ಸಸ್ಯ ಪೀಳಿಗೆಗೆ ಮರು ಜೀವ ಕೊಡುವ ಕಸಿ ಗುರುಗಳು.

ಉಡುಪಿಯ ಪೆರ್ಡೂರು ಸಮೀಪ ಗುರುರಾಜ ಬಾಲ್ತಿಲ್ಲಾಯ ಎಂಬ ಕಸಿ ತಜ್ಞ ಮಾಡದ ಕಸಿ ಇಲ್ಲ. ಇವರು ಸಸ್ಯಾಭಿವೃದ್ದಿಯಅಥವಾ ಕಸಿಗಾರಿಕೆಯ  ತಜ್ಞನೂ ಅಲ್ಲದೆ ಒಬ್ಬ ಸಸ್ಯ ಸಂರಕ್ಷಕನೂ ಹೌದು. ಇವರ ಕೈಯಲ್ಲಿ ಮರುಜೀವ ಪಡೆದ ಅದೆಷ್ಟೋ ಅಳಿದು ಹೋದ ತಳಿಗಳಿವೆ. ಸಸ್ಯದ ಒಂದು ಮೊಗ್ಗು ಸಿಕ್ಕರೂ ಸಾಕು ಹೇಗಾದರೂ ಅದನ್ನು ಕಸಿ ಮಾಡಿ ಮರು ಜೀವ ಕೊಡಬಹುದು ಎನ್ನುತ್ತಾರೆ. ಸುಮಾರು 25 ಕ್ಕೂ ಹೆಚ್ಚು ವಿಧಾನದಲ್ಲಿ ಕಸಿಮಾಡುವ ತಂತ್ರವನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ನಿಮ್ಮ ಹೊಲದಲ್ಲಿ ಒಂದು ವಿಶಿಷ್ಟ …

Read more
ಈ ಹಣ್ಣಿಗೆ ಬೆಳೆಗೆ ಉತ್ತಮ ಭವಿಷ್ಯ ಇದೆ.

ಉತ್ತಮ ಭವಿಷ್ಯ ಇರುವ ಹಣ್ಣಿನ ಬೆಳೆ.

ಬಹಳಷ್ಟು ಸಾರಿ  ನಾವು ವರ್ತಮಾನ ಕಾಲವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಕೃಷಿ ಮಾಡುತ್ತೇವೆ. ಆದರ ಬದಲಿಗೆ  ಭವಿಷ್ಯದಲ್ಲಿ ಯಾವುದಕ್ಕೆ ಬೇಡಿಕೆ ಬರಬಹುದು ಎಂದು ಯೋಚಿಸಿ ಅದಕ್ಕೆ ಅನುಗುಣವಾಗಿ ಕೃಷಿ ಮಾಡಿದರೆ ಆದು ಕ್ಲಿಕ್ ಆಗುತ್ತದೆ. ಪುನರ್ಪುಳಿ , ಕೋಕಂ ಎಂಬ ಈ ಹಣ್ಣಿನ ಸಸ್ಯವನ್ನು ಖಾಲಿ ಸ್ಥಳದಲ್ಲಿ ಬೆಳೆಸಿ….. ನಮ್ಮೆಲ್ಲರ ಚಿರ ಪರಿಚಿತ ಹಣ್ಣು ಪುನರ್ಪುಳಿ , ಮುರುಗನ ಹುಳಿ( Garcinia indica Choisy). ಇದು ದೇಶದ ಕರಾವಳಿಯ ಎಲ್ಲಾ ಕಡೆ  ನೈಸರ್ಗಿಕವಾಗಿ ಬೆಳೆಯುತ್ತಿರುವ ಸಸ್ಯ. ಬಹುತೇಕ ಎಲ್ಲಾ…

Read more

ಈ ನೀಲಿ ದ್ರಾಕ್ಷಿಗೆ ರಾಸಾಯನಿಕ ಮುಕ್ತ – ಸಿಂಪರಣೆಯ ಅಗತ್ಯವಿಲ್ಲ.

