good yielded plant

ಒರಿಜಿನಲ್ ಮಂಗಳ ಅಡಿಕೆ ಮರ ಹೀಗಿರುತ್ತದೆ.

ಮಂಗಳ ಅಡಿಕೆ ತಳಿ ಪ್ರಸ್ತುತ ಅಡಿಕೆ ಬೆಳೆಗಾರರ ಹಿತ ದೃಷ್ಟಿಯಲ್ಲಿ ಪರಿಚಯಿಸಲಾದ ತಳಿ ಎಂದೇ ಹೇಳಬಹುದು. 30  ವರ್ಷವಾದರೂ 35-40 ಅಡಿ ಎತ್ತರ. ಹೆಚ್ಚು ಪೋಷಕಾಂಶ ಕೊಟ್ಟಷ್ಟೂ ಹೆಚ್ಚು ಇಳುವರಿ. ಮರದಲ್ಲಿ 4-5 ಭರ್ತಿ ಕಾಯಿಗಳ ಗೊನೆ.  ಅಡಿಕೆ ಬೆಳೆಯುವವರ ಅಂಗಳದ ತುಂಬಾ ಅಡಿಕೆ ಹರಡಿದ ಸಮೃದ್ಧಿ ಉಂಟಾದುದೇ ಈ ತಳಿ ಬಂದ ನಂತರ. ಆದರೆ ಈ ಮೂಲ ತಳಿ ಈಗ ಭಾರೀ ಅಪರೂಪವಾಗಿದೆ.  ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಕುಬಳಬೆಟ್ಟು ಗುತ್ತುವಿನ ಪ್ರಗತಿಪರ ಕೃಷಿಕರಾಗಿದ್ದ ದಿವಂಗತ…

Read more

ಅಡಿಕೆ- ಬೆಲೆ ಏರಿಕೆಗೆ ಕಾಲ ಕೂಡಿಬಂದಿದೆ.

ಸಿದ್ದನಿಗೆ ಯಾವುದೇ ಕೆಲಸ ಇಲ್ಲ. ಮನೆಯಲ್ಲೇ ಠಿಖಾಣಿ. ಉದ್ಯೋಗಕ್ಕೆ ಹೋಗುವುದಕ್ಕೂ ಅವಕಾಶ ಇಲ್ಲ. ಮನೆಯಲ್ಲಿ ಕುಳಿತು ಬೋರು ಹೊಡೆಯುತ್ತಿದೆ. ಸರಕಾರ ಅಕ್ಕಿ ದಿನಸಿ ಮನೆಗೇ ಸರಬರಾಜು ಮಾಡಬಹುದು. ಇನ್ನು ಖರ್ಚಿಗೆ ಸಾಲವನ್ನೂ ಕೊಡಬಹುದು. ಕಾಲಹರಣ ಮಾಡುವ ಹೊತ್ತಿನಲ್ಲಿ ದಿನಕ್ಕೆ ಒಂದು ಗುಟ್ಕಾ ತಿನ್ನುವವ 2- 4  ತಿಂದರೂ ಅಚ್ಚರಿ ಇಲ್ಲ. ಮನುಷ್ಯನ ಮನಶಾಸ್ತ್ರ ಪ್ರಕಾರ ಚಟಕ್ಕೆ ಸಂಬಂಧಿಸಿದ ವಸ್ತುಗಳ ಬಳಕೆ ಹೆಚ್ಚಾಗುವುದು ಅವನಿಗೆ ಮಾಡಲು ಕೆಲಸ ಕಡಿಮೆ ಇದ್ದಾಗ. ಕೆಲಸದ ಒತ್ತಡಗಳ ಮಧ್ಯೆ ಚಟದ ನೆನಪಾಗುವುದಿಲ್ಲ. ಚಟದ…

Read more

ಆಡಿಕೆ ಗರಿ ಹಳದಿಯಾಗಲು ಇದು ಕಾರಣ.

