good yielded plant

ಬೀಜಕ್ಕಾಗಿ ಅಡಿಕೆ ಹಣ್ಣು ( ಗೋಟು) ಅಯ್ಕೆ ಮಾಡುವ ಸೂಕ್ತ ವಿಧಾನ.

ಈಗ ಎಲ್ಲರೂ ಬೀಜಕ್ಕಾಗಿ ಅಡಿಕೆ ಹಣ್ಣು ( ಗೋಟು) ಅಯ್ಕೆ ಮಾಡುವ (ಬೀಜದ ಅಡಿಕೆ) ಅವಸರದಲ್ಲಿದ್ದಾರೆ. ಉತ್ತಮ ಇಳುವರಿ ಕೊಡುವ ತಳಿ ಬೇಕು ಎಂಬುದು ಎಲ್ಲರ ಆಕಾಂಕ್ಷೆ . ಬೀಜದ ಅಡಿಕೆ ಹುಡುಕಾಟದ ಭರದಲ್ಲಿ ತಮ್ಮ ಕಾಲ ಬುಡದಲ್ಲೇ ಇರುವ  ಉತ್ಕೃಷ್ಟ ತಳಿಯ ಅಡಿಕೆಯನ್ನು ಗಮನಿಸುವುದೇ ಇಲ್ಲ.  ನಿಜವಾಗಿ ಹೇಳಬೇಕೆಂದರೆ ಅವರವರ ಹೊಲದಲ್ಲಿ  ಅಥವಾ ಅವರ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವ ತಳಿಗಳೇ  ಉತ್ಕೃಷ್ಟ ತಳಿಯಾಗಿರುತ್ತದೆ. ಯಾವುದೇ ಬೆಳೆಯಲ್ಲಿ ಬೀಜದ ಆಯ್ಕೆ ಎಂಬುದು ಪ್ರಾಮುಖ್ಯ ಘಟ್ಟ. ಬೀಜದ ಗುಣದಲ್ಲೇ…

Read more
ಅಡಿಕೆ ಬೆಳೆಯಲ್ಲಿ ಹೆಚ್ಚಳವಾಗುತ್ತಿರುವ ಸಮಸ್ಯೆ

ಅಡಿಕೆ ಬೆಳೆಯಲ್ಲಿ ಈ ಸಮಸ್ಯೆ ಬಾರೀ ಹೆಚ್ಚಳವಾಗಲು ಕಾರಣ.

ಇತ್ತೀಚೆಗೆ ಬಹುತೇಕ ಎಲ್ಲಾ ಅಡಿಕೆ ಬೆಳೆಗಾರರಲ್ಲೂ ಈ ಸಮಸ್ಯೆ ಹೆಚ್ಚಾಗುತ್ತಿದೆ. ಎಲ್ಲರೂ ಇದಕ್ಕೆ ಏನು ಪರಿಹಾರ ಎಂದು ಕೇಳುವವರು. ಆದರೆ ಯಾಕಾಗಿ ಈ  ಸಮಸ್ಯೆ ಹೆಚ್ಚಾಯಿತು ಎಂದು ಯಾರೂ ಹೇಳುತ್ತಿಲ್ಲ.ಇದು ಹೊಸ ಸಮಸ್ಯೆ ಅಲ್ಲ. ಅಡಿಕೆ ಬೆಳೆ ಪ್ರಾರಂಭವಾದಾಗಿನಿಂದಲೂ ಇದ್ದುದೇ. ಆದರೆ ಈಗ ಅದು ಮಿತಿ ಮೀರಿ ಹೆಚ್ಚಳವಾಗುತ್ತಿದೆ.ಎಲ್ಲಾ ಕಡೆಯಲ್ಲೂ ಇದು ಅಡಿಕೆ ಬೆಳೆಯನ್ನು ಪೀಡಿಸುತ್ತಿದೆ. ಅಡಿಕೆ ಮರ/ ಸಸಿಗಳ ಎಲೆಯನ್ನು ಹಾಳು ಮಾಡುವ ಒಂದು ರೀತಿಯ ತಿಗಣೆ ಇತ್ತೀಚಿನ ವರ್ಷಗಳಲ್ಲಿ  ಭಾರೀ ಸಮಸ್ಯೆ ಉಂಟು ಮಾಡುತ್ತಿದೆ….

