ಏರಿಕೆಯತ್ತ ಅಡಿಕೆ ದಾರಣೆ- ಸದ್ಯವೇ ಬೆಳೆಗಾರರ ನಿರೀಕ್ಷೆ

ಏರಿಕೆಯತ್ತ ಅಡಿಕೆ ದಾರಣೆ- ಸದ್ಯವೇ ಬೆಳೆಗಾರರ ನಿರೀಕ್ಷೆ ರೂ.500 ರತ್ತ.

ಆಗಸ್ಟ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಅಡಿಕೆ ಬರುವ ಪ್ರಮಾಣವೇ ಕಡಿಮೆಯಾದ ಕಾರಣ ಸ್ವಲ್ಪ ಸಂಚಲನ ಆಗುವ ಲಕ್ಷಣ ಕಂಡು ಬಂದಿತ್ತಾದರೂ ಅದಕ್ಕೆ ವಿರುದ್ಧವಾಗಿ ಧಾರಣೆ ಏರಿಕೆಯಾತ್ತ ಸಾಗುತ್ತಿದೆ. ಚಾಲಿ ಮಾರುಕಟ್ಟೆಯಲ್ಲಿ ಎರಡು ತಿಂಗಳಿಂದ ನಿಂತಲ್ಲೇ ಸ್ಥಬ್ಧವಾಗಿದ್ದ ಹೊಸ ಅಡಿಕೆ ಧಾರಣೆಗೆ ಸಂಚಲನ ಸಿಕ್ಕಿತು. ಹಳತು ಸಹ ಸ್ವಲ್ಪ ಏರಿತು. ಕೆಂಪಡಿಕೆಯೂ ಏರಿಕೆಯಾಗಲಾರಂಭಿಸಿತು.  ಎಷ್ಟರ ತನಕ ಏರಬಹುದು, ಎಂಬದರ ಯಾವ ಮಾಹಿತಿಯೂ ಇಲ್ಲ. ಪರಿಸ್ಥಿತಿಯನ್ನು ನೋಡಿದರೆ ಇನ್ನು ಏರುತ್ತಾ ಹೂವುದೇ ಒರತು ಇಳಿಕೆ ಸಾಧ್ಯತೆ ತುಂಬಾ ಕಡಿಮೆ. ಕೆಲವು…

Read more
ಚಾಲಿ ದರ ಸ್ವಲ್ಪ ಇಳಿಕೆ ಸಾಧ್ಯತೆ- ಕೆಂಪಡಿಕೆ ಮೆಲ್ಲಮೆಲ್ಲನೆ ಚೇತರಿಕೆ.

ಚಾಲಿ ದರ ಸ್ವಲ್ಪ ಇಳಿಕೆ ಸಾಧ್ಯತೆ- ಕೆಂಪಡಿಕೆ ಮೆಲ್ಲಮೆಲ್ಲನೆ ಚೇತರಿಕೆ.

ಚಾಲಿ ದರ ಸ್ವಲ್ಪ ಇಳಿಕೆ ಮಾಡಿಯಾದರೂ  ಬೆಳೆಗಾರರಿಂದ ಅಡಿಕೆ ಮಾರುಕಟ್ಟೆಗೆ ಬಿಡುವಂತೆ ಮಾಡುವ ಸಾದ್ಯತೆ ಇದೆ.   ಕರಾವಳಿಯಲ್ಲಿ ಅಡಿಕೆ ವ್ಯಾಪಾರಿಗಳಿಗೆ ಅಡಿಕೆ ಸಿಗುವುದಿಲ್ಲ ಎನ್ನುತ್ತಾರೆ. ಸಾಂಸ್ಥಿಕ  ಖರೀದಿದರಾರು ದಿನದ ಹೆಚ್ಚಿನ ಹೊತ್ತು ಸುಮ್ಮನೆ  ಕುಳಿತು  ಲೆಕ್ಕಪತ್ರ ನೋಡುವುದು, ಬೇಜಾರಾದರೆ ಮೊಬೈಲ್ ಸುದ್ದಿ ಓದುವುದು ಮಾಡುತ್ತಾ ಸಮಯಕಳೆಯುವ ಸ್ಥಿತಿ ಉಂಟಾಗಿದೆ. ಬೆಳೆಗಾರರು 500 ಆಗಿಯೇ ಆಗುತ್ತದೆ ಎಂದು  ಅಡಿಕೆ ಒಳಗಿಟ್ಟಿದ್ದಾರೆ. ಇನ್ನು ವ್ಯಾಪಾರಿ ತಂತ್ರಗಾರಿಕೆಯಿಂದ ಅಡಿಕೆ ಹೊರ ಬರುವಂತೆ ಮಾಡಬೇಕೇ ಹೊರತು ಬೇರೆ ದಾರಿ ಇಲ್ಲ. ವ್ಯಾಪಾರಿ ತಂತ್ರ…

