ಕುಬ್ಜ ತಳಿಯ ಅಡಿಕೆ ಮರ

ಕುಬ್ಜ ತಳಿಯ ಅಡಿಕೆ-ಹೇಗೆ ಬೆಳೆಸುವುದು? ಏನು ಅನುಕೂಲ?

ಕುಬ್ಜ ತಳಿಯ ಅಡಿಕೆಯನ್ನು ಬೆಳೆಸುವ ಬಗ್ಗೆ ರೈತರರಲ್ಲಿ ಇರುವ ಸಂದೇಹಗಳಿಗೆ ಇಲ್ಲಿದೆ ಸಮಂಜಸ  ಉತ್ತರ. ಕುಬ್ಜ ತಳಿಯ ಅಡಿಕೆಯನ್ನು ವಿಟ್ಲದ CPCRI ಪ್ರಾದೇಶಿಕ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯು  ಹೈಬ್ರೀಡೀಕರಣದ ಮೂಲಕ  ಅಭಿವೃದ್ದಿಪಡಿಸಿದೆ. ಈಗಾಗಲೇ ಇದು ಹಲವು ರೈತರಲ್ಲಿ  ಮಿತ ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಸಂಸ್ಥೆಯಲ್ಲದೆ ಕೆಲವು ಖಾಸಗಿ ವ್ಯಕ್ತಿಗಳೂ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಬೆಳೆಸಿದ್ದೂ ಇದೆ.  ಕುಬ್ಜ ತಳಿ ಬೆಳೆಸಿದರೆ ನಿರ್ವಹಣೆ ಸುಲಭ ಎಂದು ಹೊಸಬರು ಅಂದುಕೊಂಡರೆ, ಕೆಲವರು. ಇದರಲ್ಲಿ  ಇತರ ತಳಿಯಷ್ಟು ಇಳುವರಿ ದೊರೆಯುವುದಿಲ್ಲ…

Read more
ಉತ್ತಮ ಬೆಳವಣಿಗೆಯ ಸಸಿ

ಬಯಲುಸೀಮೆಯ ಅಡಿಕೆ ಬೆಳೆಗಾರರಿಗೆ ಪ್ರಮುಖ ಸಲಹೆಗಳು.

ಬಯಲು ಸೀಮೆಯ ರೈತರು ಈ ತನಕ ನಷ್ಟದ ಬೆಳೆಗಳಾದ ಜೋಳ, ಭತ್ತ ಮುಂತಾದ ಬೆಳೆಗಳನ್ನೇ ಬೆಳೆಸುತ್ತಿದ್ದವರು. ಈಗ ಹೊಸ ಆಕಾಂಕ್ಷೆಯಲ್ಲಿ ಹೆಚ್ಚಿನ ಆದಾಯ ಕೊಡಬಲ್ಲ ಅಡಿಕೆ ಬೆಳೆಯಲು ಪ್ರಾರಂಭಿಸಿದ್ದಾರೆ.  ಇವರಿಗೆ ಅಡಿಕೆ ಬೆಳೆ ಏನು, ಇದನ್ನು ಬೆಳೆಸುವ ಕುರಿತಾಗಿ ಸ್ವಲ್ಪ ಮಟ್ಟಿನ ಸಲಹೆ ಕೊಡುವುದು ಈ ಬರಹದ ಉದ್ದೇಶ.  ಈಗ ಸಾಂಪ್ರದಾಯಿಕ ಬೆಳೆ ಪ್ರದೇಶದ ಪರಿದಿಯನ್ನು ಮೀರಿ  ವ್ಯಾಪಿಸಿದೆ.  ಕರಾವಳಿ ಮಲೆನಾಡಿನ  ರೈತರು ಮಾತ್ರ ಅಡಿಕೆಯಂತಹ ಬೆಳೆ ಬೆಳೆದು ಹೆಚ್ಚು ಆದಾಯ ಸಂಪಾದಿಸುವುದಲ್ಲ. ಇವರೂ ಸಂಪಾದಿಸಬೇಕು. ನಮ್ಮ…

Read more
ಅಡಿಕೆ ಸಸ್ಯಗಳು ಒಂದು ವರ್ಷಕ್ಕೆ ಇಷ್ಟು ಬೆಳೆದಿರಬೇಕು.

