ಹಳೆ ಆಡಿಕೆ

ಹಳೆ ಅಡಿಕೆ- ಹೊಸ ಅಡಿಕೆ ಬೆಲೆ ವ್ಯತ್ಯಾಸ ರೂ.100 ಯಾಕೆ?

ಅಡಿಕೆ ಹಳೆಯದಾದರೆ ಅದಕ್ಕೆ ವಾರ್ಷಿಕ ಶೇ.25 ರ ಬಡ್ಡಿ ಬರುತ್ತದೆ ಎಂಬುದು ಈ ವರ್ಷದ  ಧಾರಣೆಯಲ್ಲಿ ಮನವರಿಯಾಗಿದೆ. ದರ ಹೀಗೇ ಉಳಿದರೆ ಮುಂದೆ ಬೆಳೆಗಾರರು ಯಾವುದಾದರೂ ಬ್ಯಾಂಕ್ ನಲಿ ಸಾಲ ಮಾಡಿ ಅದರ ಬಡ್ಡಿ ಕಟ್ಟಿದರೂ ಹೊಸ ಅಡಿಕೆ ಮಾರಾಟ ಮಾಡಬೇಕಾಗಿಲ್ಲ. ಹೊಸ ಅಡಿಕೆ ಮುಂದಿನ ಫಸಲು ಬರುವ ವರೆಗೆ ಉಳಿಸಿಕೊಂಡರೆ ಅದಕ್ಕೆ ಕಿಲೋ ಮೇಲೆ 100 ರೂ. ಹೆಚ್ಚು ಸಿಗುತ್ತದೆ. ಈ ತನಕ ಹಳೆ ಅಡಿಕೆಗೂ ಹೊಸ ಅಡಿಕೆಗೂ ವ್ಯತ್ಯಾಸ ರೂ. 30-40 ಇರುತ್ತಿತ್ತು.  ಆದರೆ…

Read more
ಕೆಂಪಡಿಕೆ ಚೇತರಿಕೆ ಪ್ರಾರಂಭವಾಗಿದೆ.

ಕೆಂಪಡಿಕೆ ಚೇತರಿಕೆ ಪ್ರಾರಂಭವಾಗಿದೆ- ಚಾಲಿಗೆ ಮುಹೂರ್ತ ಕೂಡಿಲ್ಲ. ರಾಶಿ 50,000 ದಾಟಿದೆ.

ಕೆಂಪಡಿಕೆ ರಾಶಿಗೆ ಶಿರಸಿಯಲ್ಲಿ, ಹೊಸನಗರದಲ್ಲಿ ಇಂದು ಕ್ವಿಂಟಾಲಿಗೆ 50,000 ದಾಟಿದೆ. ಯಲ್ಲಾಪುರದಲ್ಲಿ 54,000 ದಾಟಿದೆ. ಇನ್ನೇನು ಕೆಲವೇ ವಾರಗಳಲ್ಲಿ ಇನ್ನೂ ಚೇತರಿಕೆ ಆಗುವ ಸಂಭವ ಇದೆ ಎನ್ನುತ್ತಾರೆ ಶಿವಮೊಗ್ಗದ ವರ್ತಕರೊಬ್ಬರು. ಚಾಲಿ ದರ ಮಾತ್ರ ಏರಿಲ್ಲ. ಆದರೆ ಮಾರುಕಟ್ಟೆಗೆ ಅಡಿಕೆ ಬಾರದ ಕಾರಣ ಏನಾಗುತ್ತದೆ ವ್ಯಾಪಾರಿ ತಂತ್ರ ಎಂಬುದನ್ನು ಕಾದು ನೋಡಬೇಕಾಗಿದೆ. ಚಾಲಿಗೂ ಬೇಡಿಕೆ ಇದೆ. ಕೆಂಪಡಿಕೆಗೂ ಬೇಡಿಕೆ ಇದೆ. ಆದರೆ ದರ ಏರಿಕೆಗೆ ಸೂಕ್ತ ಮುಹೂರ್ತ ಕೂಡಿ ಬರಬೇಕು. ಬಹಳ ಜನ ಈ ವರ್ಷ ಅಡಿಕೆಗೆ…

Read more
ಅಡಿಕೆ ಮಾರುಕಟ್ಟೆ ಸ್ಥಿರ

ಅಡಿಕೆ ಮಾರುಕಟ್ಟೆ ಸ್ಥಿರ : ಕುಸಿಯುವ ಭೀತಿ ಇಲ್ಲ.

