ಅಡಿಕೆ ಮಾರುಕಟ್ಟೆ- ಕೆಂಪಡಿಕೆ ಹಿಂದೆ- ಚಾಲಿ ಮುಂದೆ.

 ಅಡಿಕೆ ಮಾರುಕಟ್ಟೆ- ಕೆಂಪಡಿಕೆ ಹಿಂದೆ- ಚಾಲಿ ಮುಂದೆ.   

ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ದಿನಾಂಕ 11-08-2023ರ ಶುಕ್ರವಾರ ಒಟ್ಟು ಸುಮಾರು 425 ಟನ್  ಅಡಿಕೆ ವ್ಯವಹಾರ ನಡೆದಿದೆ. ಕಳೆದ ವಾರ ಯಾವುದೋ  ಸುದ್ದಿಯ ಕಾರಣಕ್ಕೆ ಕೆಂಪಡಿಕೆ ಧಾರಣೆಯಲ್ಲಿ  ಇಳಿಕೆ ಕಂಡು ಬಂತು. ಚಾಲಿ ಅಡಿಕೆಯ ಧಾರಣೆಯಲ್ಲಿ ಏರಿಕೆ ಆಗುತ್ತಾ ಇದೆ. ಆಗಸ್ಟ್  ತಿಂಗಳು ಸಪ್ಟೆಂಬರ್ ತಿಂಗಳಲ್ಲಿ ಇನ್ನೂ ಸ್ವಲ್ಪ ಏರಿಕೆ ಆಗಬಹುದು ಎಂಬ ಆಶಾಭಾವನೆ  ಮಾರಾಟಗಾರರ ಮಾಹಿತಿಯಿಂದ ಕೇಳಿ ಬರುತ್ತಿದೆ. ಕೆಂಪಡಿಕೆ ಧಾರಣೆ ಇಳಿಕೆ ತಾತ್ಕಾಲಿಕವಾಗಿದ್ದು, ತಿಂಗಳಾಂತ್ಯಕ್ಕೆ  ಇದೆ. ಕ್ವಿಂಟಾಲಿಗೆ ರೂ.1000 ದಷ್ಟಾದರೂ ಏರಬಹುದು ಎನ್ನುತ್ತಾರೆ. ಕಳೆದ…

Read more
ಸಂಚಲನದ ಸುಳಿಯಲ್ಲಿ ಅಡಿಕೆ,ಕರಿಮೆಣಸು ಮಾರುಕಟ್ಟೆ

ಏರಿಳಿತದ ಸುಳಿಯಲ್ಲಿ ಅಡಿಕೆ,ಕರಿಮೆಣಸು ಮಾರುಕಟ್ಟೆ.ಮುಂದೆ ಯಾವುದರ ಸರದಿ?.

ಯಾರೂ ಕಲ್ಪಿಸಿಯೂ ಇರದಂತಹ ಸಂಚಲನವೊಂದು ಕರಿಮೆಣಸು ಮಾರುಕಟ್ಟೆಯಲ್ಲಿ ಜುಲೈ 2023 ರಲಿ ಘಟಿಸಿದೆ. ಹಾಗೆಯೇ ಅಡಿಕೆ ಮಾರುಕಟ್ಟೆಯಲ್ಲೂ ಒಂದು ಸಂಚಲನ ಉಂಟಾಗಿದೆ. ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಏನಾಗಬಹುದು? ಕರಿಮೆಣಸಿನ ಧಾರಣೆ ಏನಾಗಬಹುದು? ಇತರ ಉತ್ಪನ್ನಗಳಾದ ಕೊಬ್ಬರಿ, ಶುಂಠಿ, ಹಾಗೆಯೇ ರಬ್ಬರ್  ಧಾರಣೆ ಏನಾಗಬಹುದು ಎಂಬ ಕುತೂಹಲವೇ? ಕೆಲವು ಮಾರುಕಟ್ಟೆ  ತಿಳುವಳಿಕೆ ಉಳ್ಳ ಜನರ ಹಾಗು ಪರಿಸ್ಥಿತಿಗಳ ಆಧಾರದ ಮೇಲೆ ಒಂದು ಊಹನೆ ಹೀಗಿದೆ. 2023 ರ ಜುಲೈ ತಿಂಗಳಲ್ಲಿ ಹಠಾತ್ತಾಗಿ ಕರಿಮೆಣಸು, ಮಾರುಕಟ್ಟೆಯಲ್ಲಿ ಬೃಹತ್ ಸಂಚಲನ…

