ಹಲ್ಲಿಲ್ಲದ್ದ ರೈತನಿಗೆ ಕಡಲೆ ತಿನ್ನಿಸುವ ವೆಬಿನಾರ್ ಗಳು.

ಮಾರ್ಚ್ ತಿಂಗಳ ನಂತರ ಬಂದ ಒಂದು ಹೊಸ ಅವತಾರ, ವೆಬಿನಾರ್ ಗಳು. ಬೇರೆ ಕ್ಷೇತ್ರಗಳ ವಿಷಯ ನಮಗೆ ಅನಗತ್ಯ. ಆದರೆ ಕೃಷಿ ಕ್ಷೇತ್ರದಲ್ಲಿ ಈ ವೆಬಿನಾರ್ಗಳ ಬಗ್ಗೆ ಕೆಲವೊಂದು ವಿಚಾರಗಳನ್ನು ರೈತರಿಗೆ ತಿಳಿಯಬಯಸುತ್ತೇವೆ. ಇದು ರೋಗಿ ಬಯಸಿದ್ದೂ ಹಾಲು, ವೈದ್ಯ ಕೊಟ್ಟದ್ದೂ ಹಾಲು ಎಂಬಂತಾಗಿದೆ. ಮೇಲುನೋಟಕ್ಕೆ ಇದು ರೈತರ ಸೇವೆ ಎಂದು ಕಂಡರೂ ಇದರಲ್ಲಿ ಕೆಲವು ಪೇಪರ್ ವರ್ಕ್ ಮತ್ತು ಹಣ ಖರ್ಚು ಮಾಡುವ ದಂಧೆ ಇರಲೂ ಬಹುದು. ವೆಬಿನಾರ್ ಎಂದರೆ ಕೇವಲ ಸಂಬಂಧಿಸಿದವರು  ಮಾತ್ರ ತಮ್ಮ…

Read more
Farmer harvesting the watermelon

ರೈತರೇ ಹೆಚ್ಚು ಬೆಳೆಸಲು ಹೋಗದಿರಿ- ಪರಿಸ್ಥಿತಿ ಸರಿಯಾಗಿಲ್ಲ…

ಹಿರಿಯರು ಒಂದು ಮಾತು ಹೇಳುತ್ತಾರೆ, ನಿಮ್ಮ ತಲೆಗೆ ನಿಮ್ಮದೇ ಕೈ ಎಂದು. ನಾವು ಬದುಕಲು ನಾವೇ ದುಡಿಯಬೇಕು. ಇದು ಸರಿ ಎಲ್ಲಾ ಕ್ಷೇತ್ರಗಳಲ್ಲೂ ಹೀಗೇನೇ. ಆದರೆ ಕೃಷಿ ಕ್ಷೇತ್ರ ಇದಕ್ಕಿಂತ ಭಿನ್ನ. ಇಲ್ಲಿ ನಾವು ಎಷ್ಟೂ ದುಡಿಯಬಹುದು. ಆದರೆ ಆ ದುಡಿಮೆಗೆ  ಪ್ರತಿಫಲ ಕೊಡುವವರು ಬೇರೆಯವರು. ಇದರಿಂದಾಗಿ ಕೃಷಿ ಕ್ಷೇತ್ರ ಇನ್ನು ಕೆಲವು ವರ್ಷ ಕಾಲ ಮಂಕಾಡೆ ಮಲಗುವ ಸಾಧ್ಯತೆ ಇದೆ. ಕೊರೋನಾ ಉಳಿದೆಲ್ಲಾ ಕ್ಷೇತ್ರಗಳನ್ನು ಬಾದಿಸಿದ್ದು, ಅತ್ಯಲ್ಪ. ಒಂದು ಉದ್ದಿಮೆ ಉತ್ಪಾದನೆ ಮಾಡದಿದ್ದರೆ, ಏನೂ ಆಗುವುದಿಲ್ಲ….

