ಅಡಿಕೆ ಧಾರಣೆ ಸ್ಥಿರ. ಬೆಳೆಗಾರರಿಗೆ ನೆಮ್ಮದಿ- ಸೋಮವಾರ ದಿನಾಂಕ 27-12-2021.
2021 ನೇ ಇಸವಿಯಲ್ಲಿ ಅಡಿಕೆ ಧಾರಣೆ ಬೆಳೆಗಾರರಿಗೆ ಹೊಸ ಉತ್ಸಾಹವನ್ನು ಕೊಟ್ಟಿದೆ. ಸಾಕಷ್ಟು ಹೊಸ ತೋಟಗಳು ತಲೆ ಎತ್ತಿವೆ. ಬಹಳಷ್ಟು ಬೆಳೆಗಾರರು ಬೀಜಕ್ಕಾಗಿಯೇ ಅಡಿಕೆ ಮಾರಾಟ ಮಾಡಿ ಲಾಭಮಾಡಿಕೊಂಡಿದ್ದಾರೆ. ಅಡಿಕೆ ಧಾರಣೆಯೂ ಉತ್ತಮವಾಗಿತ್ತು. ಬೀಜದ ಅಡಿಕೆಗೂ 7-8 10 ರೂ ತನಕ ಇತ್ತು. ಒಟ್ಟಿನಲ್ಲಿ ಅಡಿಕೆ ಬೆಳೆಗಾರರು ತೃಪ್ತಿಯ ಧಾರಣೆಯನ್ನು ಕಂಡು ವರ್ಷ ಇದು ಎಂದರೆ ತಪ್ಪಾಗಲಾರದು. ಹೊಸ ವರ್ಷ 2022 ಸಹ ಅಡಿಕೆ ಬೆಳೆಗಾರರಿಗೆ ನೆಮ್ಮದಿಯ ವರ್ಷವಾಗೇ ಇರಲಿದೆ. ಯಾಕೋ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಸಣ್ಣ…
