ಬೀಜ ಜನ್ಯ ರೋಗಗಳು ಬಾರದಂತೆ ತಡೆಯುವ ವಿಧಾನ.

ಎಲ್ಲದಕ್ಕೂ ಮೂಲ ಬೀಜ. ಉತ್ತಮ ಗುಣದ ಬೀಜಗಳನ್ನು ಆಯ್ಕೆ ಮಾಡಿ, ಅದನ್ನು ಬೆಳೆಸಿದರೆ ಅದರ ಪೀಳಿಗೆಯೂ ಆರೋಗ್ಯವಾಗಿರುತ್ತದೆ. ಬಹಳಷ್ಟು ರೋಗಗಳಿಗೆ ನಾವು ಬಳಸುವ ಬೀಜಗಳೇ ಕಾರಣ. ಬೀಜದಲ್ಲಿ ರೋಗದ ಗುಣ ಸೇರಿಕೊಂಡಿದ್ದು, ಅದು ಸಸಿಯಾದಾಗ ಯಾವಾಗಲಾದರೂ ತೋರಿಕೆಗೆ ಬರಬಹುದು. ಇಂಥಹ ವೈಪರೀತ್ಯಗಳು ಈಗೀಗ ಹೆಚ್ಚಲಾರಂಭಿಸಿದೆ. ರೈತರು ಇದಕ್ಕೆ  ಔಷಧಿ ಹೊಡೆಯುವುದು ಅಷ್ಟು ಫಲಕಾರಿ ಅಲ್ಲ. ನೀವು ಯಾವುದೋ ಬೀಜ ಕಂಪೆನಿಯಿಂದ ಉತ್ತಮ ಸೌತೇ ಕಾಯಿ ಬೀಜ ತಂದು ಬಿತ್ತಿ, ಬೆಳೆಸಿ. ಸಸಿ ಚೆನ್ನಾಗಿ ಬೆಳೆಯುತ್ತದೆ. ಇನ್ನೇನು ಹೂ…

Read more
ಸಾವಯವ ಗೊಬ್ಬರ -Organic manure

ಸಾವಯವ ಗೊಬ್ಬರದ ಜೊತೆಗೆ ರಸ ಗೊಬ್ಬರ-ಫಲಿತಾಂಶ.

ನಮ್ಮಲ್ಲಿ ರೈತರಿಗೆ ಅತೀ ದೊಡ್ಡ ಸಂದೇಹವಾಗಿ ಕಾಡುತ್ತಿರುವುದು, ಸಾವಯವ ಗೊಬ್ಬರ ಬಳಸಿದಾಗ ರಸ ಗೊಬ್ಬರ ಬಳಸಿದರೆ ಮಣ್ಣು ಹಾಳಾದೀತೇ? ಮಣ್ಣಿನಲ್ಲಿ ಎರೆಹುಳು ಸಾಯಬಹುದೇ ಎಂಬಿತ್ಯಾದಿಗಳು.  ಅದಕ್ಕೆ ಪೂರಕವಾಗಿ ಕೆಲವು ಕೆಲವು ಪಂಥಗಳು ಜನರ ಸಂದೇಹಗಳಿಗೆ ತುಪ್ಪ ಸುರಿದು ಹೆಚ್ಚು ಪ್ರಖರವಾಗಿ ಉರಿಯುವಂತೆ ಮಾಡುತ್ತಿವೆ.  ವಾಸ್ತವಿಕವಾಗಿ ಸಾವಯವ  ಗೊಬ್ಬರ ಅಥವಾ ಸಾವಯವ ತ್ಯಾಜ್ಯಗಳ ಜೊತೆಗೆ ರಸ ಗೊಬ್ಬರ  ಬಳಸಿದರೆ ಏನಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಯಾವುದೇ ರಸ ಗೊಬ್ಬರ ಇರಬಹುದು. ಅದು ಸಸ್ಯಗಳಿಗೆ ಲಭ್ಯವಾಗಬೇಕಾದರೆ ಮಣ್ಣಿನಲ್ಲಿ ಇರುವ…

Read more

ತಜ್ಞರ ಮೌನ – ಭವಿಷ್ಯದಲ್ಲಿ ಅಪಾಯ ತರಬಹುದೇ?

