ಕೊಳೆ ರೋಗ ಬಂದಿದೆಯೇ?ಹಾಗಿದ್ದರೆ ನೀವು ಮಾಡಬೇಕಾದ ಅಗತ್ಯ ಕೆಲಸ ಏನು?
ಈ ವರ್ಷ ಮಳೆಯ ಅರ್ಭಟ ಸ್ವಲ್ಪ ಕಡಿಮೆಯಾದ ಕಾರಣ ಕೊಳೆ ರೋಗ ಬಂದ ಪ್ರಮಾಣ ತುಂಬಾ ಕಡಿಮೆ. ಒಂದು ವೇಳೆ ಕೊಳೆ ರೋಗ ಬಂದಿದ್ದರೆ ನೀವು ತೋಟದಲ್ಲಿ ಏನು ಮಾಡಬೇಕು. ಇದರ ಪ್ರತಿಫಲ ಏನು ಇಲ್ಲಿದೆ ಮಾಹಿತಿ. ಅಡಿಕೆ ಮರಗಳಲ್ಲಿ ಕಾಯಿಗಳು ಬಲಿಯುತ್ತಿರುವಾಗ ಒಂದು ಶಿಲೀಂದ್ರ ಕಾಯಿಯ ಒಳಗೆ ಹೋಗಿ ಅದನ್ನು ಹಾನಿ ಮಾಡಿ ಕೊಳೆಯುವಂತೆ ಮಾಡುತ್ತದೆ. ಈ ಶಿಲೀಂದ್ರವು ಒಂದು ಪರಾವಲಂಭಿ ಜೀವಿಯಾಗಿದ್ದು, ಅಡಿಕೆಯ ಕಾಯಿಯ ಒಳಗೆ ಅದು ಸಂಖ್ಯಾಭಿವೃದ್ದಿಯಾಗಿ ಅಲ್ಲಿಂದ ಹೊರ ಬರುವ ಸಮಯಕ್ಕೆ…
