ಅಕ್ಕಿ ಆಗುವ ಭತ್ತದ ಪೈರಿಗೆ ಸಿಂಪರಣೆ

ನಮ್ಮ ಕೃಷಿ ಉತ್ಪನ್ನಗಳು ಯಾಕೆ ವಿದೇಶಗಳಲ್ಲಿ ತಿರಸ್ಕೃತವಾಗುತ್ತದೆ?

ನಮ್ಮಲ್ಲಿ 90% ಕ್ಕೂ ಹೆಚ್ಚಿನ ರೈತರು ಮಿತಿಗಿಂತ ಹೆಚ್ಚು  ಕೀಟನಾಶಕ ಬಳಸುತ್ತಾರೆ. ಬಹುತೇಕ ಕೃಷಿಕರಿಗೆ ಯಾವ ಹಂತದಲ್ಲಿ ಯಾವ ಕೀಟನಾಶಕ ಬಳಸಬೇಕು ಎಂದು ತಿಳಿದಿಲ್ಲ. ನಾವು ಬಳಸುವ ಕೀಟ ನಾಶಕ ರೋಗನಾಶಕ ಎಷ್ಟು ಸಮಯ ಬೆಳೆಯಲ್ಲಿ ಉಳಿಯುತ್ತದೆ ಎಂಬುದೂ ಗೊತ್ತಿಲ್ಲ. ಅಂಗಡಿಯವರು ಕೊಟ್ಟದ್ದನ್ನು, ಸ್ವಲ್ಪ ಸ್ಟಾಂಗ್ ಇದ್ದರೆ ಒಳ್ಳೆಯದೆಂದು ಬಾಟಲಿಯನ್ನೇ ಕ್ಯಾನಿಗೆ ಸುರಿದು  ಸಿಂಪಡಿಸುವ ಕಾರಣ ಅವು ಬೆಳೆಗಳಲ್ಲಿ ಉಳಿಯುತ್ತದೆ. ಆದ ಕಾರಣ ಅದು ಪರೀಕ್ಷೆಯಲಿ ಸಿಕ್ಕಿ ಬೀಳುತ್ತದೆ. ನಮ್ಮ ದೇಶದಲ್ಲಿ ಮಾತ್ರ ಕೀಟನಾಶಕ ರೋಗನಾಶಕ ಬಳಕೆ…

Read more
ಬೊರ್ಡೋ ಪೇಸ್ಟ್- Bordeaux paint

ತೋಟಗಾರಿಕಾ ಬೆಳೆಗಾರರ ರಕ್ಷಕ ಈ ಶಿಲೀಂದ್ರ ನಾಶಕ.

ನಾವೆಲ್ಲಾ ಕೆಲವು ಸಂಶೋಧನಾ ಸಂಸ್ಥೆಗಳು, ಬೆಳೆ ಪ್ರಾತ್ಯಕ್ಷಿಕಾ ತಾಕುಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ತೋಟದ ಬೆಳೆಗಳ ಮರ, ಬಳ್ಳಿಯ ಕಾಂಡಕ್ಕೆ ನೀಲಿ ಮಿಶ್ರ ಬಿಳಿ ಬಣ್ಣದ ಲೇಪನ ಮಾಡಿರುವುದನ್ನು ಕಂಡಿರಬಹುದು.  ಅದು ಏನು ಗೊತ್ತೇ? ಇದು ನೋಡಲು ಚೆಂದವಾಗಿ ಇರಲಿ ಎಂದು ಲೇಪನ ಮಾಡಿದ್ದು ಅಲ್ಲ. ಅದು ಒಂದು ಸಸ್ಯ ಸಂರಕ್ಷಣಾ ಔಷಧಿಯ ಲೇಪನ. ಬಹುತೇಕ ತೋಟಗಾರಿಕಾ ಬೆಳೆಗಳಿಗೆ ಕಾಂಡದ ಮೂಲಕ ಕೆಲವು ರೋಗ – ಕೀಟಗಳು ಪ್ರವೇಶವಾಗುತ್ತವೆ. ಅದನ್ನು ಪ್ರತಿಬಂಧಿಸುವಲ್ಲಿ ಈ ಬಣ್ಣದ ಪೇಸ್ಟ್ ಲೇಪನ…

