ಗಡ್ದೆಯ ಬಾಳೆ ಗೊನೆ

ಬಾಳೆ- ಗಡ್ಡೆ ಒಳ್ಳೆಯದೇ? ಅಂಗಾಶ ಕಸಿಯೇ?

ಬಾಳೆ ನೆಡುವ ಸಾಂಪ್ರದಾಯಿಕ ಪದ್ದತಿ ಗಡ್ಡೆ ಅಥವಾ ಕಂದು ನಾಟಿ. ಇತ್ತೀಚೆಗೆ ಹೆಚ್ಚು ಸಂಖ್ಯೆಯ ಸಸಿಗಳ ಅಗತ್ಯಕ್ಕಾಗಿ ಅಂಗಾಂಶ ಕಸಿಯಲ್ಲಿ ಸಸ್ಯೋತ್ಪಾದನೆ ಪ್ರಾರಂಭಿಸಲಾಯಿತು. ಅಂಗಾಂಶ ಕಸಿಗೂ, ಗಡ್ಡೆ ನೆಟ್ಟು ಬಾಳೆ ಗೊನೆ ಪಡೆಯುವುದಕ್ಕೂ ವ್ಯತ್ಯಾಸ ಹೆಚ್ಚು ಏನೂ ಇಲ್ಲ. ಗಡ್ಡೆ ಸ್ವಲ್ಪ ಬೇಗ ಇಳುವರಿ ಕೊಡುತ್ತದೆ. ತೆರೆದ ವಾತಾವರಣದಲ್ಲಿ ಎರಡಕ್ಕೂ ರೋಗ ಬರಬಹುದು. ಬಾಳೆಯ ಸಸ್ಯಾಭಿವೃದ್ದಿ  ಅದರ ಜೀವ ಕೋಶಗಳ ಮೂಲಕ ಆಗುತ್ತದೆ ಇದೇ ತತ್ವದಲ್ಲಿ ಅಂಗಾಂಶ ಕಸಿಯ ಸಸ್ಯವನ್ನು  ಉತ್ಪಾದಿಸಲಾಗುತ್ತದೆ. ಅಂಗಾಂಶ ಕಸಿ ಮಾನವ ಮಾಡುವಂತದ್ದು….

Read more
ಮಾವಿನ ಹಣ್ಣು ಈ ರೀತಿ ಆದರೆ ಅದು ಕೊಳೆಯುವ ಪ್ರಾರಂಭಿಕ ಹಂತ

ಮಾವಿನ ಕಾಯಿ ಹಣ್ಣಾಗುವಾಗ ಕೊಳೆಯುವುದಕ್ಕೆ ಏನು ಕಾರಣ?

ಮಾವಿನ ಹಣ್ಣಿನ ತೊಟ್ಟಿನ ಭಾಗ ಮೊದಲು ಮೆತ್ತಗಾಗಿ ಕೊಳೆಯುತ್ತದೆ. ಹಣ್ಣು ಮೇಲ್ಮೈಯಲ್ಲಿ ಅಲ್ಲಲ್ಲಿ ತಪ್ಪು ಕಲೆಗಳಾಗಿ ಕೊಳೆಯುತ್ತದೆ.  ಮಾವಿನ ಹಣ್ಣು ನೋಡುವಾಗ ಅದನ್ನು ತಿನ್ನಲು ಹೇಸಿಗೆಯೆನಿಸುತ್ತದೆ. ಇದು ಯಾಕೆ ಹೀಗಾಗುತ್ತದೆ ಎಂಬುದರ ಬಗ್ಗೆ ಬಹಳಷ್ಟು ರೈತರಿಗೆ ಗೊತ್ತೇ ಇಲ್ಲ.  ಇದು ರಾಸಾಯನಿಕ ಬಳಸಿ ಬೆಳೆದರೂ ಆಗುತ್ತದೆ. ಸಾವಯವದಲ್ಲಿ ಬೆಳೆದರೂ ಆಗುತ್ತದೆ. ಇದನ್ನು ಕೆಲವು ಕ್ರಮಗಳ ಮೂಲಕ ನಿಯಂತ್ರಣ ಮಾಡಬಹುದು. ಇದು ಮಾವಿನ ಹಣ್ಣಿನ ಸೀಸನ್. ಕೆಲವರ ಮನೆಯಂಗಳದ ಮಾವಿನ ಮರದಲ್ಲಿ ಕಾಯಿ ಇದೆ. ಕೆಲವರು ಅಂಗಡಿಯಿಂದ ಒಯ್ಯುತ್ತಾರೆ. …

Read more

ಅನನಾಸು ಗಾತ್ರ ದೊಡ್ದದಾಗಬೇಕೇ ಹೀಗೆ ಮಾಡಿ.

