ಬೇರು ಹುಳ ನಿಯಂತ್ರಣಕ್ಕೆ ಇದು ಸಕಾಲ.

ಬೇರು ಹುಳ ನಿಯಂತ್ರಣಕ್ಕೆ ಇದು ಸಕಾಲ.

ಬೇರು ಹುಳ white grub ಅಡಿಕೆ ಬೆಳೆಗೆ ಅತೀ ದೊಡ್ಡ ಶತ್ರು ಎಂತಲೇ ಹೇಳಬಹುದು. ಇದು ಬರೇ ಅಡಿಕೆ ಬೆಳೆಗೆ ಮಾತ್ರವಲ್ಲ.ಕಬ್ಬು, ತೆಂಗು ಹಾಗೆಯೇ ಇನ್ನಿತರ ಮರಮಟ್ಟು ಬೆಳೆಗಳಿಗೂ ಇದು ತೊಂದರೆ ಮಾಡುತ್ತದೆ. ಮರಗಳ ಕಾಂಡ ಕೊರಕ, ಗೆಲ್ಲು ಕೊರಕ, ಬೇರು ತಿನ್ನುವ ಹುಳಗಳ ತೊಂದರೆ ಈ ಸಮಯದಲ್ಲೇ ಜಾಸ್ತಿ. ಇದನ್ನು ನೀವೂ ಗಮನಿಸಿರಬಹುದು. ಕಾರಣ ಇಷ್ಟೇ. ಈ ಸಮಯದಲ್ಲಿ ಜೂನ್ , ಜುಲೈ ತಿಂಗಳಲ್ಲಿ ದುಂಬಿಗಳು ಮೊಟ್ಟೆ ಇಟ್ಟದ್ದು ಮರಿಗಳಾಗಿ ತಮ್ಮ  ಆಹಾರ ಸೇವನೆ ಕೆಲಸ…

Read more
ಅಡಿಕೆ ಮರಗಳ ಶಿರ ಒಣಗಲು ಕಾರಣ ಮತ್ತು ಪರಿಹಾರ.

ಅಡಿಕೆ ಮರಗಳ ಶಿರ ಒಣಗಲು ಕಾರಣ ಮತ್ತು ಪರಿಹಾರ.

ಅಡಿಕೆ ಮರಗಳಲ್ಲಿ ಶಿರ ಒಣಗಿ ಕೊಳೆಯುವ ಸಮಸ್ಯೆ ಬಹಳ ಹಿಂದಿನಿಂದಲೂ ಇದ್ದದ್ದು. ಕೆಲವು ವರ್ಷ ಹೆಚ್ಚಾಗುತ್ತದೆ. ಕೆಲವು ವರ್ಷ ಗೌಣವಾಗಿರುತ್ತದೆ. ಈ ವರ್ಷ ಇದು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುತ್ತಿದ್ದು,  ಬೆಳೆಗಾರರು ಯಾಕೆ ಹೀಗಾಗುತ್ತಿದೆ ಎಂದು ಗಾಬರಿಯಾಗಿದ್ದರೆ. ಇದು ಒಂದು ಶಿಲೀಂದ್ರ ರೋಗವಾಗಿದ್ದು,  ಸರಿಯಾದ ನಿರ್ವಹಣೆ ವಿಧಾನಗಳಿಂದ  ಬಾರದಂತೆ ಮಾಡುವುದು ಸಾಧ್ಯ.ಇದನ್ನು ತೆಂಡೆ ರೋಗ ಎಂದು ಕೆಲವರು ಹೇಳುವುದಿದೆ. ತೆಂಡೆ, ಅಥವಾ ಚೆಂಡೆ ರೋಗ ಎಂದರೆ ಮಲೆನಾಡಿನಲ್ಲಿ ಕಂಡುಬರುವ ಹಿಡಿಮುಂಡಿಗೆ ಅಥವಾ ಬಂದ್ ರೋಗ. ಇದು ಶಿರ ಕೊಳೆಯುವ…

Read more
ಉತ್ತಮ ಇಳುವರಿಗೆ ಇವುಗಳಲ್ಲಿ ಯಾವ ಗೊಬ್ಬರ ಉತ್ತಮ?

ಉತ್ತಮ ಇಳುವರಿಗೆ ಇವುಗಳಲ್ಲಿ ಯಾವ ಗೊಬ್ಬರ ಉತ್ತಮ?

