ಅಂಜೂರ – ಒಣ ಭೂಮಿಗೆ ಲಾಭದ ಹಣ್ಣಿನ ಬೆಳೆ.

ಅಂಜೂರದ ಹಣ್ಣು ತಿಂದವನೇ ಬಲ್ಲ ಅದರ ರುಚಿ. ಬಹುಶಃ ಇದು ಸಕ್ಕರೆಗಿಂತಲೂ ಸಿಹಿಯಾದ ಹಣ್ಣು. ಸ್ವಲ್ಪ ತಿಂದರೂ ಸಾಕು ಎನ್ನಿಸುತ್ತದೆ. ಇದೊಂದು ತಾಜಾ ಮತ್ತು ಒಣಗಿಸಿ ಸಂಸ್ಕರಣೆಗೆ  ಸೂಕ್ತವಾದ ಹಣ್ಣು. ಬಹಳಷ್ಟು ಹಣ್ಣುಗಳಲ್ಲಿ ಹುಳಿ ಅಂಶ ( ಆಮ್ಲತೆ ಇದ್ದರೆ, ಇದರಲ್ಲಿ ಅದು ಇಲ್ಲವೇ ಇಲ್ಲ. ಪೌಷ್ಟಿಕಾಂಶ ಭರಿತ ಕೆಲವೇ ಕೆಲವು  ಹಣ್ಣುಗಳಲ್ಲಿ ಇದು ಇದು ಒಂದು. ಕರ್ನಾಟಕದ ಮೈಸೂರಿನ ಶ್ರೀರಂಗಪಟ್ಟಣದ   ಗಂಜಾಮ್ ಎಂಬ ಊರಿನ ಅಂಜೂರದ  ಹಣ್ಣು ಇತಿಹಾಸ  ಪ್ರಸಿದ್ದಿ. ಈಗ ಈ ಪ್ರದೇಶವಲ್ಲದೆ ಹೊಸ…

Read more

ಬಾಳೆಗೆ 50% ಗೊಬ್ಬರ ಕಡಿಮೆ ಮಾಡಬಹುದಾದ ವಿಧಾನ.

ಬಾಳೆ ಬೆಳೆಗೆ ಅತ್ಯಧಿಕ ಪೋಷಕಾಂಶಗಳು ಬೇಕು. ಇದು ಕಡಿಮೆ  ಸಮಯದಲ್ಲಿ ದಷ್ಟ ಪುಷ್ಟವಾಗಿ ಬೆಳೆಯುವ ಸಸ್ಯವಾದ ಕಾರಣ ಅಷ್ಟೇ ಪೋಷಕಗಳು ಬೇಕಾಗುತ್ತವೆ. ನಾವು ಕೊಡುವ ಎಲ್ಲಾ ಪೋಷಕಗಳೂ  ಮೊದಲ ಬೆಳೆಗೇ ಬಳಕೆಯಾಗದೆ ಸ್ವಲ್ಪ ಬಾಳೆಯ ಅಂಗಾಂಶಗಳಲ್ಲಿ ಉಳಿದುಕೊಂಡಿರುತ್ತದೆ. ಅದನ್ನು ಸದುಪಯೋಗಮಾಡಿಕೊಂಡರೆ  ಮುಂದಿನ ಕೂಳೆ ಬೆಳೆ ಉತ್ತಮವಾಗಿರುತ್ತದೆ. ಕಂದುಗಳೂ ಆರೋಗ್ಯವಾಗಿರುತ್ತವೆ.   ಎಲ್ಲಾ ಬೆಳೆಗಳೂ ತಮ್ಮ ಬೆಳೆವಣಿಗೆಗೆ ಬಳಕೆ ಮಾಡಿದ ಪೋಷಕಗಳನ್ನು  ಪೂರ್ಣವಾಗಿ  ಉಪಯೋಗಿಸಿಕೊಂಡಿರುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಅದು ಎಲೆಗಳಲ್ಲಿ ಉಳಿದಿರುತ್ತದೆ. ಅದು ಉದುರಿ ಬಿದ್ದಾಗ ಅದರ ಜೊತೆಗೆ…

Read more

ಪ್ರಪಂಚದಲ್ಲೇ ಇದು ಅಧ್ಬುತ– ಮಿಡಿ ಮಾವು.

