ರೈತರು ತಮ್ಮ ಧ್ವನಿ ಬದಲಾಯಿಸಬೇಕಾಗಿದೆ..
ರೈತರ ಧ್ವನಿ ಸ್ವಲ್ಪ ಕಡಿಮೆ. ಅದಕ್ಕಾಗಿ ಅವರ ಶೋಷಣೆ ಅವ್ಯಾಹತವಾಗಿ ನಡೆಯುತ್ತಾ ಇದೆ. ಮಾತಾಡುವವರೇ ಇಲ್ಲ. ಮಾತಾಡಿದರೂ ಅದಕ್ಕೆ ಬೆಲೆ ಇಲ್ಲ. ಇದು ಯಾಕಾಗಿ ಆಗುತ್ತದೆ ಎಂದರೆ ನಮ್ಮಲ್ಲಿ ಒಗ್ಗಟ್ಟಿಲ್ಲ. ಒಗ್ಗಟ್ಟಾಗಿದ್ದರೆ ನಾವು ಯಾರಿಗೂ ತಗ್ಗಿ ಬಗ್ಗಿ ಇರಬೇಕಾಗಿಲ್ಲ. ಬಗ್ಗಿದರೆ ಈಗ ಒಂದು ಗುದ್ದು ಹೆಚ್ಚು. ಹೆಚ್ಚಿನ ರೈತರು ಬ್ಯಾಂಕು, ಸೊಸೈಟಿ, ಹಾಗೆಯೇ ಇನ್ನಿತರ ಸರಕಾರೀ ಕಚೇರಿಗಳಿಗೆ ಹೋಗುವಾಗ ತಮ್ಮ ಚಪ್ಪಲಿ ತೆಗೆದು ಹೊರಗಿಟ್ಟು , ದೈನ್ಯದಿಂದ ಒಳಗೆ ಹೋಗುತ್ತಾರೆ. ಇವರನ್ನು ಮಾತಾಡಿಸುವವರೇ ಇಲ್ಲ. ಅದೇ ಕೃಷಿಕಲ್ಲದವರು…