Read more
ಕೆಂಪು ಅಡಿಕೆ ಧಾರಣೆ

ಡಿಸೆಂಬರ್ ಎರಡನೇ ಶುಕ್ರವಾರ-10-12-2021.ಅಡಿಕೆ ಧಾರಣೆ.

ಅಡಿಕೆ ಬೆಳೆಗಾರರು  ಹೆಚ್ಚಾಗಿ  ವಾರದ ಮೊದಲ ದಿನ ಸೋಮವಾರದ ಧಾರಣೆ ಹೇಗಿರುತ್ತದೆ ಮತ್ತೆ ಶುಕ್ರವಾರದ ಧಾರಣೆ ಹೇಗಿರುತ್ತದೆ ಎಂದು ಗಮನಿಸಿ ಏರಿಳಿತವನ್ನು ಲೆಕ್ಕಾಚಾರ ಹಾಕುತ್ತಾರೆ. ಸೋಮವಾರ ಏರಿಕೆಯಾದರೆ ಇಡೀ ವಾರ  ಹಾಗೆಯೇ ಮುಂದುವರಿಯುತ್ತದೆ. ಶುಕ್ರವಾರದ ದರ ಮುಂದಿನ ವಾರದ ದರವನ್ನು ಅಂದಾಜು ಮಾಡಲು ಸಹಾಯಕ. ಇಂದು ದಿನಾಂಕ 10-12-2021 ಶುಕ್ರವಾರ ದರ ಇಳಿಕೆಯಾಗದೆ ಸ್ವಲ್ಪ ಏರಿಕೆಯೇ ಆದ ಕಾರಣ ಮುಂದಿನ ವಾರವೂ ಹೀಗೆ ಮುಂದುವರಿಯಬಹುದು, ಇಂದು ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಚಾಲಿ ಹೊಸತು 43,500-45200 ತನಕ, ಹಳೆ…

Read more
ಕೆಂಪಡಿಕೆ ರಾಸೀ ಶ್ರಿಂಗೇರಿ

ಕೆಂಪಡಿಕೆ- ಸುಪಾರಿ ಎರಡೂ ಏರಿಕೆ- ಸೋಮವಾರ 06-12-2021 ರ ಧಾರಣೆ.

ಕರಾವಳಿಯಲ್ಲಿ ಅಡಿಕೆ ಖರೀದಿಯ ಪ್ರಮುಖ ಸಂಸ್ಥೆ ಕ್ಯಾಂಪ್ಕೋ ಇಂದು ಹಳೆ ಸುಪಾರಿ, ಡಬ್ಬಲ್ ಚೋಲ್ ಗಳಿಗೆ ಏಕಾಏಕಿ 10 ರೂ. ಏರಿಸಿ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನವನ್ನು ಉಂಟುಮಾಡಿದೆ.  ಖಾಸಗಿಯವರು ನಾವೂ ಸ್ಪರ್ಧೆಗೆ ಸಿದ್ದರಿದ್ದೇವೆ ಎಂದು ತೋರಿಸಿದ್ದಾರೆ. ಕ್ಯಾಂಪ್ಕೋ ಹೊಸ ಸುಪಾರಿ ಕ್ವಿಂಟಾಲಿಗೆ 43,500, ಖಾಸಗಿ 45,000, ಹಳೆ ಅಡಿಕೆ ಕ್ಯಾಂಪ್ಕೋ 42,500- ಡಬ್ಬಲ್ ಚೋಲ್ 43,000 ಖಾಸಗಿ 54,000 ದರದಲ್ಲಿ ಖರೀದಿ ನಡೆದಿದೆ. ಶಿರಸಿಯಲ್ಲಿ ಕೆಂಪಡಿಕೆ (ರಾಶಿ) ಮತ್ತೆ ಬೆಲೆ ಏರಿಕೆಯಾಗಿದೆ. ಬಹುಷಃ ಈ ವಾರ ಮತ್ತೆ…

