ತೆಂಗಿನ ಮರದಲ್ಲಿ ಕಾಯಿ ಹೆಚ್ಚುವಿಕೆ ಒಂದು ಕುತೂಹಲ.

ತೆಂಗು ಬೆಳೆಯುವವರೆಲ್ಲರೂ ತಿಳಿದಿರಬೇಕಾದ ಪ್ರಮುಖ ಸಂಗತಿ ಅದರಲ್ಲಿ ಕಾಯಿಗಳು ಹೇಗೆ ಆಗುತ್ತವೆ ಎಂಬುದು. ತೆಂಗಿನ ಮರದಲ್ಲಿ ಹೂ ಗೊಂಚಲು ಆಗುತ್ತದೆ. ಅದರಲ್ಲಿ ಮಿಡಿಗಳು ಬೆಳೆದು ಅದು ಕಾಯಿಯಾಗುತ್ತದೆ ಎಂದಷ್ಟೇ ತಿಳಿದರೆ ಸಾಲದು. ಈ ಪ್ರಕ್ರಿಯೆಯಲ್ಲಿ ಯಾರೆಲ್ಲಾ ಪಾತ್ರ ವಹಿಸುತ್ತಾರೆ. ಇವರೇನಾದರೂ ಕೈಕೊಟ್ಟರೆ ಏನಾಗುತ್ತದೆ ಎಂಬುದನ್ನು ತಿಳಿಯಲೇ ಬೇಕು. ಹೂ ಗೊಂಚಲು ತನ್ನಷ್ಟಕ್ಕೇ ಕಾಯಿ ಕಚ್ಚುವುದಲ್ಲ. ಅದು ಬೇರೆ ಜೀವಿಗಳನ್ನು ಅವಲಂಭಿಸಿ ಆಗುತ್ತದೆ. ಸೃಷ್ಟಿಯ ಈ ವೈಚಿತ್ರ್ಯವನ್ನು ಪ್ರತೀಯೊಬ್ಬ ರೈತರು ತಿಳಿಯಲೇ ಬೇಕು. ತೆಂಗಿನ ಸಸಿ ಉತ್ತಮ ಆರೈಕೆಯಲ್ಲಿ…

Read more
ಅಡಿಕೆ ಮರದ ಸಿಂಗಾರಕ್ಕೆ ಸಿಂಪರಣೆ

ಅಡಿಕೆ- ಸಿಂಗಾರಕ್ಕೆ ಸಿಂಪರಣೆ ಮಾಡುವವರಿಗೆ ಇಲ್ಲಿದೆ ಮಾಹಿತಿ.

ಬೇಸಿಗೆಯಲ್ಲಿ ಅಡಿಕೆ ಕಾಯಿ ಉದುರುವ ಸಮಸ್ಯೆಗಾಗಿ ಬೆಳೆಗಾರರು ಸಿಂಗಾರಕ್ಕೆ ಸಿಂಪರಣೆ ಮಾಡುತ್ತಾರೆ. ಯಾವಾಗ ಸಿಂಗಾರಕ್ಕೆ ಕೀಟ- ರೋಗಗಳಿಂದ ತೊಂದರೆ ಉಂಟಾಗುತ್ತದೆ ಎಂದು ತಿಳಿದು ಆ ಸಮಯಕ್ಕೆ ಸರಿಯಾಗಿ ಸಿಂಪರಣೆ ಮಾಡಬೇಕು.  ಕೀಟವೋ, ರೋಗವೋ ಎಂಬುದನ್ನು ಗಮನಿಸಿ ಅದಕ್ಕೆ ಬೇಕಾದ ಔಷಧಿಯನ್ನು ಸಿಂಪಡಿಸಬೇಕು.   ಮೊಡ ಕವಿದ ವಾತಾವರಣ, ಮಳೆಯಾದ ಸಮಯ ಅಡಿಕೆ ಬೆಳೆಗೆ ಕೆಲವೊಂದು ಸಮಸ್ಯೆಗಳನ್ನು  ತರುತ್ತದೆ. ಅದನ್ನು ತಡೆಯಲು ಆ ವಾತಾವರಣ ಇರುವಾಗಲೇ ಕ್ರಮ ಕೈಗೊಂಡರೆ ಫಲ ಹೆಚ್ಚು.ಎಲ್ಲಾ ಬೆಳೆಗಳಿಗೂ ಅನುಕೂಲಕರ ವಾತಾವರಣ ಎಂದರೆ ಹಿತ…

Read more

ಎಣ್ಣೆ ತಾಳೆ ಬೆಳೆಗೆ ಮರುಳಾಗದಿರಿ. ಹೇಳುವಷ್ಟು ಸುಲಭದ ಬೆಳೆ ಅಲ್ಲ.