ಬಹಳ ಜನ ಅನನಾಸು ದೊಡ್ದದಾಗುವುದಕ್ಕೆ ಅದರ ಜುಟ್ಟಿಗೆ ರಾಸಾಯನಿಕ ಹಾಕಬೇಕು ಎಂದು ತಿಳಿದಿದ್ದಾರೆ. ಅದು ತಪ್ಪು.  ಸರಳ ಕ್ರಮದಲ್ಲಿ ಜುಟ್ಟನ್ನು ಸಣ್ಣದು ಮಾಡಿ, ಕಾಯಿ ದೊಡ್ಡದಾಗುವಂತೆ ಮಾಡಬಹುದು. ಅನನಾಸು ಬೆಳೆದವರು  ಮಾರಾಟ ಮಾಡುವಾಗ ಜುಟ್ಟು ದೊಡ್ದದಿದ್ದರೆ ಕೊಳ್ಳುವವ ಕೇಳುತ್ತಾನೆ, ಕಾಯಿಗೆಷ್ಟು ಬೆಲೆ, ಜುಟ್ಟಿಗೆಷ್ಟು ಬೆಲೆ ಎಂದು. ಜುಟ್ಟು ಸಣ್ಣದಿದ್ದರೆ ಬೆಲೆ ಹೆಚ್ಚು. ಜುಟ್ಟು ದೊಡ್ಡದಾದರೆ ಬೆಲೆ ಕಡಿಮೆ. ಜುಟ್ಟು ದೊಡ್ಡದಾಗುವುದು, ಸಣ್ಣದಾಗುವುದು ಬಿಸಿಲು ಮತ್ತು ನೆರಳಿನ ಕಾರಣದಿಂದ. ದೊಡ್ಡದಾದ ಜುಟ್ಟನ್ನು ಚಿವುಟುವ ಮೂಲಕ ಸಣ್ಣದಾಗುವಂತೆ ಮಾಡಬಹುದು. ಇದಕ್ಕೆ…

Read more
ಬಾಳೆ ಸುಳಿ ಕೊಳೆಯುವಿಕೆ

ಬಾಳೆಯಲ್ಲಿ ಸುಳಿ ಹೀಗೆ ಆಗುವುದು ಯಾವ ಕಾರಣಕ್ಕೆ?.

ಚೆನ್ನಾಗಿ ಬೆಳೆಯುತ್ತಿರುವ ಬಾಳೆಯಲ್ಲಿ ಇದ್ದಕ್ಕಿದ್ದಂತೆ ಸುಳಿ ಭಾಗ ಕಪ್ಪಗಾಗುತ್ತದೆ, ಮುರಿದು ಬೀಳುತ್ತದೆ. ನಂತರ ಅದು ಕೊಳೆತು ಹೋಗುತ್ತದೆ. ಇದು ಎಲ್ಲಾ ಕಡೆ ಕಂಡುಬರುವ ಸಮಸ್ಯೆಯಾಗಿದ್ದು, ಇಂತಹ ಬಾಳೆ ಸರಿ ಮಾಡಲಾಗದಿದ್ದರೂ ಅದರ ಕಂದನ್ನು ಸರಿಮಾಡಬಹುದು. ಕೆಳಸ್ಥರದ ಎಲೆಗಳೆಲ್ಲಾ ಸರಿಯಾಗಿದ್ದು, ತುದಿ ಭಾಗದ ಸುಳಿ ಎಲೆ, ಗಿಡ್ಡವಾಗಿ ಕೊಳೆಯುವ ಒಂದು ಸಮಸ್ಯೆ ಎಲ್ಲಾ ಬಾಳೆ  ಬೆಳೆಗಾರರೂ ಗಮನಿಸಿದ್ದು. ಇದು ಮಳೆಗಾಲದಲ್ಲಿ ಮತ್ತು ಇಬ್ಬನಿ ಬೀಳುವ ಸಮಯದಲ್ಲಿ  ಹೆಚ್ಚು. ಇದರ ನಿಯಂತ್ರಣ ಹೀಗೆ.  ಬಾಳೆ ಬೆಳೆಸುವವರ ಹಿಡಿತದಲ್ಲಿಲ್ಲದ ಸಮಸ್ಯೆ ಎಂದರೆ…

