವಾಗ ಹೇಗೆ ಹಾಕಬೇಕು, ಎಂತಹ ಮಣ್ಣು ಹಾಕಬೇಕು, ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂಬುದು ಪ್ರಾಮುಖ್ಯ ಸಂಗತಿ. ತೀರಾ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಹಾಕಬಾರದು. ಫಲವತ್ತಾಗಿರದ ಮಣ್ಣು ಬೇಡ. ಸಾವಯವ ವಸ್ತುಗಳು ಸೇರಿ ಬಣ್ಣ ಬದಲಾದ ಮಣ್ಣನ್ನು ಹಾಕಿದರೆ ಅದರ ಪ್ರಯೋಜನ ಹೆಚ್ಚು. ತೋಟ- ಹೊಲಕ್ಕೆ ಹೊಸ ಮಣ್ಣು ಹಾಕುವ ಉದ್ದೇಶ ಮಣ್ಣು ಹೆಚ್ಚು ಸಡಿಲವಾಗಿ ಮೇಲು…

Read more

ಜೇನು ನೊಣಗಳು ಸಾಯದಂತೆ ಕೀಟನಾಶಕಗಳ ಸಿಂಪರಣೆ ಹೇಗೆ?

ಬಹಳ ಜನ ಕೀಟನಾಶಕ ಸಿಂಪಡಿಸಿದಾಗ ಜೇನು ನೊಣಗಳು ಸಾಯುತ್ತವೆ ಎಂಬುದಾಗಿ ನಂಬಿದ್ದಾರೆ. ಆದರೆ ಎಲ್ಲಾ ಕೀಟನಾಶಕಗಳಲ್ಲಿ ಜೇನು ನೊಣ ಸಾಯಲಾರದು. ಪ್ರಭಲ ಕೀಟ ನಾಶಕಗಳ ಬಳಕೆ ಕಡಿಮೆ ಮಾಡಿ, ಜೇನು ನೊಣಗಳನ್ನು ಸಂರಕ್ಷಿಸಬಹುದು. ತೀರಾ ಅಗತ್ಯ ಇದ್ದಾಗ ಮಾತ್ರ ಬಳಕೆ ಮಾಡಬೇಕು. ಜೇನು ನೊಣ, ಅಥವಾ ಉಪಕಾರೀ ಕೀಟಗಳು ಸಾಮಾನ್ಯವಾಗಿ ಹಾರುವ ಕೀಟಗಳಾಗಿರುತ್ತವೆ. ಕೀಟ ಪ್ರಪಂಚದಲ್ಲಿ ಸುಮಾರು 20-25% ಕ್ಕೂ ಕಡಿಮೆ ಪ್ರಮಾಣದವು ಮಾತ್ರ ಬೆಳೆಗಳಿಗೆ ತೊಂದರೆ ಮಾಡುವ ಕೀಟಗಳಾಗಿದ್ದು, ಉಳಿದವುಗಳು ಹಾನಿ ಮಾಡದ ಕೀಟಗಳಾಗಿವೆ. ಕೀಟಗಳಿಗೆ…

Read more

ಅಡಿಕೆ- ಮಿಡಿ ಉದುರುವುದು- ಸ್ಪ್ರಿಂಕ್ಲರ್ ನೀರಾವರಿ.

ಅಡಿಕೆ ತೋಟಗಳಿಗೆ ಸ್ಪ್ರಿಂಕ್ಲರ್ ನೀರಾವರಿ ಮಾಡುವುದಿದ್ದರೆ , ಅದು ಸಣ್ಣ ಮರಗಳು ಆಗಿದ್ದಲ್ಲಿ ಮಿಡಿ ಉದುರುವುದು ಜಾಸ್ತಿಯಾಗುತ್ತದೆ. ಅಡಿಕೆ ಹೂಗೊಂಚಲಿಗೆ  ನೀರು ತಾಗಿದಾಗ ಅದೂ ರಾತ್ರೆ, ಬೆಳಗ್ಗೆ ಪರಾಗಸ್ಪರ್ಶಕ್ಕೆ ಅನನುಕೂಲವಾಗುತ್ತದೆ. ಅಡಿಕೆ ಬೆಳೆಯುವವರು ತಮ್ಮ ಅಡಿಕೆ ಸಸಿಗಳಿಗೆ ನೀರಿನ ಕೊರತೆ ಆಗದಿರಲಿ ಎಂದು ಸ್ಪ್ರಿಂಕ್ಲರ್ ನೀರಾವರಿ ಮಾಡುವುದು ಹೆಚ್ಚು. ಇದರಿಂದ ನೆಲವೆಲ್ಲಾ ಒದ್ದೆಯಾಗಿರುತ್ತದೆ. ಎಲ್ಲಾ ಬೇರುಗಳಿಗೂ ನೀರು , ಗೊಬ್ಬರ ಲಭ್ಯವಾಗಿ ಸಸಿ ಚೆನ್ನಾಗಿ ಬೆಳೆಯುತ್ತದೆ ಎಂಬುದು ಇವರ ಸಮಜಾಯಿಸಿ. ಸ್ಪ್ರಿಂಕ್ಲರ್ ನೀರಿನಲ್ಲಿ ನೆಲ ಒದ್ದೆಯಾಗಿ ಮೇಲ್ಪದರದಲ್ಲಿ…

