ಉತ್ತಮ ಇಳುವರಿ ಅಡಿಕೆ

ಅಡಿಕೆ – ತಳಿ ಬೆರಕೆ ಆದರೆ ಇಳುವರಿ ಹೆಚ್ಚುತ್ತದೆ.

ತಳಿ ಯಾವುದೇ ಇದ್ದರೂ ಬರೇ ಒಂದೇ ತಳಿಯನ್ನು ನೆಡುವ  ಬದಲು ಸ್ವಲ್ಪ ಪ್ರಮಾಣದಲ್ಲಿ ಬೇರೆ ತಳಿಗಳನ್ನೂ ಮಿಶ್ರಣ ಮಾಡಿದರೆ ಪರಾಗ ಸ್ಪರ್ಶಕ್ಕೆ ಅನುಕೂಲವಾಗಿ ಇಳುವರಿ ಹೆಚ್ಚು ಬರುತ್ತದೆ. ಯಾವಾಗಲು ಬೆರಕೆ ತಳಿಗಳಿದ್ಡಲ್ಲಿ   ನೈಸರ್ಗಿಕವಾಗಿ ತಳಿ ಅಭಿವ್ರುದ್ಧಿಯೂ ಆಗುತ್ತದೆ. ಇದು ತೆಂಗು, ಅಡಿಕೆಗೆರಡಕ್ಕೂ ಅನುಕೂಲ. ಅಡಿಕೆ ಬೆಳೆಸಲು ಈಗ  ಪ್ರಾದೇಶಿಕ ಇತಿಮಿತಿಗಳು ದೂರವಾಗಿ ಬಯಲು ಸೀಮೆಯಲ್ಲೂ ಬೆಳೆ ಬೆಳೆಯಲಾಗುತ್ತಿದೆ.  ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಅಡಿಕೆ  ಬೆಳೆ ಇದೆ.ಕರಾವಳಿ ಪ್ರದೇಶಕ್ಕೆ ಚಾಲಿಗೆ ಸೂಕ್ತವಾದ ತಳಿಗಳನ್ನು ಆಯ್ಕೆ ಮಾಡಬೇಕು. ಮಲೆನಾಡು ಮತ್ತು…

Read more
ಅಡಿಕೆ

ಅಡಿಕೆ ಧಾರಣೆ ಏನಾಗಬಹುದು? ಯಾಕೆ ಏನೂ ಸಂಚಲನ ಇಲ್ಲ ?

ಅಡಿಕೆ ಧಾರಣೆ ಕಳೆದ ಎರಡು ತಿಂಗಳಿಂದ ನಿಂತ ನೀರಿನ ತರಹ ಮುಂದುವರಿದಿದೆ. ಯಾವ ಏರಿಕೆಯೂ ಇಲ್ಲ. ಇಳಿಕೆಯೂ ಇಲ್ಲ. ಕರಾವಳಿಯ ಅಡಿಕೆ ಬೆಳೆಗಾರರು ಅಡಿಕೆ ಕೊಡುವುದನ್ನು ಕಡಿಮೆಮಾಡಿದ್ದಾರೆ. ಕೆಂಪಡಿಕೆ ಮಾಡುವ ಕಡೆಯೂ ಜನ ದರ ಏರಿಕೆಗೆ ಕಾಯುತ್ತಿದ್ದಾರೆ. ಮಾರುಕಟ್ಟೆಗೆ ಬರುವ ಅಡಿಕೆ ಪೂರ್ತಿ ಚೇಣಿ ಮಾಡಿದವರ ಕಮಿಟ್ಮೆಂಟ್ ಹಾಗೂ ಮುಂದಿನ ಚೇಣಿ ವಹಿಸಿಕೊಳ್ಳುವುದಕ್ಕೇ ಬೇಕಾದ  ಫಂಡ್ ಕ್ರೋಡೀಕರಣಕ್ಕೆ ಎಂಬ ಸುದ್ದಿಗಳಿವೆ. ಇಷ್ಟಕ್ಕೂ ಮುಂದೆ ಅಡಿಕೆ ಧಾರಣೆ ಏನಾಗಬಹುದು, ಏನಾದರೂ ಸಂಚಲನ ಉಂಟಾಗಬಹುದೇ ಎಂಬ ಕುತೂಹಲ ಎಲ್ಲರದ್ದೂ. ಅಡಿಕೆ…

Read more
ಕೆಂಪಡಿಕೆ

ಕೆಂಪಡಿಕೆ ಬಲ- ಚಾಲಿಹಿನ್ನೆಡೆ- ಇಂದು 08-03-2022 ಅಡಿಕೆ ಧಾರಣೆ.

