ಅಣಬೆ ರೋಗದ ಅಂತಿಮ ಚಿನ್ಹೆ

ಅಡಿಕೆ ಮರದ ಅಣಬೆ ರೋಗ- ನಿಯಂತ್ರಣ.

ಇತ್ತೀಚೆಗೆ ಅಡಿಕೆ ಮರಗಳು ಅಣಬೆ ರೋಗ ಎಂಬ ಖಾಯಿಲೆ ಯಿಂದಾಗಿ ಕಾಂಡದಲ್ಲಿ ರಸ ಸೋರಲು ಪ್ರಾರಂಭವಾಗಿ ನಿಧಾನವಾಗಿ ಮರದ ಗರಿ ಹಳದಿಯಾಗುತ್ತಾ ಕಾಂಡದ ಬುಡ ಭಾಗದಲ್ಲಿ ಅಣಬೆ ಬೆಳೆದು ಮರ ಸಾಯುತ್ತಿದೆ. ಇದು ಒಂದು ಶಿಲೀಂದ್ರ ಸೋಂಕು ಆಗಿದ್ದು, ಇದು ಹರಡುತ್ತದೆ. ಇಂತಹ ಚಿನ್ಹೆ ಕಂಡು ಬಂದಾಗ ಮೊದಲ ಹಂತದಲ್ಲಿ ಉಪಚಾರ  ಮಾಡಬೇಕು. ತಡವಾದರೆ ಪ್ರಯೋಜನ ಇಲ್ಲ. ಯಾವುದೇ ಒಂದು ಮರದಲ್ಲಿ ಅಣಬೆ ಬೆಳೆಯಬೇಕಾದರೆ ಅದರ ಅಂಗಾಂಶ ಸತ್ತಿರಬೇಕು. ಅಣಬೆ ಬೆಳೆಯುವುದು ಸೆಕೆಂಡರಿ( ದ್ವಿತೀಯ ಹಂತದ ಹಾನಿ)….

Read more
ಸಿಂಗಾರ ತಿನ್ನುವ ಹುಳ ಮುಟ್ಟಿದ ಹೂ ಗೊಂಚಲು

ಅಡಿಕೆ – ಹೂ ಗೊಂಚಲು ಒಣಗಲು ಯಾವ ಕೀಟ ಕಾರಣ ಮತ್ತು ಪರಿಹಾರ ಏನು?.

ಶುಷ್ಕ ವಾತಾವರಣದ ವ್ಯತ್ಯಾಸವೋ ಏನೋ , ಈಗೀಗ ಅಡಿಕೆ -ಹೂ ಗೊಂಚಲು ಬಹಳ ಪ್ರಮಾಣದಲ್ಲಿ  ಒಣಗಿ ಹಾಳಾಗುತ್ತಿದೆ. ಒಂದು ಕಾಲದಲ್ಲಿ  ಮೈನರ್ ಪೆಸ್ಟ್ ಆಗಿದ್ದ ಈ ಕೀಟ, (ಹುಳ) ಈಗ ಮೇಜರ್ ಪೆಸ್ಟ್ ಆಗುತ್ತಿದೆ. ಇತ್ತೀಚೆಗೆ ಎಲ್ಲಾ ಅಡಿಕೆ ಬೆಳೆಗಾರರಲ್ಲಿಯೂ ಈ ಸಮಸ್ಯೆ ಹೆಚ್ಚಾಗುತ್ತಿದ್ದು, ಅಪಾರ ಬೆಳೆ ನಷ್ಟ ಉಂಟಾಗುತ್ತಿದೆ. ಮಳೆಗಾಲ ಕಳೆದ ತಕ್ಷಣ ಅಡಿಕೆ ಮರದಲ್ಲಿ ಗೊಂಚಲು ಬಿಡಲು ಪ್ರಾರಂಭವಾಗುತ್ತದೆ. ಹೊಸತಾಗಿ ಬರುವ ಬಹುತೇಕ ಹೂ ಗೊಂಚಲುಗಳಲ್ಲಿ ಈ ಹುಳದ  ಬಾಧೆ ಇದೆ. ಮಳೆಗಾಲದಲ್ಲಿ ಸಂಖ್ಯಾಭಿವೃದ್ದಿಯಾದ ಕೀಟ ಅಡಿಕೆಯಲ್ಲಿ…

Read more
ಭವಿಷ್ಯದ ಅಡಿಕೆ ತೋಟ

ಅಡಿಕೆ ಬೆಳೆಯ ಭವಿಷ್ಯದ ಸ್ಥಿತಿ ಏನಾಗಬಹುದು?