ಸರಕಾರದ ಇಲಾಖೆಗಳು ದೇಶೀಯವಾಗಿ ಖಾದ್ಯ ಎಣ್ಣೆ ಉತ್ಪಾದನೆಗಾಗಿ ನಮ್ಮನ್ನು ಹುರಿದುಂಬಿಸುತ್ತಿವೆ.ಆದರೆ ಎಣ್ಣೆ ತಾಳೆ  ಬೆಳೆ ನಮಗೆಷ್ಟು ಕೈ ಹಿಡಿಯಬಹುದು ಎಂಬುದನ್ನು ಇಲ್ಲಿ ಓದಿ ನಂತರ ನಿರ್ಧರಿಸಿ. ತಾಳೆ ಎಣ್ಣೆ ಎಂಬುದು ಪ್ರಮುಖ ಖಾದ್ಯ ಮತ್ತು ಅಖಾಧ್ಯ ಎಣ್ಣೆ ಮೂಲವಾಗಿದ್ದು, ಇದನ್ನು  ರೈತರು ತಮ್ಮ ಹೊಲದಲ್ಲಿ  ಸಸಿ ನೆಟ್ಟು  ಬೆಳೆಸಿ ಅದರ  ಫಲದಿಂದ ಪಡೆಯಲಾಗುತ್ತದೆ. ಇದು ನಮ್ಮ ದೇಶದ ಮೂಲದ ಬೆಳೆಯಲ್ಲ. ಮಲೇಶಿಯಾ, ಇಂಡೋನೇಶಿಯಾ ಮುಂತಾದ ದೇಶಗಳಲ್ಲಿ ಬೆಳೆಯುತ್ತಿರುವ ಈ ತಾಳೆ ಮರ, ಈಗ ಖಾದ್ಯ ಎಣ್ಣೆ ಸ್ವಾವಲಂಭನೆ …

Read more
Cashew Dwarf release

ಗೋಡಂಬಿಯಲ್ಲಿ ಹೊಸ ಕುಬ್ಜ ತಳಿ ಈಗ ಲಭ್ಯ.

ಕುಬ್ಜ ತಳಿ ಇಂದಿನ ಅಗತ್ಯತೆಗಳಲ್ಲಿ ಒಂದು. ಮರ ಹತ್ತುವ ಅಭ್ಯಾಸವೇ ಬಿಟ್ಟು ಹೋಗುತ್ತಿರುವ ಈ ಸಮಯದಲ್ಲಿ ಇದು ಅಗತ್ಯವಾಗಿದೆ. ಮಾವಿನಲ್ಲಿ ಕುಬ್ಜ ತಳಿ ಬಂದಿದೆ. ಅಡಿಕೆಯಲ್ಲಿ ಇದೆ. ತೆಂಗಿನಲ್ಲೂ  ಕೆಲವು ಗಿಡ್ದ  ತಳಿಗಳಿವೆ. ಹೈಬ್ರೀಡ್ ಮಾಡುವವರೂ ಕುಬ್ಜ ತನಕ್ಕೆ ಹೆಚ್ಚು ಒತ್ತುಕೊಡುತ್ತಿದ್ದಾರೆ.  ಎತ್ತರ ಬೆಳೆಯುವ ಮರ ಎಂದರೆ ಕಾಯಿ ಕೀಳುವ ಸಮಸ್ಯೆ. ಕುಬ್ಜ ಆದರೆ ಎಲ್ಲವೂ ಸುಲಭ. ಇಳುವರಿ ಕಡಿಮೆಯಾದರೂ ಆಗಬಹುದು, ಪರರನ್ನು ಅವಲಂಭಿಸಿ ಮಾಡುವುದಕ್ಕಿಂತ ನಾವೇ ಮಾಡಬಹುದು ಎಂಬುದೇ ಇದಕ್ಕೆ ಕಾರಣ. ಕರಾವಳಿ ಕರ್ನಾಟಕದಲ್ಲಿ  ದಕ್ಷಿಣ…

Read more
Wilt damage

ಬದನೆಯ ಕಾಯಿ ಕೊಳೆಯಲು ಕಾರಣ ಮತ್ತು ಪರಿಹಾರ.