Read more
soil solarization for weed control

Soil Solarization– GOOD SOLUTION FOR weed CONTROL

Soil solarisation is the novel technique in safe and effective weeds control , soil born disease and pests management. It is harmless. The impact of pesticide use on the environment is now well documented and a more wide spread adoption of integrated weed management strategies and tactics recommended in sustainable agriculture systems. This hydrothermal process…

Read more
ರಸಗೊಬ್ಬರ- fertilizer broadcasting

ರಸಗೊಬ್ಬರಕ್ಕೆ ಯಾವ ಕಾರಣಕ್ಕೆ ಬೆಲೆ ಹೆಚ್ಚಳವಾಗುತ್ತದೆ ಗೊತ್ತೇ?

ಕೆಲ ದಿನಗಳ ಹಿಂದೆ ರಸ ಗೊಬ್ಬರದ ಬೆಲೆ ಹೆಚ್ಚಳವಾದ ಸುದ್ದಿ ಭಾರೀ ಸದ್ದು ಮಾಡಿತ್ತು. ಈಗ ಮತ್ತೆ ರಸಗೊಬ್ಬರದ ಬೆಲೆ ಇಳಿಕೆಯದ್ದೇ ಸುದ್ದಿ. ಆದರೆ ಇದರ ಹಿಂದಿನ ವಾಸ್ತವಿಕತೆಯ ಚಿತ್ರಣ ಇಲ್ಲಿದೆ ನೋಡಿ. ರಸಗೊಬ್ಬರ, ತಂಬಾಕು ಉತ್ಪನ್ನಗಳು ಹಾಗೆಯೇ ಅಲ್ಕೋ ಹಾಲ್, ಪೆಟ್ರೋಲಿಯಂ ಉತ್ಪನ್ನಗಳು ಬಳಸುವವರಿಗೆ ಒಂದು ಚಟದಂತೆ. ಇವುಗಳು ಭಾರತದಂತಹ ಅಧಿಕ ಜನಸಂಖ್ಯೆ ಉಳ್ಳ ದೇಶವನ್ನು ಮುನ್ನಡೆಸಲು ಬೇಕಾದಷ್ಟು ಆದಾಯ ತಂದು ಕೊಡುತ್ತದೆ. ಭಾರತ ದೇಶದಲ್ಲಿ  70% ಕ್ಕೂ ಹೆಚ್ಚು ಕೃಷಿಕರು. ಅದರಲ್ಲಿ 69% ಕೃಷಿಕರು…

Read more
farmer ploughing field

ಮುಂಗಾರು ಹಂಗಾಮಿಗೆ ಮಾಡಬೇಕಾದ ಪೂರ್ವ ಸಿದ್ದತೆಗಳು

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಗಳು ವಾಡಿಕೆಯಂತೆ ಆಗುತ್ತವೆ ಎಂಬುವುದು ಹವಾಮಾನ ತಜ್ಞರ ಅಭಿಪ್ರಾಯ. ಆದ್ದರಿಂದ ರೈತರು ಸ್ಥಳೀಯ ಪರಿಸ್ಥಿತಿಗಳನ್ನು ಅವಲೋಕಿಸಿ ಮುಂಗಾರು ಬೆಳೆಗಳ ಯೋಜನೆಯನ್ನು ಹಮ್ಮಿಕೊಳ್ಳುವುದು ಸೂಕ್ತ. ಈಗಾಗಲೇ ಅನೇಕ ಕಡೆ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ರೈತರು ತಮ್ಮ ಜಮೀನುಗಳಲ್ಲಿ ಕುಂಟೆ-ರಂಟೆಗಳನ್ನು ಹೊಡೆದು ಮಣ್ಣು ಮತ್ತು ನೀರು ಸಂರಕ್ಷಣೆಗಾಗಿ ಚೌಕ ಮಡಿಗಳನ್ನು ಮತ್ತು ದಿಂಡು ಸಾಲುಗಳನ್ನು ಇಳಿಜಾರಿಗೆ ಅಡ್ಡಲಾಗಿ ನಿರ್ಮಿಸುವುದರಿಂದ, ಬಂದ ಮಳೆ ನೀರು ಮಡಿಗಳಲ್ಲಿ ಮತ್ತು ಬೋದುಗಳಲ್ಲಿ ನಿಲ್ಲುವುದರಿಂದ ಮಣ್ಣಿನ ತೇವಾಂಶ ಹೆಚ್ಚು ಸಂಗ್ರಹವಾಗಿ…

Read more
glerisidia plant

ಕೊಟ್ಟಿಗೆ ಗೊಬ್ಬರಕ್ಕೆ ಪರ್ಯಾಯ ಈ ಸೊಪ್ಪುಗಳು.