ಬೆಂಗಳೂರು ಸುತ್ತಮುತ್ತ  ನೂರಾರು ವರ್ಷಗಳಿಂದ ಬೆಳೆಯುತ್ತಿರುವ ನೀಲಿ ದ್ರಾಕ್ಷಿ ಅಥವಾ ಬೀಜ ಉಳ್ಳ ಕಪ್ಪು ರಾಸಾಯನಿಕ ಮುಕ್ತವಾಗಿ ಬೆಳೆಯಬಲ್ಲ ತಳಿ. ಇದನ್ನು ಬಾಲರಿಂದ ಹಿಡಿದು ವೃದ್ಧರ ವರೆಗೂ ಯಾವುದೇ ಅಂಜಿಕೆ ಇಲ್ಲದೆ ಸೇವಿಸಬಹುದು. ಇದು ಒಂದು ನಾಟಿ ತಳಿಯಾಗಿದ್ದು, ರೋಗ ಕೀಟ ಬಾಧೆ ಕಡಿಮೆ ಇರುವ ಕಾರಣ ಯಾರೂ ಅನವಶ್ಯಕ ಕೀಟನಾಶಕ- ರೋಗ ನಾಶಕ ಸಿಂಪಡಿಸುವುದಿಲ್ಲ. ಹಣ್ಣು ಮಾರಾಟ ಮಾಡುವ ಅಂಗಡಿಯಲ್ಲಿ ತರಾವಳಿ ದ್ರಾಕ್ಷಿ ಹಣ್ಣುಗಳಿರುತ್ತವೆ. ನೀವೇನಾದರೂ ಕಡಿಮೆ  ಬೆಲೆಗೆ ದೊರೆಯುವ ಬೆಂಗಳೂರು ನೀಲಿ ದ್ರಾಕ್ಷಿಯನ್ನು /ಬೆಂಗಳೂರು…

Read more
ಸ್ಥಳೀಯ ರಾಮ ಫಲ ಹಣ್ಣು

ಸ್ಥಳೀಯ ಹಣ್ಣು ಬೆಳೆಸಿ- ಈಗ ಇದಕ್ಕೆ ಭಾರೀ ಬೇಡಿಕೆ.

ರಾಮಫಲ ಹಣ್ಣಿನ  ಬೆಲೆ ಏನಾದ್ರೂ ಗೊತ್ತೇ? ಕಿಲೋ 200 ಕ್ಕೆ ಮಾರಾಟ ಮಾಡುತ್ತಾರೆ. ರೈತರಿಗೆ  ರೂ.50 ಸಿಗುವುದಕ್ಕೆ ತೊಂದರೆ  ಇಲ್ಲ. ಸೀತಾಫಲದ ಯಥಾವತ್ ರುಚಿಯ ಈ ಹಣ್ಣಿನ ಬೆಳೆಗೆ ನೀರು, ಗೊಬ್ಬರ, ಕೀಟನಾಶಕ, ರೋಗನಾಶಕ ಬೇಕಾಗಿಲ್ಲ. ಚಳಿಗಾಲದಲ್ಲಿ ಮೊದಲು ದೊರೆಯುವ ಹಣ್ಣು. ಉತ್ತಮ ಬೇಡಿಕೆ  ಇದೆ. ಒಮ್ಮೆ ತಿಂದವರು ಮತ್ತೆ ಬೇಕು ಎಂದು ಬಯಸುವ ಹಣ್ಣು ಇದು.  ವಿದೇಶದ ಹಣ್ಣು, ಎಂದರೆ ಎಷ್ಟು ಬೆಲೆಯದರೂ ಕೊಳ್ಳುವ ನಾವು ಸ್ಥಳೀಯ ಹಣ್ಣುಗಳ ಪೌಷ್ಟಿಕತೆ ಬಗ್ಗೆ ಸ್ವಲ್ಪವೂ ಯೋಚನೆ ಮಾಡುವುದಿಲ್ಲ….

Read more

ಇದು ಹಲಸಿನ ಹೊಸ ತಳಿ.

