ಮಳೆಗಾಲಕ್ಕೆ ಮುಂಚೆ ಔಷಧಿ ಸಿಂಪಡಿಸಿದರೆ ಈ ರೀತಿ ಲೇಪನ ಆಗಿ ಉತ್ತಮ ರಕ್ಷಣೆ ಸಿಗುತ್ತದೆ.

ಮಳೆಗಾಲಕ್ಕೆ ಮುಂಚೆ ಔಷಧಿ  ಸಿಂಪರಣೆಯಿಂದ ಪ್ರಯೋಜನ ಏನು?

ಅಡಿಕೆ ಬೆಳೆಗಾರರು ಮಳೆಗಾಲ ಪ್ರಾರಂಭವಾದ ನಂತರ ಕೊಳೆ ಔಷಧಿ ಸಿಂಪಡಿಸಿದರೆ ಸಾಕು ಎಂದು  ಭಾವಿಸಿದ್ದರೆ ಅದು ತಪ್ಪು. ಮಳೆ ಪ್ರಾರಂಭವಾಗುವ ಮುನ್ಸೂಚನೆ ಸಿಕ್ಕಿದ ತಕ್ಷಣ ಕೊಳೆ ಔಷಧಿ ಸಿಂಪರಣೆ ಮಾಡಿದರೆ ತುಂಬಾ ಪ್ರಯೋಜನ ಇದೆ.ಕೊಳೆ ರೋಗ ಬಾರದಂತೆ ರಕ್ಷಣೆ (preventive) ನೀಡುವ ಎಲ್ಲಾ ಔಷಧಿಗಳೂ ರೋಗ ಬರುವ ಮುಂಚೆ ಬಳಕೆ ಮಾಡಿದರೆ ಮಾತ್ರ ಫಲಪ್ರದವಾಗಿರುತ್ತವೆ. ಅಡಿಕೆ ಬೆಳೆಗಾರರಲ್ಲಿ ಹೆಚ್ಚಿನವರು ಸರಿಯಾಗಿ ಮಳೆ ಬಂದು ತಂಪಾದ ನಂತರ ಕೊಳೆ ರೋಗ ಬಾರದಂತೆ ತಡೆಯುವ ಬೋರ್ಡೋ ದ್ರಾವಣ ಅಥವಾ ಇನ್ಯಾವುದೋ…

Read more
ಬಾಳೆಯ ಈ ಶಿಲೀಂದ್ರ ರೋಗಕ್ಕೆ ಏನು ಪರಿಹಾರ ?

ಬಾಳೆಯ ಈ ಶಿಲೀಂದ್ರರೋಗಕ್ಕೆ ಏನು ಪರಿಹಾರ ?

ಮಳೆಗಾಲ ಪ್ರಾರಂಭವಾಗಿ ಮುಗಿಯುವ ಸಮಯಕ್ಕೆ ಬಾಳೆ ಬೆಳೆಯಲ್ಲಿ ಎಲೆ  ಹಳದಿಯಾಗುವ ಸಮಸ್ಯೆ ಎಲ್ಲೆಡೆಯೂ ಕಾಣಿಸುತ್ತದೆ. ಇದನ್ನು ಉಪಚರಿಸದೇ ಬಿಟ್ಟರೆ  ಗಿಡ ಬಾರೀ ಸೊರಗುತ್ತದೆ. ಗೊನೆಯೂ ಚೆನ್ನಾಗಿ ಬರುವುದಿಲ್ಲ. ಮಿತಿ ಮೀರಿದರೆ ಬಾಳೆ ಸಾಯುವುದೂ ಇದೆ. ಇದಕ್ಕೆ ಏನು ಉಪಚಾರ ಮಾಡಬೇಕು. ಯಾವ ಮುನ್ನೆಚ್ಚರಿಕೆ ಅಗತ್ಯ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಬಾಳೆಯ ಎಲೆಗೆ ಬರುವ  ಎರಡು ಪ್ರಮುಖ ರೋಗಗಳೆಂದರೆ  ಎಲೆ ಹಳದಿಯಾಗಿ ಒಣಗುವುದು ಮತ್ತು ಎಲೆಗಳು ಗುಚ್ಚವಾಗುತ್ತಾ ಬಂದು ಸಸ್ಯ ಸತ್ತು ಹೋಗುವುದು. ಮೊದಲನೆಯ ಸಮಸ್ಯೆಗೆ…