Read more
ಅಡಿಕೆ ತೋಟದಲ್ಲಿ ಇರಲೇಬೇಕಾದ ಮೂಲಭೂತ ಅವಶ್ಯಕತೆಗಳು

ಅಡಿಕೆ ತೋಟದಲ್ಲಿ ಇರಲೇಬೇಕಾದ  ಮೂಲಭೂತ ಅವಶ್ಯಕತೆಗಳು. 

ಅಡಿಕೆ ತೋಟಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುವ ಪ್ರಮಾಣ ನೋಡಿದರೆ ಬಹುಷಃ ಜನ ಅನ್ನಕ್ಕಿಂತ ಹೆಚ್ಚು ಅಡಿಕೆ ತಿನ್ನುತ್ತಾರೆಯೋ ಅನ್ನಿಸುತ್ತದೆ. ಆದರೆ ಅಡಿಕೆ ತೋಟ ಹೆಚ್ಚಾದಷ್ಟು ಉತ್ಪಾದನೆ ಹೆಚ್ಚಾಗುವುದಿಲ್ಲ. ಕಾರಣ ಬಹುತೇಕ ಅಡಿಕೆ ತೋಟ ಮಾಡುವವರು ಮೂಲಭೂತ ಅವಶ್ಯಕತೆಯನ್ನು ಮಾಡಿಕೊಳ್ಳದೆ ತೋಟ ಮಾಡಿರುತ್ತಾರೆ. ಇದು ಬರೇ ಸಾವಿರಾರು ಮರಗಳ ತೋಟ  ಅಷ್ಟೇ. ಅಡಿಕೆ ಮರಗಳು  ಆರೋಗ್ಯವಾಗಿರಬೇಕಾದರೆ ಅದನ್ನು ಬೆಳೆಸಿದ ಜಾಗ ಸರಿ ಇರಬೇಕು. ಆಗ  ಮಾತ್ರ ನಿರ್ದಿಷ್ಟ  ವರ್ಷಕ್ಕೆ ಫಲಕೊಟ್ಟು ಇಳುವರಿ ಏಕಪ್ರಕಾರ ನೀಡುತ್ತಾ ಇರುತ್ತದೆ. ಮರಗಳ ಆರೋಗ್ಯ…

Read more
ಅಡಿಕೆ ಮಾರುಕಟ್ಟೆ ಸ್ಥಿತಿ ಮುಂದೆ ಏನಾಗಬಹುದು? ಹೊಸ ಚಾಲಿ 50000 ನಿರೀಕ್ಷೆ.

ಅಡಿಕೆ ಮಾರುಕಟ್ಟೆ ಸ್ಥಿತಿ ಮುಂದೆ ಏನಾಗಬಹುದು? ಹೊಸ ಚಾಲಿ 50000 ನಿರೀಕ್ಷೆ.

ಅಡಿಕೆ ಧಾರಣೆ ಏರಿಕೆಗೆ ಮುಹೂರ್ತ ಕೂಡಿ ಬಂದಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹೊಸ ಹುರುಪು ಪ್ರಾರಂಭವಾಗಿದೆ. ಈ ವರ್ಷ ಮತ್ತೆ ದರ ಉತ್ತುಂಗಕ್ಕೆ ಏರುವ ಸಾಧ್ಯತೆ ಇದೆ ಎಂಬುದಾಗಿ ಕೆಲವು ವ್ಯಾಪಾರಿಗಳು ಹೇಳುತ್ತಿದ್ದಾರೆ. ಈಗಿನ ಮಾರುಕಟ್ಟೆ  ದರ ಏರಿಕೆ ಗಮನಿಸಿದರೆ ಇನ್ನೂ ದರ ಏರಿಕೆಯಾಗುತ್ತಲೇ ಇರಬಹುದು ಎಂದೆನ್ನಿಸುತ್ತದೆ. ಇಂದಿನ ಅಡಿಕೆ ದಾರಣೆಯ ಕಥೆ ಕೇಳಬೇಕು. ಹಳೆ ಅಡಿಕೆ ಖಾಸಗಿ ಮಾರುಕಟ್ಟೆಯಲ್ಲಿ 57000 ತನಕ ಮುಟ್ಟಿದೆ. ಬೆಳಗ್ಗೆ ಇದ್ದ ದರಕ್ಕಿಂತ  ಸಂಜೆ ಮತ್ತೆ 500 ರೂ. ಹೆಚ್ಚು. ಹಾಗೆಯೇ ಹೊಸ…