ಬದನೆ ಬೆಳೆಯುವವರು ಎದುರಿಸುತ್ತಿರುವ ಕಾಯಿ ಕೊಳೆಯುವ ಸಮಸ್ಯೆ ಒಂದು ರೋಗವಾಗಿದ್ದು, ಇದಕ್ಕೆ ಸಮರ್ಪಕ ಪರಿಹಾರ ನೈರ್ಮಲ್ಯ ಮಾತ್ರ. ಬದನೆ ಬೆಳೆಗಾರರ ಹೊಲದಲ್ಲಿ ನೋಡಿದರೆ ಕೊಯಿದ ಬದನೆಯ ಅರ್ಧ ಪಾಲು ಹೊಲದ ಮೂಲೆಯಲ್ಲಿ ಬಿಸಾಡಿದ್ದು ಸಿಗುತ್ತದೆ. ಬದನೆ ಎಲ್ಲಿ ಬೆಳೆದರೂ ಪರಿಸ್ಥಿತಿ ಹೀಗೆಯೇ. ಇದು ಒಂದು ಸೊರಗು ರೋಗ.  ಇದಕ್ಕೆ ಬೇಸಾಯ ಪದ್ದತಿಯಲ್ಲಿ ಮಾರ್ಪಾಡು ಮತ್ತು ನೈರ್ಮಲ್ಯ ಮಾತ್ರ ಸೂಕ್ತ ಪರಿಹಾರ. ಬದನೆ  ಬೆಳೆ ಎಷ್ಟು ಇಳುವರಿ ಬಂದರೂ  ಬೆಳೆಗಾರರಿಗೆ ಸಿಗುವುದು ಅರ್ಧ ಮಾತ್ರ. ಉಳಿದವು ಕೊಳೆಯುತ್ತದೆ. ಇತ್ತೀಚಿನ…

Read more
cashew un productive

ಗೇರು ಮರದ ಚಿಗುರು ಹೀಗೆ ಆಗುವುದಕ್ಕೆ ಕಾರಣ.

ಗೇರು ಮರಗಳ ಎಲ್ಲಾ  ಎಳೆ ಚಿಗುರು ಒಣಗುವ ಈ ಸಮಸ್ಯೆ ಯಾಕೆ ಆಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಇತ್ತೀಚೆಗಿನ ಗೇರು ತೋಟಗಳಲ್ಲಿ ಇಂತಹ ಸಸ್ಯಗಳ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಕಾರಣ ಸಸ್ಯಾಭಿವೃದ್ದಿ ಮಾಡುವಾಗ ಸೂಕ್ತ ಸಸ್ಯ ಮೂಲದಿಂದ ಕಸಿ ಕಡ್ಡಿಗಳನ್ನು ಆಯ್ಕೆ ಮಾಡದೆ ಇರುವುದು. ಸಸಿಗಳಿಗೆ ಬೇಡಿಕೆ ಇದೆ ಎಂದು ಬೆಳೆಗಾರರ ಶ್ರಮದ ಮೇಲೆ ಆಟ ಆಡುವ ಮನೋಸ್ಥಿತಿ ಇದು ಎಂದರೂ ತಪ್ಪಾಗಲಾರದು. ಗೇರು ಮರದ ವಿಶೇಷ ಎಂದರೆ ಅದು ಚಿಗುರಿದಾಗ ಹೂವಾಗುತ್ತದೆ. ಚಿಗುರು ಬಂದು…

Read more
ಉಪ್ಪು ಹಾಕುವ ಭಾಗ

ತೆಂಗಿನ ಮರಗಳಿಗೆ ಉಪ್ಪು ಹಾಕಿದರೆ ಏನು ಪ್ರಯೋಜನ.

ತೆಂಗಿನ ಮರದ ಬುಡಕ್ಕೆ ಉಪ್ಪು ಹಾಕುವ ಬಗ್ಗೆ ತಿಳಿದುಕೊಳ್ಳಲು ಕೂತೂಹಲವೇ? ಇಲ್ಲಿದೆ ಇದರ ಕುರಿತಾಗಿ ಸಂಪೂರ್ಣ ಮಾಹಿತಿ. ನಮ್ಮ ಹಿರಿಯರು ಅದರಲ್ಲೂ ಕರಾವಳಿ ಭಾಗದ ತೆಂಗು ಬೆಳೆಗಾರರು ತೆಂಗಿನ ಮರದ ಬುಡಕ್ಕೆ ವರ್ಷಕ್ಕೊಮ್ಮೆ 2 ಸೇರು ಉಪ್ಪು ಹಾಕುತ್ತಿದ್ದರು. ಇದಕ್ಕೆ ಇವರು ಕೊಡುತ್ತಿದ್ದ ಕಾರಣ ಉಪ್ಪು ಹಾಕಿದರೆ ಮಣ್ಣಿನಲ್ಲಿ ತೇವಾಂಶ ಉಳಿಯುತ್ತದೆ ಎಂದು. ಹಿಂದೆ ಈಗಿನಂತೆ ತೆಂಗಿಗೆ ನೀರು ಉಣಿಸುವ ಪದ್ದತಿ ಕಡಿಮೆ ಇತ್ತು. ಆಗ ಬೇಸಿಗೆಯಲ್ಲಿ ತೇವಾಂಶವನ್ನು ಇದು ಉಳಿಸಿ ತೆಂಗನ್ನು ರಕ್ಷಿಸುತ್ತದೆ ಎನ್ನುತ್ತಿದ್ದರು. ಇದಲ್ಲದೆ …

Read more
ಬೀಜದ ಕಾಯಿ ಆಯ್ಕೆಗೆ ಸೂಕ್ತವಾದ ಲಕ್ಷಣವುಳ್ಳ ತಾಯಿ ಮರ

ಬೀಜದ ತೆಂಗಿನ ಕಾಯಿ- ನಿಮ್ಮದೇ ಮರದಿಂದ ಆಯ್ಕೆ ಹೇಗೆ?