Read more
ಹಳಸಲು ಮಣ್ಣು – ಇದರಿಂದ ಕೃಷಿಗೆ ಎನೇನು ತೊಂದರೆ

ಹಳಸಲು ಮಣ್ಣು – ಇದರಿಂದ ಕೃಷಿಗೆ ಎನೇನು ತೊಂದರೆ?

ಅಡುಗೆ ಮಾಡಿದ ಪದಾರ್ಥ  ಹಳಸಲು ಆಗುವುದು ಗೊತ್ತು. ಇನ್ನು ಮಣ್ಣು ಹಳಸುವುದು ಇದು ಯಾವುದಪ್ಪಾ ಹೊಸ ವಿಷಯ?  ಇದೇನೂ ಹೊಸ ವಿಷಯವಲ್ಲ. ನಮ್ಮ ಹಿರಿಯರಿಗೆ ಇದು ಗೊತ್ತಿತ್ತು. ನಮಗೆ ಮಾತ್ರ ಇದು ಗೊತ್ತಿಲ್ಲ. ಹಳಸುಮಣ್ಣು  ಒಂದು ರೀತಿಯಲ್ಲಿ ಸಸ್ಯ ಬೆಳವಣಿಗೆಗೆ ವಿಷ ಎಂತಲೇ ಹೇಳಬಹುದು. ಬಹುತೇಕ ಜನ ಇಂತಹ ಹಾಕಿ ಬೆಳೆ ಹಾಳು ಮಾಡಿಕೊಂಡವರಿದ್ದಾರೆ. ಬಹಳಷ್ಟು ಜನ ರೈತರು ಹೀಗೆ ಮಾಡಿಕೊಂಡು ಬೆಳೆ ಹಾಳು ಮಾಡಿಕೊಂಡವರಿದ್ದಾರೆ. ಏನಿದು ಮಣ್ಣು ಹಳಸುವುದು ನೋಡೋಣ. ಮಣ್ಣು ಯಾವಾಗಲೂ ಹಿತಮಿತ ತೇವಾಂಶದಿಂದ…

Read more
Super potassium humate flake type.

The Role of Potassium Humate in Enhancing Horticulture Crop Performance

In the realm of sustainable agriculture and modern horticulture, Potassium Humate or humic acid has emerged as a powerful bio-stimulant and soil conditioner. Derived from humic substances—naturally occurring organic matter found in leonardite or lignite—Potassium Humate contains a rich blend of humic and fulvic acids bonded with potassium. It plays a significant role in improving…

Read more
ಕೊಕ್ಕೋ ಬೆಳೆಗೆ ಶಿಲೀಂದ್ರನಾಶಕ ಸಿಂಪರಣೆ ಏಕೆ ಅಗತ್ಯ ?

ಕೊಕ್ಕೋ  ಬೆಳೆಗೆ ಶಿಲೀಂದ್ರನಾಶಕ ಸಿಂಪರಣೆ  ಏಕೆ ಅಗತ್ಯ ?  