Read more
180 ಕ್ಕೂ ಹೆಚ್ಚು ಹಲಸಿನ ತಳಿ ತೋಟ

180 ಕ್ಕೂ ಹೆಚ್ಚು ಹಲಸು ತಳಿಗಳ ಖಜಾನೆ

ರಾಜ್ಯ ಹೊರ ರಾಜ್ಯಗಳ ವಿಶಿಷ್ಟ ಗುಣದ ಸುಮಾರು 180 ಕ್ಕೂ ಹೆಚ್ಚು ತಳಿಗಳನ್ನು ತಮ್ಮ ಹೊಲದಲ್ಲಿ ಬೆಳೆಸಿ, ಸಂರಕ್ಷಿಸಿದ ಬೆಂಗಳೂರು, ಹೇಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ  IIHR  ಸಾಧನೆ ಪ್ರಶಂಸಾರ್ಹ. ಇಲ್ಲಿ ತಳಿಗಳ ಸಂಗ್ರಹ ಇದ್ದರೆ  ಸೇಫ್. ಹಲಸಿನ ಹಣ್ಣಿಗೆ ಈಗ ಹೆಚ್ಚಿನ ಮಹತ್ವ ಬಂದಿದೆ. ಆರೋಗ್ಯಕ್ಕೆ ಉತ್ತಮ ಎಂಬ ಕಾರಣಕ್ಕೆ  ಹಲಸು ತಿನ್ನುವರು, ಬೆಳೆಸುವವರು ಹೆಚ್ಚಾಗಿದ್ದಾರೆ. ಹಲಸಿನ ಮೌಲ್ಯ ವರ್ಧಿತ ಉತ್ಪನ್ನಗಳು ಹೆಚ್ಚಿವೆ. ಹಲಸು ನಮ್ಮಲ್ಲಿ ಅನಾದಿ ಕಾಲದಿಂದಲೂ ಇದ್ದ ಹಣ್ಣು. ಅದರ ಮರಮಟ್ಟಿನ…

Read more
ಸಿಹಿಯಾದ ಕಲ್ಲಂಗಡಿ

ಹಣ್ಣು ಹಂಪಲಿನಲ್ಲಿ ಸಿಹಿ ಅಂಶ ಹೆಚ್ಚಿಸುವಿಕೆ.

ಯಾವುದೇ ಹಣ್ಣು ಹಂಪಲುಗಳಿದ್ದರೂ ಅದರ ಸಹಜವಾದ ರುಚಿ ಇದ್ದರೆ ಅದು ತಿನ್ನಲು ಇಷ್ಟವಾಗುತ್ತದೆ. ಬಹುತೇಕ ಹಣ್ಣು ಹಂಪಲುಗಳ ರುಚಿ ಸಿಹಿ. ಸಿಹಿ ಸಾಕಷ್ಟು ಇಲ್ಲದಿದ್ದರೆ ಇದನ್ನು ತಿನ್ನುವವರಿಗೆ ಅದು ರುಚಿ ಎನಿಸದು. ಸಿಹಿ ಅಂಶ ಹಣ್ಣು ಹಂಪಲಿಗೆ ಹೇಗೆ ಸೇರಿಕೊಳ್ಳುತ್ತದೆ. ಹೆಚ್ಚು ಸಿಹಿ ಬರಲು ಯಾವ ಪೋಷಕ ಹೆಚ್ಚು ಕೊಡಬೇಕು, ಯಾವುದನ್ನು ಕಡಿಮೆ ಮಾಡಬೇಕು ಈ ಬಗ್ಗೆ  ಇಲ್ಲಿದೆ ಮಾಹಿತಿ. ಸಮರ್ಪಕ ಬಿಸಿಲು, ವಾತಾವರಣ, ಹಾಗೂ ಸಾಂದರ್ಭಿಕ ಪೋಷಕಾಂಶ ನಿರ್ವಹಣೆಯಿಂದ ಹಣ್ಣು ಹಂಪಲುಗಳಲ್ಲಿ ಸಿಹಿ ಅಂಶ ಹೆಚ್ಚುತ್ತದೆ….