ಸಸ್ಯಗಳಿಗೆ ಉತ್ತಮ ಬಿಸಿಲು ದೊರೆತಾಗ ಅವುಗಳ ಎಲೆಗಳು ಹೆಚ್ಚು ಹೆಚ್ಚು ಉಸಿರಾಟ  ಕ್ರಿಯೆ  ನಡೆಸಿ ಚೆನ್ನಾಗಿ ಬೆಳೆಯುತ್ತವೆ. ಆದರೆ  ಕೆಲವೊಮ್ಮೆ ಈ ಅತಿಯಾದ ತಾಪಮಾನ ಕೆಲವು ಕೀಟಗಳನ್ನು ಆಕರ್ಷಿಸುತ್ತವೆ. ಇಂತದ್ದರಲ್ಲಿ ಒಂದು ಅಡಿಕೆಯ ಗರಿಯಲ್ಲಿ ವಾಸ ಮಾಡುವ ಕೆಂಪು ಮತ್ತು ಬಿಳಿ ತಿಗಣೆ. ಅಡಿಕೆ ಬೆಳೆಗೆ  ಸಹ್ಯ ತಾಪಮಾನ 35 ಡಿಗ್ರಿ  ತನಕ. ಅದಕ್ಕಿಂತ ಹೆಚ್ಚಾದರೆ ಅದು ಸಹಿಸಿಕೊಳ್ಳುವುದಿಲ್ಲ. ಅದಕ್ಕಾಗಿಯೇ  ನಮ್ಮ ಹಿರಿಯರು ಅಡಿಕೆ ತೋಟವನ್ನು ಅದಕ್ಕೆ ಸೂಕ್ತವಾದ ಜಾಗದಲ್ಲಿ ಮಾತ್ರ ಮಾಡಬೇಕು ಎನ್ನುತ್ತಿದ್ದರು. ಅಡಿಕೆ ಬೆಳೆಯಲು…

Read more

ಕೀಟನಾಶಕ ಇಲ್ಲದೆ ಅಡಿಕೆ ಉಳಿಸಬಹುದು.

ಕೀಟನಾಶಕ ಬಳಸದೆ ಅಡಿಕೆ ಉಳಿಸಿಕೊಂಡವರು ಇದ್ದಾರೆ. ಕೆಲವರು ಅಡಿಕೆ ಮಿಡಿ ಉಳಿಸಲು ಪ್ರತೀ ಹೂ ಗೊಂಚಲಿಗೂ ತಿಂಗಳು ತಿಂಗಳು ಕೀಟ ನಾಶಕ ಸಿಂಪಡಿಸುವವರೂ ಇದ್ದಾರೆ. ಸಿಂಪಡಿಸದವರಲ್ಲೂ ಫಸಲು ಇದೆ. ಸಿಂಪಡಿಸಿದಲ್ಲಿಯೂ ಫಸಲು ಇದೆ. ಹೀಗಿರುವಾಗ ಅಡಿಕೆ ಮರದ ಆರೋಗ್ಯ ಹೊಂದಿಕೊಂಡು ಹೂ ಗೊಂಚಲಿನಲ್ಲಿ ಮಿಡಿ ಕಾಯಿ ಉಳಿಯುತ್ತದೆ ಎಂದರೆ ತಪ್ಪಾಗಲಾರದು. ಅಡಿಕೆ ಮರದ ಹೂ ಗೊಂಚಲಿಗೆ ಬರುವ ಕೀಟಗಳಲ್ಲಿ ಈ ತನಕ ಗುರುತಿಸಲಾದದ್ದು, ಸಿಂಗಾರ ತಿನ್ನುವ ಕಂಬಳಿ ಹುಳ. ಬಸವನ ಹುಳ ಪೆಂಟಟೋಮಿಡ್  ಬಗ್. ಇದಲ್ಲದೆ ಬೇರೆ…

Read more

ಗರಿ ಕತ್ತರಿಸಿ- ಅಡಿಕೆ ಸಸಿ ಬೆಳೆವಣಿಗೆ ಹೆಚ್ಚಿಸಿ.