ಹೊಸ ಅಡಿಕೆ ತೋಟ ಮಾಡುವವರಿಗೆ ಉಪಯುಕ್ತ ಮಾಹಿತಿ.

ಅಡಿಕೆ ಸಸಿ ನೆಡಬೇಕೆಂದಿರುವಿರಾ? ಹಾಗಿದ್ದರೆ, ನೆಡುವ ಸಮಯದಲ್ಲಿ ಮಾಡಬೇಕಾದ ರಕ್ಷಣಾತ್ಮಕ ಕೆಲಸಗಳ ಬಗ್ಗೆ ತಿಳಿದುಕೊಂಡು ಮಾಡಿ.  ಈ ವರ್ಷ ಬಹಳಷ್ಟು ಜನ ಅಡಿಕೆ ಕೃಷಿ ಮಾಡಲು ತಯಾರಿ ನಡೆಸಿದ್ದಾರೆ. ಕೆಲವರು ಸಸಿ ನೆಟ್ಟು ಆಗಿದೆ. ಇನ್ನು ಕೆಲವರು ಇನ್ನೇನು ನೆಡಬೇಕಾಗಿದೆ. ಇರುವ ಬೆಳೆಗಳಲ್ಲಿ ಸ್ವಲ್ಪವಾದರೂ ಹೆಚ್ಚು ಆದಾಯ ಕೊಡಬಲ್ಲ  ಬೆಳೆ ಅಡಿಕೆ. ಆದ ಕಾರಣ ಜಾಗ ಇದ್ದವರು ಅಡಿಕೆ ಸಸಿ ನೆಡಿ. ಆದರೆ ಅಡಿಕೆ ತೋಟ ಮಾಡುವಾಗ ಧೀರ್ಘಾವಧಿ ಯೋಚನೆ ನಿಮ್ಮಲ್ಲಿರಲಿ. ಸಸಿ ನೆಡುವ ಸಮಯದಲ್ಲೇ ಇದನ್ನು…

Read more
Well managed areca garden

ಅಡಿಕೆಮರಗಳಿಗೆ ಈಗ ಯಾಕೆ, ಮತ್ತು ಯಾವ ಗೊಬ್ಬರ ಹಾಕಬೇಕು?

ಅಡಿಕೆ ಮರಗಳಿಗೆ ಮುಂಗಾರು ಪೂರ್ವದಲ್ಲಿ ಗೊಬ್ಬರ ಹಾಕಿದರೆ ಅದರ ಫಲಿತಾಂಶ ಅಪಾರ. ಮುಂಗಾರು ಪೂರ್ವದಲ್ಲಿ ಗೊಬ್ಬರ  ಹಾಕಲು ಮಿಸ್ ಮಾಡಿಕೊಳ್ಳಬೇಡಿ. ಇದರಿಂದ ಮುಂದಿನ ವರ್ಷದ ಬೆಳೆಗೆ ತೊಂದರೆ ಆಗುತ್ತದೆ. ಬೇಸಿಗೆ ಕಾಲ ಕಳೆದು ಮಳೆಗಾಲ ಪ್ರಾರಂಭವಾಗುವ ಈ ಸಮಯದಲ್ಲಿ  ಋತುಮಾನದ ಬದಲಾವಣೆ ಉಂಟಾಗುತ್ತದೆ. ಆಗ ಸಸ್ಯಗಳ ಬೆಳೆವಣಿಗೆಯಲ್ಲಿ ಒಂದು ಬದಲಾವಣೆಯೂ ಆಗುತ್ತದೆ. ಈ ಸಮಯದಲ್ಲಿ ಎಲ್ಲಾ ಸಸ್ಯಗಳಲ್ಲೂ  ಬೇರಿನ ಬೆಳವಣಿಗೆ, ಹೊಸ ಬೇರು ಮೂಡುವುದು, ಸಸ್ಯದ ಎಲೆಗಳು ಹೆಚ್ಚು ಚಟುವಟಿಕೆಯಲ್ಲಿ ಇರುತ್ತವೆ. ಬೇಸಿಗೆಯಲ್ಲಿ ಭಾಗಶಃ ಒಣಗಿದ್ದರೂ ಸಹ…

Read more
ಈಗ ಅಡಿಕೆಗೆ ಬೋರ್ಡೋ ಸಿಂಪರಣೆ ಮಾಡಬಹುದೇ

ಈಗ ಅಡಿಕೆಗೆ ಬೋರ್ಡೋ ಸಿಂಪರಣೆ ಮಾಡಬಹುದೇ?