Read more
ಹೂ ಬೆಳೆದವರಿಗೂ ನಷ್ಟ ಮಾರುವವರಿಗೂ ನಷ್ಟ

ಕೃಷಿ ಕ್ಷೇತ್ರವನ್ನು ಬಗ್ಗು ಬಡಿಯಲಿದೆ ಕೊರೋನಾ ಮಹಾಮಾರಿ.

ಈಗಾಗಾಲೇ ಹಣ್ಣು ಹಂಪಲು, ಹೂವು, ತರಕಾರಿ ಬೆಳೆದ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ. ಸದ್ಯವೇ ಹಾಲಿಗೆ ಬೇಡಿಕೆ ಕಡಿಮೆಯಾದ ಕಾರಣ ಹಾಲಿನ ಬೆಲೆಯೂ ಇಳಿಮುಖವಾಗುವ ಸೂಚನೆ ಇದೆ. ನಷ್ಟ ಭರ್ತಿಗಾಗಿ ಮತ್ತೆ ಅದೇ ಬೆಳೆ ಬೆಳೆಯುವ ಬದಲು ಆಹಾರ ಬೆಳೆಗಳ ಕಡೆಗೆ ಗಮನಹರಿಸುವುದು ಉತ್ತಮ. ಪರಿಸ್ಥಿತಿ ಸುಧಾರಣೆಯಾದ ನಂತರ ಇಂತಹ ಬೆಳೆಗಳನ್ನು ಬೆಳೆಸುವುದು ಸೂಕ್ತ.  ಕೊರೋನಾ ಮಹಾಮಾರಿ ಪ್ರಾರಂಭವಾಗಿ 3 ತಿಂಗಳು ಕಳೆದಿದೆ ಅಷ್ಟೇ . ಈ ತನಕ ಕೆಲವು ಬೆಳೆಗಾರರಿಗೆ ನಷ್ಟವಾಯಿತು. ಅದು ಮುಗಿದ ಸುದ್ದಿಯಾಯಿತು….

Read more

ಬಿದಿರು ಬೆಳಸಬೇಕೆಂದಿರುವಿರೇ – ಇದನ್ನು ತಪ್ಪದೆ ಓದಿ.

ಬಿದಿರು ಬೆಳೆಸುವವರು  ಬೀಜದಿಂದ ಮಾಡಿದ ಸಸಿಯನ್ನು ಬೆಳೆಸಿದರೆ ಮಾತ್ರ ಅದಕ್ಕೆ ಪೂರ್ಣ ಆಯುಸ್ಸು. ಒಂದು ವೇಳೆ ಅದು ಬೆಳೆದ ಬಿದಿರಿನ ಕಳಲೆ, ಅಥವಾ ಅದರಿಂದ ಮಾಡಿದ ಸಸಿಯೇ ಆಗಿದ್ದರೆ ಬೇಗ ಅದರಲ್ಲಿ ಹೂ ಬಿಡಬಹುದು. ಬಿದಿರು ಬೆಳೆಸಿದರೆ ಅದರಿಂದ ತುಂಬಾ ಲಾಭವಿದೆ. ಒಂದೊಂದು ಬಿದಿರ ಹಿಂಡು ವರ್ಷಕ್ಕೆ  ಏನಿಲ್ಲವೆಂದರೂ ಕಳಲೆಯ ಮೂಲಕ  300-500 ರೂ. ತನಕ ಆದಾಯ ಕೊಡುತ್ತದೆ. ಅಲ್ಲದೆ ಬಿದಿರಿನ ಸೊಪ್ಪು ಗೊಬ್ಬರ. ಬಿದಿರನ್ನು ಬೇರೆ ಬೇರೆ ಬಳಕೆಗೆ ಉಪಯೋಗಿಸಬಹುದು. ಸಸಿಗೆ ಬೀಜವೇ ಸೂಕ್ತ: ಕಳೆದ…

Read more
ಸಮಗ್ರ ಕೃಷಿ ಯಲ್ಲಿ ಆಡು ಕುರಿ ಸಾಕಾಣಿಕೆ ಲಾಭದ್ದು- Goat and sheep farming is profitable in integrated farming

ಸಮಗ್ರ ಕೃಷಿ ಪದ್ದತಿಯಿಂದ ಕೃಷಿಕರ ಜೀವನ ಸುಬಧ್ರ.

