Mite infection

ತರಕಾರಿ ಬೆಳೆಗಳಲ್ಲಿ ಎಲೆ ಮುರುಟುವುದಕ್ಕೆ ಸುರಕ್ಷಿತ ಪರಿಹಾರ.

ಚಳಿಗಾಲದಲ್ಲಿ ಹೆಚ್ಚಾಗಿ ಕಂಡು ಬರುವ ಈ ಎಲೆ ಮುರುಟುವ ಸಮಸ್ಯೆಗೆ ಕಾರಣ ಏನು ಮತ್ತು ಸುರಕ್ಷಿತ ಪರಿಹಾರ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ತರಕಾರಿ  ಬೆಳೆ ವಾಣಿಜ್ಯಿಕವಾಗಿ ಮಾಡಿದರೂ ಈ ಸಮಸ್ಯೆ ಇದೆ.  ಮನೆಬಳಕೆಗೆ ಬೇಕಾದಷ್ಟೇ ಮಾಡಿದರೂ ಈ ಸಮಸ್ಯೆ  ಬೆನ್ನು ಬಿಡುವುದಿಲ್ಲ. ತರಕಾರಿ ಬೆಳೆಗಳು ವಿಶೇಷವಾಗಿ ರಾಸಾಯನಿಕ ಮುಕ್ತವಾಗಿದ್ದರೆ ಬೆಳೆಗಾರರಿಗೂ ಒಳ್ಳೆಯದು. ಬಳಕೆದಾರರಿಗೂ  ಒಳ್ಳೆಯದು. ಕೃಷಿಕರು ಕೀಟನಾಶಕ ಬಳಸುವುದರಿಂದ ಮೊದಲಾಗಿ ದೊಡ್ಡ ದುಷ್ಪರಿಣಾಮ ಉಂಟಾಗುವುದು ಸಿಂಪಡಿಸಿದವರಿಗೆ. ಅದನ್ನು ಉಸಿರಾಡಿದವರಿಗೆ, ಮೈಗೆ ಕೈಗೆ ತಾಗಿಸಿಕೊಂಡವರಿಗೆ ಪ್ರಾಥಮಿಕ…

Read more
border crops to pest attraction

ಕೀಟಗಳ ನಿಯಂತ್ರಣಕ್ಕೆ ಇದು ಸುರಕ್ಷಿತ ವಿಧಾನ.

ಕೀಟನಾಶಕ ಬಳಕೆಯಿಂದ ತಿನ್ನುವವರಿಗಿಂತ ಬಳಸುವವರಿಗೆ ತೊಂದರೆ ಜಾಸ್ತಿ. ಅದ ಕಾರಣ ಸಾಧ್ಯವಾದಷ್ಟು ಅದರ ಬಳಕೆ ಕಡಿಮೆ ಮಾಡಿ.  ಬಲೆ ಬೆಳೆ ಎಂದರೆ ಒಂದು ಬೆಳೆಗೆ ಬರುವ ಕೀಟವನ್ನು ಮತ್ತೊಂದು ಬೆಳೆಯ ಮೂಲಕ ಆಕರ್ಷಿಸುವುದು. ಮತ್ತು ಮುಖ್ಯ ಬೆಳೆಯನ್ನು ರಕ್ಷಿಸುವುದು.ಎಲ್ಲದಕ್ಕೂ ಕೀಟ  ನಾಶಕ ಪರಿಹಾರ ಅಲ್ಲ. ಅದು ಸಮಂಜಸ ಪರಿಹಾರವೂ ಅಲ್ಲ.  ಸುಲಭದಲ್ಲಿ  ಕೊಯ್ಯುವುದು ಸಾಧ್ಯವಿದ್ದರೆ ಅದರಿಂದಲೇ  ಕೊಯಿಲು ಮಾಡಬೇಕು. ಅಲ್ಲಿಗೆ ಕೊಕ್ಕೆ ಬೇಡ. ನಾವು ಈಗ ಕೊಕ್ಕೆ ಅನಿವಾರ್ಯವಾದಂತೆ  ವರ್ತಿಸುತ್ತೇವೆ. ಹುಳ ಬಿದ್ದಿದೆ ಯಾವ ಕೀಟ ನಾಶಕ…

Read more
hibiscus flower

ತೋಟದ ಬೇಲಿಯಲ್ಲಿ ದಾಸವಾಳ ನೆಟ್ಟರೆ ಭಾರೀ ಅನುಕೂಲ.

