ಶ್ರೀಲಂಕಾಕ್ಕೆ ಮತ್ತೆ ಭಾರತದಿಂದ ಸಾರಜನಕ ಗೊಬ್ಬರ.
ನೆರೆಕರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಇರಾದೆಯಲ್ಲಿ ಭಾರತ ಸರಕಾರವು ಮತ್ತೆ ಶ್ರೀಲಂಕಾದ ಕೃಷಿಯನ್ನು ಮೇಲೆ ಎತ್ತಲು ನ್ಯಾನೋ ಸಾರಜನಕ ಗೊಬ್ಬರವನ್ನು ವಿಮಾನದಲ್ಲಿ ಕಳುಹಿಸಿಕೊಟ್ಟಿದೆ. ಭಾರತದ ಔದಾರ್ಯವೋ ಚೀನಾಕ್ಕೆ ಸೆಡ್ದೋ ಒಟ್ಟಿನಲ್ಲಿ ಭಾರತ ಶ್ರೀಲಂಕಾಕ್ಕೆ ಬೆಂಬಲವಾಗಿ ನಿಂತಿದೆ. ನ್ಯಾನೋ ಯೂರಿಯಾ ಭಾರತದಲ್ಲಿ ಇಫ್ಕೋ ಸಂಸ್ಥೆ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದು, ಭಾರತದ ರೈತರು ಇದನ್ನು ಎಷ್ಟು ಬಳಕೆ ಮಾಡಿದ್ದಾರೋ ಗೊತ್ತಿಲ್ಲ. ಶ್ರೀಲಂಕಾಕ್ಕೆ ಅದೇ ನ್ಯಾನೋ ಸಾರಜನಕವನ್ನು ಕಳುಹಿಸಲಾಗಿದೆಯೋ ಬೇರೆ ಕಳುಹಿಸಲಾಗಿದೆಯೋ ಮಾಹಿತಿ ಇಲ್ಲ. ಶ್ರೀಲಂಕಾದ ಸಾವಯವ ಕೃಷಿಗೆ ಸಹಾಯ ಎನ್ನುತ್ತಿರುವ…