Read more
12-07-2022 ಅಡಿಕೆ, ಕರಿಮೆಣಸು, ಕಾಫಿ, ಶುಂಠಿ ಕೊಬ್ಬರಿ ಧಾರಣೆ

ದಿನಾಂಕ 12-07-2022 ಅಡಿಕೆ, ಕರಿಮೆಣಸು, ಕಾಫಿ, ಶುಂಠಿ ಕೊಬ್ಬರಿ ಧಾರಣೆ.

ಇಂದು ದಿನಾಂಕ 12-07-2022 ಮಂಗಳವಾರ  ರಾಜ್ಯ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅಡಿಕೆ, ಕರಿಮೆಣಸು ಶುಂಠಿ, ಕಾಫಿ,ರಬ್ಬರ್, ಕೊಬ್ಬರಿ ಧಾರಣೆ ಹೀಗಿದೆ. ಚಾಲಿ ಅಡಿಕೆ ಧಾರಣೆ: ಕ್ವಿಂಟಾಲು. ಹೊಸ ಚಾಲಿ ಸ್ವಲ್ಪ ಚೇತರಿಕೆ ಆಗಿದೆ. ವ್ಯಾಪಾರಿಗಳು ಸ್ವಲ್ಪ ವಿಚಾರಣೆ ಮಾಡುತ್ತಿದ್ದಾರೆ. ಸ್ವಲ್ಪ ಸ್ವಲ್ಪ ಹೊಸತಕ್ಕೆ ಏರಿಕೆ ಆಗಬಹುದು. ಹಳೆಯ ಅಡಿಕೆಯೇ ಇಲ್ಲ ಎಂಬ ಸ್ಥಿತಿ. ಆದರೂ ಬೆಳ್ತಂಗಡಿಯಲ್ಲಿ ಅತ್ಯಧಿಕ 109 ಚೀಲ ನಿನ್ನೆ ಮಾರಾಟವಾಗಿದೆ. BANTWALA, 12/07/2022, Coca, 27, 12500, 25000, 22500 BANTWALA,…

Read more
ಅಡಿಕೆ ಧಾರಣೆ:ದಿನಾಂಕ:11-07-2022

ರಾಜ್ಯದಾದ್ಯಂತ ಅಡಿಕೆ ಧಾರಣೆ:ದಿನಾಂಕ:11-07-2022 ಸೋಮವಾರ.

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದು ಜುಲೈ ಎರಡನೇ ವಾರದ ಪ್ರಥಮ ಸೋಮವಾರ ದಿನಾಂಕ  11-07-2022 ಅಡಿಕೆ ಧಾರಣೆ ಸ್ಥಿರವಾಗಿತ್ತು. ಚಾಲಿ ಅಡಿಕೆಯ ಧಾರಣೆ ಹೊಸತು ಸ್ವಲ್ಪ ಏರಿಕೆ ಕಂಡು ಬಂದಿದೆ. ಇಂದಿನಿಂದ ಪ್ರಾರಂಭವಾಗಿ ಸ್ವಲ್ಪ ಸ್ವಲ್ಪವೇ ಹೊಸ ಅಡಿಕೆ ದರ ಏರುತ್ತಾ ಎರಡು ತಿಂಗಳ ಒಳಗೆ ಹಳೆ ಅಡಿಕೆ ಮತ್ತು ಹೊಸ ಅಡಿಕೆಯ ಬೆಲೆ ಹತ್ತಿರ ಬರಬಹುದು ಎಂಬುದಾಗಿ ವ್ಯಾಪಾರಿಗಳು ಹೇಳುತ್ತಾರೆ. ಕೆಂಪಡಿಕೆ ಧಾರಣೆ ಸ್ಥಿರವಾಗಿದೆ. ಹಳೆ ಚಾಲಿಗೆ ಹೆಚ್ಚು ಬೆಲೆ ಇದೆ. ಆದರೆ ಬರುವುದು ತೀರಾ…

Read more
ಅಡಿಕೆಗೆ ದರ ಏರಿದೆ- ಇನ್ನೂ ಏರುತ್ತದೆ

ಅಡಿಕೆಗೆ ದರ ಏರಿದೆ- ಇನ್ನೂ ಏರುತ್ತದೆ ಎಂಬ ಸುದ್ದಿ !