ಅಪ್ಪೆ ಮಿಡಿ ಒಂದು ಸುಗಂಧಿತ ಮಾವು. ಇದು ಬೆಳೆಯುವುದು ಹೊಳೆ ದಂಡೆಯಲ್ಲಿ. ಅದಕ್ಕಾಗಿ ಈ ಮಾವಿಗೆ ಹೊಳೆಸಾಲು ಅಪ್ಪೆ ಎಂಬ ಹೆಸರು. ಇದು ನಮ್ಮ ರಾಜ್ಯದ ಮಲೆನಾಡಿನ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತದೆ. ಇದರ ಮಿಡಿಯ ಉಪ್ಪಿನ ಕಾಯಿ ಅಲ್ಲದೆ ಕೆಲವು ಖಾದ್ಯಗಳು ಸರ್ವಶ್ರೇಷ್ಟ. ಮಿಡಿ ಉಪ್ಪಿನ ಕಾಯಿ ಸವಿಯುವುದೇ ಅದರೆ, ಅಪ್ಪೆ ಮಿಡಿಯ ಸವಿಯನ್ನು ಒಮ್ಮೆ ನೋಡಿ. ಅದೂ ಮಲೆನಾಡಿನ ಕೆಲವು ಪಾಕಶಾಸ್ತ್ರಜ್ಞರ ಕೈಯಲ್ಲಿ ಮಾಡಿದ್ದೇ ಆಗಬೇಕು. ಮಾವಿನ ಮಿಡಿ ಒಯ್ದು ಉಪ್ಪಿನ…

Read more

ಬಾಳೆಯ ಕಾಂಡದ ಈ ರೋಗಕ್ಕೆ ಪರಿಹಾರ ಇದು.

ಬಾಳೆಯಲ್ಲಿ ಕಾಂಡ ಎಂಬುದು ಎಲೆಯ ಕವಚಗಳು ಪರಸ್ಪರ ಒತ್ತೊತ್ತಾಗಿ ಸೇರಿದಾಗ ಉಂಟಾಗುತ್ತದೆ. ಬಾಳೆಗೆ ಕಾಂಡ ಎಂಬುದು ಇಲ್ಲ. ಇದನ್ನು ಹುಸಿ ಕಾಂಡ ಎನ್ನುತ್ತಾರೆ. ಹುಸಿ ಕಾಂಡ ಉಂಟಾಗಬೇಕಾದರೆ  ಎಲೆಯ ತೊಟ್ಟಿನ ಭಾಗ (petiole)ಗಳು ಪರಸ್ಪರ ಅಂಟಿಕೊಂಡು ಬೆಳೆಯಬೇಕು. ಅದು ಬಿಚ್ಚಿಕೊಂಡಿದ್ದರೆ ಅದು ಒಂದು ರೋಗ. ಇದು ಒಂದು ನಂಜಾಣು ರೋಗದ ಲಕ್ಷಣ.  ಬಾಳೆ ಸಸ್ಯ 2-3 ತಿಂಗಳ ಬೆಳೆವಣಿಗೆಯಲ್ಲಿ ಇದು ಜಾಸ್ತಿ.   ಪ್ರಾರಂಭದಲ್ಲಿ ಎಲೆದಂಟು ಕಾಂಡದಿಂದ ಬೇರ್ಪಟ್ಟು ಕಾಂಡ ಸಪುರವಾಗುತ್ತಾ ಹೋಗುತ್ತದೆ. ಇಂತಹ ಬಾಳೆ ಕೆಲವೊಮ್ಮೆ…

Read more
rose apple red

ತಿನ್ನಲು ಸಿಗದ ಈ ಹಣ್ಣುಗಳು- ಏನು ಪರಿಹಾರ?