Read more
ಹಲಸಿನ ಕಾಯಿಯಾಗುವ ಕೌತುಕ

ಹಲಸು ಹೇಗೆ ಕಾಯಿಯಾಗುತ್ತದೆ. ಅದರ ಕೌತುಕ ಏನು?

ಹಲಸಿನ ಮರದಲ್ಲಿ ಹೂವು ಬಿಡುವುದು ಹಲಸಿನ ಕಾಯಿಯಾಗಲು. ಹಲಸಿನ ಕಾಯಿಯ ಮಿಡಿಯೇ ಅದರ ಹೂವು.  ಕಳ್ಳಿಗೆ ಮತ್ತು ಮೈ ಕಳ್ಳಿಗೆ ಎಂದು ಕರೆಯುವ ಇದು ಹೆಣ್ಣು ಮತ್ತು ಗಂಡು ಹೂವುಗಳು. ಚಳಿಗಾಲ ಪ್ರಾರಂಭವಾಗುವ ಸಮಯದಿಂದ ಆರಂಭವಾಗಿ ಶಿವರಾತ್ರೆ  ತನಕ ಹಲಸಿನ ಮರ ಹೂವು ಬಿಡುವ ಕಾಲ. ಈ ಸಮಯದಲ್ಲಿ ಕೆಲವು ಬೇಗ ಹೂವು ಬಿಟ್ಟರೆ ಮತ್ತೆ  ಕೆಲವು ನಿಧಾನವಾಗಿ ಶಿವರಾತ್ರೆ  ನಂತರವೂ ಹೂವು ಬಿಡುತ್ತವೆ. ಗಾಳಿ  ಬಂದಾಗ ಹೂವು ಬಿಡುವಿಕೆ ಜಾಸ್ತಿ ಎನ್ನುತ್ತಾರೆ. ವಾಸ್ತವವಾಗಿ ಹಾಗಲ್ಲ. ಶುಷ್ಕ…

Read more
ಉತ್ತಮ ಪೋಷಕಾಂಶಗಳಿಂದ ಬಂದ ಬಾಳೆ ಗೊನೆ

ಉತ್ತಮ ಬಾಳೆಗೊನೆಗೆ ಎಷ್ಟು ಪೋಷಕಾಂಶ ಕೊಡಬೇಕು?

ಯಾವುದೇ ಬೆಳೆಗೆ ಅದರ ಬೆಳೆ ಅವಧಿಗನುಗುಣವಾಗಿ ಪೋಷಕಾಂಶಗಳನ್ನು  ಬಳಸಿಕೊಳ್ಳುತ್ತದೆ. ಬಾಳೆ ಅಲ್ಪಾವಧಿ ಬೆಳೆಯಾಗಿದ್ದು ಅಧಿಕ ಪೋಷಕಾಂಶ ವನ್ನು ಬಯಸುತ್ತದೆ. ಧೀರ್ಘಾವಧಿ ಬೆಳೆಗಳು  ನಿಧಾನ ಗತಿಯಲ್ಲಿ ಪೋಷಕಗಳನ್ನು ಬಳಕೆ ಮಾಡಿಕೊಂಡರೆ ಅಲ್ಪಾವಧಿ ಬೆಳೆಗಳು ಅಧಿಕ ಪೋಷಕಗಳನ್ನು ಬಳಸಿಕೊಳ್ಳುತ್ತವೆ. ಬಾಳೆ ಬೆಳೆ ಅಲ್ಪಾವಧಿ ಬೆಳೆ ಎಂದರೆ ತಪ್ಪಾಗಲಾರದು. ಇದು ನಾಟಿ ಮಾಡಿ 6 ರಿಂದ10  ತಿಂಗಳ ಒಳಗೆ ಫಸಲನ್ನು ಕೊಡುತ್ತದೆ. ಇಷ್ಟು ಕನಿಷ್ಟ ಅವಧಿಯಲ್ಲಿ  ಅದು ತನ್ನ ಶರೀರ ಸುಮಾರು ಕ್ವಿಂಟಾಲಿಗೂ ಹೆಚ್ಚು ಬೆಳೆಯುತ್ತದೆ. ಗೊನೆ ಹೊರ ಬೀಳುವ ಸಮಯದಲ್ಲಿ …

Read more
ಫುಷ್ಟಿಕರ ಬಾಳೆ ಗೊನೆ

ಬಾಳೆ ಗೊನೆ ಪುಷ್ಟಿಯಾಗಬೇಕೇ? ಹೀಗೆ ಗೊಬ್ಬರ ಕೊಡಿ.

