ಸೂರ್ಯನ ಬೆಳಕು, ಸಾತ್ವಿಕ ಆಹಾರ –ಎಲುಬು ಮತ್ತು ನರಗಳ ಸಮಸ್ಯೆಯನ್ನು ದೂರ ಮಾಡುತ್ತವೆ.
ಸೂರ್ಯನ ಬೆಳಕು ಇದರಲ್ಲಿ ಇರುವ ಶಕ್ತಿ ಇನ್ಯಾವುದರಲ್ಲೂ ಇಲ್ಲ. ಹಳ್ಳಿಯಲ್ಲಿ ಕೆಲವು ಕೆಲಸಗಾರರು ಕೂಲಿಗೆ ಹೋಗುವ ಮುಂಚೆ ಒಂದು ಮೋರಿಯ ದಂಡೆಯಲ್ಲಿ ಕುಳಿತು ಕತ್ತಿ ಮಸೆಯುತ್ತಾ ಸ್ವಲ್ಪ ಹೊತ್ತು ತಮ್ಮ ದೇಹದ ಒಂದು ಮಗ್ಗುಲು ಮತ್ತೆ ಸ್ವಲ್ಪ ಮತ್ತೊಂದು ಮಗ್ಗುಲನ್ನೂ ಬೆಳಕಿಗೆ ಒಡ್ಡುವ ದೃಷ್ಯವನ್ನು ಕಂಡಿರಬಹುದು ( ಈಗ ಅಪರೂಪ) ಅವರ ದೈಹಿಕ ಶಕ್ತಿಯ ಗುಟ್ಟು ಇದೇ ಆಗಿರುತ್ತದೆ. ಒಂದು ಕಾಲದಲ್ಲಿ ರೈತರ ದೇಹ ಶಕ್ತಿಯ, ಸಹನೆಯ ಮತ್ತು ದೀರ್ಘಾಯುಷ್ಯದ ಗುಟ್ಟು ಇದೇ ಆಗಿತ್ತು. ಅವರು ಬೆಳಗ್ಗೆಯಿಂದ…