ಅಡಿಕೆ ಸಸಿ ಬೆಳೆಸುವಾಗ ಮೊದಲೆರಡು  ವರ್ಷ ಉತ್ತಮವಾಗಿ ಬೆಳೆಸಿದರೆ ಅದರ ಭವಿಷ್ಯವೇ ಬದಲಾಗುತ್ತದೆ. ಮೊದಲ ಎರಡು ವರ್ಷ  ಬೆಳೆವಣಿಗೆ  ಉತ್ತೇಜಿಸಲು ಎಲೆ ಪ್ರೂನಿಂಗ್  ಸಹಕಾರಿ. ಇದನ್ನು ಕೆಲವು ರೈತರು ಮಾಡಿ ನೋಡಿದ್ದಾರೆ. ಹಿಂದೊಂಮ್ಮೆ ಅಡಿಕೆ ಸಸ್ಯದ ಗರಿ ಕತ್ತರಿಸಿ ಸಸ್ಯವನ್ನು ಕುಬ್ಜವಾಗಿಸಬಹುದು ಎಂಬ ಪ್ರಚಾರ ಬಹಳ ಸುದ್ದಿಯಾಗಿತ್ತು. ಆದರೆ ಅದರ ಹಿಂದೆ ಹೋದಾಗ ತಿಳಿದದ್ದು ಸಸಿ ಗಿಡ್ಡವಾಗುವುದಲ್ಲ. ಸಸ್ಯ ಬೆಳವಣಿಗೆ ಸ್ವಲ್ಪ ಹೆಚ್ಚಳವಾಗುವುದು. ಹಾಗೆಂದು ಎಲೆಗಳನ್ನೆಲ್ಲಾ ಕತ್ತರಿಸುವುದಲ್ಲ. ಹಿತ ಮಿತ ಪ್ರೂನಿಂಗ್ ಅಷ್ಟೇ.  ಮನುಷ್ಯ ಸಣ್ಣ ಪ್ರಾಯದಲ್ಲಿ …

Read more

ಕೆಂಪಡಿಕೆ ರಾಶಿ- 40,000 ಆಗಬಹುದು ಎನ್ನುತ್ತಾರೆ.

ಉತ್ತರ ಭಾರತದ ವ್ಯಾಪಾರಿಗಳು ಅಡಿಕೆ ಬೇಕು ಎಂದು ಕೇಳಿಕೊಂಡು ಬರುತ್ತಿದ್ದಾರೆ. ಈ ಕಾರಣದಿಂದ ಸ್ಥಳೀಯ ವ್ಯಾಪಾರಿಗಳು ದರವನ್ನು ಸ್ವಲ್ಪ ಸ್ವಲ್ಪವೇ ಏರಿಕೆ ಮಾಡುತ್ತಿದ್ದಾರೆ. ಒಂದು ವಾರದಿಂದ ಚಾಲಿ ದರ ಕ್ವಿಂಟಾಲಿಗೆ 300 ರೂ. ಹೆಚ್ಚಳವಾಗಿದೆ. ಕೆಂಪು ಅಡಿಕೆಯ ಬೆಲೆ 2000 ರೂ. ಹೆಚ್ಚಾಗಿದೆ. 3-4 ವರ್ಷಗಳಿಂದ ಕೆಂಪಡಿಕೆಯಲ್ಲಿ ದರದಲ್ಲಿ ಏನೂ ದೊಡ್ಡ ಏರಿಕೆ ಆಗದ ಕಾರಣ ಈ ಬಾರಿ ಸ್ವಲ್ಪ ಏರಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲವು  ವ್ಯಾಪಾರದ ಅನುಭವಿಗಳು. ಕೆಲವು ಮೂಲಗಳ ಪ್ರಕಾರ ಈಗ…

Read more

ಆರೋಗ್ಯಬೇಕೇ- ಕೀಟನಾಶಕ ಮಿತಿಗೊಳಿಸಿ.