ಉತ್ತಮ ಇಳುವರಿ ಪಡೆಯಲು ರೈತರು ಯಾವ ಗೊಬ್ಬರವನ್ನು ಬಳಸಿದರೆ ಒಳ್ಳೆಯದು ಅದು ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಹೆಚ್ಚಿನ ರೈತರು ರಸಗೊಬ್ಬರದ ಜೊತೆಗೆ ಅಲ್ಪ ಸ್ವಲ್ಪವಾದರೂ ಸಾವಯವ ಮೂಲದ ಗೊಬ್ಬರವನ್ನು ಬಳಕೆ ಮಾಡುತ್ತಾರೆ. ಅವುಗಳಲ್ಲಿ ಬೇರೆ ಬೇರೆ ಪ್ರಕಾರದ ಗೊಬ್ಬರಗಳಿದ್ದು  ಪೋಷಕಾಂಶ ಮತ್ತು ಅದರ ಬಿಡುಗಡೆ ಹಾಗೂ ಅವುಗಳ ಧೀರ್ಘಕಾಲಿಕ ಪರಿಣಾಮಗಳನ್ನು ತುಲನೆ ಮಾಡಿದಾಗ ಯಾವ ಗೊಬ್ಬರ ಉತ್ತಮ ಎಂಬ ತೀರ್ಮಾನಕ್ಕೆ ಬರಬಹುದು. ಎಲ್ಲಾ ರೈತರೂ ಮಣ್ಣು ಬೇಕು ಎಂಬ ಕಳಕಳಿಯಿಂದ…

Read more
ಜರ್ಸಿ – ಎಚ್ ಎಪ್ ಹಸುವಿನ ಸಗಣಿಯಲ್ಲಿ ಪೋಷಕಾಂಶ ಹೆಚ್ಚು

ಜರ್ಸಿ – ಎಚ್ ಎಪ್  ಹಸುವಿನ ಸಗಣಿಯಲ್ಲಿ  ಪೋಷಕಾಂಶ ಹೆಚ್ಚು.

ಜರ್ಸಿ – ಎಚ್ ಎಫ಼್  ಹಸುಗಳು ಹಾಕುವ ಸಗಣಿಯಲ್ಲಿ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದರೆ ಬೇಸರ ಮಾಡಿಕೊಳ್ಳಬೇಡಿ. ನಿಜವಾಗಿಯೂ ಇದು ಸತ್ಯ. ಈ ಹಸುಗಳು  ವಿದೇಶಿ ತಳಿಗಳಾದರೂ  ಅವು ಹಾಕುವ ಸಗಣಿಯಲ್ಲಿ ಪೋಷಕಾಂಶ  ಚೆನ್ನಾಗಿಯೇ ಇರುತ್ತದೆ. ಹಾಗೆಂದು ನಾಟೀ ಹಸುಗಳ ಸಗಣಿಯಲ್ಲಿ ಇಲ್ಲ ಎಂದಲ್ಲ. ಯಾವ ಹಸುಗಳಿಗೆ ಅಧಿಕ ಸತ್ವದ ಆಹಾರ ಕೊಡಲಾಗುತ್ತದೆಯೋ ಅವುಗಳು ವಿಸರ್ಜಿಸುವ ತ್ಯಾಜ್ಯದಲ್ಲಿ  ಆ ಸತ್ವಗಳ ಉಳಿಕೆ ಇರುತ್ತವೆ. ಹಸುಗಳಲ್ಲಿ ನಾಟಿ ಮತ್ತು ವಿದೇಶೀ ತಳಿ ಎಂಬ ಎರಡು ವಿಧಗಳು. ನಾಟಿ ತಳಿಗೆ…

Read more
ಮಾವಿನ ಮರ –ಸಸಿ ಇದ್ದವರು ತಕ್ಷಣ ಈ ಕೆಲಸ ಮಾಡಬೇಕು.

ಮಾವಿನ ಮರ –ಸಸಿ ಇದ್ದವರು ತಕ್ಷಣ ಈ ಕೆಲಸ ಮಾಡಬೇಕು.