ಅಡಿಕೆ ಬೆಳೆ ವಿಸ್ತರಣೆ ಆಗುತ್ತಿರುವುದನ್ನು ನೋಡಿದರೆ ಮುಂದೊಂದು ದಿನ ಅಡಿಕೆಗೆ ಬೆಲೆ ಇಲ್ಲದೆ ರೈತ ಕಂಗಾಲಾಗಬೇಕಾಗಬಹುದು ಎಂಬ ಆತಂಕ ಎಲ್ಲರಲ್ಲೂ ಇದೆ. ಆದರೆ ಅಂತದ್ದೇನೂ ಆಗುವುದಿಲ್ಲ.ಅಡಿಕೆ ಬೆಳೆ ಪ್ರದೇಶ ಹೆಚ್ಚಾದರೂ ಅದಕ್ಕನುಗುಣವಾಗಿ ಉತ್ಪಾದನೆ ಹೆಚ್ಚಳವಾಗುವುದಿಲ್ಲ. ಯಾಕೆ ಗೊತ್ತೇ? ಹಿಂದೆ ಕರಾವಳಿ ಮಲೆನಾಡಿನಲ್ಲಿ ಅಡಿಕೆ ಬೆಳೆ ಇದ್ದುದು ಕಣಿವೆಯಂತಹ ತಗ್ಗು ಭಾಗಗಳಲ್ಲಿ ಮಾತ್ರ. ಆಗ ಖುಷ್ಕಿ  ಭೂಮಿಯಲ್ಲಿ ಅಡಿಕೆ ಬೆಳೆದರೆ  ಜನ ಅದೆಲ್ಲಾ ಆಗುವ ಹೋಗವಂತದ್ದೇ ಎಂದು ಹೇಳುತ್ತಿದ್ದರು.  ಪರಿಸ್ಥಿತಿ ಬದಲಾವಣೆ ಆಯಿತು. ಒಂದೆಡೆ ಭತ್ತದ ಗದ್ದೆಗಳೂ ಅಡಿಕೆ…

Read more
ಉತ್ತಮ ಅಡಿಕೆ ಸಸಿಗಳು

ಅಡಿಕೆ ಬೆಳೆಗಾರರು ಸ್ವಲ್ಪ ಚಾಲಿ ಅಡಿಕೆ ತಳಿಗಳನ್ನೂ ಬೆಳೆಸಿ.

ಎಲ್ಲರೂ ಕೆಂಪಡಿಕೆಗೆ ಹೊಂದುವ ತಳಿಗಳನ್ನೇ ಬೆಳೆಸಿದರೆ ಒಂದಿಲ್ಲೊಂದು ದಿನ  ಕೆಂಪಡಿಕೆ ಮಾರುಕಟ್ಟೆ ಏನಾಗಬಹುದು  ಯೋಚಿಸಿ? ಅಂತಹ ಕಷ್ಟದ ದಿನ ಬಂದರೆ  ರೈತರಿಗೆ ಚಾಲಿ ನೆರವಿಗೆ ಬರಲೂಬಹುದು. ಎಲ್ಲಾ ಅಡಿಕೆ ಚಾಲಿಗೆ ಹೊಂದುವುದಿಲ್ಲ. ಇದಕ್ಕೆ ಕರಾವಳಿಯ ತಳಿಗಳೇ ಸೂಕ್ತ. ಕಳೆದ ವರ್ಷ ಅಡಿಕೆ ಗಿಡಗಳಿಗೆ ಬಂದ ಬೇಡಿಕೆಯನ್ನು ನೋಡಿ ಈ ವರ್ಷ  ನರ್ಸರಿಗಳು ಮಾಡಿದ ಸಸಿ  ಅಷ್ಟಿಷ್ಟಲ್ಲ. ಆದರೆ  ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಈ ವರ್ಷ ಅಡಿಕೆ ಗಿಡ ಕೇಳುವವರಿಲ್ಲ.  ಹಾಗೆಂದು ಮಲೆನಾಡು, ಅರೆಮಲೆನಾಡು ಮುಂತಾದ ಕಡೆಯ ನರ್ಸರಿಗಳಲ್ಲಿ…

Read more
ಅಡಿಕೆಯ ಬಳಕೆಯ ಚೂರುಗಳು

ನಾವು ಬೆಳೆಯುವ ಅಡಿಕೆ ಯಾವುದಕ್ಕೆ ಬಳಕೆಯಾಗುತ್ತದೆ ಗೊತ್ತೇ?