ಅಡಿಕೆ ಉಳಿಯಬೇಕು. ದುಡ್ಡು ಆಗಬೇಕು ನಿಜ. ಆದರೆ ದುಡ್ಡಿನಲ್ಲಿ ಆರೋಗ್ಯವನ್ನು ಖರೀದಿಸಲಿಕ್ಕೆ ಆಗುವುದಿಲ್ಲ. ಅನಾರೋಗ್ಯ ಬಂದರೆ ನಮ್ಮ ಸಂಪಾದನೆಯಲ್ಲಿ ಆಸ್ಪೆತ್ರೆಯವರು- ವೈದ್ಯರು ಪಾಲುದಾರರಾಗುತ್ತಾರೆ. ಅವರನ್ನು ಸಾಕುವ ಕೆಲಸ ಬೇಡ. ಅಡಿಕೆ ಬೆಳೆಗಾರರಿಗೆ ಸಲಹೆಗಳ ಸುರಿಮಳೆಗಳೇ ಹರಿದು ಬರುತ್ತಿವೆ. ಯಾವ ರೈತರು ಪ್ರಧಾನ ಮಂತ್ರಿಗಳ ಕೃಷಿ ವಿಕಾಸ ಯೋಜನೆಯ 6000 ರೂ. ಫಲಾನುಭವಿಗಳಿದ್ದಾರೆಯೋ ಅವರಿಗೆ  ಮೊಬೈಲ್ ನಂಬ್ರಕ್ಕೆ ಸಂದೇಶಗಳು ಬರುತ್ತಿವೆ. ಇದರಲ್ಲೆಲ್ಲಾ ಅಷ್ಟು ಇಷ್ಟು ರಾಸಾಯನಿಕ ಬಳಕೆ ಮಾಡಿ ಬೆಳೆ ಸಂರಕ್ಷಿಸಿಕೊಳ್ಳಿ ಎಂಬ ಸಂದೇಶ ಇದೆ. ರೈತರೇ ಇದನ್ನು…

Read more

ಮಹಾಳಿ ರೋಗಕ್ಕೆ ಮೊಳೆ ಮದ್ದು!

ಒಬ್ಬ ಮಿತ್ರರು ಸಲಹೆ ಕೇಳುತ್ತಾರೆ. ಅಡಿಕೆಯ ಕೊಳೆ ರೋಗ ನಿಯಂತ್ರಣಕ್ಕೆ ಮರದ ಬುಡಕ್ಕೆ ತುಕ್ಕು ಹಿಡಿದ ಮೊಳೆ ಹೊಡೆದರೆ ಆಗುತ್ತದಂತೆ. ಕೇರಳದಲ್ಲಿ ಇದು ಯಶಸ್ವಿಯಾಗಿದೆಯಂತೆ. ಈ ಬಗ್ಗೆ ನಮ್ಮ ಅಭಿಪ್ರಾಯ ಕೇಳುತ್ತಾರೆ. ಮನುಷ್ಯ ತನ್ನೆಲ್ಲಾ ಸಿಟ್ಟನ್ನು ಕೊನೆಗೆ ತೀರಿಸಿಕೊಳ್ಳುವುದು ತನ್ನ ಹೆಂಡತಿಯ ಮೇಲೆ ಎನ್ನುತ್ತಾರೆ ಹಿಂದಿನವರು. ಉಳಿದವರು ಅದಕ್ಕೆ  ಪ್ರತಿಕ್ರಿಯಿಸುತ್ತಾರೆ. ಆದರೆ ಹೆಂಡತಿಗೆ ಗಂಡನೇ ದೊಡ್ದದು. ಅದಕ್ಕೆ ಏನು ಮಾಡಿದರೂ ಮಾತಾಡುವುದಿಲ್ಲ. ಆ ಅವಕಾಶವನ್ನು  ಗಂಡಸು ಬಳಸಿಕೊಳ್ಳುತ್ತಾನೆ. ಇದರ ಉಲ್ಲೇಖ  ಇಲ್ಲಿ ಯಾಕೆಂದರೆ ಯಾವುದಕ್ಕೂ ಪ್ರತಿರೋಧ ಒಡ್ಡದೇ…

Read more
ಅಡಿಕೆ ತೋಟದಲ್ಲಿ ಬಸಿಗಾಲುವೆ ಈ ರೀತಿ ಇರಬೇಕು

ಅಡಿಕೆ ಮರಗಳು ಆರೋಗ್ಯವಾಗಿರಬೇಕಾದರೆ ಬಸಿಗಾಲುವೆ ಅಗತ್ಯ.