ಇಂದಿನ  ಸಾರ್ವಕಾಲಿಕ ಸಮಸ್ಯೆಯಾದ  ಕೆಲಸದವರ ಕೊರತೆ. ಈ ಕೊರತೆಯಿಂದಾಗಿಯೇ ನಾವು ರಾಸಾಯನಿಕ ಗೊಬ್ಬರ, ಕಳೆ ನಾಶಕ ಹೆಚ್ಚಾಗಿ ಬಳಕೆ ಮಾಡುತ್ತಿರುವುದು. ಅದನ್ನು ಕಡಿಮೆ ಮಾಡಲು ಹಸುರೆಲೆ ಗೊಬ್ಬರ ಗಿಡಗಳೂ ಸಹಕಾರಿ ಹೇಗೆ ಗೊತ್ತೇ? ಕೊಟ್ಟಿಗೆ ಗೊಬ್ಬರ ಬೇಕಾದರೆ ಹಸು ಸಾಕಬೇಕು. ಹಸು ಸಾಕಿದರೆ ಅದಕ್ಕೆ ಮೇವು ಬೆಳೆಸಬೇಕು. ಸಾಕಷ್ಟು ಪಶು ಆಹಾರ ಕೊಡಬೇಕು. ಅದೇ ರೀತಿ ದೈನಂದಿನ ಸಮಯದ ಅವಧಿಯಲ್ಲಿ ಅರ್ಧ ಪಾಲು ಸಮಯವನ್ನು ಅದಕ್ಕೇ ಮೀಸಲಿಡಬೇಕು. ಈ ಕಸುಬು ಕೆಲವರಿಗೆ ಮಾತ್ರ ಲಾಭವಾಗುತ್ತದೆ. ಈ ಕಾರಣಕ್ಕಾಗಿಯೇ…

Read more
ginger seed treatment

ಬೀಜೋಪಚಾರದಿಂದ ಆರೋಗ್ಯವಂತ ಬೆಳೆ ಸಾಧ್ಯ.

ಬೀಜಗಳ ಮೂಲಕ ಬೇರೆ ಬೇರೆ ರೋಗ ಬರುತ್ತದೆ.  ಕೀಟಗಳಿಂದ ದಾಸ್ತಾನು ಇಟ್ಟ ಬೀಜ ಹಾಳಾಗುತ್ತದೆ. ಇದನ್ನು  ತಡೆಯಲು  ಶಿಲೀಂದ್ರನಾಶಕ ಮತ್ತು ಕೀಟನಾಶಕಗಳಿಂದ ಉಪಚಾರ ಮಾಡುವುದಕ್ಕೆ ಬೀಜೋಪಚಾರ (seed treatment) ಎನ್ನುತ್ತಾರೆ. ಬಹುಪಾಲು ಬೆಳೆಗಳ ಸಂತಾನಾಭಿವೃದ್ದಿ ಬೀಜಳಿಂದಲೇ ಆಗುವುದು. ಲಾಭದಾಯಕ ಇಳುವರಿಗೆ ಆರೋಗ್ಯಕರ ಬಿತ್ತನೆ ಬೀಜ ಅತಿ ಪ್ರಮುಖವಾದ ಸಂಪನ್ಮೂಲವಾಗಿದೆ. ಕೃಷಿಯ ಯಶಸ್ವಿಗೆ ಹಾಗೂ ಅಧಿಕ ಇಳುವರಿಗೆ ಉತ್ತಮ ಗುಣಮಟ್ಟದ ಬೀಜದ ಕೊಡುಗೆ ಪ್ರಮುಖವಾಗಿದೆ.    ಪುರಾತನ ಕಾಲದಿಂದಲೂ ಉತ್ತಮ ಬೀಜದ ಮಹತ್ವವನ್ನು ಅರಿತುಕೊಂಡು ನಮ್ಮ ರೈತರು ದೃಢಕಾಯ ಹಾಗೂ…

Read more
ಫಲವತ್ತಾದ ಫಲ್ಗುಣಿ ನದಿಯ ಮುಖಜ ಭೂಮಿಯಲ್ಲಿ ಬೆಳೆದ ರುಚಿಕಟ್ಟಾದ ಕಲ್ಲಂಗಡಿ.