ಎಪ್ರೀಲ್ ತಿಂಗಳಲ್ಲಿ ಅಡಿಕೆ ಮಾರುಕಟ್ಟೆ ಸ್ವಲ್ಪ ಚೇತರಿಕೆ ಆಗಬಹುದು ಎಂಬ ಊಹನೆ ಇತ್ತು. ಊಹನೆಯಂತೆ ಹಳೆ ಚಾಲಿ ಮತ್ತು ಪಟೋರಾ ಅಡಿಕೆ ದರ ಸ್ವಲ್ಪ ಏರಿತಾದರೂ ಹೊಸ ಅಡಿಕೆ ದರ ಸ್ಥಿರವಾಗಿಮುಂದುವರಿದಿದೆ. ಅಡಿಕೆ ಉತ್ಪಾದನೆ ಜಾಸ್ತಿ ಇದೆ ಎಂಬ ಮಾಹಿತಿಗಳ ನಡುವೆ, ದರ ಕುಸಿಯುವ ಭೀತಿ ಇಲ್ಲ ಎಂಬುದಾಗಿ ವರ್ತಕರ ಹೇಳಿಕೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಧಾರಣೆ ಸ್ವಲ್ಪ ಏರಿಕೆಯಲ್ಲೇ ಇದೆ. ಕಳೆದ ವರ್ಷದಷ್ಟು ಇಳಿಕೆಯ ಅಂಜಿಕೆಯೂ ಇಲ್ಲ. ಒಟ್ಟಿನಲ್ಲಿ ಅಡಿಕೆ ಆಮದು ಆಗುವ…

Read more
ಗೇರು ಹಣ್ಣುಗಳನ್ನು ಸ್ವಚ್ಚ ಮಾಡುತ್ತಿರುವುದು

ಗೇರು ಕೃಷಿಗೆ  ರೈತರಿಂದ ಗುಡ್ ಭೈ – ತೀರಾ ನಷ್ಟದ ಬೆಳೆ

ಒಂದು ಕಾಲದಲ್ಲಿ ಕರಾವಳಿಯ ಎಲ್ಲಾ ಭಾಗಗಳಲ್ಲಿ ಗೇರು ಬೆಳೆ ನಳನಳಿಸುತ್ತಿತ್ತು.  ಎಂತೆಂತಹ ಮರಗಳು, ಬುಟ್ಟಿ ಬುಟ್ಟಿ ಗೇರು ಹಣ್ಣುಗಳು. ಇಂದು ಆ ವೈಭವ ಇಲ್ಲ.ಗೇರು ಮರದಲ್ಲಿ ಹಣ್ಣು ಆದರೂ ಕೊಯ್ಯುವ ಗೋಜಿಗೇ ಹೋಗದ ಜನ, ಕೊಯ್ದ ಮಜೂರಿ ಹುಟ್ಟದ ನಷ್ಟದ ಬೆಳೆಯಾಗಿ, ಗೇರು ಕೃಷಿಗೆ ರೈತರು ಈಗಾಗಲೇಗುಡ್ ಭೈ ಹೇಳುತ್ತಿದ್ದಾರೆ.. ಸದ್ಯವೇ  ಗೇರು ಬೆಳೆ ಎಂಬುದು ನಮ್ಮಲ್ಲಿ ಗತ ವೈಭವವಾದರೂ ಅಚ್ಚರಿ ಇಲ್ಲ.   ಗೇರು ಮರಗಳಿಂದ (Cashew) ಕೊಕ್ಕೆ ಹಾಕಿ ಹಣ್ಣು ಕೊಯ್ಯುವುದು, ಹೆಕ್ಕುವುದು, ಬೀಜ ಪ್ರತ್ಯೇಕಿಸುವುದು,…

Read more
ಮಳೆಗಾಲಕ್ಕೆ ಮುಂಚೆ ಬಸಿಗಾಲುವೆ ಸ್ವಚ್ಚ ಮಾಡಬೇಕಾದದ್ದು ಅಗತ್ಯ ಕೆಲಸ

ಮಳೆಗಾಲಕ್ಕೆ ಮುಂಚೆ ಅಡಿಕೆ ತೋಟದಲ್ಲಿ ಮಾಡಬೇಕಾದ ಅಗತ್ಯ ಕೆಲಸಗಳು.