ಹಲಸಿನಲ್ಲಿ ಕೆಲವು ತಳಿಗಳ ಗುಣಗಳನ್ನುಅಧ್ಯಯನ ನಡೆಸಿ ಉತ್ತಮ ತಳಿ ಎಂದು ಸಂಶೋಧನಾ ಕೇಂದ್ರಗಳು ಬಿಡುಗಡೆ ಮಾಡಿವೆ. ಕೆಲವು ರೈತರೇ ಬಿಡುಗಡೆ ಮಾಡಿದ್ದೂ ಇದೆ!! ಹಲಸಿಗೆ ಘಮ ಘಮ ಸುವಾಸನೆ  ಬಂದದ್ದು  ಅದಕ್ಕೆ  ದೊರೆತ  ಪ್ರಚಾರದ ಕಾರಣದಿಂದ. ಇವೆಲ್ಲಾ ಪ್ರಚಾರ ಗಳಿಗೂ ಮುಂಚೆಯೇ  ಬೆಂಗಳೂರಿನ ಕೃಷಿ ವಿಶ್ವವಿಧ್ಯಾನಿಲಯದ ತೋಟಗಾರಿಕಾ ವಿಭಾಗದಲ್ಲಿ ಸಾಕಷ್ಟು  ಹಲಸಿನ ಬೇರೆ  ಬೇರೆ ತಳಿಗಳ  ಸಂಗ್ರಹ ಇತ್ತು. ಅಲ್ಲಿ ಅದರ ಅಧ್ಯಯನ ನಡೆಯುತ್ತಿತ್ತು. ಆದರೆ ಆಂಥ ಪ್ರಚಾರ ಇರಲಿಲ್ಲ. ಇಲ್ಲಿ ಅಧಿಕ ಇಳುವರಿ, ಗುಣ ಮಟ್ಟದ…

Read more

ಗುಣಮಟ್ಟದ ಹಲಸು ಪಡೆಯುವ ವಿಧಾನ.

ಹಲಸಿನ ಮರದಲ್ಲಿ ಮಿಡಿ ಕಾಯಿಗಳು ಬಿಡಲು ಪ್ರಾರಂಭವಾಗಿವೆ. ಇನ್ನು ಬರುವ ಚಳಿ, ಒಣ ಹವೆಯಿಂದ ಇನ್ನೂ ಸ್ವಲ್ಪ ಕಾಯಿ ಬಿಡಬಹುದು. ಬಿಟ್ಟ ಎಲ್ಲಾ ಕಾಯಿಗಳನ್ನೂ ಉಳಿಸಬೇಡಿ. ಒಂದು ಮರಕ್ಕೆ  ಇಂತಿಷ್ಟು ಎಂಬ ಲೆಕ್ಕಾಚಾರದಲ್ಲಿ ಕಾಯಿ ಉಳಿಸಿಕೊಂಡರೆ ಗುಣಮಟ್ಟದ ಹಲಸಿನ ಕಾಯಿ ಪಡೆಯಬಹುದು. ಹಲಸಿನ ಮರದಲ್ಲಿ ಮಿಡಿಗಳು ಸಾಕಷ್ಟು ಬಿಟ್ಟರೆ  ಎಲ್ಲಾ ಕಾಯಿಗಳೂ ಒಳ್ಳೆಯ ರೀತಿಯಲ್ಲಿ ಬೆಳೆವಣಿಗೆ ಹೊಂದುವುದಿಲ್ಲ. ಕೆಲವು ಚಪ್ಪಟೆಯಾಗುತ್ತದೆ. ಕೆಲವು ಮಾತ್ರ ಪುಷ್ಟಿಯಾಗುತ್ತದೆ. ಚಪ್ಪಟೆ ಇಲ್ಲದ ಎಲ್ಲಾ ಭಾಗವೂ ಏಕಪ್ರಕಾರವಾಗಿ ಉಬ್ಬಿರುವ ಹಲಸಿನ ಕಾಯಿಯಲ್ಲಿ ಸೊಳೆಗಳು…

Read more
ಈ ಹಂತದಲ್ಲಿ ಥಿನ್ನಿಂಗ್ ಮಾಡಬೇಕು

ದ್ರಾಕ್ಷಿ ಥಿನ್ನಿಂಗ್ ಮಾಡಿ – ಗುಣಮಟ್ಟ ಹೆಚ್ಚಿಸಿ.