ನಾವೆಲ್ಲಾ ಅಡಿಕೆ ಬೆಳೆಗಾರರು. ಆದರೆ ನಮಗೆ ಇನ್ನೂ ಸ್ಪಷ್ಟವಾಗಿ  ನಾವು ಬೆಳೆದ ಅಡಿಕೆ ಯಾವುದಕ್ಕೆ ಬಳಕೆಯಾಗುತ್ತದೆ ಎಂದು ಗೊತ್ತೇ ಇಲ್ಲ.ನಾವು ಬೆಳೆಯುವ ಅಡಿಕೆ ಸಧ್ಯದ ಮಟ್ಟಿಗೆ ಬಳಕೆಯಾಗುವುದು ಈ ಎಲ್ಲಾ ರೂಪಗಳಲ್ಲಿ ಜಗಿದು ಉಗುಳುವುದಕ್ಕೆ ಮಾತ್ರ. ಅಡಿಕೆ ಎಂದರೆ ಅದು ಟ್ಯಾನಿನ್ (ಚೊಗರು) ಒಳಗೊಂಡ ಒಂದು ಬೀಜ ಎಂದು ವ್ಯಾಖ್ಯಾನಿಸಬಹುದು. ಅಡಿಕೆ ಕಾಯಿ  ಬೆಳೆದು ಹಣ್ಣಾದ ಮೇಲೆ ಕೊಯಿಲು ಮಾಡಿ  ನಿರ್ದಿಷ್ಟ ದಿನಗಳ ವರೆಗೆ  ಸೂರ್ಯನ ಬೆಳಕಿನಲ್ಲಿ ಒಣಗಿಸಿ, ಸಿಪ್ಪೆ ಸುಲಿದಾಗ  ದೊರೆಯುವುದು ಚಾಲಿ ಅಥವಾ ಸುಪಾರಿ…

Read more
ಕಾಯಿ ಒಡೆಯುವ ತೊಂದರೆ

ಅಡಿಕೆ ಕಾಯಿ ಒಡೆಯುವುದಕ್ಕೆ ಕಾರಣ ಮತ್ತು ಪರಿಹಾರ .

ಹೆಚ್ಚಿನವರ ಅಡಿಕೆ ತೋಟದಲ್ಲಿ ಎಳೆಯ ಕಾಯಿ ಒಡೆದು ಬೀಳುವ ಸಮಸ್ಯೆ ಇದೆ. ಎಲ್ಲರೂ ಸೂಕ್ತ ಪರಿಹಾರಕ್ಕಾಗಿ ಸಿಕ್ಕ ಸಿಕ್ಕವರ ಅಭಿಪ್ರಾಯಗಳನ್ನು ಕೇಳುತ್ತಿರುತ್ತಾರೆ. ಯಾವ ಪರಿಹಾರ ಕೈಗೊಂಡರೂ  ಕಾಯಿ ಒಡೆಯುವಿಕೆ ಅಥವಾ ಅಂಡೋಡಕ ಮಾತ್ರ ಕಡಿಮೆ ಆಗುವುದೇ ಇಲ್ಲ. ಕೆಲವರ ಅಡಿಕೆ ತೋಟಗಳಲ್ಲಿ 10-15 % ಫಸಲು ಅಂಡೋಡಕದಿಂದ ಹಾಳಾಗುತ್ತದೆ. ಕಾಯಿ ಬಲಿತಂತೆ ಬುಡದಲ್ಲಿ ಉದುರಿಬಿದ್ದ ರಾಶಿ ರಾಶಿ ಹಾಳಾದ ಅಡಿಕೆ ಕಾಣಸಿಗುತ್ತದೆ. ಕೆಲವರು ಬೋರಾನ್ ಕೊರತೆಯಿಂದ ಹೀಗಾಗುತ್ತದೆ ಎನ್ನುತ್ತಾರೆ. ಇನ್ನು ಕೆಲವರು ಸತುವಿನ ಕೊರತೆಯಿಂದ ಹೀಗೆ ಆಗುತ್ತದೆ…