ಹಿಂದಿನ ಲೆಕ್ಕಾಚಾರಗಳು ಹಾಗೂ ಪರಿಸ್ಥಿತಿಗಳಂತೆ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಉತ್ಸಾಹ ಕಡಿಮೆಯಾಗಿದೆ. ಅತ್ಯಲ್ಪ ಪ್ರಮಾಣದ ಅಡಿಕೆ ಮಾತ್ರ ಉತ್ತಮ ದರಕ್ಕೆ ಖರೀದಿಯಾಗುತ್ತಿದ್ದು, ಪ್ರಕಟಣೆಯ ದರಕ್ಕೂ ಕೊಳ್ಳುವ ದರಕ್ಕೂ ಸಂಬಂಧವೇ ಇಲ್ಲದಾಗಿದೆ. ಆದರೆ ಕೆಂಪಡಿಕೆ ಮಾರುಕಟ್ಟೆ ಮಾತ್ರ  ಬಲ ಕಳೆದುಕೊಳ್ಳದೆ ಉಳಿದಿದೆ. ಬಹುತೇಕ ಕೆಂಪಡಿಕೆ ಉಳ್ಳವರು ಉತ್ತಮ ದರದ ನಿರೀಕ್ಷೆಯಲ್ಲಿ ಮಾರಾಟ ಮಾಡುವುದನ್ನು ಮುಂದೂಡುತ್ತಿದ್ದಾರೆ.ಈ ವರ್ಷ ಹಿಂದೆಲ್ಲಾ ಆಗುತ್ತಿದ್ದಂತೆ ಕೆಂಪಡಿಕೆ ದರವನ್ನು ಹಿಂಬಾಲಿಸುತ್ತಾ ಚಾಲಿ ದರ ಮುಂದುವರಿಯಲಿದೆ ಎಂಬ ವದಂತಿಗಳಿವೆ.   ನಿನ್ನೆ ದಿನಾಂಕ 07-03-2022 ರಂದು ಕೆಂಪಡಿಕೆಯ…

Read more
ಅಡ್ಡ ಇಟ್ಟ ತೆಂಗಿನ ಯಾಇಯಲ್ಲಿ ಮೊಳಕೆ ಬಂದಿರುವುದು.

ಬೀಜದ ತೆಂಗಿನ ಕಾಯಿಯನ್ನು ಹೇಗೆ ಮೊಳಕೆ ಬರಲು ಇಡಬೇಕು?

ಯಾವುದೇ  ಸಸಿ  ಮಾಡುವಾಗ ಮೊದಲಾಗಿ ಬೀಜ ಮೂಲ ಒಳ್ಳೆಯದು ಆಗಿರಬೇಕು. ತೃಪ್ತಿಕರ ಗುಣಪಡೆದ ಮರದಿಂದ ಮಾತ್ರ ಬೀಜದವನ್ನು ಆಯ್ಕೆ ಮಾಡಬೇಕು. ಬೀಜದ ಆಯ್ಕೆಗೆ ಮೊದಲ ಸ್ಥಾನವಾದರೆ , ಆ ಬೀಜವನ್ನು ಸೂಕ್ತ ವಿಧಾನದಲ್ಲಿ  ಮೊಳಕೆ ಬರಿಸುವುದು ಎರಡನೇ ಪ್ರಾಮುಖ್ಯ ಹಂತ. ಸಧೃಢ ಮೊಳಕೆಯ ಸಸಿ ಮಾತ್ರ ಆರೋಗ್ಯಕರವಾಗಿ ಬೆಳೆಯಬಲ್ಲುದು. ತೆಂಗಿನ ಬೀಜದ ಆಯ್ಕೆಯೂ ಇದಕ್ಕೆ ಹೊರತಲ್ಲ. ಉತ್ತಮ ಬೀಜವನ್ನು ಯೋಗ್ಯ ರೀತಿಯಲ್ಲಿ ಮೊಳಕೆಗೆ ಇಟ್ಟರೆ ಅದು ಉತ್ತಮ ಸಸಿಯಾಗುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುತ್ತಾರೆ ಹಿರಿಯರು. ಅಂದರೆ…

Read more
ಅಡಿಕೆ ರಾಸಿ

ಮುಂದಿನ ತಿಂಗಳಲ್ಲಿ ಅಡಿಕೆ ಧಾರಣೆ ಹೇಗಾಗಬಹುದು?