ಕೃಷಿ ಮಾಡುವಾಗ ಲಾಭದ ಬೆಳೆಗಳ ಜೊತೆಗೆ ಕೃಷಿ ಆಧಾರಿತ ಉಪಕಸುಬುಗಳಾದ ಹೈನುಗಾರಿಕೆ, ಕೊಳಿ ಸಾಕಾಣಿಕೆ, ಆಡು ಮತ್ತು ಕುರಿ ಸಾಕಾಣಿಕೆ ಮುಂತಾದವುಗಳನ್ನು ಮಾಡಿಕೊಂಡರೆ ಅದು ಸುಸ್ಥಿರ.     ರೈತರು ತಮ್ಮಲ್ಲಿರುವ  ಸಂಪನ್ಮೂಲಗಳನ್ನು ಆಧರಿಸಿ  ಮಣ್ಣಿಗೆ ಹವಾಮಾನಕ್ಕೆ ಹೊಂದಿಕೊಳುವಂತೆ ಬೆಳೆ ಮತ್ತು ಕೃಷಿ ಪೂರಕ ಕಸುಬುಗಳನ್ನು ಅಳವಡಿಸಿಕೊಳ್ಳಬೇಕು. ಇಂಥ ಇಂತಹ ಕೃಷಿ ಪದ್ದತಿಗೆ ಮಿಶ್ರಕ್ರೃಷಿ ಅಥವಾ ಸಮಗ್ರಕ್ರೃಷಿ ಪದ್ದತಿ ಎಂದು ಕರೆಯುತ್ತಾರೆ. ಬೇಕಾಗುವ ಸಂಪನ್ಮೂಲಗಳು: ಈ ಕೃಷಿ ಪದ್ದತಿ ಅಳವಡಿಸಲು ರೈತನಿಗೆ  ಬೇಕಾಗುವುದು ಲಭ್ಯವಿರುವ  ನೀರು, ಜಮೀನು, ಕುಟುಂಬದ…

Read more

ಕೃಷಿಗೆ ಎಲ್ಲವೂ ಇದೆ- ಅದರೆ ನಮಗಲ್ಲ.– ಎನ್ ಸಿ ಪಠೇಲ್.

ಸದ್ಯದ ಪರಿಸ್ಥಿತಿಯಲ್ಲಿ ಕೃಷಿಕರು ಅವರ ತಿಳುವಳಿಕೆಯ ಜ್ಞಾನದಲ್ಲೇ ಕೃಷಿ ಮಾಡುತ್ತಿದ್ದಾರೆ. ಸರಕಾರ ಕೋಟ್ಯಾಂತರ ರೂಪಾಯಿಗಳನ್ನು ಕೃಷಿ ಸಂಶೋಧನೆ ಮತ್ತು ವಿಸ್ತರಣೆಗೆ ಕೊಡುತ್ತಿದೆ. ಇದು ಎಲ್ಲಿಗೆ ಹೋಗುತ್ತದೆಯೋ ಗೊತ್ತಾಗುವುದಿಲ್ಲ. ಶ್ರೀಯುತ ನಾಗದಾಸನ ಹಳ್ಳಿಯ ಪ್ರಗತಿಪರ ಕೃಷಿಕ ಎನ್ ಸಿ ಪಠೇಲ್ ರವರು ವಯಸ್ಸಿನಲ್ಲಿ ಹಿರಿಯರು. ಜೊತೆಗೆ ಬಹಳ ಹಿರಿಯ ಕೃಷಿಕರು. 1990 ಇಸವಿಯಲ್ಲಿ  ಬೆಂಗಳೂರಿನ ಜಿಂದಾಲ್ ಕಂಪೆನಿಯ  ಆಸ್ಪತ್ರೆಯೊಂದರ ಉಧ್ಗಾಟನೆಗೆ ಬಂದಿದ್ದ, ಆಗಿನ ಉಪ ಪ್ರಧಾನಿ  ಶ್ರೀ ದೇವೀ ಲಾಲ್ ಇವರ ಹೊಲಕ್ಕೆ ಭೇಟಿಕೊಟ್ಟಿದ್ದರು. ಅಂದು ಸ್ಥಳದಲ್ಲೇ  ನಾವೆಲ್ಲಾ…

Read more

ಮನೆಯಲ್ಲೇ ಹಲಸಿನ ಹಣ್ಣಿನ ವೈನ್ ತಯಾರಿಕೆ.

