ಆಡಿಕೆ

ಅಡಿಕೆ ಮಾರುಕಟ್ಟೆ ಡಲ್ ಯಾಕೆ?. ದಿನಾಂಕ:09-02-2022 ರಂದು ರಾಜ್ಯದಲ್ಲಿ ಎಲ್ಲೆಲ್ಲಿ ಏನು ದರ.

ಅಡಿಕೆ ದರ ಎರಿಕೆಯಾಗುವ ಸೂಚನೆ ಇಲ್ಲ. ಪುಣ್ಯಕ್ಕೆ ಇಳಿಕೆಯೂ ಇಲ್ಲವಲ್ಲ. ಅದಕ್ಕೆ ಸಂತೋಷ ಪಡಬೇಕು. ಚಾಲಿ ಅಡಿಕೆ ಮಾರುಕಟ್ಟೆ ಮೇಲ್ನೋಟಕ್ಕೆ ಸ್ಥಿರವಾಗಿದೆ ಎಂದು ಕಂಡುಬಂದರೂ ದರ ಇಳಿಕೆಯಾಗಿದೆ. ಸೂಚಿಸಿದ ದರಕ್ಕೆ ಖರೀದಿ ಮಾಡುವವರು ಇಲ್ಲ.  ಹಾಗಾಗಿ ಅಡಿಕೆ ಮಾರುಕಟ್ಟೆ ಡಲ್. ಬಹುಷಃ ಇದು ಇನ್ನೂ 2-3 ತಿಂಗಳು ಹೀಗೇ ಮುಂದುವರಿಯುವ ಸಾಧ್ಯತೆ.ದಿನಾಂಕ 09-02-2022  ಬುಧವಾರ ರಾಜ್ಯದಲ್ಲಿ ಅಡಿಕೆ ಮಾರುಕಟ್ಟೆ ಧಾರಣೆ. ಚಾಲಿ ಅಡಿಕೆ ಹಾಗೂ ಕೆಂಪಡಿಕೆಯ ಆಮದು ಸಾಧ್ಯತೆ ಇದೆ ಎಂಬ ಸುದ್ದಿ ಇದೆ. ಈಗಾಗಲೇ  ಮಿಜೋರಾಂ…

Read more
ಕೇಂದ್ರ ಬಜೆಟ್ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮ್

ಕೇಂದ್ರ ಕೃಷಿ ಬಜೆಟ್- 2022-23 – ನಮಗೆ ಏಷ್ಟು ಲಾಭವಿದೆ ಇದರಲ್ಲಿ?

ಕೇಂದ್ರ ಸರಕಾರ 2022-23 ನೇ ಸಾಲಿನ ಬಜೆಟ್ ಅನ್ನು ಮಂಡಿಸಿದೆ. ಇದರಲ್ಲಿ ಮಾಮೂಲಿನಂತೆ ಎಲ್ಲಾ ಕ್ಷೇತ್ರಗಳಿಗೂ ಬೇಜಾರಾಗದಂತೆ ಪ್ರಾಶಸ್ತ್ಯಗಳನ್ನು ನೀಡಲಾಗಿದೆ. ಕೃಷಿ ಕ್ಷೇತ್ರಕ್ಕೆ ಕೊಡಮಾಡಲ್ಪಟ್ಟ ಕೊಡುಗೆಗಳು ಮತ್ತು ಇದರಲ್ಲಿ ನಮಗೆ ಎಷ್ಟು ಲಾಭವಿದೆ ಎಂಬ ವಿವರಗಳು ಇಲ್ಲಿವೆ. ಭಾರತ ಕೃಷಿ ಆರ್ಥಿಕತೆಯ ಆಧಾರದಲ್ಲಿ ನಿಂತ ರಾಷ್ಟ್ರವಾಗಿದ್ದು, ಕೃಷಿ ಕ್ಷೇತ್ರ ಯಾವುದೇ ಆಡಳಿತ ನಡೆಸುವ ಸರಕಾರವಾದರೂ ಅದಕ್ಕೆ ಆದ್ಯತಾ ಕ್ಷೇತ್ರವಾಗಿರುತ್ತದೆ. ಕೃಷಿಕರಿಗೆ ಕೊಡುಗೆಗಳು ಬೇಕು. ಅದನ್ನು ಈ ತನಕ ಆಡಳಿತ ನಡೆಸಿದ ಎಲ್ಲಾ ಸರಕಾರಗಳೂ ಬೇರೆ ಬೇರೆ ರೂಪದಲ್ಲಿ…