ನಮ್ಮ ಪರಿಸರದಲ್ಲಿ ಇರುವ ಕಿಟಗಳಲ್ಲಿ 20% ಮಾತ್ರ ಹಾನಿಕರಕ ಕೀಟಗಳು. ಉಳಿದ 80% ಉಪಕಾರೀ ಕೀಟಗಳು ಎಂಬುದನ್ನು ಕೀಟಶಾಸ್ತ್ರ ಒಪ್ಪಿಕೊಳ್ಳುತ್ತದೆ. ಆದರೆ ಕೆಲವೊಂದು ವಿಚಾರದಲ್ಲಿ ಮಾತ್ರ ಮೌನವಾಗಿದೆ. ಕೀಟ ಶಾಸ್ತ್ರಜ್ಞರಿಗೆ ಮತ್ತು ಪರಿಸರ ಕಳಕಳಿ ಉಳ್ಳವರಿಗೆ ಕನಿಷ್ಟ ತಮ್ಮ ಅಭಿಪ್ರಾಯವನ್ನಾದರೂ ಬಹಿರಂಗವಾಗಿ ತಿಳಿಸುವ ಜವಾಬ್ಧಾರಿ ಇದೆ. ಅವರು ಮಾತಾಡಬೇಕು. ಆಗಲೇ ಈ ಸಮಸ್ಯೆ ಪರಿಹಾರ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೀಟಗಳ ಹಾವಳಿ ಬಹಳ ಜಾಸ್ತಿಯಾಗತೊಡಗಿದೆ. ಕೀಟನಾಶಕ ಬಳಸದೆ ಕೃಷಿ ಮಾಡುತ್ತೇನೆ ಎಂಬುದರ ಹಿಂದಿನ ಸತ್ಯಾಸತ್ಯತೆ ದೇವರಿಗೆ ಮಾತ್ರ…

Read more
ಸುಣ್ಣದ ಹುಡಿ ಚೆಲ್ಲುವುದು

ಸುಣ್ಣ ಹಾಕುತ್ತಿರಾ? ಈ ಮಾಹಿತಿಯನ್ನುಮೊದಲು ತಿಳಿದಿರಿ.

ಸುಣ್ಣ ಹಾಕುವುದರಿಂದ ಮಣ್ಣಿನ ರಸಸಾರ ತಟಸ್ಥ ಸ್ಥಿತಿಯತ್ತ ತಲುಪುತ್ತದೆ, ಅಥವಾ ಸ್ವಲ್ಪ ಕ್ಷಾರೀಯವೂ ಆಗುತ್ತದೆ. ಮಣ್ಣಿನ ಸ್ಥಿತಿ  ಹುಳಿಯಿಂದ ಕ್ಷಾರದತ್ತ ಬದಲಾವಣೆ ಆದ ನಂತರ ಗೊಬ್ಬರ ಬಳಸಿದರೆ ಅದನ್ನು ಸಸ್ಯಗಳು ಸುಭೋಜ್ಯವಾಗಿ ಬಳಸಿಕೊಳ್ಳುತ್ತವೆ. ಜೀರ್ಣ ಶಕ್ತಿ ಸರಿಯಾಗಿ  ಇರುವಾಗ ಆಹಾರ ತಿಂದರೆ ಅದು ಶರೀರಕ್ಕೆ ಚೆನ್ನಾಗಿ ತೆಗೆದುಕೊಳ್ಳುತ್ತದೆ ಹಾಗೆಯೇ ಇದೂ ಸಹ. ಮಣ್ಣಿನ ಜೀರ್ಣ ಶಕ್ತಿಯನ್ನು ಉತ್ತಮಪಡಿಸಿ ಪೋಷಕಾಂಶ ನೀಡುವುದು ಒಳ್ಳೆಯ ಕ್ರಮ. ಸಾಗುವಳಿಗೆ ಒಳಪಟ್ಟ ಅಥವಾ ಬೆಳೆ ಬೆಳೆಯುವ ಭೂಮಿಯ ಸಾರಾಂಶಗಳನ್ನು ಬೆಳೆಗಳು ಬಳಕೆ ಮಾಡಿಕೊಂಡಾಗ…

Read more
green leaf carrying

ತೋಟಕ್ಕೆ ಈಗ ಹಸಿ ಸೊಪ್ಪು ಹಾಕಿದರೆ ತುಂಬಾ ಅನುಕೂಲ. ಯಾಕೆ?