ಹಲವು ಬಗೆಯ ಹಣ್ಣುಗಳಿಂದ ವೈನ್ ತಯಾರಿಸಲಿಕ್ಕೆ ಆಗುತ್ತದೆ. ಹುಳಿ ಅಂಶ ಇರುವ ಹಣ್ಣುಗಳ ವೈನ್ ಮಾಡುವುದು ಸಾಮಾನ್ಯವಾದರೂ , ಬರೇ ಸಿಹಿ ಇರುವ ಹಣ್ಣುಗಳಿಂದಲೂ ವೈನ್ ಮಾಡಬಹುದು. ವೈನ್ ಎಂಬುದು ಆರೋಗ್ಯಕ್ಕೆ ಉತ್ತಮ ಪೇಯವಾಗಿದ್ದು, ಎಲ್ಲರೂ ಇದನ್ನು ಹಿತ ಮಿತವಾಗಿ ಸೇವಿಸಬಹುದು. ಹಲಸಿನ ಹಣ್ಣಿನ ವೈನ್ ವಿಶಿಷ್ಟ ಸುವಾಸನೆಯೊಂದಿಗೆ ಸಿಹಿ ವೈನ್ ಆಗಿರುತ್ತದೆ. ಹಲಸಿನಲ್ಲಿ ಬಕ್ಕೆ ಮತ್ತು ಬೆಳುವ ಎಂಬ ಎರಡು ವಿಧ. ಹಣ್ಣಿಗೆ ಬಕ್ಕೆ ಹಲಸು ಸೂಕ್ತ. ಬೆಳುವೆ ಅಥವಾ ಅಂಬಲಿ ಹಣ್ಣು ರುಚಿಯಲ್ಲಿ, ಎಲ್ಲದರಲ್ಲೂ…

Read more

ಭವಿಷ್ಯದಲ್ಲಿ ಕೃಷಿಗೆ ಇದು ಅತೀ ದೊಡ್ದ ಕಂಟಕ.

ಕೇರಳದಲ್ಲಿ ಆನೆಯೊಂದು ರೈತನ ಬೆಳೆ ಹಾಳು ಮಾಡಿದ್ದಕ್ಕೆ  ಕೊಲ್ಲಲ್ಪಟ್ಟರೆ, ದೇಶದಾದ್ಯಂತ ಸದ್ದು ಗದ್ದಲವಿಲ್ಲದೆ ಅದೆಷ್ಟೋ  ಕಾಡು ಪ್ರಾಣಿಗಳು ಕೊಲ್ಲಲ್ಪಡುತ್ತಿವೆ.  ಅರಿತ್ರಾ ಕ್ಷೇತ್ರಿ  Aritra Kshettri ಎಂಬ ಅಧ್ಯಯನಕಾರ Ministry of Science and Technology’s Innovation in Science Pursuit for Inspired Research programme. ಹೇಳುವಂತೆ 80% ಕಾಡುಪ್ರಾಣಿಗಳು ಕಾಡಿನಿಂದ ನಾಡಿಗೆ ಬಂದಿವೆಯಂತೆ. ಇಲ್ಲಿ ರೈತನ ಬೆಳೆ ಮುಖ್ಯವೋ ಕಾಡು ಪ್ರಾಣಿಗಳು ಮುಖ್ಯವೋ ಎಂಬುದು ಇನ್ನೂ ಪ್ರಶ್ನೆಯಾಗಿ ಉಳಿದಿದೆ ಎನ್ನುತ್ತಾರೆ. ಬೆಳೆ ರಕ್ಷಣೆ ಕಷ್ಟವಾಗುತ್ತಿದೆ: ಮಹಾರಾಷ್ಟ್ರದ…

Read more

ರೈತರೇ ಭೂಮಿ ಮಾರಿದರೆ ಹಳ್ಳಕ್ಕೆ ಬಿದ್ದೀರಿ- ಜೋಕೆ.