Read more
ಅಡಿಕೆ ಮಾರಾಟ ಫ್ರಾಂಗಣ

ಜನವರಿ ಕೊನೆಗೆ ಅಡಿಕೆ ಮಾರುಕಟ್ಟೆ ಧಾರಣೆ ದಿನಾಂಕ:31-01-2022

2022 ನೇ ವರ್ಷದ ಜನವರಿ ತಿಂಗಳಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಯಾವುದೇ ಸ್ಥಿತ್ಯಂತರ ಆಗದೆ, ಸ್ವಲ್ಪ ಅನುಮಾನದಲ್ಲೇ ಮುಂದುವರಿದಿದೆ. ಖಾಸಗಿ ವ್ಯಾಪಾರಿಳು ಸಾಂಸ್ಥಿಕ ವ್ಯಾಪಾರಿಗಳ ಜೊತೆಗೆ ಸ್ಪರ್ಧೆಗೆ ಇಳಿಯಲೇ ಇಲ್ಲ. ಸಾಂಸ್ಥಿಕ ವ್ಯಾಪಾರಿಗಳು ತಮ್ಮ ದರಪಟ್ಟಿಯಲ್ಲಿ ವ್ಯತ್ಯಾಸ ಮಾಡದೆ ಗುಣಮಟ್ಟದ ಆಧಾರದಲ್ಲಿ ಬೆಲೆ ನಿರ್ಧರಿಸಿ ಅಡಿಕೆ ಖರೀದಿ ನಡೆಸುತ್ತಿದ್ದರು. ಜನವರಿ ತಿಂಗಳ ಕೊನೆ ಮಾರುಕಟ್ಟೆ ದಿನವಾದ ದಿನಾಂಕ 31-01-2022 ರಂದು ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಕೊಬ್ಬರಿ, ಕರಿಮೆಣಸು, ರಬ್ಬರ್ ಕಾಫೀ ಧಾರಣೆ ಹೇಗಿತ್ತು ಗಮನಿಸಿ. ಅಡಿಕೆ ಮರುಕಟ್ಟೆ…

Read more
ಚೇತರಿಕೆಯತ್ತ ಕೆಂಪಡಿಕೆ

ಕೆಂಪಡಿಕೆ ಚೇತರಿಕೆ- ಚಾಲಿ ಅಡಿಕೆಗೆ ಮಬ್ಬು. 21-01-2022 ರಂದು ಧಾರಣೆ.

ನಿರೀಕ್ಷೆಯಂತೆ ಕೆಂಪಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ ಪ್ರಾರಂಭವಾಗಿದೆ. ಖರೀದಿಯಲ್ಲಿ ಉತ್ಸಾಹ (Force) ಇದೆ ಎಂಬುದಾಗಿ ವರ್ತಕರು ಹೇಳುತ್ತಿದ್ದಾರೆ. ಯಾವಾಗಲೂ ಸರಾಸರಿ ದರ ಮತ್ತು ಗರಿಷ್ಟ ದರಗಳ ಅಂತರ ಹತ್ತಿರವಾದರೆ ಖರೀದಿಯಲ್ಲಿ ಆಸಕ್ತಿ ಹೆಚ್ಚು ಎನ್ನಲಾಗುತ್ತದೆ. ಇದು ಈಗ ಪ್ರಾರಂಭವಾಗಿದೆ. ಚಾಲಿ ಮಾತ್ರ ಸ್ವಲ್ಪ ಮಬ್ಬು. ದಿನಾಂಕ 21-01-2022 ರಂದು ರಾಜ್ಯದೆಲ್ಲೆಡೆ ಧಾರಣೆ. ಕರಾವಳಿಯ ಚಾಲಿ ಅಡಿಕೆ ಈ ವರ್ಷ ಗುಣಮಟ್ಟ ಇಲ್ಲ. ಯಾವಾಗಲೂ ಕರಾವಳಿಯ ಚಾಲಿ ಅಡಿಕೆ ಎಂದರೆ ಅದಕ್ಕೆ  ವಿಶೇಷ ಸ್ಥಾನಮಾನ ಇತ್ತು. ಈ ವರ್ಷದ ಪ್ರತಿಕೂಲ…

Read more
2 ನೇ ಹಸುರು ಕ್ರಾಂತಿಯ ಅಶಯ

ಭಾರತದಲ್ಲಿ 2 ನೇ ಹಸುರು ಕ್ರಾಂತಿ ನೈಸರ್ಗಿಕ ಕೃಷಿಗೆ ಒತ್ತು.