ಮಾವಿನ ಮರ- ಸಸಿ ಬಹುತೇಕ ಎಲ್ಲಾ ಕೃಷಿಕರಲ್ಲೂ ಇರುತ್ತದೆ.ಹಣ್ಣು ತಿನ್ನುವ ಆಸೆಗಾಗಿ ಬೆಳೆಸಿದ ಈ ಮರಗಳಿಂದ ಉತ್ತಮ ಫಲ ಪಡೆಯಲು ಈ ಕೆಲಸವನ್ನು ಈಗ ಮಾಡಲೇಬೇಕು. ಮಳೆಗಾಲದ ಸಮಯದಲ್ಲಿ ಮಾವಿನ ಮರಗಳಿಗೆ ಬರುವ ಒಂದು ಶಿಲೀಂದ್ರ ರೋಗದ ಸೋಂಕು ಆ ಮರದ ಫಸಲಿನ ಮೇಲೆ ನೇರ ಪರಿಣಾಮ ಉಂಟು ಮಾಡುತ್ತದೆ.ಬಹಳಷ್ಟು ಜನ ಮಾವಿನ ಸಸಿ ಬೆಳೆದವರು ಅದರಲ್ಲಿ ಫಲ ಬಂದರೂ  ಉಪಯೋಗಕ್ಕಿಲ್ಲ ಎನ್ನುತ್ತಾರೆ. ಇದಕ್ಕೆ ಕಾರಣ ಮಳೆಗಾಲದಲ್ಲಿ ಬರುವ ಶಿಲೀಂದ್ರ ರೋಗದ ರೋಗಾಣು ಮರದಲ್ಲಿ ಜೀವಂತವಾಗಿ ಉಳಿಯುವುದು….

Read more
ಕರಿಮೆಣಸಿನ ಈ ರೋಗವನ್ನು ಹೇಗೆ ಗುಣ ಮಾಡುವುದು?

ಕರಿಮೆಣಸಿನ ಈ ರೋಗವನ್ನು ಹೇಗೆ ಗುಣ ಮಾಡುವುದು?

ಕರಿಮೆಣಸಿನ ಬೆಳೆಗೆ ಈಗ ಬರುವ ರೋಗ ಮಾರಣಾಂತಿಕವಾಗಿದ್ದು, ಇದನ್ನು ಸಹ ಗುಣಪಡಿಸಲು ಸಾಧ್ಯವಿದೆ. ರೋಗ ಪ್ರಾರಂಭವಾಗುವ ಹಂತದಲ್ಲಿ ಇದನ್ನು ಗುರುತಿಸಿ, ಉಪಚಾರಮಾಡುವುದು ಪ್ರಾಮುಖ್ಯ. ಮಳೆ ಬರುತ್ತಿದೆ ಎಂದು ಮನೆಯಲ್ಲೇ ಕುಳಿತರೆ  ಅಥವಾ ತೋಟಕ್ಕೆ ಹೋದಾಗ ಬಳ್ಳಿಯ ಸ್ಥಿತಿಗತಿಯನ್ನು ಕೂಲಂಕುಶವಾಗಿ ಗಮನಿಸದೇ ಇದ್ದರೆ  ರೋಗ ಸೋಂಕು ತಗಲಿ ಅದು ಬಹಳ ತ್ವರಿತವಾಗಿ ಉಲ್ಬಣಿಸಿ ಬಳ್ಳಿ ಸಾಯುತ್ತದೆ.  ಈಗಕರಿಮೆಣಸು ಬೆಳೆಗಾರರಿಗೆ ಇರುವ ಪ್ರಾಮುಖ್ಯ ಕೆಲಸ ತೋಟಕ್ಕೆ ಹೋದಾಗ ಬಳ್ಳಿಯ ಆರೋಗ್ಯವನ್ನು ಗಮನಿಸುತ್ತಾ ಇರುವುದು. ಕರಿಮೆಣಸು ಬೆಳೆಗೆ ಮಳೆಗಾಲ ಕಷ್ಟದ ಕಾಲ….

Read more
ಕರಿಮೆಣಸು ಬಳ್ಳಿ ಸಾಯುತ್ತಿದೆಯೇ? ಈ ಕೀಟ ಇರಬಹುದು ಗಮನಿಸಿ.

ಕರಿಮೆಣಸು ಬಳ್ಳಿ ಸಾಯುತ್ತಿದೆಯೇ? ಈ  ಕೀಟ ಇರಬಹುದು ಗಮನಿಸಿ.