Read more
ಬಿಲಿ ಚಾಲಿ ಸುಪಾರಿ ಅಡಿಕೆ

ಶುಕ್ರವಾರದ ಅಡಿಕೆ ಧಾರಣೆ-ದಿನಾಂಕ 03-12-2021

ಅಡಿಕೆ ಬೆಳೆಗಾರರಿಗೆ 2021 ವರ್ಷ ಅಂತಹ ನಿರಾಸೆಯನ್ನೆನೂ ಮಾಡಲಿಲ್ಲ.  ವರ್ಷದ ಹೆಚ್ಚಿನ ಸಮಯದಲ್ಲಿ ಉತ್ತಮ ಬೆಲೆ ಇತ್ತು.  ಕಳೆದ ವರ್ಷ ಮತ್ತು ಈ ವರ್ಷ ಅಡಿಕೆಗೆ ಬೇಡಿಕೆ ಎಷ್ಟು ಇದೆ ಎಂಬುದರ ಪೂರ್ಣ ಚಿತ್ರಣ ಸಿಕ್ಕಿದೆ. ಆಮದು ಮಾಡುತ್ತಾ ದೇಶದ ಅಡಿಕೆ ಬೆಳೆಗಾರರ ಮೇಲೆ ಕಲ್ಲು ಹೊತ್ತು ಹಾಕುತ್ತಾ ಈ ತನಕ ನಮ್ಮನ್ನು ಮೋಸವೇ ಮಾಡಲಾಗಿತ್ತು. ಇದೆಲ್ಲವೂ ಈಗ ಜನತೆಗೆ ಗೊತ್ತಾಗಿದೆ. ವರ್ಷದ ಕೊನೆ ತಿಂಗಳು, ಮೊದಲ ವಾರ ಶುಕ್ರವಾರ ಅಡಿಕೆ ಬೆಳೆಗಾರರ ಪಾಲಿಗೆ ಉತ್ತಮ ಧಾರಣೆ…

Read more
ಒಂದು ವರ್ಷ ದಾಟುತ್ತಿರುವ ಅಡಿಕೆ ಗಿಡ ಹೀಗೆ ಬೆಳೆದರೆ ಉತ್ತಮ ಫಸಲು ಗ್ಯಾರಂಟಿ.

ಅಡಿಕೆ ಬೆಳೆಯುವವರು ಗಮನಿಸಿ- ಉತ್ತಮ ಫಲ ಪಡೆಯಲು ಗಿಡ ಹೇಗೆ ಬೆಳೆಯ ಬೇಕು.

ಅಡಿಕೆಗೆ ಬೆಲೆ ಏರಿಕೆ ಆದಂತೆ ಬೆಳೆಯುವ ರೈತರೂ ಹೆಚ್ಚಾಗುತ್ತಾರೆ. ಭತ್ತ , ಜೋಳ, ಹತ್ತಿ, ತರಕಾರಿ ಬೆಳೆ ಬೆಳೆದು ಹೊಟ್ಟೆ ಬಟ್ಟೆಗೂ ಸಾಕಾಗದ ಸ್ಥಿತಿಯಲ್ಲಿ ಬದುಕು ಸಾಗಿಸುವುದಕ್ಕಿಂತ ಏನಾದರೂ ಹೆಚ್ಚುವರಿ ಆದಾಯ ಪಡೆಯಬಹುದೆಂಬ ಅಸೆ ಸಹಜ. ಆದರೆ ಕೆಲವರು ತಮ್ಮ ತೋಟದ ಅಡಿಕೆ ಗಿಡಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿ ಸಲಹೆ ಕೇಳುವಾಗ, ಇಂತಹ ಸಸಿಗಳಿಂದ ಅಡಿಕೆ ಫಸಲು ಪಡೆಯಬಹುದೇ ಎಂಬ ಸಂಶಯವೂ ಬರುತ್ತದೆ. ಮುಖ್ಯವಾಗಿ ಅಡಿಕೆ ತೋಟ ಮಾಡುವ ವಿಧಾನ ಜಠಿಲ ಅಲ್ಲದಿದ್ದರೂ, ಕಾಲ ಕಾಲಕ್ಕೆ…

Read more
ಅಡಿಕೆ ಮಾರಾಟ

ಅಡಿಕೆಗೆ ದರ ಎರಿಕೆಯಾಗುತ್ತಿದೆ- ಬೆಳೆಗಾರರು ಎಚ್ಚರವಹಿಸಿ. 30-11- 2021ರಂದು ಧಾರಣೆ.