ಹಿಂದಿನವರು ತಮ್ಮ ಅಡಿಕೆ ತೋಟದ ಬೌಂಡ್ರಿಯ ಸುತ್ತ ದಾಸವಾಳದ ಗಿಡ ನೆಡುತ್ತಿದ್ದರು. ಇದರ ಹಿಂದೆ ಸಾಕಷ್ಟು ವೈಜ್ಞಾನಿಕತೆ ಅಡಗಿದೆ.  ವಿಟ್ಲ, ಪುತ್ತೂರು, ಸುಳ್ಯ , ಕಾಸರಗೋಡು, ಹಾಗೆಯೇ ಶ್ರಿಂಗೇರಿ, ಕೊಪ್ಪ, ಸಾಗರ, ಶಿರಸಿ  ಕಡೆಯ  ಹಳೆಯ ಅಡಿಕೆ ಕೃಷಿಕರ ತೋಟದ ಸುತ್ತ ಬೇಲಿಗಳಲ್ಲಿ ದಾಸವಾಳದ ಸಸ್ಯ ಇರುತ್ತದೆ. ದಾಸವಾಳ ಸಸಿ ಬೆಳೆಸುವುದು ಸುಲಭ. ಅಂದಕ್ಕೆ ಹೂವೂ ಆಗುತ್ತದೆ. ಬೇಲಿ ಧೀರ್ಘ ಕಾಲದ ತನಕ ಹಾಳಾಗುವುದಿಲ್ಲ. ಇದು ಬೇಲಿ ಮಾಡುವವರಿಗೆ ತಿಳಿದಿರುವ ಸಂಗತಿ. ತಮ್ಮ ಹಿರಿಯರು ಇದನ್ನು ಅನುಸರಿಸುತ್ತಿದ್ದರು….

Read more
snail

ಅಡಿಕೆ ಮರದ ಸಿಂಗಾರ ತಿನ್ನುವ ಸಿಂಬಳದಹುಳು ನಿಯಂತ್ರಣ

ಸಿಂಬಳದ ಹುಳುವಿನ ಉಪಟಳ ಇಬ್ಬನಿ ಬೀಳುವ ಚಳಿಗಾಲದಲ್ಲಿ ಹೆಚ್ಚು. ಈ ಹುಳುಗಳು ನೆಲದಲ್ಲಿ ಇರುತ್ತವೆ. ಅವು ಆಹಾರ ಹುಡುಕುತ್ತಾ ಮರವನ್ನು ಏರಿ ಅಲ್ಲಿ ಎಳೆ ಹೂ ಗೊಂಚಲನ್ನು ತಿನ್ನುತ್ತವೆ. ಬರೇ ಅಡಿಕೆ ಹೂ ಗೊಂಚಲು ಮಾತ್ರವಲ್ಲ ಇವು ಆಹಾರವಾಗಿ ಹಣ್ಣು ತರಕಾರಿಗಳನ್ನೂ ತಿನ್ನುತ್ತವೆ. ಇದನ್ನು ನಿಯಂತ್ರಿಸದೆ ಇದ್ದರೆ  ಒಂದೆರಡು ಸಿಂಗಾರ ಹಾಳಾಗುತ್ತದೆ. ಇಳುವರಿ ನಷ್ಟವಾಗುತ್ತದೆ. ಬಸವನ ಹುಳುಗಳು, ಸಿಂಬಳದ ಹುಳುಗಳು , ಮಳೆಗಾಲದಲ್ಲಿ ನೆಲದಲ್ಲಿ ಅಲ್ಲಲ್ಲಿ ಸಂಚರಿಸುತ್ತಾ ಇರುತ್ತವೆ. ಹಾವಸೆ ಇತ್ಯಾದಿಗಳು ಇದರ ಆಹಾರ. ಅದನ್ನು ತಿನ್ನುತ್ತಾ…