ಕರಿಮೆಣಸಿನ ಬಳ್ಳಿಗೆ ರೋಗ ಬರುತ್ತದೆ. ಇದರಿಂದಾಗಿ ಬಳ್ಳಿ ಸಾಯುತ್ತದೆ ಎಂಬುದು ನಮಗೆಲ್ಲಾ ಗೊತ್ತಿರುವ ವಿಚಾರ. ಆದರೆ ರೋಗ ಬಂದು ಬಳ್ಳಿ ಸಾಯುವುದಲ್ಲದೆ ಕೀಟದ ಕಾರಣದಿಂದಲೂ ಬಳ್ಳಿ ಸಾಯುತ್ತದೆ. ಇದು ಹರಡುವ ಕೀಟವಾಗಿದ್ದು, ರೋಗದಿಂದ ಬಳ್ಳಿ ಒಣಗಿದಂತೆ ಇದರಿಂದಲೂ ಒಣಗುತ್ತದೆ. ಕರೆಗಳೂ ಉದುರುತ್ತದೆ. ಎಲೆಗಳೂ ಉದುರುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ. ಗದ್ದೆ ಬೇಸಾಯ ಮಾಡುವವರಿಗೆ ಬೇಸಾಯ ಕೈ ಹಿಡಿಯಬೇಕಿದ್ದರೆ ದಿನಾ ಗದ್ದೆಗೆ ಸುತ್ತು ಬರಬೇಕಂತೆ. ಅದಕ್ಕಾಗಿಯೇ ಗದ್ದೆಗೆ ಹುಣಿಯೂ ಇರುತ್ತದೆ. ಉತ್ತಮ ಬೇಸಾಯಗಾರರು ಬೆಳಗ್ಗಿನ ಹೊತ್ತು ಗದ್ದೆಗೆ…

Read more
ಎಲೆಗಳಿಗೆ ಗೊಬ್ಬರ ಸಿಂಪರಣೆ ಮಾಡುವುದರಿಂದ ಪ್ರಯೋಜನಗಳು

ಎಲೆಗಳಿಗೆ ಗೊಬ್ಬರ ಸಿಂಪರಣೆ ಮಾಡುವುದರಿಂದ ಪ್ರಯೋಜನಗಳು.

ಸಸ್ಯಗಳು ಪೋಷಕಾಂಶಗಳನ್ನು ಬೇರಿನ ಮೂಲಕ ಹೀರಿಕೊಳ್ಳುತ್ತವೆ. ಬೇರಿನ ಸಾಂದ್ರತೆ, ಮತ್ತು ಅವುಗಳ ಹೀರಿಕೊಳ್ಳುವ ಸಾಮರ್ಥ್ಯದ ಮೇಲೆ ಪೋಷಕಗಳು ಬೆಳೆಗೆ ಲಭ್ಯವಾಗುತ್ತದೆ. ಎಲೆಗಳಿಗೆ ಗೊಬ್ಬರ ಸಿಂಪರಣೆ ಎಂಬುದು ಒಂದು ಶಾರ್ಟ್ಕಟ್.ಇಲ್ಲಿ ಬೇರುಗಳ ಸ್ಥಿತಿ ಹೇಗೂ ಇರಲಿ, ಒಮ್ಮೆಗೆ ಸಸ್ಯಕ್ಕೆ ಪೋಷಕಗಳು ಲಭ್ಯವಾಗಿ ಲವಲವಿಕೆ ಉಂಟಾಗುತ್ತದೆ.  ಹಲವಾರು ಸಸ್ಯ ಪೋಷಕಾಂಶಗಳನ್ನು ಎಲೆ ಮತ್ತು ಕಾಂಡಗಳ ಮೂಲಕ ಬೆಳೆಗಳಿಗೆ ಒದಗಿಸಬಹುದು. ಈ ರೀತಿ ಎಲೆ ಮತ್ತು ಕಾಂಡಗಳ ಮೇಲೆ ಸಿಂಪಡಿಸಿದಾಗ ಸಸ್ಯಗಳು ಅವನ್ನು ಹೀರಿಕೊಂಡು ಉಪಯೋಗಿಸುತ್ತವೆ. ಸಸ್ಯ ಪೋಷಕಾಂಶಗಳನ್ನು ಪ್ರತ್ಯೇಕವಾಗಿಯೂ ಅಥವಾ…

Read more
ತೆಂಗಿಗೆ ಯಾಕೆ ಈ ಕೀಟದ ಹಾವಳಿ ಹೆಚ್ಚಾಯಿತು? ಏನು ಪರಿಹಾರ.