ಒಂದು ವರ್ಷ  ಈ ಹಣ್ಣುಗಳು ತಿನ್ನಲು ಸಿಕ್ಕರೆ ಮತ್ತೆ ಇಲ್ಲವೇ ಇಲ್ಲ. ರಾಶಿ ರಾಶಿ ಹಣ್ಣುಗಳಾಗುತ್ತವೆ. ಆದರೆ ಎಲ್ಲವೂ ಬುಡದಲ್ಲಿ ಬಿದ್ದು, ಹಾಳೇ ಆಗುವುದು. ಇದು ನಮ್ಮ ಬಹುತೇಕ ರೈತರಲ್ಲಿ ಇರುವ ರೋಸ್ ಆಪಲ್ ಹಾಗೂ ವುಡ್ ಆಪಲ್ ಎಂಬ ಬಹು ಬಗೆಯ ಬೇಸಿಗೆ ಹಣ್ಣುಹಂಪಲುಗಳ  ಗತಿ. ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ವಿಧಾನ ಇಲ್ಲಿದೆ. ಇದು ಹಣ್ಣು ನೊಣದಿಂದ ಆಗುವ ತೊಂದರೆ , ಇದನ್ನು ಪ್ರಾರಂಭಿಕ ಹಂತದಲ್ಲಿ ಬಾರದಂತೆ ಮಾಡಿದರೆ ಸ್ವಲ್ಪ ಮಟ್ಟಿಗೆಯಾದರೂ ಉತ್ತಮ ಹಣ್ಣನ್ನು ಉಳಿಸಬಹುದು….

Read more
ಒಣ ದ್ರಾಕ್ಷಿ

ದ್ರಾಕ್ಷಿ ಬೆಳೆಗಾರ ಸಂಕಷ್ಟಕ್ಕೆ ಉತ್ತರ – ಒಣ ದ್ರಾಕ್ಷಿ.

ಮಣಕ ಅಥವಾ ಒಣ ದ್ರಾಕ್ಷಿ  ಮಾಡಿದರೆ ಅದನ್ನು ಹೆಚ್ಚು ಸಮಯದ ತನಕ ದಾಸ್ತಾನು ಇಟ್ಟು ಮಾರಾಟ ಮಾಡಬಹುದು. ಇದಕ್ಕೆ ಮಧ್ಯವರ್ತಿಗಳು, ದಾಸ್ತಾನುಗಾರರು, ಚಿಲ್ಲರೆ ಮಾರಾಟಗಾರರು ಬೇಕಾಗಿಲ್ಲ. ನೀವು  ಬುದ್ದಿವಂತರಾಗಿದ್ದರೆ ಆನ್ ಲೈನ್ ಮೂಲಕ ನೇರವಾಗಿ ಗ್ರಾಹಕರಿಗೆ  ಮಾರಾಟ ಮಾಡಬಹುದು. ಸರಕಾರ ದ್ರಾಕ್ಷಿ ಬೆಳೆಗಾರರ ಸಮಸ್ಯೆ ನಿವಾರಣೆಗೆ ವೈನರಿಯನ್ನು ಎಲ್ಲಾ ತೆರೆಯುವಂತೆ ಸೂಚಿಸಿದೆಯಂತೆ. ಈ ವೈನರಿಗಳು ಕೊಡುವ ಬೆಲೆ ಬರೇ ಜುಜುಬಿ. ಅದರ ಬದಲು ಮಣಕ ಮಾಡಿದರೆ ಲಾಭ ಹೆಚ್ಚು. ಉತ್ತರ ಕರ್ನಾಟಕದ ಬಿಜಾಪುರ, ಬಾಗಲಕೊಟೆಯ ದ್ರಾಕ್ಷಿ ಬೆಳೆಗಾರರು…