ನಮ್ಮ ದೇಶಕ್ಕೆ 2 ನೇ ಹಸುರು ಕ್ರಾಂತಿಯ ಅವಶ್ಯಕತೆ ಇದೆ. ಈ ಕ್ರಾಂತಿ ಮುಂದಿನ ತಲೆಮಾರಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು next-generation reform ಸುಸ್ಥಿರ ಮತ್ತು ಪರಿಸರ ಸ್ನೇಹಿಯಾಗಿ  ಹವಾಮಾನ ವೈಪರೀತ್ಯಗಳಿಗೆ ಹೊಂದಾಣಿಕೆಯಾಗುವಂತಿರಬೇಕು ಎಂಬ ಧ್ಯೇಯೋದ್ದೇಶಗಳಿವೆ. ನಮ್ಮ ದೇಶದ ಪ್ರಧಾನಿಗಳು, ರಕ್ಷಣಾ ಮಂತ್ರಿಗಳು ಹಾಗೂ ಕೃಷಿ ಮಂತ್ರಿಗಳ ಹಲವು ಹೇಳಿಕೆಗಳ ಪ್ರಕಾರ ಈ 2 ನೇ ಹಸಿರು ಕ್ರಾಂತಿಯಲ್ಲಿ ನೈಸರ್ಗಿಕ ಕೃಷಿಗೆ ಮಹತ್ವ ಬರಲಿದೆ ಎಂದು ಕಾಣಿಸುತ್ತದೆ. ನೈಸರ್ಗಿಕ ಕೃಷಿ ವಿಧಾನವನ್ನು ಅನುಸರಿಸುವ ಮೂಲಕ ನಮ್ಮ ದೇಶದ ರೈತರು…

Read more
ಕೆಂಪು ರಾಸಿ ಅಯದೆ ಇದ್ದದ್ದು

ಅಡಿಕೆ ಧಾರಣೆ ಸ್ಥಿತಿಗತಿ-ದಿನಾಂಕ 10-01-2022, ಚಾಲಿ ಚುರುಕು. ಕೆಂಪು ಸ್ಥಿರ.

ಹೊಸ ವರ್ಷದ ಎರಡನೇ ವಾರ 10-01-2022 ಅಡಿಕೆ ಧಾರಣೆ ಸ್ಥಿರವಾಗಿ ಮುಂದುವರಿದಿದೆ. ಚಾಲಿ ಅಡಿಕೆ ಮಾರುಕಟ್ಟೆಗೆ ಕ್ಯಾಂಪ್ಕೋ ಬೆಂಗಾವಲಾಗಿ ನಿಂತು ದರ ಕುಸಿಯದಂತೆ ಮಾಡಿದೆ. ಈ ವರ್ಷದಾದ್ಯಂತ ಅಡಿಕೆ ಧಾರಣೆ ಇದೇ ರೀತಿಯಲ್ಲಿ ಮುಂದುವರಿಯಲಿದೆ ಎನ್ನಲಾಗುತ್ತಿದೆ. ಕಳೆದ ವರ್ಷದ ದಾಖಲೆಯ ಬೆಲೆಯನ್ನು ಹಿಂದಿಕ್ಕಿ ಇನ್ನೂ ಏರುವ ಸಾಧ್ಯತೆ ಇದೆ ಎಂಬುದಾಗಿಯೂ  ಹೇಳುತ್ತಿದ್ದಾರೆ. ಈ ಸಮಯದ ದರ ಸ್ಥಿತಿಯನ್ನು ನೋಡಿದಾಗ ಹೊಸ ಚಾಲಿ ಧಾರಣೆ ಈ ವರ್ಷ 500 ದಾಟಬಹುದು, ಕೆಂಪು 50,000 ಮೀರಿ ಏರಿಕೆಯಾಗಬಹುದು ಎಂಬ ವದಂತಿಗಳಿವೆ….