ಮಳೆಗಾಲದಲ್ಲಿ ಕೊಳೆ ನಿವಾರಣೆಗೆ ಸಿಂಪಡಿಸುವ ಬೋರ್ಡೋ ದ್ರಾವಣವನ್ನು ಈಗ ಸಿಂಪಡಿಸುವುದರಿಂದ ಅನುಕೂಲ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ. ಕೊಳೆ ರೋಗಕ್ಕೆ ಸಿಂಪಡಿಸುವ ಮೈಲುತುತ್ತೆ ಮತ್ತು ಸುಣ್ಣ ಇವುಗಳ ಸಮತೋಲಿತ ಮಿಶ್ರಣಕ್ಕೆ ಬೋರ್ಡೋ ದ್ರಾವಣ Bordeaux mixture ಎನ್ನುತ್ತಾರೆ. ಈ ದ್ರಾವಣವು ಶೇ. 1  ರ ಪ್ರಮಾಣದಲ್ಲಿ ಸಿಂಪಡಿಸಬೇಕು ಎಂಬುದು ಶಿಫಾರಸು. ಇದು ತಟಸ್ಥ ಮಿಶ್ರಣವಾಗಿರಬೇಕು. ಇದರಿಂದ ಫಲ ಹೆಚ್ಚು. ಇದನ್ನು ಮಳೆ ಬಂದ ನಂತರವೇ ಸಿಂಪಡಿಸಬೇಕಾಗಿಲ್ಲ. ಮಳೆ ಬರುವ ಮುಂಚೆಯೂ ಇದನ್ನು ಸಿಂಪರಣೆ ಮಾಡಬಹುದು. ಈಗಾಗಲೇ ಅಡಿಕೆ…

Read more
ಅಡಿಕೆ ಮರದ ಸಿಂಗಾರಕ್ಕೆ ಸಿಂಪರಣೆ

ಅಡಿಕೆ- ಸಿಂಗಾರಕ್ಕೆ ಸಿಂಪರಣೆ ಮಾಡುವವರಿಗೆ ಇಲ್ಲಿದೆ ಮಾಹಿತಿ.

ಬೇಸಿಗೆಯಲ್ಲಿ ಅಡಿಕೆ ಕಾಯಿ ಉದುರುವ ಸಮಸ್ಯೆಗಾಗಿ ಬೆಳೆಗಾರರು ಸಿಂಗಾರಕ್ಕೆ ಸಿಂಪರಣೆ ಮಾಡುತ್ತಾರೆ. ಯಾವಾಗ ಸಿಂಗಾರಕ್ಕೆ ಕೀಟ- ರೋಗಗಳಿಂದ ತೊಂದರೆ ಉಂಟಾಗುತ್ತದೆ ಎಂದು ತಿಳಿದು ಆ ಸಮಯಕ್ಕೆ ಸರಿಯಾಗಿ ಸಿಂಪರಣೆ ಮಾಡಬೇಕು.  ಕೀಟವೋ, ರೋಗವೋ ಎಂಬುದನ್ನು ಗಮನಿಸಿ ಅದಕ್ಕೆ ಬೇಕಾದ ಔಷಧಿಯನ್ನು ಸಿಂಪಡಿಸಬೇಕು.   ಮೊಡ ಕವಿದ ವಾತಾವರಣ, ಮಳೆಯಾದ ಸಮಯ ಅಡಿಕೆ ಬೆಳೆಗೆ ಕೆಲವೊಂದು ಸಮಸ್ಯೆಗಳನ್ನು  ತರುತ್ತದೆ. ಅದನ್ನು ತಡೆಯಲು ಆ ವಾತಾವರಣ ಇರುವಾಗಲೇ ಕ್ರಮ ಕೈಗೊಂಡರೆ ಫಲ ಹೆಚ್ಚು.ಎಲ್ಲಾ ಬೆಳೆಗಳಿಗೂ ಅನುಕೂಲಕರ ವಾತಾವರಣ ಎಂದರೆ ಹಿತ…

Read more
leaf yellowing

ಅಡಿಕೆ ಗರಿ ಒಣಗುತ್ತಿದೆಯೇ – ಇದು ಉತ್ತಮ ಸುರಕ್ಷಿತ ಪರಿಹಾರ.

