ನೀರಾವರಿಯೊಂದಿಗೆ ಗೊಬ್ಬರ ಕೊಟ್ಟರೆ ದುಪ್ಪಟ್ಟುಇಳುವರಿ .
ಒಮ್ಮೆಲೇ ತಿನ್ನುವುದಕ್ಕಿಂತ ಹಸಿವಾದಾಗ ತಿಂದರೆ ಅದು ದೇಹಕ್ಕೆ ಸಮರ್ಪಕವಾಗಿ ಬಳಕೆಯಾಗುತ್ತದೆ. ಈ ಸಿದ್ದಾಂತ ಸಸ್ಯಗಳಿಗೂ ಅನ್ವಯ. ಈ ಸಿದ್ದಾಂತದ ಮೇರೆಗೆ ಬೆಳೆಗಳಿಗೆ ಬೇರಿನ ಸನಿಹಕ್ಕೆ, ಕ್ರಿಯಾತ್ಮಕ ಬೇರುಗಳು ಇರುವಲ್ಲಿಗೆ, ಬೇಕಾದಾಗ ಬೇಕಾಗುವುದನ್ನೇ, ಬೇಕಾದಷ್ಟೇ ಪ್ರಮಾಣದಲ್ಲಿ ಕೊಡುವ ಪದ್ದತಿಯನ್ನು ಪ್ರಚಲಿತಕ್ಕೆ ತರಲಾಗಿದೆ. ಇದಕ್ಕೆ ನೀರಿನ ಜೊತೆಗೆ ಗೊಬ್ಬರ ಕೊಡುವುದು ಅಥವಾ ರಸಾವರಿ ಎಂಬ ಹೆಸರನ್ನು ಕೊಡಲಾಗಿದೆ. ದುಪ್ಪಟ್ಟು ಇಳುವರಿ: ತರಕಾರಿ ಮುಂತಾದ ಅಲ್ಪಾವಧಿ ಬೆಳೆಗಳಿಗೆ ತಕ್ಷಣ ಪೋಷಕಾಂಶಗಳು ದೊರೆತು, ಉತ್ತಮ ಇಳುವರಿ ಪಡೆಯಲು ಈ ತಂತ್ರಜ್ಞಾನ ಪ್ರಾರಂಭವಾಯಿತು. ಇದರ…