Read more
ಟ್ರಯಾಂಡ್ರಾ ಅಡಿಕೆ ಗೊಂಚಲು

ಟ್ರಯಾಂಡ್ರಾ ಅಡಿಕೆ – ಇದು ಕಿಲೋ ರೂ. 300-350

ಅಡಿಕೆಯಲ್ಲಿ  ನಮಗೆ ಗೊತ್ತಿರುವಂತದ್ದದ್ದು ಒಂದೇ ಪ್ರಭೇದ. ಅಡಿಕೆಯಲ್ಲಿ  ಹಲವಾರು ಪ್ರಭೇದಗಳಿವೆ. ಅಂತದ್ದರಲ್ಲಿ ಒಂದು ಈ ಒಂದು ಸಣ್ಣ ಅಡಿಕೆ. ಇದನ್ನು  ಒಂದು  ರೀತಿಯಲ್ಲಿ ಕಾಡು ಅಡಿಕೆ ಎನ್ನಲೂ ಬಹುದು.  ನಾವೆಲ್ಲಾ ಬೆಳೆಯುವ ಅಡಿಕೆ ಅರೆಕಾ ಕಟೆಚು Areca catechu ಎಂಬ ವರ್ಗಕ್ಕೆ ಸೇರಿದ್ದು.   Arecaceae ಎಂಬ ಕುಟುಂಬದಲ್ಲಿ ಹಲವಾರು ಪ್ರಭೇಧಗಳಿವೆ. ಕರಾವಳಿ ಮಲೆನಾಡಿನ  ಜನ ಕಂಡಿರುವ ರಾಮ ಅಡಿಕೆ ಎಂಬ ಪ್ರಭೇಧ ಇದರಲ್ಲಿ ಒಂದು. ಹಾಗೆಯೇ ಇಲ್ಲಿ ಪರಿಚಯಿಸಲಾಗುತ್ತಿರುವ  “ಅರೆಕಾ ಟ್ರಯಾಂಡ್ರಾ” Areca triandra ಎಂಬುದು ಅಡಿಕೆಯ…

Read more
ಸಾವಯವ ಗೊಬ್ಬರದಿಂದ ಇಳುವರಿಯ ಅಡಿಕೆ ಮರ

ಅಡಿಕೆ – ಈ ಸಾವಯವ ಗೊಬ್ಬರಗಳಿಂದ ಅಧಿಕ ಇಳುವರಿ ಸಾಧ್ಯ.

ಅಡಿಕೆ ಇರಲಿ ಅಥವಾ ಇನ್ಯಾವುದೇ ಬೆಳೆಯಿರಲಿ, ರಸ  ಗೊಬ್ಬರಗಳ ಬದಲು ನೈಸರ್ಗಿಕ ಸಸ್ಯ ಜನ್ಯ ವಸ್ತುಗಳನ್ನೇ ಬಳಸಿಯೂ  ಉತ್ತಮ ಇಳುವರಿ ಪಡೆಯಬಹುದು. ಸಾಮಾನ್ಯ ಇಳುವರಿಗೆ ನಾವು ಸಾಂಪ್ರದಾಯಿಕವಾಗಿ ಬಳಸುತ್ತಾ ಬಂದಿರುವ ಕೊಟ್ಟಿಗೆ ಗೊಬ್ಬರ, ಕುರಿ ಆಡು ಗೊಬ್ಬರಗಳು ಸಾಕು. ಅಧಿಕ ಇಳುವರಿ ಬೇಕಾದರೆ ಸಸ್ಯ ಜನ್ಯ ಗೊಬ್ಬರ , ಪ್ರಾಣಿಜನ್ಯ ಸಾವಯವ  ವಸ್ತುಗಳನ್ನು ಬಳಸಬೇಕಾಗುತ್ತದೆ. ಉತ್ಪಾದನಾ ವೆಚ್ಚ ಮಾತ್ರ ಸ್ವಲ್ಪ ಹೆಚ್ಚಾಗಬಹುದು. ರಸ ಗೊಬ್ಬರಗಳು ಒಮ್ಮೆಗೆ  ಉತ್ತಮ ಫಲಿತಾಂಶ ಕೊಡಬಹುದು. ಆದರೆ ಅದು ಧೀರ್ಘ ಕಾಲದ ತನಕ…

Read more
ಅಡಿಕೆ ಮರದ ಸುಳಿ ಭಾಗಕ್ಕೆ ಹಾನಿ

ಅಡಿಕೆ ಮರಗಳು ಸಾಯುತ್ತಿವೆಯೇ? ಒಮ್ಮೆ ಸುಳಿ ಭಾಗವನ್ನು ಪರೀಕ್ಷಿಸಿರಿ.