ಸಾಮಾನ್ಯವಾಗಿ ಮಳೆಗಾಲ ಪ್ರಾರಂಭದ ಒಂದೆರಡು ತಿಂಗಳು ಮಾರುಕಟ್ಟೆ ಸ್ವಲ್ಪ ಮಬ್ಬಾಗಿರುತ್ತದೆ. ಕೃಷಿಕರು ಅವರ ಹೊಲದ ಕೆಲಸದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುತ್ತಾರೆ.  ಜೊತೆಗೆ ಹವಾಮಾನವೂ ವ್ಯವಹಾರಕ್ಕೆ ಸ್ವಲ್ಪ ಅನುಕೂಲಕರವಾಗಿ ಇರುವುದಿಲ್ಲ. ಹಾಗಾಗಿ ಬಹುತೇಕ ಕೃಷಿ ಉತ್ಪನ್ನಗಳ ಬೆಲೆ ಸ್ವಲ್ಪ ಇಳಿಕೆಯೇ ಆಗುವುದು.  ಮಳೆಗಾಲ ಒಮ್ಮೆ ಸೆಟ್ ಆದ ಮೇಲೆ ಮತ್ತೆ ವ್ಯವಹಾರ ಚುರುಕಾಗುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಂತದ್ದು. ಈಗ ಮತ್ತೆ ಮಾರುಕಟ್ಟೆ ಚೇತರಿಕೆಯನ್ನು ಕಾಣುತ್ತಿದೆ. ಅಡಿಕೆ ದರ ಏರಿದೆ. ಇನ್ನೂ ಸ್ವಲ್ಪ ಸ್ವಲ್ಪವೇ ಏರಿಕೆ ಆಗಬಹುದು ಎನ್ನುವ ಸುದ್ದಿ…

Read more
ಆಮದು ಆಡಿಕೆಯಿಂದ ಮಾರುಕಟ್ಟೆ ಕುಸಿಯುದು.

ಅಡಿಕೆ ಆಮದು – ಮಾರುಕಟ್ಟೆ ಕುಸಿಯುವ ಸಾಧ್ಯತೆ ಇಲ್ಲ.  

ಅಡಿಕೆ ಮಾರುಕಟ್ಟೆಯಲ್ಲಿ ಆತಂಕ ಉಂಟುಮಾಡಿದ್ದ ಆಮದು ಹವಾ ಸ್ವಲ್ಪ ತಣ್ಣಗಾದಂತೆ ಕಾಣಿಸುತ್ತದೆ. ಆಮದು ಆಗಿ ಒಮ್ಮೆಗೆ ಮಾರುಕಟ್ಟೆಯಲ್ಲಿ ಸ್ವಲ್ಪ ಗಲಿಬಿಲಿ ಉಂಟಾದರೂ ಅದು ಕೆಲವೇ ದಿನದಲ್ಲಿ ಸ್ವಲ್ಪ ಚೇತರಿಕೆ ಅಗಿದೆ. ಆಮದು ಆದರೆ ಸ್ಥಳೀಯ ಮಾರುಕಟ್ಟೆ ಕುಸಿಯುವುದು ಸಾಧ್ಯವಿಲ್ಲ.ಎನ್ನುತ್ತದೆ ಲೆಕ್ಕಾಚಾರಗಳು. ಬಹುಶಃ ಇದು ಮಾರುಕಟ್ಟೆ  ತಲ್ಲಣಕ್ಕಾಗಿ ಮಾಡಿದ ಸುದ್ದಿಯೋ ಎಂಬ ಅನುಮಾನ ಉಂಟಾಗುತ್ತದೆ. ಏನೇ ಆಗಲಿ ಅಡಿಕೆಗೆ ದರ ಹೆಚ್ಚಳವಾಗುವುದಕ್ಕಿಂತ ಪ್ರಾಮುಖ್ಯ ದರ ಸ್ಥಿರವಾಗಿ ಉಳಿಯಬೇಕು ಎನ್ನುವುದು ಬೆಳೆಗಾರರ ಆಶಯ.ಈ ಮಧ್ಯೆ ಉತ್ತರ ಭಾರತದಲ್ಲಿ ಅಡಿಕೆಯ ಕೊರತೆ…

Read more
ಅಡಿಕೆ ಸಸಿ ನೆಡುವಾಗ ಗೊಬ್ಬರ ಹಾಕುವುದು

ಅಡಿಕೆ ಸಸಿ ನೆಡುವಾಗ ಯಾವ ಗೊಬ್ಬರ ಹಾಕಬೇಕು?