ತೋಟಕ್ಕೆ ಹಸಿ ಸೊಪ್ಪುಗಳನ್ನು ಬಳಸುವ ಸರಿಯಾದ ಸಮಯ ಮಳೆಗಾಲದ ಪ್ರಾರಂಭದ ದಿನಗಳು. ಈ ಸಮಯದಲ್ಲಿ ಹಸಿ ಸೊಪ್ಪು ಹಾಕಿದರೆ ಅದು ಕರಗಿಸಿಕೊಡುವ ಜೀವಿಗಳಿಂದ ಚೆನ್ನಾಗಿ ಕರಗುತ್ತದೆ.  ಮಳೆಗಾಲ ಪ್ರಾರಂಭದಿಂದ ಕೊನೆತನಕವೂ ಮಣ್ಣು ತೇವ ಭರಿತವಾಗಿರುತ್ತದೆ, ವಾತಾವರಣ ತಂಪಾಗಿರುತ್ತದೆ. ಇವೆಲ್ಲದರ ಅನುಕೂಲ ಬಳಸಿಕೊಂಡು ಮಣ್ಣಿನಲ್ಲಿ ಇರುವ ಬಹುತೇಕ ಎಲ್ಲಾ ಸೂಕ್ಷ್ಮಾಣು ಜೀವಿಗಳೂ ಹೆಚ್ಚು ಚಟುವಟಿಕೆಯಲ್ಲಿರುತ್ತವೆ. ಈಗ ನೀವು ಏನೇ ಸಾವಯವ ತ್ಯಾಜ್ಯ ಹಾಕಿದರೂ ಅದು ತ್ವರಿತವಾಗಿ ಕರಗಿ ಮಣ್ಣಾಗುತ್ತದೆ. ಈಗ ಸೊಪ್ಪು ಸದೆ ಹಾಕಿದರೆ ಮಳೆ ಹನಿಗಳಿಂದಾಗುವ ಮಣ್ಣು ಸವಕಳಿಯನ್ನೂ ತಡೆಯುತ್ತದೆ. ಕಳೆ ನಿಯಂತ್ರಣಕ್ಕೂ ಸಹಕಾರಿ….

Read more
ಬೇರು ಮೇಲೆ ಬಂದ ಅಡಿಕೆ ಗಿಡ

ಅಡಿಕೆ ಮರದ ಬೇರುಗಳು ಮೇಲೆ ಬರುವುದಕ್ಕೆ ಕಾರಣ ಇದು.

ಅಡಿಕೆ ಮರಗಳ ಬೇರು ಮೇಲೆ ಬರಬಾರದು ಎಂದು  ಕರಾವಳಿ ಮಲೆನಾಡಿನ ಬಹುತೇಕ ಬೆಳೆಗಾರರು ಹೊಂಡ ಮಾಡಿ ಸಸಿ ನೆಡುತ್ತಾರೆ. ಎಷ್ಟೇ ಹೊಂಡ ಮಾಡಿದರೂ ಮರ ಬೆಳೆದಂತೆ ಬೇರು ಮೇಲೆ ಬರಲಾರಂಭಿಸುತ್ತದೆ.  ನೆಲಮಟ್ಟದಿಂದ 1 ಅಡಿ ಮೇಲೆ ಬರುವುದೂ ಇದೆ. ಇದು ಯಾವುದೇ ರೋಗ ಅಲ್ಲ. ಇದಕ್ಕೆ ಕಾರಣ ಬೇರೆಯೇ ಇದೆ.  ಅಡಿಕೆ ಸಸ್ಯದ ಬೇರು ಮೇಲೆ ಬಂದಿದೆ ಎಂದರೆ ಮಣ್ಣಿನಲ್ಲಿ ಸಸ್ಯದ ಬೇರುಗಳ ಬೆಳವಣಿಗೆಗೆ ಏನೋ ಅಡ್ದಿ ಉಂಟಾಗಿದೆ ಎಂದರ್ಥ. ಒಮ್ಮೆ ಹುಟ್ಟಿದ ಬೇರು ಸಮರ್ಪಕವಾಗಿ ಬೆಳವಣಿಗೆ…

Read more

ಹ್ಯೂಮಸ್ ಹೆಚ್ಚಿಸಿ ಅಧಿಕ ಫಸಲು ಪಡೆಯಿರಿ.

ಎಲ್ಲರೂ ಹ್ಯೂಮಸ್ ಎಂಬ ಶಬ್ಧವನ್ನು ಕೇಳಿರುತ್ತಾರೆ.ಆದರೆ ಇದು ಏನು, ಹೇಗೆ ಉತ್ಪಾದನೆಯಾಗುತ್ತದೆ ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.ಹ್ಯೂಮಸ್ ಎಂದರೆ ಮಣ್ಣಿನಲ್ಲಿ ಜೀವ ರಾಸಾಯನಿಕ ಕ್ರಿಯೆಯಿಂದ ಉತ್ಪಾದನೆಯಾಗುವ ಆಕಾರ ರಹಿತ, ಒಂದು ವಸ್ತು. ಇದು ಮಣ್ಣಿನ ಸ್ಥಿತಿಯನ್ನು ಫಲವತ್ತಾಗಿ ಇಡಲು ನೆರವಾಗುವ ಅಂಶ. ನಾವು ಮಣ್ಣಿಗೆ ಸೇರಿಸುವ ಕೃಷಿ ತ್ಯಾಜ್ಯಗಳು, ಮಣ್ಣಿನಲ್ಲೇ ಇರುವ ಕೆಲವು ಜೀವಿಗಳು ತಮ್ಮ ಆಯುಸ್ಸನ್ನು ಮುಗಿಸಿ ಮತ್ತೆ ಮಣ್ಣಿಗೇ ಸೇರುತ್ತವೆ. dead plant and animals and ferns etc.  ಅದು ಮಣ್ಣಿನಲ್ಲಿ ವಿಘಟನೆಯಾಗುವಾಗ…