ಇನ್ನೇನು ಮಳೆಗಾಲ ಬರುವುದಕ್ಕೆ ಹೆಚ್ಚು ಸಮಯ ಇಲ್ಲ. ಅಡಿಕೆ ತೋಟದಲ್ಲಿ ಈಗ ನೀವು ಮಾಡಬೇಕಾದ ಕೆಲವು ಕೆಲಸಗಳು ತೋಟದ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮಳೆಗಾಲದಲ್ಲಿ ಯಾವ ಕೆಲಸವನ್ನೂ ಓರಣವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಕೆಲಸಗಾರರ ಲಭ್ಯತೆಯೂ ಕಡಿಮೆ ಇರುತ್ತದೆ. ಇದಕ್ಕಿಂತೆಲ್ಲಾ ಮುಖ್ಯವಾಗಿ ಮಳೆಗಾಲದಲ್ಲಿ ಮಾಡಲೇ ಬಾರದ ಕೆಲವು ಕೆಲಸಗಳಿವೆ ಅದನ್ನು ಈಗಲೇ ಮಾಡುವುದು ಬಹಳ ಒಳ್ಳೆಯದು. ಈ ಸಮಯದಲ್ಲಿ  ಕಳೆ ತೆಗೆಯುವುದು, ಬಸಿ ಗಾಲುವೆ ಸ್ವಚ್ಚ ಮಾಡುವುದು ಮಾಡಿದರೆ ಉದುರಿ ಹೆಕ್ಕಲು ಸಿಕ್ಕದ ಅಡಿಕೆ ಸಿಗುತ್ತದೆ. ಅದರಿಂದ…

Read more
ಹುಳ ಇರುವ ಬದನೆಕಾಯಿ

ಬದನೆಯಲ್ಲಿ ಹುಳ ಹೇಗೆ ಆಗುತ್ತದೆ.

ತರಕಾರಿ ಬೆಳೆಗಳಲ್ಲಿ ಬದನೆ, ಬೆಂಡೆ ಮುಂತಾದವುಗಳಿಗೆ  ಕಾಯಿ ಕೊರಕ ಎಂಬ ಹುಳು ತೊಂದರೆ ಮಾಡುತ್ತದೆ. ಒಂದು ಪತಂಗ ಕಾಯಿಯ ಮೇಲೆ  ಮೊಟ್ಟೆ ಇಟ್ಟು, ಅದು ಮರಿಯಾಗಿ ಹುಳವಾಗುವುದು. ಬದನೆ ಬೆಳೆಯಲ್ಲಿ ಪ್ರಮುಖ ಸಮಸ್ಯೆ ಕಾಯಿ ಮತ್ತು ಚಿಗುರು ಕೊರಕ ಹುಳು. ಇದರ ಹೆಸರು Leucinodes orbonalis ಈ ದಿನ ಸರಿ ಇದ್ದ ಗಿಡ ನಾಳೆ ಬಾಡುತ್ತದೆ. ಒಂದು ಗಿಡಕ್ಕೆ ಪ್ರಾರಂಭವಾದರೆ  ಮತ್ತೆ ಹೆಚ್ಚುತ್ತಾ  ಹೋಗುತ್ತದೆ. ಕಾಯಿ ಕೊರಕವೂ ಇಂದು ಚೆನ್ನಾಗಿದ್ದ ಕಾಯಿಯಲ್ಲಿ ನಾಳೆ ಸಣ್ಣ ತೂತು ಕಂಡು…

Read more
ಮಾವಿನ ಹಣ್ಣು ಈ ರೀತಿ ಆದರೆ ಅದು ಕೊಳೆಯುವ ಪ್ರಾರಂಭಿಕ ಹಂತ

ಮಾವಿನ ಕಾಯಿ ಹಣ್ಣಾಗುವಾಗ ಕೊಳೆಯುವುದಕ್ಕೆ ಏನು ಕಾರಣ?