Read more
ಕರಿಮೆಣಸಿನ ಬೆಲೆ ಭಾರೀ ಏರಿಕೆ ಸಂಭವ

ಕರಿಮೆಣಸಿನ ಬೆಲೆ ಭಾರೀ ಏರಿಕೆ ಸಂಭವ –ಬೆಳೆಗಾರರು ಎಚ್ಚರಿಕೆಯಿಂದಿರಿ.

ಕಳೆದ ವಾರ 50000 ದ ಆಸುಪಾಸಿನಲ್ಲಿದ್ದ  ಕರಿಮೆಣಸಿನ ಬೆಲೆ ದಿಡೀರ್ ಆಗಿ ಒಂದೇ ವಾರದಲ್ಲಿ 56,000 ಕ್ಕೆ ಏರಿಕೆಯಾಗಿದೆ. ಕರಿಮೆಣಸು ಇದೆಯೇ ಎಂದು ಕೇಳುವ ಸ್ಥಿತಿ ಉಂಟಾಗಿದೆ. ಖಾಸಗಿ ಮಾರುಕಟ್ಟೆಯಲ್ಲಿ ದರ 60,000 ತನಕ ಏರಿದೆ. ಇನ್ನೂ ಏರಿಕೆ ಆಗಬಹುದು ಎಂಬ ಸುದ್ದಿ ಕೇಳಿಬರುತ್ತಿದೆ. ಮೆಣಸು ಬೆಳೆಯುವ ದೇಶಗಳಲ್ಲಿ ಉತ್ಪನ್ನದ ಕೊರೆತೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕಳೆದ 5-6 ವರ್ಷಗಳಿಂದ ನೆಲಕಚ್ಚಿದ ಕರಿಮೆಣಸಿನ  ಬೆಲೆ ಕಳೆದ ವರ್ಷ 50,000 ದ ಆಸು ಪಾಸಿಗೆ ಬಂದಿತ್ತು.  ಒಮ್ಮೆ 55,000…

Read more
ಅಡಿಕೆ ಧಾರಣೆ ಸ್ವಲ್ಪ ಅಸ್ಥಿರವಾಗಿದೆ- ಬೆಳೆಗಾರರು ದೊಡ್ಡ ನಿರೀಕ್ಷೆ ಹೊಂದಬೇಕಾಗಿಲ್ಲ.

ಅಡಿಕೆ ಧಾರಣೆ ಸ್ವಲ್ಪ ಅಸ್ಥಿರವಾಗಿದೆ- ಬೆಳೆಗಾರರು ದೊಡ್ಡ ನಿರೀಕ್ಷೆ ಹೊಂದಬೇಕಾಗಿಲ್ಲ.

ಜುಲೈ ತಿಂಗಳ ಪ್ರಾರಂಭದಲ್ಲಿ ಕೆಂಪಡಿಕೆ ಧಾರಣೆ ಏರಿಕೆ ಪ್ರಾರಂಭವಾಗಿ ಬೆಳೆಗಾರರು  ಹೆಚ್ಚಿನ ನಿರೀಕ್ಷೆ ಹೊಂದುವಂತಾಯಿತು. ಇನ್ನೂ ಏರಬಹುದು ಸ್ವಲ್ಪ ಕಾಯೋಣ ಎಂದು ಮಾರಾಟಕ್ಕೆ ಹಿಂದೇಟು ಹಾಕುವ ಸ್ಥಿತಿ. ಸಹಜವಾಗಿ ಎಲ್ಲರೂ ಹೀಗೇ ಮಾಡುವುದು. ಆದರೆ ದರ ಏರುತ್ತಾ  ಏರುತ್ತಾ ಮುಂದೆ ಹೋಗುವುದಿಲ್ಲ. ಕೆಲ ಸಮಯದ ನಂತರ ಇಳಿಕೆ ಆಗಿಯೇ ಆಗುತ್ತದೆ. ಈಗ ಸ್ವಲ್ಪ ಇಳಿಕೆ ಸಾಧ್ಯತೆ ಕಾಣಿಸುತ್ತಿದೆ. ದರ ಏರಿಕೆಯಾಗುವಾಗ ಮಾಲು ಕೊಡಲು ಯಾವ ರೈತನಿಗೂ  ಮನಸ್ಸು ಬರುವುದಿಲ್ಲ. ಕೊನೆಗೆ ಇಳಿಕೆಯಾಗುವಾಗ ಮಾರಾಟ ಮಾಡುವುದು ಅನಿವಾರ್ಯವಾಗುತ್ತದೆ. ಇದುವೇ…