ಬಿಸಿಲಿನ ಝಳ ಹೆಚ್ಚಾದಾಗ, ಶುಷ್ಕ ವಾತಾವರಣ  ಸ್ಥಿತಿ ಇರುವಾಗ ಅಡಿಕೆ, ತೆಂಗಿನ ಗರಿಗಳು ಹಳದಿಯಾಗಿ ಭಾಗಶಃ ಒಣಗುವುದಕ್ಕೆ ಸರಳ ಪರಿಹಾರ ಇಲ್ಲಿದೆ. ಯಾವಾಗಲೂ ಸಸ್ಯಗಳ ಎಲೆಗಳು ಹಸುರಾಗಿರಬೇಕು. ಆಗ ಅದರ ಉಸಿರಾಟ ನಡೆಸುವ ಅಂಗಗಳು (Stomata) ಚೆನ್ನಾಗಿ ಕೆಲಸ ಮಾಡುತ್ತದೆ. ಎಲೆಗಳ ಹಸುರು ಭಾಗ (ಪತ್ರ ಹರಿತ್ತು)ದಲ್ಲಿ ಈ ಸ್ಟೊಮಟಾ ಇರುತ್ತದೆ. ಹರಿತ್ತು ಕಡಿಮೆ ಅದಂತೆ ಸಸ್ಯ  ಬೆಳವಣಿಗೆ ಕುಂಠಿತವಾಗುತ್ತದೆ. ಬಹುತೇಕ ಎಲೆಗಳು ಹಳದಿಯಾಗಿ ಒಣಗಿದರೆ ಮರ ಸಾಯಲೂ ಬಹುದು.  ಇದಕ್ಕೆ ಕಾರಣ ಒಂದು ಬಿಸಿಲು. ಬಿಸಿಲಿನ…

Read more
pest problem

ಅಡಿಕೆ ಹೂಗೊಂಚಲು ಒಣಗುತ್ತಿದೆಯೇ ? ಯಾವ ಕಾರಣ- ಪರಿಹಾರ.

ಅಧಿಕ ಆದಾಯದ ಅಡಿಕೆ ಬೆಳೆಯಲ್ಲಿ ಹೂಗೊಂಚಲು ಒಣಗುವ ಸಮಸ್ಯೆ ಅತೀ ದೊಡ್ಡದು. ಇದಕ್ಕೆ ಪರಿಹಾರ ಸಿಂಗಾರಕ್ಕೆ ಸಿಂಪರಣೆ ಒಂದೇ.ರಾಸಾಯನಿಕ ಸಿಂಪರಣೆ ಇಷ್ಟವಿಲ್ಲದವರು ಮರದಲ್ಲಿ ಒಣಗಿದ ಹೂಗೊಂಚಲು ಶೇಷವನ್ನು ಸಂಪೂರ್ಣವಾಗಿ ತೆಗೆದು ಸ್ವಲ್ಪ ಮಟ್ಟಿಗೆ ನಷ್ಟದಿಂದ ಪಾರಾಗಬಹುದು. ಕಳೆದ ವರ್ಷ ಅಡಿಕೆ ಬೆಳೆಗಾರರು ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟ ಮಾಡಿಕೊಂಡಿದ್ದಾರೆ. ಕಾರಣ ಉತ್ತಮ ಹೂ ಗೊಂಚಲು ಇತ್ತು. ಆದರೆ ಹೂ ಗೋಂಚಲೆಲ್ಲಾ ಒಣಗಿ ಹಾಳಾಗಿದೆ. ಇದರಿಂದಾಗಿ ಬೆಳೆ ಸುಮಾರು 30% ನಷ್ಟವಾಗಿದೆ. ಈ ವರ್ಷ ಹಾಗಾಗಬಾರದು ಎಂದು ಬೆಳೆಗಾರರು…

Read more
tender arecanut

ಅಡಿಕೆ ಬೆಳೆಗಾರರಿಗೆ ವರ – ಅಡಿಕೆ ಮಿಲ್.