ಇಷ್ಟೊಂದು ಅಡಿಕೆ ಉತ್ಪಾದನೆ ಇದೆ. ಬೆಳೆ ಕಡಿಮೆ ಇದ್ದರೂ ಹೊಸ ತೋಟಗಳು ಹೆಚ್ಚಾಗಿ ಉತ್ಪಾದನೆ ಕಡಿಮೆ ಆಗಿಲ್ಲ. ಒಂದೇ ಒಂದು ಎಂದರೆ  ಅಡಿಕೆ ಆಮದು ಇಲ್ಲ ಎಂಬುದು. ಈ ಕಾರಣಕ್ಕೆ  ಅಡಿಕೆಗೆ ಭಾರೀ ಬೇಡಿಕೆ ಉಂಟಾಗಿದೆ. ನವೆಂಬರ್ ತಿಂಗಳು ಅಡಿಕೆ ಬೆಳೆಗಾರರಿಗೆ ಎಲ್ಲೂ ನಿರಾಸೆ ಕೊಡಲಿಲ್ಲ. ಚಾಲಿ ಅಡಿಕೆ, ಕೆಂಪಡಿಕೆ ಎರಡೂ ಏರಿಕೆಯ ಯಲ್ಲೇ ಮುಂದುವರಿದಿದೆ. ಕರಿಮೆಣಸು ಮೊದಲು ಏರಿಕೆಯ ಗತಿಯಲ್ಲಿ ಇತ್ತಾದರೂ ನಂತರ ಇಳಿಕೆ ಹಾದಿ ಹಿಡಿಯಿತು. ಕೊಬ್ಬರಿ ಸಹ ಒಮ್ಮೆ ಏರಿಕೆ ಆಗಿ ಸ್ವಲ್ಪ…

Read more
ರಾಸಿ ಅಡಿಕೆ ರಾಶಿ

ಈಗ ಚಾಲಿ – ಮುಂದೆ ಕೆಂಪು – ಅಡಿಕೆ ಮಾರುಕಟ್ಟೆ ಸ್ಥಿತಿ. 26/11/2021 ಶುಕ್ರವಾರದ ಧಾರಣೆ.

ಚಾಲಿ ಅಡಿಕೆಗೆ ಭಾರೀ ಬೇಡಿಕೆ ಉಂಟಾಗಿದ್ದು, ಇದರ ಮುನ್ಸೂಚನೆ ಶಿರಸಿ, ಸಿದ್ದಾಪುರ, ಸಾಗರ ಮಾರುಕಟ್ಟೆಯ ಮೂಲಕ ಕಾಣಿಸುತ್ತಿದೆ. ಇಲ್ಲಿನ ಅಡಿಕೆಗೆ ದರ ಹೆಚ್ಚಳವಾದರೆ ಸಧ್ಯವೇ ಉಳಿದೆದೆ ದರ ಏರುವುದು ಹಿಂದಿನಿಂದಲೂ ಬಂದ ವಾಡಿಕೆ. ಇಂದು ಶಿವಮೊಗ್ಗ, ಉತ್ತರಕನ್ನಡದ ಮಾರುಕಟ್ಟೆಯಲ್ಲಿ ಚಾಲಿ ಕ್ವಿಂಟಾಲಿಗೆ  51000 ರೂ.ತಲುಪಿದೆ. ಕರಾವಳಿಯಲ್ಲೂ ಸಧ್ಯವೇ 53,000 ದಾಟುವ ಮುನ್ಸೂಚನೆ ಕಾಣಿಸುತ್ತಿದೆ. ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ಕೊರತೆ ಇದೆ. ಈ ವರ್ಷ ದರ ಏರಿಕೆಯಲ್ಲೇ ಇದ್ದ ಕಾರಣ ಹಾಗೆಯೇ ಅನಿಶ್ಚಿತತೆ ವಾತಾವರಣ ಇದ್ದ ಕಾರಣ  ಬಹುತೇಕ…

Read more
ಆಡಿಕೆ- ರಾಶೀ ಕೆಂಪು

ಅಡಿಕೆ, ಕರಿಮೆಣಸು, ಕೊಬ್ಬರಿ, ರಬ್ಬರ್ ದರ ಏರಿಕೆ-ದಿನಾಂಕ:23-11-2021.