ತೆಂಗಿಗೆ ಯಾಕೆ ಈ ಕೀಟದ ಹಾವಳಿ ಹೆಚ್ಚಾಯಿತು? ಏನು ಪರಿಹಾರ.

ತೆಂಗಿನ ಮರ, ಗಿಡಗಳಿಗೆ ಇತ್ತೀಚೆಗೆ ಕೆಂಪು ಮೂತಿ ಕೀಟದ ಹಾವಳಿ ಭಾರೀ ಹೆಚ್ಚಾಗುತ್ತಿದೆ. ರೈತರು ತೆಂಗು ಬೆಳೆಯುವುದೇ ಅಸಾಧ್ಯ ಎನ್ನಲಾರಂಭಿಸಿದ್ದಾರೆ. ಹೀಗೇ ಮುಂದುವರಿದರೆ ರೈತರಿಗೆ ಸಸಿ ನೆಡುವುದೇ ಕೆಲಸವಾದರೂ ಅಚ್ಚರಿ ಇಲ್ಲ. ಇದನ್ನು ಸರಿಯಾಗಿ ಹದ್ದುಬಸ್ತಿಗೆ ತಾರದೆ ಇದ್ದರೆ ಮುಂದೆ ರೈತರು ತೆಂಗು ಬೆಳೆಸುವುದನ್ನೇ ಬಿಡುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ. ಯಾವ ಕಾರಣಕ್ಕೆ ಈ ದುಂಬಿ ಹೆಚ್ಚಾಗುತ್ತಿದೆ. ಇದರ ನಿಯಂತ್ರಣ ಹೇಗೆ? ತೆಂಗಿನ ಮರಗಳಿಗೆ ಬರುವ ಎಲ್ಲಾ ರೋಗಗಳಿಂದಲೂ, ಕೀಟಗಳಿಂದಲೂ  ಪ್ರಭಲವಾದದ್ದು  ಕೆಂಪು ಮೂತಿ ದುಂಬಿ…

Read more
ಎಲೆಚುಕ್ಕೆ ರೋಗ ಸಿಂಪರಣೆಯಿಂದ ವಾಸಿಯಾಗುವುದಿಲ್ಲ. ಯಾಕೆ ಗೊತ್ತೇ?

ಸಿಂಪರಣೆಯಿಂದ ಎಲೆ ಚುಕ್ಕೆರೋಗ ವಾಸಿ ಅಸಾಧ್ಯ. ಯಾಕೆ?

ಅಡಿಕೆಗೆ ಬಾದಿತವಾದ ಎಲೆ ಚುಕ್ಕೆರೋಗ ವಾಸಿ ಮಾಡುವುದಕ್ಕೆ ತಜ್ಞರು ಬಹಳಷ್ಟು ಸಲಹೆಗಳನ್ನು ನೀಡುತ್ತಿದ್ದಾರೆ.  ಅವರ ಸಲಹೆಯನ್ನು ಪಾಲಿಸಿದವರಲ್ಲಿ ಈ ರೋಗ ಒಮ್ಮೆ ಹತೋಟಿಯಾದಂತೆ ಕಂಡರೂ ಮತ್ತೆ ನಾನಿದ್ದೇನೆ ಎಂದು ಮರುಕಳಿಸುತ್ತಿದೆ. ದುಬಾರಿ ಬೆಲೆಯ ಶಿಲೀಂದ್ರ ನಾಶಕ- ದುಬಾರಿ ಕೂಲಿ ಸಂಭಾವನೆಯೊಂದಿಗೆ ಎಲೆಚುಕ್ಕೆ ರೋಗ ಓಡಿಸುವ ರೈತರ ಶ್ರಮ ಹೇಳತೀರದು. ಎಲೆ ಚುಕ್ಕೆ ರೋಗವನ್ನು ಅಲ್ಪ ಕಾಲದ ತನಕ ಹತೋಟಿ ಮಾಡಬಹುದೇ ಹೊರತು ಇಲ್ಲದಂತೆ ಮಾಡಲು  ಪ್ರಕೃತಿಯೇ ಸಹಕರಿಸಬೇಕು. ಎಲೆ ಚುಕ್ಕೆರೋಗ ಅಡಿಕೆ ಬೆಳೆಗಾರರ ಪಾಲಿಗೆ ಇಷ್ಟು ದೊಡ್ಡ …

Read more
error: Content is protected !!