ಬಸಿಗಾಲುವೆ  ಇಲ್ಲದ ತೋಟದಲ್ಲಿ ಯಾವಾಗಲೂ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ಮಣ್ಣಿನಲ್ಲಿ ನೀರು ಇರಲಿ. ಆದರೆ ಆದು ಗಿಡಗಳ ನಿಂತು ಹಳಸಲು ಆಗಬಾರದು. ಅದನ್ನು ತಡೆಯಲು ಬಸಿಗಾಲುವೆಯೇ ಪರಿಹಾರ. ಬಸಿಗಾಲುವೆ ಮಾಡದ ತೋಟ ಅದು ತೋಟವೇ ಅಲ್ಲ. ನೀರು ಬಸಿಯುವುದಕ್ಕೆ ಮಾತ್ರವಲ್ಲದೆ ಬೇರುಗಳ ಶ್ವಾಸೋಚ್ವಾಸಕ್ಕೂ ಬಸಿ ಗಾಲುವೆ ಬೇಕು. ನಿಮ್ಮ ತೋಟದಲ್ಲಿ ಅಡಿಕೆ ಮರಗಳು ಎಷ್ಟು ಪೋಷಕಾಂಶ ಕೊಟ್ಟರೂ ಸ್ಪಂದಿಸದೇ ವರ್ಷದಿಂದ ವರ್ಷ ಇಳುವರಿ ಕಡಿಮೆಯಾಗುವುದು ಉಂಟೇ? ಸಸಿ/ ಮರಗಳ ಶಿರ ಭಾಗ ಸಪುರವಾಗುತ್ತಾ ಬರುತ್ತದೆಯೇ? ಗಿಡ…

Read more
ಇಂಟರ್ ಸಿ ಮಂಗಳ ತಳಿಯ ಅಡಿಕೆ ಗೊನೆ

ಮಂಗಳ ಇಂಟರ್ಸಿ – ಇದು ಹೊಸ ತಳಿ ಅಲ್ಲ.

ಅಧಿಕ ಇಳುವರಿ ಮತ್ತು ಎತ್ತರಕ್ಕೆ  ಬೆಳೆಯುವುದಿಲ್ಲ ಎಂಬ ಕಾರಣಕ್ಕೆ  ರೈತರು   ಇಂಟರ್ಸಿ ಅಥವಾ ಇಂಟರ್ ಮಂಗಳ, ಅಥವಾ ಇಂಟರ್ ಸೆ, ತಳಿಯನ್ನು  ಬಯಸುತ್ತಾರೆ. ಆದರೆ ಇಂಟರ್ ಸೆ ಎಂಬುದರ ವಾಸ್ತವಿಕತೆ ಏನು ಗೊತ್ತೇ? ಇದು ಅಡಿಕೆ ಸಸಿ  ನೆಡುವ ಸೀಸನ್. ಕೆಲವು ಕಡೆ ಬೀಜದ ಅಯ್ಕೆಯೂ  ಪ್ರಾರಂಭವಾಗಿದೆ. ಬಹುತೇಕ ನರ್ಸರಿಗಳಲ್ಲಿ ಇಂಟರ್ ಮಂಗಳಕ್ಕೇ ಹೆಚ್ಚು ಬೇಡಿಕೆ. ಇದನ್ನೇ ಎಲ್ಲರೂ ಅಧಿಕ ಪ್ರಮಾಣದಲ್ಲಿ ಮಾಡುವವರು. ರೈತರು ಬಯಸುವುದು ಇದನ್ನೇ. ಇಂಟರ್ ಸಿ ಎಂದರೇನು: ಇಂಟರ್ಸಿ ಎಂದರೆ ಏನು. ಎಂಬ…

Read more
error: Content is protected !!