Read more
ಈ ರೋಗ ಬಂದರೆ ಉಪಚಾರಕ್ಕೆ ಅದರ ಫಸಲು ಸಾಲದು

ಸ್ಥಳೀಯ ತಳಿಗಳಿಗೆ ಆದ್ಯತೆ ನೀಡಿ-ಇದುವೇ ಶಾಶ್ವತ.

ಸ್ಥಳೀಯ ತಳಿಗಳು ಅನಾದಿ ಕಾಲದಿಂದಲೂ ನಮ್ಮ ಸ್ಥಳಕ್ಕೆ ಹೊಂದಿಕೊಂಡ ತಳಿಗಳಾದ ಕಾರಣ ಇವು ಎಲ್ಲಾ ದೃಷ್ಟಿಯಲ್ಲೂ ಸುರಕ್ಷಿತ ಮತ್ತು ಶಾಶ್ವತ. ಅಧಿಕ ಇಳುವರಿ ಇಲ್ಲ ಎಂಬ ಕಾರಣಕ್ಕೆ ನಾವು ಸ್ಥಳೀಯ ತಳಿಗಳನ್ನು ದೂರ ಇಡುವುದು ಸೂಕ್ತವಲ್ಲ. ಅದನ್ನು ಉಳಿಸಿಕೊಳ್ಳಲೇ ಬೇಕು. ಬೇರೆ ತಳಿಗಳು ಇರಲಿ, ಆದರೆ ಸ್ಥಳೀಯ ತಳಿಗಳನ್ನು ಮಾತ್ರ ಬಿಡಬೇಡಿ. ಯಾಕೆ ಇಲ್ಲಿ ಈ ಪ್ರಸ್ತಾಪ ಎನ್ನುತ್ತೀರಾ? ಬಹುತೇಕ ರೋಗ ರುಜಿನಗಳು, ಕೀಟ ಕಸಾಲೆಗಳು ಮೊದಲಾಗಿ ಧಾಳಿ ಮಾಡುವುದು ಇದೇ ಅಧಿಕ ಇಳುವರಿಯ ಅಥವಾ ವಿಶಿಷ್ಟ…

Read more
ಅಡಿಕೆ ಸಿಂಗಾರ

ಅಡಿಕೆ – ಸಿಂಗಾರಕ್ಕೆ ಸಿಂಪರಣೆ ಯಾವಾಗ ಯಾವುದನ್ನು ಮಾಡಬೇಕು?

ಅಡಿಕೆಯ ಮಿಡಿ ಉಳಿಸುವುದಕ್ಕೆ ಕೀಟನಾಶಕ, ಶಿಲೀಂದ್ರನಾಶಕದ ಬಳಕೆ ಯಾವಾಗ ಯಾವುದನ್ನು ಮಾಡಬೇಕು, ಅನವಶ್ಯಕವಾಗಿ ಸಿಂಪಡಿಸಿದರೆ ನಷ್ಟ ಏನು ಎಂಬ ಬಗ್ಗೆ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ರೋಗ ಶಾಸ್ತ್ರಜ್ಞ ಡಾ. ವಿನಾಯಕ ಹೆಗಡೆಯವರ ಜೊತೆ ಚರ್ಚಿಸಿ ಆ ಪ್ರಕಾರ ರೈತರಿಗೆ ತಿಳಿಸುವ ಮಾಹಿತಿ ಇದು. ಅಡಿಕೆಗೆ ಬೆಲೆ ಚೆನ್ನಾಗಿದೆ. ಹಾಗಾಗಿ  ಹೇಗಾದರೂ ಮಾಡಿ ಹೂ ಗೊಂಚಲಿನಲ್ಲಿ ಇರುವ ಎಲ್ಲಾ ಕಾಯಿಗಳನ್ನೂ ಉಳಿಸಿಕೊಳ್ಳಬೇಕು, ಗರಿಷ್ಟ ಇಳುವರಿ ಪಡೆಯಬೇಕು ಎಂಬ  ಆಸೆಯಲ್ಲಿ ಇತ್ತೀಚೆಗೆ ನಾವು ಹೂಗೊಂಚಲಿಗೆ ಕೀಟನಾಶಕ,…

Read more
ಹೂವು ಬಿಟ್ಟ ಮಾವಿನ ಮರ

ಮಾವಿನ ಹೂವು ಉದುರದಂತೆ ರಕ್ಷಿಸುವ ವಿಧಾನ.