ಮಾವಿನ ಹಣ್ಣಿನ ತೊಟ್ಟಿನ ಭಾಗ ಮೊದಲು ಮೆತ್ತಗಾಗಿ ಕೊಳೆಯುತ್ತದೆ. ಹಣ್ಣು ಮೇಲ್ಮೈಯಲ್ಲಿ ಅಲ್ಲಲ್ಲಿ ತಪ್ಪು ಕಲೆಗಳಾಗಿ ಕೊಳೆಯುತ್ತದೆ.  ಮಾವಿನ ಹಣ್ಣು ನೋಡುವಾಗ ಅದನ್ನು ತಿನ್ನಲು ಹೇಸಿಗೆಯೆನಿಸುತ್ತದೆ. ಇದು ಯಾಕೆ ಹೀಗಾಗುತ್ತದೆ ಎಂಬುದರ ಬಗ್ಗೆ ಬಹಳಷ್ಟು ರೈತರಿಗೆ ಗೊತ್ತೇ ಇಲ್ಲ.  ಇದು ರಾಸಾಯನಿಕ ಬಳಸಿ ಬೆಳೆದರೂ ಆಗುತ್ತದೆ. ಸಾವಯವದಲ್ಲಿ ಬೆಳೆದರೂ ಆಗುತ್ತದೆ. ಇದನ್ನು ಕೆಲವು ಕ್ರಮಗಳ ಮೂಲಕ ನಿಯಂತ್ರಣ ಮಾಡಬಹುದು. ಇದು ಮಾವಿನ ಹಣ್ಣಿನ ಸೀಸನ್. ಕೆಲವರ ಮನೆಯಂಗಳದ ಮಾವಿನ ಮರದಲ್ಲಿ ಕಾಯಿ ಇದೆ. ಕೆಲವರು ಅಂಗಡಿಯಿಂದ ಒಯ್ಯುತ್ತಾರೆ. …

Read more
ಹೊಸ ಅಡಿಕೆ ತೋಟ

ಈಗ ಹೊಸ ಅಡಿಕೆ ತೋಟ ಮಾಡಬೇಡಿ- ಹಳೆ ತೋಟ ಚೆನ್ನಾಗಿ ಸಾಕಿ.

ಅಡಿಕೆಗೆ ದರ ಏರಿಕೆಯಾದಾಗ  ರೈತರು ಮಾಡಬೇಕಾಗ ಕೆಲಸ ಇರುವ ತೋಟಕ್ಕೆ ಹೆಚ್ಚು ಆರೈಕೆ ಮಾಡಿ, ಅದರಲ್ಲಿ ಹೆಚ್ಚು ಫಲಪಡೆಯುವುದು ಹೊರತು ಹೊಸ ತೋಟ ಮಾಡುವುದಲ್ಲ. ಅಡಿಕೆ ಬೆಳೆಯುವ ಆಸಕ್ತರಿಗಾಗಿ ಕೊಟ್ಯಾಂತರ ಸಂಖ್ಯೆಯ ಅಡಿಕೆ ಸಸಿಗಳು ಕಾಯುತ್ತಿವೆ. ಅಡಿಕೆ ಬೆಳೆಗಾರರನ್ನು ಗುರಿಯಾಗಿಟ್ಟುಕೊಂಡು  ನಾನಾನಮೂನೆಯ ಗೊಬ್ಬರ ತಯಾರಕರು ರಂಗಕ್ಕೆ ಇಳಿದಿದ್ದಾರೆ. ಬರೇ ಕರ್ನಾಟಕ ಮಾತ್ರವಲ್ಲ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕೇರಳ, ಆಂದ್ರ ಪ್ರದೇಶಗಳ ರೈತರೂ  ಅಡಿಕೆ ಬೆಳೆಯಲು ಮುಂದಾಗಿದ್ದಾರೆ. ಈ ವರ್ಷದಷ್ಟು ಬಿತ್ತನೆ ಅಡಿಕೆ ಈ ತನಕ ಮಾರಾಟ ಆಗಲಿಲ್ಲ,…

Read more
ಅಡಿಕೆ

ವರ್ಷಾಂತ್ಯದಲ್ಲೂ ಸ್ಥಿರತೆ ಉಳಿಸಿಕೊಂಡ ಅಡಿಕೆ ಧಾರಣೆ- ಮುಂದೆ ಇದೆ ಚಾನ್ಸ್.