ಮಳೆಗಾಲದಲ್ಲಿ ಕೊಕ್ಕೋ ಬೆಳೆ ಉಳಿಸಿಕೊಳ್ಳಬೇಕಾದರೆ ಶಿಲೀಂದ್ರ ನಾಶಕದ ಸಿಂಪರಣೆ ಅತ್ಯಗತ್ಯ. ಕೊಕ್ಕೋ ಬೆಳೆ ಶಿಲೀಂದ್ರ ರೋಗಕ್ಕೆ ಬೇಗ ತುತ್ತಾಗುವ ಬೆಳೆಯಾಗಿದ್ದು ಮಳೆಗಾಲ ಪೂರ್ವದಲ್ಲೇ ಸಿಂಪರಣೆ ಮಾಡಿದರೆ ಉತ್ತಮ. ಮಳೆಗಾಲ ಮುಗಿಯುವ ತನಕ ತಿಂಗಳಿಗೆ ಒಮ್ಮೆಯಂತೆ ಬೋರ್ಡೋ ದ್ರಾವಣ ಅಥವಾ ಇನ್ನಿತರ ಶಿಲೀಂದ್ರ ನಾಶಕವನ್ನು ಸಿಂಪಡಿಸುತ್ತಾ ಇದ್ದರೆ ಉತ್ತಮ ಫಸಲು ಪಡೆಯಬಹುದು. ಕೊಕ್ಕೋ ಎಂಬುದು ವರ್ಷ ಪೂರ್ತಿ ಬೆಳೆ ಇರುವ ಮಿಶ್ರ ಬೆಳೆ . ಕೆಲವು ಸೀಸನ್ ಗಳಲ್ಲಿ  ಸ್ವಲ್ಪ ಕಡಿಮೆಯಾಗಬಹುದು. ಕೆಲವು ಸೀಸನ್ ನಲ್ಲಿ ಹೆಚ್ಚಾಗಬಹುದು. ಆದರೆ…

Read more
ಹುತ್ತಗಳಿಂದ ಕೃಷಿಕರಿಗೆ ಏನು ಲಾಭ? ಕಡಿಮೆಯಾಗಲು ಕಾರಣ ಏನು?

ಹುತ್ತಗಳಿಂದ ಕೃಷಿಕರಿಗೆ ಏನು ಲಾಭ? ಕಡಿಮೆಯಾಗಲು ಕಾರಣ ಏನು?

ನಮ್ಮ ಸುತ್ತಮುತ್ತ ಎಲ್ಲಾ ಕಡೆಯಲ್ಲಿ ಕಾಣಸಿಗುತ್ತಿದ್ದ ಹುತ್ತಗಳು ಈಗ ಅಪರೂಪವಾಗಲಾರಂಭಿಸಿದೆ.  ಇದು ನಮ್ಮ ಹೊಲದ ಮಣ್ಣು  ಸಾವಯವ ಅಂಶ ಕಳೆದುಕೊಡಿರುವುದರ ಸೂಚನೆ. ಬಯಲು ಸೀಮೆಯ ಕಡೆ, ಕಾಡು ಇರುವಲ್ಲಿ ಮಾನವ ಹಸ್ತಕ್ಷೇಪ ಇಲ್ಲದ ಕಡೆ ಸ್ವಲ್ಪ ಮಟ್ಟಿಗೆ ಹುತ್ತಗಳು ಕಾಣಸಿಕ್ಕರೆ ಉಳಿದೆಡೆ ಹುತ್ತಗಳಿಲ್ಲ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುತ್ತಗಳ ಸಂಖ್ಯೆಯೇ ಕ್ಷೀಣಿಸುತ್ತಿದೆ! ಹುತ್ತಗಳು ಇಲ್ಲದಿದ್ದರೆ ಗೆದ್ದಳು ಇಲ್ಲವಲ್ಲಾ ಒಳ್ಳೆಯದೇ ಅಯಿತಲ್ಲಾ ಎಂದು ಭಾವಿಸಬೇಡಿ. ಹುತ್ತಗಳು ನಮ್ಮ ಭೂಮಿಯ ಫಲವತ್ತತೆಯ ಸಂಕೇತ. ಹುತ್ತಗಳು ಬೆಳೆಯುವುದು ಭೂಮಿಯಲ್ಲಿರುವ ಸಾವಯವ…