Read more
ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ಇರುವ ಬಂಬು ಕೀಟ

ಈ ವಾಸನೆ ಕೀಟಗಳ ಹಾವಳಿಯಿಂದ ಪಾರಾಗುವುದು ಹೇಗೆ?

ಬಹುತೇಕ ಎಲ್ಲಾ ಬೆಳೆಗಳಿಗೂ ರಸ ಹೀರಲು ಒಂದು ತಿಗಣೆ ಪ್ರಭೇದದ ಕೀಟ ಬರುತ್ತದೆ. ಇದು ತರಕಾರಿಗಳು, ಭತ್ತ, ಮೆಣಸು ಮುಂತಾದವುಗಳಲ್ಲಿ ಕುಳಿತು ರಸ ಹೀರಿ ಗಣನೀಯ   ಬೆಳೆ ಹಾನಿ ಮಾಡುತ್ತವೆ. ಸಾಮಾನ್ಯ ಆಡು ಭಾಷೆಯಲ್ಲಿ ಇದನ್ನು ಬಂಬು ಕೀಟ ಎನ್ನುತ್ತಾರೆ. ಇವು ತಿಗಣೆಗಳು. ವಾಸನೆಯಿಂದ ಕುಡಿವೆ. ಹಾಸಿಗೆಯ ಎಡೆಗಳಲ್ಲಿ ವಾಸ ಮಾಡುವ ತಿಗಣೆಯಂತೆ ಇದು. ಇದು ರಸ ಹೀರಿದ ತರಕಾರಿ, ಹಣ್ಣು ಹಂಪಲುಗಳು ವಾಸನೆಯಿಂದ ಕೂಡಿರುತ್ತದೆ. ಕೈಯಲ್ಲಿ ಮುಟ್ಟಿದರೆ ಸಾಕು ಅಸಹ್ಯ ವಾಸನೆ ಕೊಡಬಲ್ಲ ಸಾವಿರಾರು ಬಗೆಯ…

Read more

ತಜ್ಞರ ಮೌನ – ಭವಿಷ್ಯದಲ್ಲಿ ಅಪಾಯ ತರಬಹುದೇ?

ನಮ್ಮ ಪರಿಸರದಲ್ಲಿ ಇರುವ ಕಿಟಗಳಲ್ಲಿ 20% ಮಾತ್ರ ಹಾನಿಕರಕ ಕೀಟಗಳು. ಉಳಿದ 80% ಉಪಕಾರೀ ಕೀಟಗಳು ಎಂಬುದನ್ನು ಕೀಟಶಾಸ್ತ್ರ ಒಪ್ಪಿಕೊಳ್ಳುತ್ತದೆ. ಆದರೆ ಕೆಲವೊಂದು ವಿಚಾರದಲ್ಲಿ ಮಾತ್ರ ಮೌನವಾಗಿದೆ. ಕೀಟ ಶಾಸ್ತ್ರಜ್ಞರಿಗೆ ಮತ್ತು ಪರಿಸರ ಕಳಕಳಿ ಉಳ್ಳವರಿಗೆ ಕನಿಷ್ಟ ತಮ್ಮ ಅಭಿಪ್ರಾಯವನ್ನಾದರೂ ಬಹಿರಂಗವಾಗಿ ತಿಳಿಸುವ ಜವಾಬ್ಧಾರಿ ಇದೆ. ಅವರು ಮಾತಾಡಬೇಕು. ಆಗಲೇ ಈ ಸಮಸ್ಯೆ ಪರಿಹಾರ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೀಟಗಳ ಹಾವಳಿ ಬಹಳ ಜಾಸ್ತಿಯಾಗತೊಡಗಿದೆ. ಕೀಟನಾಶಕ ಬಳಸದೆ ಕೃಷಿ ಮಾಡುತ್ತೇನೆ ಎಂಬುದರ ಹಿಂದಿನ ಸತ್ಯಾಸತ್ಯತೆ ದೇವರಿಗೆ ಮಾತ್ರ…

Read more

ಇಪಿಎನ್ (EPN) ಸಿಂಪಡಿಸಿ- ಬೇರು ಹುಳ ನಿಯಂತ್ರಿಸಿ.

