ಅಡಿಕೆಯ ಹಳದಿ ಎಲೆ ಚುಕ್ಕೆ (Leaf Spot) ರೋಗದ ಸರಿಯಾದ ನಿರ್ವಹಣೆ.
ಅಡಿಕೆಗೆ ಹಳದಿ ಎಲೆ ಚುಕ್ಕೆ, ಲೀಫ್ ಸ್ಪಾಟ್ (Leaf Spot) ರೈತರಿಗೆ ಭಾರೀ ತಲೆನೋವಾಗಿ ಪರಿಣಮಿಸಿದ್ದು ಬೆಳೆಗಾರರು ಹೇಗಾದರೂ ಈ ಮಾರಿ ರೋಗವನ್ನು ನಿಯಂತ್ರಿಸಬೇಕೆಂಬ ಹಠದಲ್ಲಿದ್ದಾರೆ. ಅಡಿಕೆ ಮರಗಳಿಗೆ ಎಲೆ ಪ್ರಮುಖ ಅಂಗವಾಗಿದ್ದು, ಇಲ್ಲಿಗೆ ಬಂದ ರೋಗ ಇಳುವರಿಯ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡುವ ಕಾರಣ ಇದು ರೈತರ ಬದುಕಿನ ಪ್ರಶ್ಣೆಯಾಗಿದೆ. ಹಳದಿ ಎಲೆ ಕಲೆ ರೋಗ, Colletotrichum ಶಿಲೀಂಧ್ರದಿಂದ ಉಂಟಾಗುತ್ತದೆ. ಈ ರೋಗವು ಹೆಚ್ಚಾಗಿ ತೇವಯುಕ್ತ ಮತ್ತು ಮಳೆಗಾಲದ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಸಣ್ಣ…