Read more
ಚಾಲಿ ಮತ್ತು ಕೆಂಪು ಅಡಿಕೆ ಮಾರಾಟ

2022 ಹೊಸ ವರ್ಷದ ಮೊದಲ ದಿನ – ಚಾಲಿ- ಕರಿಮೆಣಸು ಇಳಿಕೆ. ಕೆಂಪು ಸ್ಥಿರ, ಕೊಬ್ಬರಿ ಏರಿಕೆ.

2021 ಕಳೆದು 2022 ಬಂದಾಯ್ತು. 2021 ನೇ ವರ್ಷದಲ್ಲಿ ಚಾಲಿ ಅಡಿಕೆ ಬೆಳೆಗಾರರು ತಮ್ಮ ಆನುಭವದಲ್ಲಿ ಕಂಡಿರದ ದರ ಏರಿಕೆಯನ್ನು ನೋಡಿದ್ದಾರೆ. ಸಂತೋಷ ಪಡಬೇಕಾದ ಸಂಗತಿ. ಆದರೆ ಕೆಂಪಡಿಕೆಗೆ ಮಾತ್ರ ಅಂಥಃ ಬೆಲೆ ಏರಿಕೆ ಆಗಿಲ್ಲ. ನಿರಾಸೆಯೂ ಆಗಿಲ್ಲ.  ಹೊಸ ವರ್ಷದ ಮೊದಲ ದಿನ ಚಾಲಿ ಸ್ವಲ್ಪ ಇಳಿಕೆಯೂ, ಕೆಂಪು ಸ್ಥಿರವಾಗಿಯೂ, ಕರಿಮೆಣಸಿನ ಬೆಲೆ ಕುಸಿತ ಆಗಿದೆ. ಕೊಬ್ಬರಿ ಏರಿದೆ. 2022 ನೇ ಇಸವಿಯೂ ರೈತರ ಪಾಲಿಗೆ ಅದೃಷ್ಟದ ವರ್ಷವಾಗಿಯೇ ಉಳಿಯಲಿದೆ.   ಕಳೆದ ಮೂರು ನಾಲ್ಕು…

Read more
ಅಡಿಕೆ ಮಾರುಕಟ್ಟೆ ಅಂಗಳ

ಅಡಿಕೆ ಧಾರಣೆ ಸ್ಥಿರ. ಬೆಳೆಗಾರರಿಗೆ ನೆಮ್ಮದಿ- ಸೋಮವಾರ ದಿನಾಂಕ 27-12-2021.

2021 ನೇ ಇಸವಿಯಲ್ಲಿ ಅಡಿಕೆ ಧಾರಣೆ ಬೆಳೆಗಾರರಿಗೆ ಹೊಸ ಉತ್ಸಾಹವನ್ನು ಕೊಟ್ಟಿದೆ. ಸಾಕಷ್ಟು ಹೊಸ ತೋಟಗಳು ತಲೆ ಎತ್ತಿವೆ. ಬಹಳಷ್ಟು ಬೆಳೆಗಾರರು ಬೀಜಕ್ಕಾಗಿಯೇ ಅಡಿಕೆ ಮಾರಾಟ ಮಾಡಿ ಲಾಭಮಾಡಿಕೊಂಡಿದ್ದಾರೆ.  ಅಡಿಕೆ ಧಾರಣೆಯೂ ಉತ್ತಮವಾಗಿತ್ತು. ಬೀಜದ ಅಡಿಕೆಗೂ 7-8 10 ರೂ ತನಕ ಇತ್ತು. ಒಟ್ಟಿನಲ್ಲಿ ಅಡಿಕೆ ಬೆಳೆಗಾರರು ತೃಪ್ತಿಯ ಧಾರಣೆಯನ್ನು ಕಂಡು ವರ್ಷ ಇದು  ಎಂದರೆ ತಪ್ಪಾಗಲಾರದು. ಹೊಸ ವರ್ಷ 2022 ಸಹ ಅಡಿಕೆ ಬೆಳೆಗಾರರಿಗೆ ನೆಮ್ಮದಿಯ ವರ್ಷವಾಗೇ ಇರಲಿದೆ. ಯಾಕೋ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಸಣ್ಣ…

Read more
ರೈತ ಶಕ್ತಿ ದೇಶದಲ್ಲಿ ಸೈನಿಕ ಶಕ್ತಿಗಿಂತಲೂ ಮಿಗಿಲಾದುದು

ರೈತರಾಗಿ ಹುಟ್ಟಿದ್ದೇ ಪುಣ್ಯ. ಒಕ್ಕಲುತನ ಕೀಳಲ್ಲ.

