ರಾಶಿ ಅಡಿಕೆ, ಚಾಲಿ, ಕರಿಮೆಣಸು ದರ ಏರಿಕೆ- ದಿನಾಂಕ: 16-11-2021 ಮಂಗಳವಾರ.
ಇಂದು ದಿನಾಂಕ 16-11-2021 ರ ಮಂಗಳವಾರ ಉತ್ತರ ಕನ್ನಡದ ಪ್ರಮುಖ ಮಾರುಕಟ್ಟೆ ಶಿರಸಿ, ಯಲ್ಲಾಪುರ, ಸಿದ್ದಾಪುರಗಳಲ್ಲಿ ರಾಶಿ ಅಡಿಕೆ ಧಾರಣೆ ಸ್ವಲ್ಪ ಏರಿಕೆಯಾಗಿದೆ. ಹೆಚ್ಚಾಗಿ ಚಾಲಿಯೇ ಮಾಡಲಾಗುವ ಕರಾವಳಿಯ ಭಾಗಗಳಲ್ಲಿ ಹೊಸ ಚಾಲಿಗೂ ಕ್ವಿಂಟಾಲಿಗೆ ರೂ. 500 ಹೆಚ್ಚಾಗಿದೆ. ಹಳೆ ಚಾಲಿಗೆ ಕೆಲವು ಕಡೆ 500 ಇನ್ನು ಕೆಲವು ಕಡೆ 700 ರೂ. ಹೆಚ್ಚಳವಾಗಿದೆ. ಕೆಂಪು ಚಾಲಿ ಎರಡೂ ಅನಿಶ್ಚಿತವಾಗಿದೆ. ಕರಿಮೆಣಸಿಗೆ ಸಕಲೇಶಪುರದಲ್ಲಿ ಗರಿಷ್ಟ 54,000 ಆಗಿದೆ. ಏರಿಕೆ ಇರುವಾಗ ತೃಪ್ತಿಯಲ್ಲಿ ಮಾರಾಟ ಮಾಡುವುದೇ ಜಾಣತನ ಎಂದೇ…
