ಈಗ ಚಾಲಿ – ಮುಂದೆ ಕೆಂಪು – ಅಡಿಕೆ ಮಾರುಕಟ್ಟೆ ಸ್ಥಿತಿ. 26/11/2021 ಶುಕ್ರವಾರದ ಧಾರಣೆ.
ಚಾಲಿ ಅಡಿಕೆಗೆ ಭಾರೀ ಬೇಡಿಕೆ ಉಂಟಾಗಿದ್ದು, ಇದರ ಮುನ್ಸೂಚನೆ ಶಿರಸಿ, ಸಿದ್ದಾಪುರ, ಸಾಗರ ಮಾರುಕಟ್ಟೆಯ ಮೂಲಕ ಕಾಣಿಸುತ್ತಿದೆ. ಇಲ್ಲಿನ ಅಡಿಕೆಗೆ ದರ ಹೆಚ್ಚಳವಾದರೆ ಸಧ್ಯವೇ ಉಳಿದೆದೆ ದರ ಏರುವುದು ಹಿಂದಿನಿಂದಲೂ ಬಂದ ವಾಡಿಕೆ. ಇಂದು ಶಿವಮೊಗ್ಗ, ಉತ್ತರಕನ್ನಡದ ಮಾರುಕಟ್ಟೆಯಲ್ಲಿ ಚಾಲಿ ಕ್ವಿಂಟಾಲಿಗೆ 51000 ರೂ.ತಲುಪಿದೆ. ಕರಾವಳಿಯಲ್ಲೂ ಸಧ್ಯವೇ 53,000 ದಾಟುವ ಮುನ್ಸೂಚನೆ ಕಾಣಿಸುತ್ತಿದೆ. ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ಕೊರತೆ ಇದೆ. ಈ ವರ್ಷ ದರ ಏರಿಕೆಯಲ್ಲೇ ಇದ್ದ ಕಾರಣ ಹಾಗೆಯೇ ಅನಿಶ್ಚಿತತೆ ವಾತಾವರಣ ಇದ್ದ ಕಾರಣ ಬಹುತೇಕ…