ಇದು ಅಡಿಕೆ ಸಸಿ ನೆಡುವ ಸೀಸನ್. ಎಲ್ಲಿ ನೊಡಿದರೂ ಯಾರಲ್ಲಿ ಕೇಳಿದರೂ ಅಡಿಕೆ ಸಸಿ ನೆಡುವ ಬಗ್ಗೆಯೇ ಮಾತುಗಳು. ಕೆಲವರು ನರ್ಸರಿಗಳಿಂದ ಗಿಡ ತರುತ್ತಾರೆ.ಕೆಲವರು ಅವರವರೇ ಗಿಡ ಮಾಡುತ್ತಾರೆ. ಬಹುತೇಕ ಜನ ಅಡಿಕೆ ಬೆಳೆಯುತ್ತಿರುವವರು ಅಸಾಂಪ್ರದಾಯಿಕ ಪ್ರದೇಶದವರು. ಅಡಿಕೆ ಕೃಷಿಗೆ ಹೊಸಬರು. ಇಂತವರಿಗೆ ಅಡಿಕೆ ಸಸಿ ನೆಡುವಾಗ ಯಾವ ಗೊಬ್ಬರ ಬಳಸಬೇಕು, ಯಾವ ಸಮಯದಲ್ಲಿ ನೆಡಬೇಕು ಎಂಬ ಮಹತ್ವದ ಮಾಹಿತಿ ಇಲ್ಲಿದೆ. ಅಡಿಕೆ ಸಸಿ ನೆಡುವವರೆಲ್ಲರೂ ಮಹತ್ ಆಕಾಂಕ್ಷೆಯಲ್ಲಿ ನೆಡುವವರು. ಬೇಗ ಫಲ ಕೊಡಬೇಕು, ಅಧಿಕ ಇಳುವರಿ…

Read more
ಅಡಿಕೆ

ಅಡಿಕೆ ಬೆಳೆಗಾರರಿಗೆ ಅಭಯ – ಕರಿಮೆಣಸು ಬೆಳೆಗಾರರಿಗೆ ಭಯ

ಅಡಿಕೆ ಆಮದು ಆದ ತಕ್ಷಣ ಮಾರುಕಟ್ಟೆಯಲ್ಲಿ ಒಂದು ಸಂಚಲನ ಉಂಟಾಯಿತು. ದರ ಕುಸಿಯಲಾರಂಭಿಸಿತು. ಅಡಿಕೆ ಬೆಳೆಗಾರರು ಇನ್ನೇನು ಮಾರುಕಟ್ಟೆ ಭಾರೀ ಕುಸಿಯಲಿದೆ ಎಂಬ ಆತಂಕಕ್ಕೆ ಒಳಗಾದರು. ಖಾಸಗಿ ಮಾರುಕಟ್ಟೆಯಲ್ಲಿ ದರ ಭಾರೀ ಕುಸಿತ ಉಂಟಾಗಿತ್ತು. ಆ ಸಮಯದಲ್ಲಿ ಬೆಳೆಗಾರರು ಕಟ್ಟಿದ ಅಡಿಕೆ ಮಾರುಕಟ್ಟೆ ಸಹಕಾರಿ ಸಂಸ್ಥೆ ಕ್ಯಾಂಪ್ಕೋ  ಸಂಸ್ಥೆಯ ಪರವಾಗಿ ಅಧ್ಯಕ್ಷರು ಬೆಳೆಗಾರರು ಅಂಜಬೇಕಾಗಿಲ್ಲ ಇದು ತಾತ್ಕಾಲಿಕ ಕುಸಿತ, ಎಲ್ಲಾ ಹಿಂದಿನಂತೆ ಆಗುತ್ತದೆ ಎಂಬ ಅಭಯ ನೀಡಿದ್ದಾರೆ. ಅದೇ ಸಂಸ್ಥೆ ವ್ಯವಹರಿಸುವ ಕರಿಮೆಣಸು ಆಮದು ಬಗ್ಗೆ ಯಾವ…

Read more
error: Content is protected !!