ಕೃಷಿ  ಭೂಮಿಗೆ  ಬಂಗಾರದ ಬೆಲೆ ಬರಬಹುದು. ಅಥವಾ ವಜ್ರದ ಬೆಲೆ ಬರಬಹುದು. ಆದರೆ ಅದು ಮಾರಾಟದ ಸ್ವತ್ತು ಅಲ್ಲ. ಕೊಳ್ಳುವ ಜನ ನಿಮ್ಮನ್ನು ಹಳ್ಳಕೆ ತಳ್ಳಿ, ಅವರು ದೋಣಿಯಲ್ಲಿ ಪಯಣಿಸುತ್ತಾರೆ. ಮನುಷ್ಯನಿಗೆ ಶನಿ ಅಂಟುವ ಮೊದಲ ಚಿನ್ಹೆ ನಮ್ಮ ಅನ್ನದ ಮೂಲವನ್ನು  ಪರರಿಗೆ ಮಾರಾಟ ಮಾಡುವುದಕ್ಕೆ ಮನಸ್ಸು ಒಪ್ಪುವುದು.  ಭೂಮಿ ಮಾರಾಟದ ಸ್ವತ್ತು ಅಲ್ಲ: ಭೂಮಿ ಒಂದು ಸ್ತಿರ ಆಸ್ತಿಯೇ ಹೊರತು ಚಲಾವಣೆಯ ಆಸ್ತಿ ಅಲ್ಲ. ಆಸ್ತಿಗಳಲ್ಲಿ ನಗದೀಕರಣ ಮಾಡಬಹುದಾದ  ಅಸ್ತಿ ಮತ್ತು ನಗದೀಕರಣ ಮಾಡಲಾಗದ ಆಸ್ತಿ…

Read more

ರಾಜ್ಯದ ಹೊಸ ಭೂ ಸುಧಾರಣಾ ಕಾಯಿದೆ ಟುಸ್…

ಹಸುರು ಶಾಲು ಹೊದ್ದು, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ, ನಮ್ಮೆಲ್ಲರ  ಮುಖ್ಯಮಂತ್ರಿಗಳು   ಮಾರ್ಚ್ ತಿಂಗಳಲ್ಲಿ  ವಿದೇಶಕ್ಕೆ ಹೋಗಿ ಬಂದು  ರೈತರಿಗೆ ಒಂದು ಶಾಕ್ನ ಸೂಚನೆ  ಕೊಟ್ಟಿದ್ದರು. ಆ ಶಾಕ್ ಈಗ ರಾಜ್ಯದ  ರೈತಾಪಿವರ್ಗದ  ಮೇಲೆಲ್ಲಾ ಹರಿಬಿಡಲಾಗಿದೆ. ಇದು ದುಡ್ಡಿಗಾಗಿ ಅಷ್ಟೇ: ಅಂದು  ( ಮಾರ್ಚ್ 15/2020 )  ಕರ್ನಾಟಕದ  ಮುಖ್ಯಮಂತ್ರಿಗಳು  ಕೃಷಿಕರಲ್ಲದವರು  ಮತ್ತು ಅಧಿಕ ಆದಾಯದ ಮೂಲ ಹೊಂದಿದವರು ಕೃಷಿ ಭೂಮಿ ಕೊಳ್ಳಲು ಅನುಕೂಲವಾಗುವ  ಶಾಸನ ತಿದುಪಡಿಯ ಪ್ರಸ್ತಾಪ ಮಾಡಿದ್ದರು. ಅದಕ್ಕೆ ದೇವರ ದಯೆ ಇರಲಿಲ್ಲವೆಂದು  ಕಾಣಿಸುತ್ತದೆ….

Read more
error: Content is protected !!