ಬೇರು ಹುಳ ಎಂಬುದು ಪ್ರಕೃತಿಯಲ್ಲಿಯೇ ಇರ್ವ ಒಂದು ಜೀವಿ. ನಿಸರ್ಗದಲ್ಲಿರುವ ಬೇರೆ ಬೇರೆ ಸಸ್ಯಗಳಿಗೆ  ಬೇರೆ ಬೇರೆ ನಮೂನೆಯ ಬೇರು ಹುಳಗಳು ತೊಂದರೆ ಮಾಡುತ್ತವೆ. ಹಾಗೆಯೇ ಪ್ರಕೃತಿಯಲ್ಲಿ ಅದನ್ನು ನಾಶಮಾಡುವ ಜೀವಿಯೂ ಇದೆ. ಅಂತಹ ಒಂದು ಜೀವಿ EPN. ಇದನ್ನು ಹೊಲದಲ್ಲಿ ಬಿಡುವುದರಿಂದ ಅವು ನೈಸರ್ಗಿಕವಾಗಿ ಬೇರು ಹುಳವನ್ನು ನಾಶ ಮಾಡುತ್ತವೆ.   ಇದು ಸಕಾಲ: ಮೇ ತಿಂಗಳಲ್ಲಿ ಬೇರು ಹುಳದ ದುಂಬಿ ಭೂಮಿಯಿಂದ ಹೊರಬಂದು ಗಂಡು ಹೆಣ್ಣು ಜೋಡಿಯಾಗಿ ಮತ್ತೆ ಮಣ್ಣಿಗೆ ಸೇರಿ ಅಲ್ಲಿ ಮೊಟ್ಟೆ…

Read more
paddy leaf damage by caterpillar

ಭತ್ತದ ಗರಿ ತಿನ್ನುವ ಹುಳ- ನಿಯಂತ್ರಣ.

ಭತ್ತದ ಗದ್ದೆಗಳಲ್ಲಿ ಪೈರು ಬೆಳೆಯುತ್ತಿದೆ. ಈ ಸಮಯದಲ್ಲಿ ಗರಿಗಳು ಬಿಳಿಯಾಗಿ ಕಾಣುವ ಸಮಸ್ಯೆ   ಹಾಗೆಯೇ ಹರಿದು ಹೋದ ಗರಿಗಳು,ಎಲ್ಲಾ ಕಡೆ ಇರುತ್ತದೆ. ದೂರದಿಂದ ನೋಡುವಾಗ ಗರಿಯಲ್ಲಿ ಹರಿತ್ತು ಇಲ್ಲದೆ ಬಿಳಿಯಾಗಿ ಕಾಣಿಸುತ್ತದೆ. ಸಮೀಪ ಹೋಗಿ ನೊಡಿದಾಗ  ಗರಿಯ ಹಸುರು ಭಾಗವನ್ನು ತಿಂದು ಬರೇ ಪತ್ರ ನಾಳಗಳು ಮಾತ್ರ ಉಳಿದುಕೊಂಡಿರುತ್ತವೆ. ಇದಕ್ಕೆ  ಸ್ಕಿಪ್ಪರ್ ಮತ್ತು ಗ್ರೀನ್ ಹಾರ್ನ್ ಕ್ಯಾಟರ್ ಪಿಲ್ಲರ್  ಎಂಬ ಹುಳು ಕಾರಣವಾಗಿರುತ್ತದೆ.Skipper & Green horned catterpiller) ಇದರ ಹೆಸರು philopidus mathyyas & melanitis…

Read more
cotton

ಹತ್ತಿ ಬೆಳೆಯ ಗುಲಾಬಿ ಕಾಯಿ ಕೊರಕ ನಿಯಂತ್ರಣ.