ಜನವರಿ 2022 ಅಡಿಕೆ ಬೆಳೆಗಾರರು ಹೊಸ ಚಾಲಿ ಅದೂ ಸಾಧಾರಣ ಗುಣಮಟ್ಟದ ಅಡಿಕೆಗೆ ಕಿಲೋ 430-440  ತನಕ ಪೆಡೆದಿದ್ದರು. ಫೆಬ್ರವರಿಯಲ್ಲಿ ಧಾರಣೆ ಕುಂಟುತ್ತಾ  ಸಾಗಿದೆ.  ಕ್ಯಾಂಪ್ಕೋ ಬೆಂಬಲದಲ್ಲಿ ದರ ಬೀಳಲಿಲ್ಲ ಎನ್ನಲಾಗುತ್ತಿದೆ. ಖಾಸಗಿಯವರು ದರ ಇಳಿಸಿ, ನಾವು ಸ್ಪರ್ಧೆಗೆ ಇಲ್ಲ ಎಂದು ಹಿಂದೆ ಸರಿದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮುಂದಿನ ತಿಂಗಳು ಚಾಲಿ ಅಡಿಕೆ ದರ ಸ್ವಲ್ಪ ಹಿಂದೆ ಬರುವ ಸಾಧ್ಯತೆ ಕಂಡು ಬರುತ್ತಿದೆ. ಆದಾಗ್ಯೂ ಸ್ವಲ್ಪ ಪ್ರಮಾಣದಲ್ಲಿ  ಆಮದು ಆಗಿದೆಯಾದರೂ, ಇದನ್ನು ಸರಕಾರದ ಗಮನಕ್ಕೆ ತಂದು…

Read more
ಉತ್ತಮ ಇಳುವರಿಯ ತೆಂಗು

100 ತೆಂಗಿನ ಮರಕ್ಕೆ 10000 ಕಾಯಿ ಹೇಗೆ ಪಡೆಯಲು ಬೇಕಾದ ಆರೈಕೆ.

ತೆಂಗಿನ ಮರವೊಂದರ ಇಳುವರಿ ಸಾಮರ್ಥ್ಯದಷ್ಟನ್ನು ನಾವು ಪಡೆಯುತ್ತಿಲ್ಲ.  ಯಾರಿಗೆ 100 ತೆಂಗಿನ ಮರಕ್ಕೆ 10,000 ತೆಂಗಿನಕಾಯಿ ಆಗುತ್ತದೆಯೋ ಅವರಿಗೆ ತೆಂಗು ಕೃಷಿ ಲಾಭದಾಯಕ. 10000 ಕಾಯಿಗಿಂತ ಹೆಚ್ಚು ಪಡೆಯಲು ಹಾಕಬೇಕಾದ ಗೊಬ್ಬರ ಮತ್ತು ಮಾಡಬೇಕಾದ ಆರೈಕೆ  ಇವು. ತೆಂಗು ಒಂದು ಏಕದಳ ಸಸ್ಯ. ಇದಕ್ಕೆ ತಾಯಿ ಬೇರು ಇಲ್ಲ. ಇರುವ ಎಲ್ಲಾ ಹಬ್ಬು ಬೇರುಗಳೂ ಆಹಾರ ಸಂಗ್ರಹಿಸಿ ಕೊಡುವ ಬೇರುಗಳಾಗಿದ್ದು, ನಿರಂತರವಾಗಿ ನಿರ್ದಿಷ್ಟ ಪ್ರಮಾಣದ ಪೋಷಕಗಳನ್ನು ಕೊಟ್ಟರೆ ಇದು ಗರಿಷ್ಟ ಇಳುವರಿಯನ್ನು ಕೊಡಬಲ್ಲುದು. ತೆಂಗಿನ ಉತ್ತಮ ಇಳುವರಿಗೆ …

Read more
ಕೆಂಪಡಿಕೆ ರಾಸೀ

ಕೆಂಪಡಿಕೆ ಉಮೇದು – ಚಾಲಿ ನಡುಕ- ಕರಿಮೆಣಸು ಕುಸಿತ.22-02-2022 ಮಾರುಕಟ್ಟೆ.