Read more

ಶಹಬ್ಬಾಸ್ ಹೇಳಬೇಕು ಈ ರೈತರ ಬುದ್ದಿವಂತಿಕೆಗೆ

ಹಿರಿಯಡ್ಕದ  ಸುರೇಶ್ ನಾಯಕ್ ಇವರು ಕಳೆದ 8 ವರ್ಷಗಳಿಂದ  ಕಲ್ಲಂಗಡಿ   ಬೆಳೆಸುತ್ತಿದ್ದಾರೆ.  ಕಲ್ಲಂಗಡಿ  ಬೇಸಾಯದಲ್ಲಿ ಹೊಸ ಹೊಸ ಪದ್ದತಿಯನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಕೃಷಿ ಮಾಡಿದವರು.  1 ಎಕ್ರೆಯಿಂದ ಪ್ರಾರಂಭಿಸಿ ಈಗ 14 ಎಕ್ರೆ ತನಕ ಬೆಳೆ ಬೆಳೆಸುತ್ತಾರೆ.  ಈ ವರ್ಷ ಕೊರೋನಾ ಮಹಾ ಮಾರಿಯಿಂದ ಹಣ್ಣು ಹಂಪಲು ಬೆಳೆದ ರೈತರು ಸಂಕಷ್ಟ ಅನುಭವಿಸಿದಂತೆ ಇವರೂ ಒಮ್ಮೆ ಕಂಗಾಲಾಗಿದ್ದರೂ ಹೇಗಾದರೂ ಅದರಲ್ಲಿ ಗೆದ್ದೇ ಬಿಟ್ಟರು. ಮಾಡಿದ್ದೇನು: ಬೆಳೆ ಬೆಳೆಯುವ ರೈತರಿಗೆ ಮಾರಾಟ ಮಾಡುವುದೂ ಗೊತ್ತಿರಬೇಕು. ಹಲವಾರು  ಸಲ…

Read more
fruit fly less mango

ಮಾವಿನ ಹಣ್ಣಿನಲ್ಲಿ ಹುಳವಾಗುತ್ತದೆಯೇ? ಈ ಉಪಾಯ ಮಾಡಿ.

ಮಾವಿನ ಹಣ್ಣನ್ನು ಕೊರೆದು ನೋಡದೆ ಬಳಕೆ ಮಾಡುವುದು ಸಾಧ್ಯವೇ ಇಲ್ಲ. ನೋಡಲು ಸರಿಯಾಗಿದ್ದರೂ ಒಳಗೆ ಹುಳ ಇರಬಹುದು. ಹುಳ ಇಲ್ಲವಾದರೆ  ಒಳಗೆ ರಸ ಕದಡಿರಬಹುದು. ಮಾವಿನ ಹಣ್ಣಿನಲ್ಲಿ ಹುಳ ಬರುವುದಿಲ್ಲ ಎಂದಾದರೆ ಎಷ್ಟು ಖುಷಿ ಪಟ್ಟು ತಿನ್ನಬಹುದು. ಆದರೆ  ಹುಳ ಇರದ ಮಾವು ಹುಡುಕುವುದೇ ಕಷ್ಟ.   ಮಾವಿನ ಮರದಲ್ಲಿ ಕಾಯಿಗಳು ಲಿಂಬೆ ಗಾತ್ರದಷ್ಟು ಬೆಳೆಯುವಾಗ ಈ ನೊಣ ತೊಂದರೆ ಕೊಡಲು ಪ್ರಾರಂಭಿಸುತ್ತದೆ. ವಾಗುತ್ತದೆ. ಈ ಹಂತದಿಂದಲೇ ಪ್ರಾರಂಭಿಸಿ ಹಣ್ಣು ನೊಣ ಬಾರದಂತೆ ಮಾಡಿದರೆ ಸ್ವಲ್ಪ ಮಟ್ಟಿಗೆಯಾದರೂ ಉತ್ತಮ…

Read more

ಬಾಳೆಗೊನೆ ಯಾಕೆ ಹೀಗಾಗುತ್ತದೆ ಗೊತ್ತೇ?.