ಮಣ್ಣು ಫಲವತ್ತತೆ ಇದ್ದಾಗ ಅಲ್ಲಿ ಬೆಳೆದ ಫಸಲಿಗೆ ರುಚಿ ಹೆಚ್ಚು.

ಜನ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ, ಮುಖ್ಯವಾಗಿ ರಸ ಗೊಬ್ಬರ, ಹೈಬ್ರೀಡ್ ಬೀಜಗಳಿಂದ ತಾವು ಬಳಸುವ ಹಣ್ಣು ತರಕಾರಿಗಳಲ್ಲಿ ರುಚಿ ಹೋಗಿದೆ ಎಂದು. ವಾಸ್ತವವಾಗಿ ಇದು ಸತ್ಯವಲ್ಲ. ಸತ್ಯ ಸಂಗತಿ ಬೇರೆಯೇ ಇದೆ. ಅದು ಮಣ್ಣಿನ ಫಲವತ್ತತೆ. ರುಚಿ ಎನ್ನುವುದು ಹಸಿದವನ ನಾಲಗೆಗೆ ಹೆಚ್ಚು, ಹಸಿವು ಇಲ್ಲದವನಿಗೆ ಕಡಿಮೆ. ಹಾಗೆಂದು ಕೆಲವೊಮ್ಮೆ ಬದಲಾವಣೆ ರುಚಿ ಕೊಡುತ್ತದೆ. ಆದರೆ ಪ್ರತೀಯೊಂದು  ಆಹಾರ ವಸ್ತುವಿಗೂ ಅದರದ್ದೇ ಆದ ರುಚಿ ಗುಣ ಇರುತ್ತದೆ. ಅದು ಬರುವುದು ಆ ನಿರ್ದಿಷ್ಟ ಪ್ರದೇಶದ ಹವಾಗುಣ, ಮಣ್ಣು…

Read more
weedicide spray

ಯಾವ ಬೆಳೆಗೆ ಯಾವ ಕಳೆ ನಾಶಕ ಬಳಸಬೇಕು?

ಎಲ್ಲಾ ಬೆಳೆಗೂ ಒಂದೇ ಕಳೆ ನಾಶಕ ಅಲ್ಲ. ಬೆಳೆ ಮತ್ತು ಕಳೆಯನ್ನು ಅವಲಂಭಿಸಿ ಬೇರೆ ಬೇರೆ ಕಳೆ ನಾಶಕಗಳನ್ನು ಬಳಸಿ ಕಳೆ ನಿಯಂತ್ರಣ ಮಾಡಬೇಕಾಗುತ್ತದೆ. ಕಳೆಗಳನ್ನು  ಹುಟ್ಟಿದ ಕಳೆಗಳು ಮತ್ತು ಹುಟ್ಟಲಿರುವ ಕಳೆಗಳು ಎಂದು ಎರಡು ವಿಭಾಗ ಮಾಡಬಹುದು. ಹುಟ್ಟಿದ  ಕಳೆಗಳೆಂದರೆ ನೆಲದಲ್ಲಿ ಹಾಸಿಕೊಂಡು ಇರುತ್ತವೆ. ಹುಟ್ಟಲಿರುವ ಕಳೆಗಳು ನೆಲದಲ್ಲಿ ಬೀಜದ ರೂಪದಲ್ಲಿ ಇರುತ್ತವೆ. ಬೀಜದ ರೂಪದಲ್ಲಿರುವ ಕಳೆಗಳು ಉಳುಮೆ ಮಾಡಿ ಬಿತ್ತನೆ ,ಆಗಿ ನೀರು ಗೊಬ್ಬರ ಕೊಟ್ಟ ತಕ್ಷಣ ಹುಟ್ಟುತ್ತವೆ. ಇದನ್ನು ಬೀಜವೇ ಮೊಳಕೆ ಬಾರದಂತೆ…

Read more
error: Content is protected !!