ಬಾಳೆ ಎಂಬ ಅಲ್ಪ ಕಾಲದಲ್ಲೇ (9-10 ತಿಂಗಳು) ಭಾರೀ ಬೆಳೆದು ಫಲಕೊಡುವ ಸಸ್ಯ. ಅದು ಚೆನ್ನಾಗಿರಬೇಕಾದರೆ ದಿನ ದಿನಕ್ಕ್ಕೆ ಅಥವಾ ವಾರಕ್ಕೊಂದಾವರ್ತಿಯಾದರೂ ತಪ್ಪದೆ ಪೋಷಕಾಂಶಗಲನ್ನು ಕೊಡಲೇ ಬೇಕು. ಇಲ್ಲವಾದರೆ ಬಾಳೆ ಗೊನೆ ಕೃಶವಾಗಿ ಬೆಳೆಯಲ್ಲಿ ಲಾಭವಾಗುವುದಿಲ್ಲ. ನೆಟ್ಟು ಗೊನೆ ಕಠಾವಿನ ವರೆಗೆ ಯಾವ ಗೊಬ್ಬರ ಕೊಡಬೇಕು ಎಂಬ ಪೂರ್ಣ ಮಾಹಿತಿ ಇಲ್ಲಿದೆ. ಬಾಳೆಯ ಬೆಳೆಯಲ್ಲಿ ನಾಟಿ ಮಾಡುವ ಹಂತದಿಂದ ಕಠಾವಿನ  ಹಂತದವರೆಗೆ ಪೋಷಕಾಂಶ ನಿರ್ವಹಣೆ ಎಂಬುದು ಅತೀ ಪ್ರಾಮುಖ್ಯ.  ಗೊನೆಯ ನೋಟದ ಮೇಲೆ ಅದಕ್ಕೆ ಬೇಡಿಕೆ ಮತ್ತು…

Read more
ಹೂವು ಬಿಟ್ಟ ಮಾವಿನ ಮರ

ಮಾವಿನ ಹೂವು ಉದುರದಂತೆ ರಕ್ಷಿಸುವ ವಿಧಾನ.

ಈ ವರ್ಷ ಮಾವಿನ ಮರಗಳೆಲ್ಲಾ ಹೂವು  ಬಿಟ್ಟಿವೆ. ಎಲ್ಲಾ ಹೂವು ಕಾಯಿಕಚ್ಚಿ ಕಾಯಿಯಾದರೆ ಮಾವಿನ ಮಾರುಕಟ್ಟೆಯೇ ಸಾಕಾಗದು. ಆದರೆ ಬಹುತೇಕ ಮಾವಿನ ಹೂವು ಉಳಿಯುವುದಿಲ್ಲ.  ರಕ್ಷಿಸಲು ಕೆಲವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಮಾವಿನ ಮರದಲ್ಲಿ ಹೂ ಬಿಡುವ ಹಂತ ಬಹಳ ನಿರ್ಣಾಯಕ ಹಂತವಾಗಿದ್ದು, ದೊಡ್ಡ ದೊಡ್ಡ ಬೆಳೆಗಾರರರು  ಹೂ ಉಳಿದು ಕಾಯಿ ಹೆಚ್ಚಲು ಗರಿಷ್ಟ ಸಿಂಪರಣೆ ಮಾಡುತ್ತಾರೆ.ವಾಣಿಜ್ಯಿಕ ಮಾವು ಬೆಳೆಗೆ ಇದೆಲ್ಲಾ ಸರಿ. ಸಣ್ಣ ಸಣ್ಣ ಹಿತ್ತಲಿನ ಹಣ್ಣು ಹಂಪಲು ಮರವುಳ್ಳವರು ಹೂವು ಬಿಟ್ಟದ್ದನ್ನು ರಕ್ಷಿಸಿಕೊಳ್ಳುವ  ಉಪಾಯ…

Read more
error: Content is protected !!