ಹತ್ತಿ ಬೆಳೆಗಾರರಿಗೆ ಗಣನೀಯ ಬೆಳೆ ನಷ್ಟ ಮಾಡುವ ಕೀಟ ಎಂದರೆ  ಗುಲಾಬಿ ಕಾಯಿ ಕೊರಕ. ಹತ್ತಿಯ ಕಾಯಿಗಳು ಬೆಳೆಯುತ್ತಿದ್ದಂತೆ ಇದು ಪ್ರವೇಶವಾಗಿ  ಒಳಗಿನ ಹತ್ತಿಯ ಅರಳನ್ನು ಹಾನಿ ಮಾಡುತ್ತದೆ. ಮಾರುಕಟ್ಟೆಯಲ್ಲಿ ಈ ಹತ್ತಿಗೆ ಬೆಲೆಯೇ ಇರುವುದಿಲ್ಲ.  ಈ ಕೀಟದ ನಿಯಂತ್ರಣಕ್ಕಾಗಿ ಅತ್ಯಧಿಕ ಕೀಟನಾಶಕ ಬಳಕೆ ಮಾಡಲಾಗುತ್ತದೆ. ಇದರಿಂದಾಗಿಯೇ ಕಳೆದ ವರ್ಷ ಕೆಲವು ರೈತರು ಜೀವ ಕಳೆದುಕೊಂಡದ್ದೂ ಇದೆ.  ಸರಳ ಮತ್ತು ಮಿತವ್ಯಯದ ಬೇಸಾಯ ಕ್ರಮದಲ್ಲಿ ಇದನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಣ ಮಾಡಬಹುದು. ಜೀವನ ಚಕ್ರ ಹೀಗಿರುತ್ತದೆ: ಗುಲಾಬಿ…

Read more
Mulching to whole ground

ಅಡಿಕೆ – ಕಬ್ಬು ಬೆಳೆಯ ಬೇರು ದುಂಬಿ ನಿಯಂತ್ರಣ.

ಅಡಿಕೆಗೆ ಮಾತ್ರ ಬೇರು ಹುಳದ ಕಾಟ ಅಲ್ಲ. ಕಬ್ಬು, ಹಿಪ್ಪು ನೇರಳೆ ಹೀಗೆ ಬಹಳಷ್ಟು ಬೆಳೆಗಳಿಗೆ ಈ ಹುಳದ ಕಾಟ ಇದೆ. ಇದರ ದುಂಬಿಗಳು ಈಗ ಹೊರಗೆ ಹಾರಾಡುವ ಸಮಯ. ಈಗ ಅದನ್ನು ನಿಯಂತ್ರಿಸುವ ಉಪಾಯ ಇದು.ಮರದ ಆರೋಗ್ಯಕ್ಕೆ  ಮತ್ತು ಬೆಳೆವಣಿಗೆಗೆ  ಆಧಾರವೇ ಅದರ ಬೇರು. ಆ ಬೇರನ್ನು ತಿನ್ನುವ ಒಂದು ಹುಳ ಅದನ್ನು ಏಳಿಗೆಯಾಗಲು ಬಿಡುವುದಿಲ್ಲ. ಕೆಲವು ಮಣ್ಣಿನಲ್ಲಿ ಈ ಬೇರು ಹುಳದ ಸ್ತೊಂದರೆ ಹೆಚ್ಚು. ಮತ್ತೆ ಕೆಲವು ಕಡೆ ಕಡಿಮೆ. ಬೇರು ಹುಳಗಳನ್ನು  ಒಡಿಸದಿದ್ದರೆ…

Read more
error: Content is protected !!