ಈ ವರ್ಷದ ನಿರೀಕ್ಷೆಯಂತೆ ಕೆಂಪಡಿಕೆ ದರಕ್ಕೆ ಅಂಜಿಕೆ ಇಲ್ಲ. ಇದು ಏರಿಕೆಯಾಗುವುದು ತಡವಾದರೂ ಇಳಿಕೆ ಆಗುವ ಸಾಧ್ಯತೆ ತುಂಬಾ ಕಡಿಮೆ. ಚಾಲಿ ಮಾತ್ರ ಈ ವರ್ಷ ಭಾರೀ ಏರಿಕೆಯ ನಿರೀಕ್ಷೆ ಇಲ್ಲ. ಹಾಗೆಂದು ಬಾರೀ ಇಳಿಕೆಯೂ ಆಗದು. ಇಂದು ದಿನಾಂಕ 22-02-2022 ಮಂಗಳವಾರ ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅಡಿಕೆ, ಕರಿಮೆಣಸು, ಕೊಬ್ಬರಿ, ರಬ್ಬರ್, ಕಾಫೀ ದರ ಹೇಗಿತ್ತು ಗಮನಿಸಿ. ಚಾಲಿ ದರ ಖಾಸಗಿಯವರ ಸ್ಪರ್ಧೆ ಇಲ್ಲದೆ ಅಲ್ಲಾಡುತ್ತಿಲ್ಲ. ಹಾಗೆಂದು ಕರಾವಳಿಯಲ್ಲಿ ಅಡಿಕೆ ಬೆಳೆಗಾರರು…

Read more
ಅಡಿಕೆ ಸಿಂಗಾರ

ಅಡಿಕೆ – ಸಿಂಗಾರಕ್ಕೆ ಸಿಂಪರಣೆ ಯಾವಾಗ ಯಾವುದನ್ನು ಮಾಡಬೇಕು?

ಅಡಿಕೆಯ ಮಿಡಿ ಉಳಿಸುವುದಕ್ಕೆ ಕೀಟನಾಶಕ, ಶಿಲೀಂದ್ರನಾಶಕದ ಬಳಕೆ ಯಾವಾಗ ಯಾವುದನ್ನು ಮಾಡಬೇಕು, ಅನವಶ್ಯಕವಾಗಿ ಸಿಂಪಡಿಸಿದರೆ ನಷ್ಟ ಏನು ಎಂಬ ಬಗ್ಗೆ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ರೋಗ ಶಾಸ್ತ್ರಜ್ಞ ಡಾ. ವಿನಾಯಕ ಹೆಗಡೆಯವರ ಜೊತೆ ಚರ್ಚಿಸಿ ಆ ಪ್ರಕಾರ ರೈತರಿಗೆ ತಿಳಿಸುವ ಮಾಹಿತಿ ಇದು. ಅಡಿಕೆಗೆ ಬೆಲೆ ಚೆನ್ನಾಗಿದೆ. ಹಾಗಾಗಿ  ಹೇಗಾದರೂ ಮಾಡಿ ಹೂ ಗೊಂಚಲಿನಲ್ಲಿ ಇರುವ ಎಲ್ಲಾ ಕಾಯಿಗಳನ್ನೂ ಉಳಿಸಿಕೊಳ್ಳಬೇಕು, ಗರಿಷ್ಟ ಇಳುವರಿ ಪಡೆಯಬೇಕು ಎಂಬ  ಆಸೆಯಲ್ಲಿ ಇತ್ತೀಚೆಗೆ ನಾವು ಹೂಗೊಂಚಲಿಗೆ ಕೀಟನಾಶಕ,…

Read more
ರೋಗ ಸೋಂಕಿತ ಮರ

ತೆಂಗು- ಅಡಿಕೆ ಮರಗಳಿಗೆ ಬಂದಿದೆ ಹೊಸ ಮಾರಣಾಂತಿಕ ಸಾಂಕ್ರಾಮಿಕ ರೋಗ.