Read more
ಚೇತರಿಕೆಯತ್ತ ಕೆಂಪಡಿಕೆ ಮಾರುಕಟ್ಟೆ – ಚಾಲಿಯನ್ನೂ ಮೇಲೆತ್ತಬಹುದು!

ಚೇತರಿಕೆಯತ್ತ ಕೆಂಪಡಿಕೆ ಮಾರುಕಟ್ಟೆ – ಚಾಲಿಯೂ ಮೇಲೆ.

ಬಹಳ ಸಮಯದ ತನಕ ಅಲ್ಲಾಡದೆ ಅಸ್ಥಿರವಾಗಿದ್ದ ಕೆಂಪಡಿಕೆ ಧಾರಣೆ ಜೂನ್ ಎರಡನೇ ವಾರ ಮತ್ತೆ ಚೇತರಿಕೆ ಕಾಣಲಾರಂಭಿಸಿದೆ. ಪ್ರತೀ ವರ್ಷದ ಮಾರುಕಟ್ಟೆ ಲಯವನ್ನು ಗಮನಿಸಿದರೆ ಸಾಮಾನ್ಯವಾಗಿ ಜೂನ್ ತಿಂಗಳಿಗೆ ಏರಿಕೆ ಪ್ರಾರಂಭವಾಗುತ್ತದೆ. ನಿಧಾನವಾಗಿ ಏರುತ್ತಾ ಆಗಸ್ಟ್ ಸಪ್ಟೆಂಬರ್ ತಿಂಗಳಿಗೆ ಮತ್ತೆ ಹಿಮ್ಮುಖವಾಗುತ್ತದೆ. ಈ ವರ್ಷವೂ ಅದೇ ಆಗಿದೆ. ಕೆಂಪಡಿಕೆ ದರ ಏರಿದ ಪರಿಣಾಮ ಚಾಲಿ ದರ ಚೇತರಿಕೆ ಆಗಲಾರಂಭಿಸಿದೆ. ಕರಿಕೋಕಾ, ಪಟೋರಾ, ಉಳ್ಳಿಗಡ್ಡೆ ಸಹ ಏರಿಕೆ ಕಂಡಿದೆ. ಇಂದು ಖಾಸಗಿ ವ್ಯಾಪಾರಿಗಳು ಹೊಸ ಅಡಿಕೆ ರೂ.405-410 ಕ್ಕೆ…

Read more
ಮೇ -23 ರ ನಂತರ ಮಳೆ ಪ್ರಾರಂಭವಾಗಲಿದೆ

ಮೇ -23 ರ ನಂತರ ಮಳೆ ಪ್ರಾರಂಭವಾಗಲಿದೆ.

