ಬಾಳೆ ಎಲೆ ಶಿಲೀಂದ್ರ ರೋಗ

ಮಳೆಗಾಲದಲ್ಲಿ ಬಾಳೆ ಬೆಳೆಗೆ ಬಾಧಿಸುವ ರೋಗದ ನಿವಾರಣೆ ಹೀಗೆ.

ಬಾಳೆಯ ಎಲೆ ಹಳದಿಯಾಗುವುದು, ಒಣಗುವುದು ಶಿಲೀಂದ್ರ ರೋಗ. ಇದಕ್ಕೆ ಮುನ್ನೆಚ್ಚರಿಕೆ  ಅಗತ್ಯ. ಶಿಲೀಂದ್ರ ರೋಗಗಳು ಹೆಚ್ಚಾಗಿ ಮಳೆಗಾಲದಲ್ಲಿ  ಬರುವುದು ಜಾಸ್ತಿ. ಅದು ಮಳೆಗಾಲ ಮುಗಿಯುವ ಸಮಯದಲ್ಲಿ ಬಂದರೆ  ಮುಂದಿನ ಚಳಿಗಾಲ ಪ್ರಾರಂಭವಾಗುವಾಗ  ನಮ್ಮ ಗಮನಕ್ಕೆ ಬರುತ್ತದೆ. ಕೆಲವೊಮ್ಮೆ ಇಬ್ಬನಿ ಬೀಳುವ ಸಮಯದಲ್ಲೂ ಬರುತ್ತದೆ. ಬಾಳೆಗೆ  ಬರುವ ರೋಗಗಳಲ್ಲಿ ಬಂಚೀ ಟಾಪ್ ಒಂದನ್ನು ಹೊರತು ಪಡಿಸಿ ಉಳಿದ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ನಿಯಂತ್ರಣ ಮಾಡುವುದು ಸುಲಭ. . ಬಾಳೆಯಲ್ಲಿ ಚಳಿಗಾಲ ಪ್ರಾರಂಭವಾಗುವಾಗ  ಮತ್ತು ಮಳೆಗಾಲ ಅಂತ್ಯದ ಸಮಯದಲ್ಲಿ…

Read more
ನೆಲ್ಲಿ ಕಾಯಿ

ಭೂಲೋಕದ ಸಂಜೀವಿನಿ- ನೆಲ್ಲಿ ಕಾಯಿ

ಮಾನವ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು  ಪ್ರಕೃತಿ ಕೊಟ್ಟ  ಔಷಧೀಯ ಸಸ್ಯವೇ ನೆಲ್ಲಿ. ಸಾಮಾನ್ಯವಾಗಿ ಇದನ್ನು ಆಮಲಕ, ಬೆಟ್ದದನೆಲ್ಲಿ, ಅಥವಾ ಇಂಡಿಯನ್ ಗೂಸ್ ಬೆರಿ ಎಂದು ಕರೆಯಲಾಗುತ್ತದೆ. ಇದು ಭಾರತದಲ್ಲಿ ನಮ್ಮ ಹಿರಿಯರಿಂದಲೂ ಉಪಯೋಗಿಸಿಕೊಂಡು ಬಂದಂತ ಔಷಧೀಯ ಮಹತ್ವದ  ಹಣ್ಣಿನ ಬೆಳೆ. ಹೇಗೆ ಬೆಳೆಸಬಹುದು: ನೆಲ್ಲಿಯ ವಿಶೇಷತೆಯೆಂದರೆ ವಿವಿಧ ರೀತಿಯ ಮಣ್ಣುಗಳಲ್ಲೂ  ಇದನ್ನು ಬೆಳೆಸಬಹುದು. ಹಾಗೆಯೆ ಒಣ ಪ್ರದೇಶಗಳಲ್ಲೂ, ಅತಿ ಹೆಚ್ಚು ಹಾಗು ಕಡಿಮೆ ಉಷ್ಟಾಂಶದಲ್ಲೂ, ಕ್ಷಾರೀಯ ಮಣ್ಣಿನಲ್ಲೂ ಬೆಳೆಸಬಹುದಾದ ಬೆಳೆ. ಕಸಿಗಿಡ ನೆಟ್ಟು ನಾಲ್ಕು ವರ್ಷಗಳ ಬಳಿಕ…

Read more
ಸ್ಟ್ರಾಬೆರಿ ಹಣ್ಣು

ನಾವೂ ಬೆಳೆಸಬಹುದೇ ಸ್ಟ್ರಾಬೆರಿ ಬೆಳೆ.

ಕೆಂಪು ಕೆಂಪಾದ ಸ್ಟ್ರಾಬೆರಿ ಹಣ್ಣೆಂದರೆ  ಎಲ್ಲರಿಗೂ  ಇಷ್ಟ. ಈ ಹಣ್ಣು  ಬೆಳೆಸಬೇಕು ತಿನ್ನಬೇಕು ಎಂಬ ತವಕ. ಆದರೆ ಇದನ್ನು ಎಲ್ಲಾ ಕಡೆ ಬೆಳೆಸಲು ಆಗುವುದಿಲ್ಲ. ಸೂಕ್ತ ವಾತಾವರಣದಲ್ಲಿ  ಮಾತ್ರ ಇದು ಉತ್ತಮವಾಗಿ ಬೆಳೆದು ಉತ್ತಮ ಹಣ್ಣುಗಳನ್ನು ನೀಡುತ್ತದೆ.  ಕೈ ಹಿಡಿದರೆ  ಮಾತ್ರ ಇದು ಭಾರೀ ಲಾಭದ ಬೆಳೆ . ನಾವೆಲ್ಲಾ ಮಾರುಕಟ್ಟೆಯಿಂದ ಖರೀದಿ ಮಾಡುವ ಸ್ಟ್ರಾಬೆರಿ ಹಣ್ಣುಗಳು  ಬರುವುದು ಮಹಾರಾಷ್ಟ್ರದ  ಮಹಾಬಲೇಶ್ವರದಿಂದ. ಇದಕ್ಕೆ ಮಹಾಬಲೇಶ್ವರ ಸ್ಟ್ರಾಬೆರಿ ಎಂಬ ಹೆಸರು.  ದೇಶದ ಬೇರೆ ಕಡೆಗಳಲ್ಲಿ ಬೆಳೆಯುತ್ತಾರೆಯಾದರೂ ಇಷ್ಟು ಪ್ರಮಾಣ…

Read more
error: Content is protected !!