ತೆಂಗು ಅಡಿಕೆ ಬೆಳೆ ಬೆಳೆಯುವುದು ಈಗ ಹಿಂದಿನಷ್ಟು ಸುಲಭವಾಗಿಲ್ಲ. ಹಿಂದೆ ಸಸಿ ನೆಟ್ಟರೆ ಅದು ನೀರಾವರಿ ಗೊಬ್ಬರ ಕೊಟ್ಟರೆ ಚೆನ್ನಾಗಿಯೇ ಬೆಳೆಯುತ್ತಿತ್ತು. ಈಗ ಹಾಗಿಲ್ಲ. ನೀರು, ಗೊಬ್ಬರ ಎರಡನ್ನು ಕೊಡಲು ನಾವು ಜಿಪುಣತನ ಮಾಡುವುದಿಲ್ಲ. ಆದರೆ ವಾತಾವರಣ ನಮಗೆ ಸಹಕಾರ ಕೊಡುತ್ತಿಲ್ಲ. ಹಿಂದೆ ಮೈನರ್ ರೋಗ ಕಾರಕಗಳಾಗಿದ್ದವು, ಈಗ ಪ್ರಭಲರೋಗಗಳಾಗುತ್ತಿವೆ. ಅದೇ ರೀತಿಯಲ್ಲಿ ಕೀಟಗಳೂ. ಕೀಟ – ರೋಗ ನಾಶಕಕ್ಕೆ ಬಗ್ಗದ ಸ್ಥಿತಿ  ಉಂಟಾಗಿದೆ. ಬಹುಷಃ ಇನ್ನು ಮುಂದಿನ ದಿನಗಳು ಅಡಿಕೆ ತೆಂಗು ಬೆಳೆಗಾರರಿಗೆ ರೋಗ –…

Read more
ಆಡಿಕೆ

ಅಡಿಕೆ ಮಾರುಕಟ್ಟೆ ಡಲ್ ಯಾಕೆ?. ದಿನಾಂಕ:09-02-2022 ರಂದು ರಾಜ್ಯದಲ್ಲಿ ಎಲ್ಲೆಲ್ಲಿ ಏನು ದರ.

ಅಡಿಕೆ ದರ ಎರಿಕೆಯಾಗುವ ಸೂಚನೆ ಇಲ್ಲ. ಪುಣ್ಯಕ್ಕೆ ಇಳಿಕೆಯೂ ಇಲ್ಲವಲ್ಲ. ಅದಕ್ಕೆ ಸಂತೋಷ ಪಡಬೇಕು. ಚಾಲಿ ಅಡಿಕೆ ಮಾರುಕಟ್ಟೆ ಮೇಲ್ನೋಟಕ್ಕೆ ಸ್ಥಿರವಾಗಿದೆ ಎಂದು ಕಂಡುಬಂದರೂ ದರ ಇಳಿಕೆಯಾಗಿದೆ. ಸೂಚಿಸಿದ ದರಕ್ಕೆ ಖರೀದಿ ಮಾಡುವವರು ಇಲ್ಲ.  ಹಾಗಾಗಿ ಅಡಿಕೆ ಮಾರುಕಟ್ಟೆ ಡಲ್. ಬಹುಷಃ ಇದು ಇನ್ನೂ 2-3 ತಿಂಗಳು ಹೀಗೇ ಮುಂದುವರಿಯುವ ಸಾಧ್ಯತೆ.ದಿನಾಂಕ 09-02-2022  ಬುಧವಾರ ರಾಜ್ಯದಲ್ಲಿ ಅಡಿಕೆ ಮಾರುಕಟ್ಟೆ ಧಾರಣೆ. ಚಾಲಿ ಅಡಿಕೆ ಹಾಗೂ ಕೆಂಪಡಿಕೆಯ ಆಮದು ಸಾಧ್ಯತೆ ಇದೆ ಎಂಬ ಸುದ್ದಿ ಇದೆ. ಈಗಾಗಲೇ  ಮಿಜೋರಾಂ…

Read more
error: Content is protected !!