ಈ ವರ್ಷದ ಬರಗಾಲ ಪರಿಸ್ಥಿತಿ ಹೇಳತೀರದು. ಮೇ ತಿಂಗಳು ಬಂದರೂ ಬೇಸಿಗೆ ಮಳೆ (Summer rain)ಆಗಿಲ್ಲ. ಅಲ್ಲಲ್ಲಿ ಅಲ್ಪ ಸ್ವಲ್ಪ ಮಳೆಯಾಗಿದ್ದರೂ ಬಹಳಷ್ಟು ಕಡೆ ತುಂತುರು ಮಳೆ ಮಾತ್ರ. ಕರಾವಳಿ, ಮಲೆನಾಡು ಬಿಸಿಲ ಬೇಗೆಯಲ್ಲಿ ತತ್ತರಿಸಿ ಹೋಗಿದೆ. ಜನ ಇಂದು ಮಳೆ ಬರಬಹುದು, ನಾಳೆ ಬರಬಹುದು ಎಂದು ಕಾಯುತ್ತಿದ್ದಾರೆ. ಮೋಡಗಳು ಬರುತ್ತವೆ, ಹಾಗೆಯೇ ಮಾಯವಾಗುತ್ತವೆ. ಹಾಗಾದರೆ ಮಳೆ ಯಾವಾಗ ಪ್ರಾರಂಭವಾಗಬಹುದು? ನವೆಂಬರ್ ತನಕ ಒಂದೊಂದು ಮಳೆಯಾಗುತ್ತಿತ್ತು. ಆ ನಂತರ ಹೋದದ್ದು ಮತ್ತೆ ಬರಲೇ ಇಲ್ಲ. ಎಲ್ಲೆಂದರಲ್ಲಿ ನೀರಿನ…

Read more
ಅಡಿಕೆ ಧಾರಣೆ ಮುಂದೆ ಏನಾಬಹುದು? ಏರಿಕೆ ಸಾಧ್ಯತೆ ಎಷ್ಟು?

ಅಡಿಕೆ ಧಾರಣೆ ಮುಂದೆ ಏನಾಬಹುದು? ಏರಿಕೆ ಸಾಧ್ಯತೆ ಎಷ್ಟು?

ನಮ್ಮೆಲ್ಲರ ಚಿತ್ತ ಈಗ ಅಡಿಕೆ ಧಾರಣೆಯ ಏರಿಳಿತದ ಮೇಲೆ. ಈ ವರ್ಷದ ಹವಾಮಾನ ಮತ್ತು ಮುಂದಿನ ವರ್ಷದ ರಾಜಕೀಯ ವಿಧ್ಯಮಾನಗಳ ಕೃಪೆಯಿಂದ ಅಡಿಕೆಗೆ ಬೆಲೆ ಏರುವ ಸೂಚನೆಯೇ ಹೆಚ್ಚಾಗಿ ಕಾಣಿಸುತ್ತಿದೆ. ಈಗಾಗಲೇ ರಾಜ್ಯ ಚುನಾವಣೆಯ ಕಾವು ಮುಗಿದಿದೆ. ರಾಜ್ಯದಲ್ಲಿ ಅಧಿಕಾರ ನಡೆಸುವ ಪಕ್ಷ ಬದಲಾಗಿದೆ. ಯಾವುದೇ ಪಕ್ಷವಾದರೂ ರೈತರಿಗೆ ತೊಂದರೆ ಮಾಡಲಾರರು. ಹಣ, ಸ್ವತ್ತು ಯಾವುದೇ ವಸ್ತು ಸಾಗಾಣಿಕೆಗೆ ಇರುವ ಅಡ್ಡಿ ಆತಂಕಗಳು ದೂರವಾಗಿವೆ. ಇದೇ ಕಾರಣದಿಂದ ಧಾರಣೆ ಏರಲು ಪ್ರಾರಂಭವಾಗಿದೆ.ಅಡಿಕೆ ಧಾರಣೆ ಏರಿಕೆಯಾಗಬೇಕೇ? ಹಾಗಾದರೆ ಅದಕ್ಕೆ…

Read more
ಮೊದಲ ಮಳೆಯ ಈ ಕೆನ್ನೀರು ಅಸಾಧಾರಣ ಶಕ್ತಿ ಹೊಂದಿದೆ

ಮೊದಲ ಮಳೆಯ ನೀರಿಗಿದೆ ಅಪರಿಮಿತ ಪೋಷಕ ಶಕ್ತಿ.