ಅಡಿಕೆ ಮರದ ಸುಳಿ  ಏನೋ  ವ್ಯತ್ಯಾಸವಾದಂತೆ ಕಂಡರೆ,  ಕೆಂಪು ಮೂತಿ ಹುಳವೂ ಉಪಟಳ  ಇರಬಹುದು. ಮರದ ಸುಳಿ ಭಾಗ ಬಾಡಿದಂತೆ ಕಂಡರೆ, ಅಥವಾ ಕಾಂಡದಲ್ಲಿ  ಸುಳಿಭಾಗದಿಂದ ಪ್ರಾರಂಭಗೊಂಡು ರಸ ಇಳಿದಂತೆ ಕಂಡರೆ , ಸುಳಿ ಭಾಗ ಸ್ವಲ್ಪ ಹರಿದಂತೆ ಕಂಡರೆ ಮರ ಏರಿ ಸುಳಿ ಭಾಗವನ್ನು ಒಮ್ಮೆ ಪರಿಶೀಲಿಸಿರಿ. ಸುಳಿಯಲ್ಲಿ ಏನೋ ಆಗಿದೆ ಎಂಬುದು ಈ ಮೇಲಿನ ಲಕ್ಷಣಗಳು ಹೇಳುತ್ತವೆ. ಕಳೆದ ಎರಡು ವರ್ಷಗಳಿಂದ ಅಡಿಕೆ  ಮರಗಳು ಸುಳಿ ಕೊಳೆತು ಸಾಯುತ್ತಿವೆ. ರೈತರು ಅದನ್ನು ಕಡಿಯದೇ ಹಾಗೇ…

Read more
ಉತ್ತಮ ಚಾಲಿ ಅಡಿಕೆ

ಅಡಿಕೆಗೆ ಮತ್ತೆ ಬೆಲೆ ಏರಿಕೆ ಪ್ರಾರಂಭ- ಇಂದು ದೊಡ್ಡ ಜಂಪ್.

ಕಳೆದ ಮೂರು ನಾಲ್ಕು ದಿನಗಳಿಂದ ಬೆಳಗ್ಗೆ ಗೂಬೆ ಕೂಗಲು ಪ್ರಾರಂಭವಾಗಿದೆ. ಚಾಲಿ 43,000 ದಲ್ಲಿದ್ದ ಬೆಲೆ 45,000.ಕ್ಕೆ ಏರಿದೆ. ಮುನ್ಸೂಚನೆಗಳು ಅಡಿಕೆ ಧಾರಣೆಯನ್ನು ಮೇಲೆ ಒಯ್ಯುವ ಸಂಭವವಿದೆ. ಚಾಲಿ ಅಡಿಕೆಗೆ ಉತ್ತರ ಭಾರತದಿಂದ ಬೇಡಿಕೆ ಪ್ರಾರಂಭವಾಗಿದೆ ಎಂಬ ವದಂತಿ ಇದೆ. ಕೊರೋನಾ ಲಾಕ್ ಡೌನ್ ಸಮಯದಿಂದಲೂ ವ್ಯಾಪಾರಿಗಳಲ್ಲಿ  ದಾಸ್ತಾನು ಉಳಿದಿದೆ. ಆ ಕಾರಣದಿಂದ ಬೆಲೆ ಏರಿಕೆ ಆಗುವ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿದೆ. ಚಾಲಿ ಅಡಿಕೆಗೆ ಜೂನ್ ತಿಂಗಳ ಕೊನೆಗೆ ಬೆಲೆ ಏರಿಕೆ ಪ್ರಾರಂಭವಾದುದು, ಜುಲೈ ಮೊದಲ…

Read more
error: Content is protected !!