ದ್ರಾಕ್ಷಿ ಗೊಂಚಲಿನಲ್ಲಿ ಎಲ್ಲಾ ಒಂದೇ ಗಾತ್ರದ  ಹಣ್ಣುಗಳಿದ್ದರೆ ತುಂಬಾ ಆಕರ್ಷಕವಾಗಿರುತ್ತದೆ. ಅದು ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ಎಲ್ಲದಕ್ಕೂ  ಗಾತ್ರ ಮತ್ತು ನೋಟವೇ ಮುಖ್ಯ. ಇದು ತನ್ನಷ್ಟಕ್ಕೇ ಆಗುವುದಲ್ಲ. ಬೆಳೆಗಾರರು ಅದಕ್ಕೆ ಬೇಕಾದ ಥಿನ್ನಿಂಗ್ ಮಾಡಿದರೆ ಮಾತ್ರ ಹೀಗೆ ಇರುತ್ತದೆ. ದ್ರಾಕ್ಷಿ ಗೊಂಚಲಿನಲ್ಲಿ ಹೆಚ್ಚಿನ ಹೂವುಗಳು ಪರಾಗಸ್ಪರ್ಶಕ್ಕೊಳಗಾಗಿ ಕಾಯಿಕಚ್ಚುತ್ತವೆ. ಎಲ್ಲವೂ ಕಾಯಿಯಾದರೆ ಕೆಲವು ಬಟಾಣಿ ಗಾತ್ರ , ಮತ್ತೆ ಕೆಲವು ಇನ್ನೂ ಸಣ್ಣ ಗಾತ್ರ ಕೆಲವು ಯೋಗ್ಯ ಗಾತ್ರ, ಹೀಗೆ ಕಾಯಿಗಳಲ್ಲೆಲ್ಲಾ ಆಕಾರ ವೆತ್ಯಾಸ ಇರುತ್ತದೆ. ಹೀಗೆ ಆದರೆ…

Read more

ಉತ್ತಮ ಬಾಳೆಗೊನೆಗೆ ಎಷ್ಟು ಪೋಷಕಾಂಶ ಕೊಡಬೇಕು.

ಯಾವುದೇ ಬೆಳೆಗೆ ಅದರ ಬೆಳೆ ಅವಧಿಗನುಗುಣವಾಗಿ ಪೋಷಕಾಂಶಗಳನ್ನು  ಬಳಸಿಕೊಳ್ಳುತ್ತದೆ. ಧೀರ್ಘಾವಧಿ ಬೆಳೆಗಳು  ನಿಧಾನ ಗತಿಯಲ್ಲಿ ಪೋಷಕಗಳನ್ನು ಬಳಕೆ ಮಾಡಿಕೊಂಡರೆ ಅಲ್ಪಾವಧಿ ಬೆಳೆಗಳು ಅಧಿಕ ಪೋಷಕಗಳನ್ನು ಬಳಸಿಕೊಳ್ಳುತ್ತವೆ.   ಬಾಳೆ ಬೆಳೆ ಅಲ್ಪಾವಧಿ ಬೆಳೆ ಎಂದರೆ ತಪ್ಪಾಗಲಾರದು. ಇದು ನಾಟಿ ಮಾಡಿ 6 ರಿಂದ10  ತಿಂಗಳ ಒಳಗೆ ಫಸಲನ್ನು ಕೊಡುತ್ತದೆ. ಇಷ್ಟು ಕನಿಷ್ಟ ಅವಧಿಯಲ್ಲಿ  ಅದು ತನ್ನ ಶರೀರ ಸುಮಾರು ಕ್ವಿಂಟಾಲಿಗೂ ಹೆಚ್ಚು ಬೆಳೆಯುತ್ತದೆ. ಗೊನೆ ಹೊರ ಬೀಳುವ ಸಮಯದಲ್ಲಿ  ಮತ್ತು ಬಲಿಯುವ ಸಮಯದಲ್ಲಿ ಅದು ಇನ್ನೂ ಹೆಚ್ಚಾಗುತ್ತದೆ….