ಅಡಿಕೆ ಬೆಳೆಯಲ್ಲಿ ಎಲ್ಲಾ ಕಡೆ ಒಂದೇ ಸಮಯದಲ್ಲಿ ಅಡಿಕೆ ಕೊಯಿಲು ಆದಾಗ ಸುಲಿಯುವ ಕೆಲಸ ದೊಡ್ಡ ಕಷ್ಟ. ಜನ ಸಿಗುವುದಿಲ್ಲ. ಆ ಸಮಯದಲ್ಲಿ ಒಮ್ಮೆಗೇ ಟನ್ ಗಟ್ಟಲೆ ಅಡಿಕೆ ಸಿಪ್ಪೆ ತೆಗೆಯುವ ವ್ಯವಸ್ಥೆ ಎಂದರೆ ಅಡಿಕೆ ಮಿಲ್ ಗಳು. ಇದು ಬಾಡಿಗೆಯ ಆಧಾರದಲ್ಲಿ ಕೆಲಸ ಮಾಡಿ ಬೆಳೆಗಾರರಿಗೆ ತುಂಬಾ ಸಹಕಾರಿಯಾಗುತ್ತದೆ. ಭತ್ತವನ್ನು ಗದ್ದೆಯಿಂದ ಕೊಯಿಲು ಮಾಡಿ ಮಿಲ್ ಗೆ ಒಯ್ದರೆ ಅಲ್ಲಿ ಅದನ್ನು ಅಕ್ಕಿ ಮಾಡಿಕೊಡುವಂತೆ, ಅಡಿಕೆಗೂ ಇಂತಹ  ಒಂದು ವ್ಯವಸ್ಥೆ ಬಂದಿದೆ. ಈ ಯಾಂತ್ರಿಕ ವ್ಯವಸ್ಥೆಯಲ್ಲಿ…

Read more
ಅಡಿಕೆ ಗರಿ ತಿನ್ನುವ ತಿಗಣೆಯ ಹಾನಿ

ಅಡಿಕೆ ಗರಿಗಳು ಯಾಕೆ ಹೀಗಾಗುತ್ತವೆ- ಪರಿಹಾರ ಏನು?

ಅಡಿಕೆಯ  ಸಸ್ಯದ ಎಲೆಗಳು ಗುಚ್ಚದ ತರಹ ಆಗುವ, ಸಸ್ಯ  ಬೆಳವಣಿಗೆಯನ್ನು ಹತ್ತಿಕ್ಕುವ  ಕೆಲವು ರಸ ಹೀರುವ ಕೀಟಗಳನ್ನು ನಿಯಂತ್ರಿಸದಿದ್ದರೆ  ಸಸಿ ಏಳಿಗೆ ಆಗುವುದೇ ಇಲ್ಲ. ಅಡಿಕೆ ಸಸಿ/ ಮರದ ಎಲೆ ಹಾಳಾದರೆ ಅದರ ಏಳಿಗೆಯೇ ಆಗುವುದಿಲ್ಲ. ಎಲೆಯ ರಸ ಹೀರಿ ತೊಂದರೆ ಮಾಡುವ ಕೆಲವು ತಿಗಣೆಗಳು ಇತ್ತೀಚಿನ ದಿನಗಳಲ್ಲಿ ಭಾರೀ  ತೊಂದರೆ ಮಾಡುತ್ತಿವೆ. ಒಂದು ಅಡಿಕೆ ನೆಟ್ಟು ಸುಮಾರು 5 ವರ್ಷಕ್ಕೆ ಅದು ಫಲ ಕೊಡಲು ಪ್ರಾರಂಭವಾಗಬೇಕು. ಆದರೆ ಇಂತಹ  ಕೀಟಗಳು ಧಾಳಿ ಮಾಡಿದವೆಂದರೆ ಅದರ ಬೆಳವಣಿಗೆಯೇ…

Read more
error: Content is protected !!