ಒಕ್ಕಲುತನ ಮಾಡುತ್ತಾ ಜಗತ್ತಿನಲ್ಲಿ  ಎಲ್ಲರಿಗೂ ಅನ್ನ ಕೊಡುತ್ತಾ ಬಂದವರು ರೈತರು. ಎಲ್ಲರೂ ಜೀವಮಾನ ಪರ್ಯಂತ  ಬೇರೆಯವರ ಋಣದಲ್ಲಿದ್ದರೆ ಅದು ರೈತರಲ್ಲಿ. ರೈತರೆಂದರೆ  ನಿತ್ಯ ಸ್ಮರಣೀಯರು. ಅದರೂ ಇಂದು ನಮಗಾಗಿ ವಿಶೇಷ ದಿನ. ಡಿಸೆಂಬರ್  23   ಇದು ಜಾಗತಿಕ ರೈತರ ದಿನ. ಅಥವಾ ಕಿಸಾನ್ ದಿವಸ್. ಈ ದಿನ ನಮ್ಮ ದೇಶದ ಮಾಜೀ ಪ್ರಧಾನಿ ಛೌಧುರಿ ಚರಣ್ ಸಿಂಗ್ ಇವರ ಜನ್ಮ ದಿನ. ಚೌಧುರಿ ಚರಣ್ ಸಿಂಗ್ ಇವರು ರೈತರ ಮುಖಂಡರು.  ಸರಳ ಮನುಷ್ಯ.  ಇವರು ಜೈ ಜವಾನ್ …

Read more
ಕೆಂಪು ಅಡಿಕೆ

ಚಾಲಿ ದರ ಹಿಂದೆ- ಕೆಂಪು ಸ್ಥಿರ: ದಿನಾಂಕ:21-12-2021 ರ ಧಾರಣೆ.

ಹೊಸ ಚಾಲಿ ಮಾರುಕಟ್ಟೆಗೆ   ಬರಲಾರಂಭಿಸಿದೆ. ಚಾಲಿಯ ಗುಣ ಮಟ್ಟದ ಮೇಲೆ ಬೆಳೆಗಾರರಿಗೆ ಹೆಚ್ಚು ಖಾತ್ರಿ ಇಲ್ಲದ ಕಾರಣ ಬಿದ್ದ ಒದ್ದೆಯಾದ ಅಡಿಕೆಯನ್ನು ಹೇಗೂ ದರ ಒಳ್ಳೆಯದಿದೆಯಲ್ಲಾ ಎಂದು ಮಾರಾಟ ಮಾಡುತ್ತಿದ್ದಾರೆ. ಮೊದಲೇ ಹೇಳಿದಂತೆ ಚಾಲಿಗೆ ಖಾಸಗಿ ವ್ಯಾಪಾರಸ್ಥರಲ್ಲಿ ದರ ಕಡಿಮೆ, ಸಹಕಾರಿಗಳಲ್ಲಿ ಸ್ಥಿರವಾಗಿಯೂ ಇದೆ. ನಾಳೆ ನಾಡಿದ್ದಿನಲ್ಲಿ ಸಾಂಸ್ಥಿಕ ಖರೀದಿದಾರರೂ ಸ್ವಲ್ಪ ದರ ಇಳಿಸುವ ಮುನ್ಸೂಚನೆ ಇದೆ. ಕೆಂಪು ಅಡಿಕೆ ಬೆಳೆಗಾರರಲ್ಲಿ ದೊಡ್ಡ ಬೆಳೆಗಾರರು ಮತ್ತು ಚೇಣಿಯವರು ಮಾರಾಟಕ್ಕೆ  ದರ ಯಾವಾಗ ಏರುತ್ತದೆ ಎಂದು ಕಾಯುತ್ತಿದ್ದಾರೆ. ಈ…

Read more
error: Content is protected !!