ಮೊದಲ ಮಳೆ ಬಂದರೆ ಸಾಕು, ಎಲ್ಲಾ ತರಹದ ಬೀಜಗಳು ಹುಟ್ಟುತ್ತವೆ. ಹುಲ್ಲು ಸಸ್ಯಗಳು ಒಂದೇ ಸಮನೆ ಬೆಳೆಯುತ್ತವೆ. ನೀರಾವರಿಯಲ್ಲಿ ದೊರೆಯದ ಫಲಿತಾಂಶ ಮೊದಲ ಮಳೆ ಸಿಂಚನದಲ್ಲಿ  ದೊರೆಯುತ್ತದೆ. ಆದ ಕಾರಣ  ಮೊದಲ ಮಳೆಯ ನೀರಿನಲ್ಲಿ ಅಗಾಧ ಶಕ್ತಿ ಇದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕು. ಮೊದಲ ಮಳೆ ಬಂದ ತಕ್ಷಣ ಸಸ್ಯಗಳಿಗೆ ಬೇಸಿಗೆಯ ಬೇಗೆಗೆ ಸಹಜವಾಗಿ ಬರುವ ಹೇನು ತರಹದ ಕಿಟಗಳು ತಕ್ಷಣ ಕಣ್ಮರೆಯಾಗುತ್ತದೆ. ಮಣ್ಣಿನಲಿ ಒಂದು ವಾಸನೆ ಉಂಟಾಗುತ್ತದೆ. ಇದು ಮಣ್ಣಿನಲ್ಲಿರುವ ಜೀವಿಯಾದ ಆಕ್ಟಿನೋಮೈಸಿಟ್ಸ್  ಗಳು…

Read more
ಬೆದರು ಬೊಂಬೆಯ ಮೂಲಕ ಬೆಳೆ ರಕ್ಷಣೆ

ಬೆದರು ಬೊಂಬೆ – ದೃಷ್ಟಿ ಬೊಂಬೆಗಳಿಂದ ಕೃಷಿಗೆ ಲಾಭ ಏನು?

ವಿಜ್ಜಾನ ಕೆಲವೊಂದು ಆಚರಣೆಗಳಿಗೆ ಬೆಲೆ ಕೊಡುವುದಿಲ್ಲ. ವೈದ್ಯಕೀಯದಲ್ಲಿ ಅಗೋಚರ ಶಕ್ತಿಗೆ ಬೆಲೆ ಇಲ್ಲ. ಆದರೆ, ಶಸ್ತ್ರ  ಚಿಕಿತ್ಸೆ ಮಾಡುವ ವೈದ್ಯರು ಕೊನೆಗೆ ಎಲ್ಲಾ ಭಾರವನ್ನೂ ದೇವರ ಮೇಲೆಯೇ  ಹಾಕಿಕೊಳ್ಳಿ ಎಂದು ನಮ್ಮನ್ನು ಸಂತೈಸುತ್ತಾರೆ. ಹೀಗಿರುವಾಗ  ನಂಬುವಂತದ್ದಲ್ಲ ಎಂದು ಯವುದನ್ನೂ ಬದಿಗಿಡುವಂತಿಲ್ಲ.  ಫಲ ಕೊಡಲಿ, ಕೊಡದಿರಲಿ  ನಂಬಿಕೆ ಇಟ್ಟರೆ ನಷ್ಟ ಏನೂ ಇಲ್ಲ. ಸಾಂಪ್ರದಾಯಿಕ ಬೆಳೆ ರಕ್ಷಣೆ: ರೈತರು ತಾವು ಬೆಳೆಯುವ ಬೆಳೆಯನ್ನು ರಕ್ಷಿಸಿಕೊಳ್ಳಲು ಕೆಲವು ಸಾಂಪ್ರದಾಯಿಕ ವಿಧಾನಗಳನ್ನು ಬಹಳ  ಹಿಂದಿನಿಂದಲೂ  ಅನುಸರಿಸುತ್ತಾ ಬಂದಿದ್ದಾರೆ. ಇದನ್ನು ಜನಪದ  ಆಚರಣೆ ಎಂದು…

Read more
error: Content is protected !!