ಬಾಳೆಗೆ ಎಲ್ಲಾ ಗೊಬ್ಬರ, ನಿರ್ವಹಣೆ ಮಾಡಿದಾಗಲೂ ನಿಸ್ತೇಜವಾಗಿ ಎಲೆ ಹಳದಿಯಾಗುತ್ತಾ ಸಣಕಲು ಕಾಯಿಯ ಗೂನೆ ಬಿಡುವುದು, ಕಾಂಡದ ಭಾಗದಿಂದ ಅಥವಾ ಗೊನೆ ಭಾಗದಿಂದ ಮುರಿದು ಬೀಳುವುದು, ನಾವೆಲ್ಲಾ ಕಂಡ ಸಮಸ್ಯೆ. ಇದು ಗೊಬ್ಬರ ಅಥವಾ ಇನ್ಯಾವುದೇ ನಿರ್ವಹಣೆಯ ಕೊರತೆಯಿಂದ ಆಗುವುದಲ್ಲ. ಕೀಟ ಸಮಸ್ಯೆಯಿಂದ. ಯಾಕೆ ಹೀಗಾಗುತ್ತದೆ? ಒಂದು ಜಾತಿಯ ದುಂಬಿ ಬಾಳೆಯ ಗಡ್ಡೆಯಲ್ಲಿ ಸೇರಿ ಅಲ್ಲಿ ಮೊಟ್ಟೆ ಇಟ್ಟು ಹುಳವಾಗುತ್ತದೆ. ಈ ಹುಳವು ಮಧ್ಯದ ದಂಟಿನ ಮೂಲಕ ಮೇಲೇರಿ ದಂಟನ್ನು ಭಕ್ಷಿಸಿ ಬೆಳೆಯುತ್ತದೆ. ಮತ್ತೆ ಪುನಹ ಲಾರ್ವಾ…

Read more

ಕಲ್ಲಂಗಡಿ ಬೆಳೆಗಾರರ ಕಣ್ಣೀರ ಕಥೆ.

ಕಲ್ಲಂಗಡಿ ಬೆಳೆಗಾರರಾದ ಹಿರಿಯಡ್ಕದ ಸುರೇಶ್ ರವರು ಹೇಳುತ್ತಾರೆ ಈ ವರ್ಷ ಯಾವ ಗ್ರಹಚಾರವೋ ತಿಳಿಯದು. 14  ಎಕ್ರೆಯಲ್ಲಿ ಮಾಡಿದ ಕಲ್ಲಂಗಡಿಯನ್ನು ಯಾರಿಗೆ ಮಾರುವುದೋ , ಯಾರು ಕೊಳ್ಳುವವರೋ ಗೊತ್ತಾಗುತ್ತಿಲ್ಲ. ಈ ನಷ್ಟವನ್ನು ಹೇಗೆ ಹೊಂದಿಸಿಕೊಳ್ಳುವುದು ಎಂದೇ ತಿಳಿಯುತ್ತಿಲ್ಲ ಎನ್ನುತ್ತಾರೆ. ಉಡುಪಿಯಿಂದ ಹೊನ್ನಾವರ ತನಕ ವ್ಯಾಪಿಸಿರುವ ಸಾವಿರ ಎಕ್ರೆಗೂ ಮಿಕ್ಕಿದ ಕಲ್ಲಂಗಡಿ ಬೆಳೆಗಾರರ  ಕಣ್ಣೀರ ಕಥೆ ಹೀಗೆಯೇ. ಅದೇ ರೀತಿ ರಾಜ್ಯದುದ್ದಕ್ಕೂ ಕಲ್ಲಂಗಡಿ ಬೆಳೆದವರ ಪಾಡು ಹೇಳ ತೀರದು. ಈ ವರ್ಷ ಯುಗಾದಿಯ ತರುವಾಯ ಮೇ ತನಕ ಕಲ್ಲಂಗಡಿಗೆ…

Read more
error: Content is protected !!