Read more
ಕಳೆಯಲ್ಲ ಇದು ಪ್ರಕೃತಿ ಕೊಟ್ಟ ವರ

ಕಳೆಯಲ್ಲ ಇದು ಪ್ರಕೃತಿ ಕೊಟ್ಟ ವರ

ಹೆಚ್ಚಿನವರು ಇದನ್ನು ಕಳೆ  ಎಂದು ದೂಷಿಸುತ್ತಾರೆ. ಪ್ರಕೃತಿ ತನ್ನ ಉಳಿವಿಗಾಗಿ ಕೆಲವು ಜೀವ ಸಂಕುಲಗಳನ್ನು ಸೃಷ್ಟಿಸುತ್ತಲೇ ಇರುತ್ತದೆ. ಅಂಥಹ ಒಂದು ಕೊಡುಗೆಯೇ ಈ ಸಸ್ಯ. ಒಂದು ವೇಳೆ ಈ ಬಳ್ಳಿ ಅಥವಾ ಗಿಡ ಬಾರದೆ  ಇರುತ್ತಿದ್ದರೆ ಇಂದು ಏನಾಗುತ್ತಿತ್ತು? ಇದರಿಂದ ಪ್ರಯೋಜನ ಪಡೆದುಕೊಳ್ಳುವುದಾದರೆ ಎಷ್ಟೆಲ್ಲಾ ಇದೆ ಎಂಬುದರ ಕುರಿತಾಗಿ ಸ್ವಲ್ಪ ವಿವರಗಳು ಇಲ್ಲಿದೆ. ಹಳದಿ ಸೇವಂತಿಗೆ ಬಳ್ಳಿ ಇದು ಇಲ್ಲದ ಜಾಗವೇ ಇಲ್ಲ. ಹೇಗೆ  ಬಂತು ಎಲ್ಲಿಂದ ಬಂತು ಎಂಬುದರ ಹುಡುಕಾಟ ಇನ್ನು ಆಗಬೇಕು. ಆದರೆ  ಇದು…

Read more
ಮಣ್ಣು ಫಲವತ್ತತೆ  ಕಳೆದುಕೊಳ್ಳಲು ಏನು ಕಾರಣ

ಮಣ್ಣು ಫಲವತ್ತತೆ  ಕಳೆದುಕೊಳ್ಳಲು ಏನು ಕಾರಣ ?

ಮಣ್ಣು  ತನ್ನ ಪಲವತ್ತತೆಯನ್ನು ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಿದೆ. ಜನ ಸಾವಯವ ಗೊಬ್ಬರ ಕಡಿಮೆಯಾಗಿ ಹೀಗಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ಇದು ಸ್ವಲ್ಪ ಮಟ್ಟಿಗೆ  ಸರಿಯಾದರೂ ಅದರ ಜೊತೆಗೆ ಇನ್ನೂ ಒಂದು ಕಾರಣ ಇದೆ. ಅದು ಕಳೆನಾಶಕಗಳ ಬಳಕೆ. ಕಳೆನಾಶಕಗಳನ್ನು ಬಳಸಿದಲ್ಲಿ ಮಣ್ಣಿನ ರಚನೆ ಹಾಳಾಗುತ್ತದೆ. ಅದು ಹೇಗೆ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಕಳೆನಾಶಕ ಇದು ತೋಟವನ್ನು ಚೊಕ್ಕವಾಗಿರಿಸುತ್ತದೆ. ಒಡಾಡುವುದಕ್ಕೆ, ಸುಲಭ ಎಂಬುದು ನಮ್ಮ  ಅಭಿಪ್ರಾಯ. ಕಳೆಗಳು ಬೆಳೆಗೆ ಪೂರೈಸಿದ ಪೋಷಕಗಳನ್ನು ಬೇಗ ಕಬಳಿಸುತ್ತದೆ, ಇದರಿಂದಾಗಿ…

Read more
ಇರುವೆಗಳು ಯಾಕೆ ಬರುತ್ತವೆ- ಇದರಿಂದ ತೊಂದರೆ ಇದೆಯೇ?

ಇರುವೆಗಳು ಯಾಕೆ ಬರುತ್ತವೆ- ಇದರಿಂದ ತೊಂದರೆ ಇದೆಯೇ?