ಈ ವರ್ಷ ಮಾವಿನ ಮರಗಳೆಲ್ಲಾ ಹೂವು  ಬಿಟ್ಟಿವೆ. ಎಲ್ಲಾ ಹೂವು ಕಾಯಿಕಚ್ಚಿ ಕಾಯಿಯಾದರೆ ಮಾವಿನ ಮಾರುಕಟ್ಟೆಯೇ ಸಾಕಾಗದು. ಆದರೆ ಬಹುತೇಕ ಮಾವಿನ ಹೂವು ಉಳಿಯುವುದಿಲ್ಲ.  ರಕ್ಷಿಸಲು ಕೆಲವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಮಾವಿನ ಮರದಲ್ಲಿ ಹೂ ಬಿಡುವ ಹಂತ ಬಹಳ ನಿರ್ಣಾಯಕ ಹಂತವಾಗಿದ್ದು, ದೊಡ್ಡ ದೊಡ್ಡ ಬೆಳೆಗಾರರರು  ಹೂ ಉಳಿದು ಕಾಯಿ ಹೆಚ್ಚಲು ಗರಿಷ್ಟ ಸಿಂಪರಣೆ ಮಾಡುತ್ತಾರೆ.ವಾಣಿಜ್ಯಿಕ ಮಾವು ಬೆಳೆಗೆ ಇದೆಲ್ಲಾ ಸರಿ. ಸಣ್ಣ ಸಣ್ಣ ಹಿತ್ತಲಿನ ಹಣ್ಣು ಹಂಪಲು ಮರವುಳ್ಳವರು ಹೂವು ಬಿಟ್ಟದ್ದನ್ನು ರಕ್ಷಿಸಿಕೊಳ್ಳುವ  ಉಪಾಯ…

Read more
ಬಳಕೆಗೆ ಸಿದ್ದವಾದ ಸುಡುಮಣ್ಣು – Sudumannu ready to use.

ಸುಡುಮಣ್ಣು – ಇದು ಮಣ್ಣಿನ ಆರೋಗ್ಯ ರಕ್ಷಕ ಡಾಕ್ಟರ್.

ಎಲ್ಲಾ  ತರಹದ ಮಣ್ಣು ಬೆಳೆಗಳಿಗೆ ಸೂಕ್ತವಲ್ಲ. ಕೆಲವು ಮಣ್ಣಿನಲ್ಲಿ ಬೆಳೆಗಳಿಗೆ  ಹಾನಿಕಾರಕ ರೋಗಾಣುಗಳು ಮತ್ತು ಕೀಟದ ಮೊಟ್ಟೆಗಳು ಇರಬಹುದು. ಅಂತಹ ಸಂಶಯ ಇರುವ ಮಣ್ಣನ್ನು ಸ್ವಲ್ಪ ಬಿಸಿ ಪ್ರಕ್ರಿಯೆಗೆ ಒಳಪಡಿಸಿ ಸುಡುಮಣ್ಣಾಗಿ ಪರಿವರ್ತಿಸಿದರೆ,  ಅದು ಪೂರ್ಣ ಸ್ಟೆರಿಲೈಸ್ ಮಾಡಿದ  ಸ್ವಚ್ಚ ಶುದ್ಧ ಮಣ್ಣಾಗುತ್ತದೆ. ಮಣ್ಣನ್ನು ಸ್ವಲ್ಪ ಬಿಸಿ ಮಾಡಿದಾಗ ಅದಕ್ಕೆ ಕರಕಲು ಸಾವಯವ ತ್ಯಾಜ್ಯ ಸೇರಿದಾಗ ಅದು ಸಾವಯವ ಇಂಗಾಲವನ್ನು (Carbon – bio char ) ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ. ಸಾವಯವ ತ್ಯಾಜ್ಯಗಳು ಮಣ್ಣನ್ನು ಜೈವಿಕವಾಗಿ ಶ್ರೀಮಂತಿಕೆಗೆ…

Read more
error: Content is protected !!