Read more

ಇಪಿಎನ್ (EPN) ಸಿಂಪಡಿಸಿ- ಬೇರು ಹುಳ ನಿಯಂತ್ರಿಸಿ.

ಬೇರು ಹುಳ ಎಂಬುದು ಪ್ರಕೃತಿಯಲ್ಲಿಯೇ ಇರ್ವ ಒಂದು ಜೀವಿ. ನಿಸರ್ಗದಲ್ಲಿರುವ ಬೇರೆ ಬೇರೆ ಸಸ್ಯಗಳಿಗೆ  ಬೇರೆ ಬೇರೆ ನಮೂನೆಯ ಬೇರು ಹುಳಗಳು ತೊಂದರೆ ಮಾಡುತ್ತವೆ. ಹಾಗೆಯೇ ಪ್ರಕೃತಿಯಲ್ಲಿ ಅದನ್ನು ನಾಶಮಾಡುವ ಜೀವಿಯೂ ಇದೆ. ಅಂತಹ ಒಂದು ಜೀವಿ EPN. ಇದನ್ನು ಹೊಲದಲ್ಲಿ ಬಿಡುವುದರಿಂದ ಅವು ನೈಸರ್ಗಿಕವಾಗಿ ಬೇರು ಹುಳವನ್ನು ನಾಶ ಮಾಡುತ್ತವೆ.   ಇದು ಸಕಾಲ: ಮೇ ತಿಂಗಳಲ್ಲಿ ಬೇರು ಹುಳದ ದುಂಬಿ ಭೂಮಿಯಿಂದ ಹೊರಬಂದು ಗಂಡು ಹೆಣ್ಣು ಜೋಡಿಯಾಗಿ ಮತ್ತೆ ಮಣ್ಣಿಗೆ ಸೇರಿ ಅಲ್ಲಿ ಮೊಟ್ಟೆ…

Read more
ಅಡಿಕೆ ಗರಿಯಲ್ಲಿ ಸೂಕ್ಷ್ಮ ಪೋಷಕದ ಕೊರತೆ ಲಕ್ಷಣ

ಮೈಕ್ರೋ ನ್ಯೂಟ್ರಿಯೆಂಟ್ ಬಳಸಿದರೆ ಅಚ್ಚರಿಯ ಇಳುವರಿ.

ಭಾರತ ದೇಶದ ಬಹುತೇಕ ಮಣ್ಣಿನಲ್ಲಿ ಸೂಕ್ಷ್ಮಪೋಷಕಾಂಶಗಳ ಕೊರತೆ ಇದೆ. ಒಟ್ಟು ಕೃಷಿ ಭೂಮಿಯಲ್ಲಿ 49% ಸತುವಿನ ಕೊರತೆಯನ್ನೂ , 12% ಕಬ್ಬಿಣದ ಕೊರತೆಯನ್ನೂ , 5% ಮ್ಯಾಂಗನೀಸ್, ಮತ್ತು 3% ದಷ್ಟು ತಾಮ್ರದ ಕೊರತೆಯನ್ನು 33% ಬೋರಾನ್ ಮತ್ತು 11%  ಮಾಲಿಬ್ಡಿನಂ ಕೊರತೆಯನ್ನು ಹೊಂದಿದೆ ಎಂಬುದಾಗಿ ಅಧ್ಯಯನ ಹೇಳುತ್ತದೆ. ನಿಮ್ಮ ಯಾವುದೇ ಬೆಳೆಗೆ 1 ಲೀ. ನೀರಿಗೆ 1  ಗ್ರಾಂ ಪ್ರಮಾಣದಲ್ಲಿ ಮೈಕ್ರೋ ನ್ಯೂಟ್ರಿಯೆಂಟ್ ಮಿಶ್ರಣ ಮಾಡಿ ಸಿಂಪರಣೆ ಮಾಡಿ.ಆಗ ತಿಳಿಯುತ್ತದೆ ಅದರ ಮಹಿಮೆ ಏನು ಎಂಬುದು….

Read more
error: Content is protected !!