Read more

ದಾಳಿಂಬೆ-ಗುಣಮಟ್ಟದ ಹಣ್ಣು ಪಡೆಯುವ ವಿಧಾನ

ದಾಳಿಂಬೆ  ಬೆಳೆಯಲ್ಲಿ ಹೆಚ್ಚಾಗಿ ಕಂಡುಬರುವ ಸಮಸ್ಯೆ ಕಾಯಿ ಒಡೆಯುವಿಕೆ ಮತ್ತು ಕಾಯಿಯ ನೋಟ ಕೆಡುವಿಕೆ. ಬೆಳೆದು ಇನ್ನೇನು ಕಠಾವಿಗೆ ಸಿದ್ದವಾಗುವ ಸಮಯದಲ್ಲಿ ನೋಟವನ್ನು ಕೆಡಿಸುವ  ಕಾಯಿ ಒಡಕ, ಮತ್ತು ಸನ್ ಬರ್ನ್ ಸಮಸ್ಯೆ ಕಂಡು ಬರುತ್ತದೆ. ಇದರಿಂದ ಅರ್ಧಕ್ಕೂ  ಹೆಚ್ಚು ಕಾಯಿ ಉಪಯೋಗಕ್ಕಿಲ್ಲದೆ ನಷ್ಟವಾಗುತ್ತದೆ. ಈ ತೊಂದರೆ  ಮತ್ತು ರೋಗ ,ಕೀಟ ಸಮಸ್ಯೆಗಳಿಂದ ಪಾರಾದರೆ ಇದು ಲಾಭದ ಉತ್ತಮ ಬೆಳೆ.   ಯಾಕೆ ಆಗುತ್ತದೆ? ದಾಳಿಂಬೆಯ ಕಾಯಿಗೆ ಯಾವ ರೋಗಾಣು – ಕೀಟಾಣು ಬಾಧೆ ಇಲ್ಲದಿದ್ದರೂ ಇದು…

Read more
ವಯಸ್ಸಿನಲ್ಲಿ ಮರ ಗಾತ್ರದಲ್ಲಿ ಗಿಡ

ವಯಸ್ಸಿನಲ್ಲಿ ಮರ – ಗಾತ್ರದಲ್ಲಿ ಗಿಡ.

ಇವು ವಯಸ್ಸಿನಲ್ಲಿ  ಮರಗಳಾದರೂ  ನೋಡಲು  ಸಸಿಗಳು. ಇದು ನಾವು ಮಾಡುವುದು. ಇದರ ಉದ್ದೇಶ ಭವಿಷ್ಯದಲ್ಲಿ ಕೃಷಿಗೆ ಎದುರಾಗಲಿರುವ  ಕಾರ್ಮಿಕರ ಕೊರತೆಗೆ ಪರಿಹಾರ.  ಮರ ಸಣ್ಣದಿರಬಹುದು. ಇದಕ್ಕೆ  ನೀರು, ಗೊಬ್ಬರ, ಮತ್ತು ಇನ್ನಿತರ ನಿರ್ವಹಣೆ  ಮಾಡಿದಾಗ  ಇದರಲ್ಲಿ ದೊಡ್ದ  ಮರದಲ್ಲಿ ಪಡೆಯುವಷ್ಟೇ ಇಳುವರಿಯನ್ನು  ಪಡೆಯಬಹುದು. ಇದುವೇ ಅತ್ಯಧಿಕ ಸಾಂದ್ರ ಬೇಸಾಯ ತಾಂತ್ರಿಕತೆ. ಅಧಿಕ ಸಾಂದ್ರ ಬೆಳೆ: ಸಾಂಪ್ರದಾಯಿಕವಾಗಿ ಮಾವನ್ನು 30 ಅಡಿ ಅಂತರದಲ್ಲಿ ಬೆಳೆಸುತ್ತಾರೆ. ಆಗ ಅದು ದೊಡ್ದ ಮರ ಈ ಪ್ರಕಾರ  ಬೆಳೆಸಿದಾಗ ಎಕ್ರೆಗೆ  80 ಗಿಡ…

Read more
error: Content is protected !!