ಸಾಮಾನ್ಯವಾಗಿ ಮಾರ್ಚ್ ವರ್ಷಾಂತ್ಯದಲ್ಲಿ ದರ ಇಳಿಕೆ ಸಾಮಾನ್ಯ. ಆದರೆ ಈ ವರ್ಷ ಹಾಗೆ ಆಗದೆ ಸ್ಥಿರತೆ ಕಾಯ್ದುಕೊಳ್ಳಲಾಗಿದೆ. ಹಾಗಾಗಿ ಮುಂದಿನ ತಿಂಗಳಲ್ಲಿ ಚಾಲಿ- ಕೆಂಪಡಿಕೆ ಎರಡೂ ಏರಿಕೆ ಆಗಲಿದೆ. ಅಡಿಕೆ ಮಾರುಕಟ್ಟೆಯಲ್ಲಿ ಏರಿಕೆಯ ಸೂಚನೆ ದರ ಸ್ಥಿರತೆಯಲ್ಲಿ ಗಮನಿಸಬಹುದು.  ಚಾಲಿ ಎರಡು ತಿಂಗಳಿಂದ ಸ್ಥಿರವಾಗಿತ್ತು. ಈಗ  ಸಾಗರ, ಹೊಸನಗರ, ಇಲ್ಲೆಲ್ಲಾ ಸಿಪ್ಪೆ ಗೋಟಿಗೆ ಬೇಡಿಕೆ ಬರಲಾರಂಭಿಸಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲಿ ಚಾಲಿ ದರ ಏರಿಕೆ ಪ್ರರಾಂಭವಾಗಿದೆ. ಸಿಪ್ಪೆ ಗೋಟು ದರ ಏರಿಕೆ ಚಾಲಿಗೆ ಬೇಡಿಕೆಯ ಸೂಚನೆಯಾಗಿದ್ದು, ಚಾಲಿ…

Read more
ಮಾವು ಸ್ಪೆಶಲ್ ಬಳಸಿದ ಮಾವು

ಮಾವು ಬೆಳೆಯುವವರು ಇದನ್ನು ಬಳಸಿದರೆ ಭಾರೀ ಫಲಿತಾಂಶ.

ಮಾವು ಬೆಳೆಯುವವರು ಎಷ್ಟೇ ಹೂ ಬಿಟ್ಟರೂ ಬಹಳಷ್ಟು ಕಾಯಿಗಳನ್ನು ಕಳೆದುಕೊಳ್ಳುವುದು ಸಾಮಾನ್ಯ. ಬಲಿಯುವ ತನಕ ಉದುರಿ ಹಾಳಾಗುವ  ಪ್ರಮಾಣ ಅರ್ಧಕ್ಕರ್ಧ. ಇದಕ್ಕೆಲ್ಲಾ ಕಾರಣ ಸಸ್ಯದ ಧಾರಣಾ ಸಾಮರ್ಥ್ಯ. ಸಸ್ಯಕ್ಕೆ ಶಕ್ತಿ ಇದ್ದರೆ ಹೆಚ್ಚು ಫಲವನ್ನು ಆಧರಿಸುತ್ತದೆ. ಇಲ್ಲವಾದರೆ ರೋಗ, ಕೀಟಗಳ ಮೂಲಕ, ಶಾರೀರಿಕ ಅಸಮತೋಲನದ ಮೂಲಕ ಉದುರಿ ನಷ್ಟವಾಗುತ್ತದೆ. ಅದನ್ನು ಸರಿಪಡಿಸಲು ಒಂದು ಪೋಷಕಾಂಶ ಮಿಶ್ರಣದ ಸಿಂಪರಣೆ  ಮಾಡಬಹುದು. ಇದು ಗರಿಷ್ಟ ಪ್ರಮಾಣದಲ್ಲಿ ಕಾಯಿಗಳನ್ನು ಉಳಿಸುತ್ತದೆ. ಮಾವು ಸ್ಪೆಷಲ್  Mango special ಎಂಬ ಪೋಷಕಾಂಶ ಮಿಶ್ರಣ, ಸಸ್ಯ…

Read more
error: Content is protected !!