ಕಳೆದ ವಾರದಲ್ಲಿಯೂ ಅಡಿಕೆ ಧಾರಣೆ ತುಸು ಏರಿಕೆ ಕಂಡಿತ್ತು. ಈಗ ಮತ್ತೆ ಸ್ವಲ್ಪ ಏರಿಕೆ ಕಂಡಿದೆ. ಕೊಬ್ಬರಿ ಧಾರಣೆ  ಜನವರಿ ಸುಮಾರಿಗೆ 18,000 ದಾಟಬಹುದು ಎಂಬ ಲೆಕ್ಕಾಚಾರ ಇತ್ತಾದರೂ ಅದು ನವೆಂಬರ್ ನಲ್ಲಿಯೇ ಆಗಿದೆ. ರಬ್ಬರ್ ಸಹ ಏರಿಕೆಯಾಗುತ್ತಿದೆ. ಕಳೆದ ವಾರ ಹಿಮ್ಮುಖವಾಗಿದ್ದ ಕರಿಮೆಣಸಿನ ದರ ಈ ವಾರ ಮತ್ತೆ ಏರಿಕೆಯತ್ತ  ಸಾಗಿದೆ. ದಿನಾಂಕ 23-11-2021 ನೇ ಮಂಗಳವಾರ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ ಹೀಗಿದೆ. ಅಡಿಕೆ ಆಮದು ಆಗುತ್ತಿಲ್ಲ. ಪರಿಸ್ಥಿತಿ ಅನುಕೂಲಕರವಾಗಿಯೇ…

Read more
ಎಲೆ ಹಳದಿಯಾಗಿ ಅಡಿಕೆ ಮರ ಸಾಯುವ ಕ್ರಮ

ಅಡಿಕೆ ಮರಗಳು ಸಾಯುವುದಕ್ಕೆ ಪ್ರಮುಖ ಕಾರಣ ಮತ್ತು ಪರಿಹಾರ.

ಬಹಳಷ್ಟು ಅಡಿಕೆ ಬೆಳೆಗಾರರ ತೋಟದಲ್ಲಿ ಫಲಕೊಡುತ್ತಿರುವ ಸಸಿ/ ಮರಗಳು ಸಾಯುತ್ತವೆ. ರೈತರು ಇಂತಹ ಸಮಸ್ಯೆ ಆದಾಗ ಫೇಸ್ ಬುಕ್ ನಲ್ಲಿ ವಿಷಯ ಹಾಕಿ ಪರಿಹಾರ ಅಪೇಕ್ಷಿಸುತ್ತಾರೆ. ಅಲ್ಲಿ ಒಂದಶ್ಟು ಕಮೆಂಟ್ ಗಳು ಬರುತ್ತವೆ. ಅವರಿಗೆ ಸರಿಕಂಡದ್ದನ್ನು ಸ್ವೀಕರಿಸುತ್ತಾರೆ. ವಾಸ್ತವವಾಗಿ ಅಡಿಕೆ ಸಸಿಗಳು ಸಾಯುವುದಕ್ಕೆ ಕಾರಣ ಎರಡು. ಯಾವುದೇ ಸಸಿ ಸಾಯಬೇಕಾದರೆ ಅದರ ಬೇರಿಗೆ ತೊಂದರೆ ಆಗಿರಬೇಕು ಆಥವಾ ಸಸ್ಯದ ಮೇಲಿನ  ಭಾಗಕ್ಕೆ ಯಾವುದಾದರೂ ರೋಗ ತಗಲಿ ಅದರಿಂದಾಗಿ ಸಾಯಬೇಕು. ಇವೆರಡರಲ್ಲಿ ಯಾವುದು ಆಗಿದೆ ಎಂದು ಪರಿಶೀಲಿಸಿದರೆ ಅದಕ್ಕೆ…

Read more
error: Content is protected !!