ತರಕಾರಿಗಳಿಗೆ, ಹಣ್ಣು ಹಂಪಲುಗಳಿಗೆ ಇರುವೆಗಳು ಬರುವುದು ಸಾಮಾನ್ಯ. ಕೆಂಪು ಇರುವೆಗಳ ಉಪಟಳಕ್ಕೆ  ಯಾವುದನ್ನೂ ಬೆಳೆಯುವುದು ಬೇಡ ಎನ್ನಿಸುತ್ತದೆ. ವಿಚಿತ್ರ ವಿಚಿತ್ರ ಇರುವೆಗಳು ನಾವು ಬೆಳೆದ ಫಲಕ್ಕೆ ತೊಂದರೆ ಮಾಡುತ್ತವೆ. ಯಾಕೆ ಇವುಗಳು ರೈತರ ಬೆಳೆಗೆ ತೊಂದರೆ ಮಾಡುತ್ತವೆ. ಅವು ಯಾಕೆ ಬರುವುದು ಇದಕ್ಕೆಲ್ಲಾ ಉತ್ತರ ಇಲ್ಲಿದೆ. ಇವು ಬರಬೇಕಾದರೆ ಯಾವುದಾದರೂ ಕಾರಣ ಇರಬೇಕು. ಗಾಳಿ ಬಾರದೆ ಎಲೆ ಅಲ್ಲಾಡಲಿಕ್ಕಿಲ್ಲ. ಸಿಹಿ ಇಲ್ಲದೆ ಇರುವೆ ಬರಲಿಕ್ಕಿಲ್ಲ ಎಂಬ ಮಾತಿದೆ. ಇವುಗಳು ಬೆಳೆಗೆ ತೊಂದರೆ ಮಾಡಲು ಬರುವುದೋ ಅಥವಾ ಅವು…

Read more
ಸತ್ತ ಅಡಿಕೆ ಮರಗಳನ್ನು ತಕ್ಷಣ ಕಡಿಯದಿದ್ದರೆ ಏನೇನು ಸಮಸ್ಯೆಗಳಾಗುತ್ತದೆ?

ಸತ್ತ ಅಡಿಕೆ ಮರಗಳನ್ನು ತಕ್ಷಣ ಕಡಿಯದಿದ್ದರೆ ಏನೇನು ಸಮಸ್ಯೆಗಳಾಗುತ್ತದೆ?

ಅಡಿಕೆ ಮರಗಳು ಗಾಳಿಗೆ, ರೋಗಕ್ಕೆ ತುತ್ತಾಗಿ ಸತ್ತರೆ ಅಂತಹ ಮರಗಳನ್ನು ತಕ್ಷಣ ಕಡಿದು ಸೂಕ್ತ ವಿಲೇವಾರಿ ಮಾಡಬೇಕು. ಈ ವರ್ಷ ಶಿರ ಕೊಳೆ ಬಂದು, ಗಾಳಿಗೆ ಭಾರೀ ಪ್ರಮಾಣದಲ್ಲಿ ಮರಗಳು ಅರ್ಧರ್ಧ ತುಂಡಾಗಿ ಬಿದ್ದಿದೆ. ರೈತರು ಅದನ್ನು ಹಾಗೆಯೇ ಬಿಡುತ್ತಾರೆ. ಅದನ್ನು ಕಡಿಯದೆ ಹಾಗೆಯೇ ಬಿಟ್ಟರೆ ಏನಾಗುತ್ತದೆ ಈ ಬಗ್ಗೆ  ವಿಸ್ತೃತ ಲೇಖನ ಇದು. ಸತ್ತ ಮರಮಟ್ಟು,ಮನುಷ್ಯ , ಪ್ರಾಣಿ ಯಾವುದಿದ್ದರೂ ಅದನ್ನು ತಕ್ಷಣ ಸೂಕ್ತ ವಿಲೇವಾರಿ ಮಾಡಬೇಕು. ಅದನ್ನು ಹಾಗೆಯೇ ಉಳಿಸಿಕೊಂಡರೆ ಅದರಿಂದ ಜೀವ ಇರುವಂತದ್ದಕ್ಕೆ…

Read more
error: Content is protected !!