ತೆಂಗು ಬೆಳೆಯಯಲ್ಲಿ ಬೀಜದ ಆಯ್ಕೆ ಪ್ರಾಮುಖ್ಯ ಹಂತ. ಬೀಜದ ತೆಂಗಿನ ಕಾಯಿ ಅವರವರ  ತೋಟದ ಮರಗಳಿಂದ ಆಯ್ಕೆ ಮಾಡಿಕೊಂಡರೆ ಬಹಳ ಉತ್ತಮ. ತೆಂಗಿನ ಕುರಿತಾಗಿ ಯಾವುದೇ ಲೇಖನಗಳು ಹಾಕಿದಾಗಲೂ ಇದರ ಬೀಜ ಎಲ್ಲಿ ಸಿಗುತ್ತದೆ ಎಂಬುದಾಗಿ ಕೇಳುತ್ತಾರೆ. ಇವರಿಗೆಲ್ಲಾ ನಾವು ಹೇಳುವುದು ನಿಮ್ಮ ಮನೆಯಲ್ಲಿರುವ ಅಥವಾ ನಿಮ್ಮ ಪರಿಚಯಸ್ಥರ ಮನೆಯಿಂದ ಬೀಜ ತಂದು ನೀವೇ ಸಸಿ ಮಾಡಿ ಎಂದು. ಇದು ಧೀರ್ಘಾವಧಿಯ ಬೆಳೆ ಆದ ಕಾರಣ ನೀವು ಆಯ್ಕೆ ಮಾಡಿದ ಬೀಜವೇ ಆಗಬೇಕು.ನಿಮ್ಮ ಕಣ್ಣೆದುರೇ ಇದ್ದ  ಮರದ…

Read more
ಟಿ ಸೊಳ್ಳೆ ಬಾಧಿಸದ ಗೇರು ಮಿಡಿ

ಗೇರು ಬೆಳೆಯಲ್ಲಿ ಹೆಚ್ಚು ಫಸಲು ಪಡೆಯಲು ಈ ಕ್ರಮ ಅನುಸರಿಸಿ.

ಗೇರು ಬೆಳೆಗೆ ಅಗತ್ಯವಾಗಿ ಬೇಕಾದ ಆರೈಕೆ ಎಂದರೆ ಚಿಗುರು ಮತ್ತು ಹೂವು ಬರುವಾಗ ಕೀಟ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು. ಇಲ್ಲಿ ಉದಾಸೀನ ಮಾಡಿದರೆ ಫಸಲು ಭಾರೀ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಟಿ. ಸೊಳ್ಳೆ ಫಸಲಿನ ನಶ್ಟವನ್ನು ಉಂಟು ಮಾಡುತ್ತದೆ. ಗೋಡಂಬಿ ಬೆಳೆಯಲ್ಲಿ ಟಿ- ಸೊಳ್ಳೆ ಕೀಟವನ್ನು  ನಿಯಂತ್ರಿಸಿಕೊಂಡಲ್ಲಿ ಬೆಳೆ ಬಂಪರ್. ಆದಾಯವೂ ಸೂಪರ್. ಟಿ ಸೊಳ್ಳೆ ಕೀಟವನ್ನು ಸುರಕ್ಷಿತವಾಗಿ ನಿಯಂತ್ರಣ ಮಾಡುವುದು ಹೀಗೆ. ರಸ್ತೆ ಬದಿಯಲ್ಲಿರುವ ಗೇರು ಮರಗಳಿಗೆ ಯಾವ ಟಿ- ಸೊಳ್ಳೆಯ ಕಾಟವೂ ಇಲ್ಲ….

Read more
leaf yellowing

ಅಡಿಕೆ ಗರಿ ಒಣಗುತ್ತಿದೆಯೇ – ಇದು ಉತ್ತಮ ಸುರಕ್ಷಿತ ಪರಿಹಾರ.

ಬಿಸಿಲಿನ ಝಳ ಹೆಚ್ಚಾದಾಗ, ಶುಷ್ಕ ವಾತಾವರಣ  ಸ್ಥಿತಿ ಇರುವಾಗ ಅಡಿಕೆ, ತೆಂಗಿನ ಗರಿಗಳು ಹಳದಿಯಾಗಿ ಭಾಗಶಃ ಒಣಗುವುದಕ್ಕೆ ಸರಳ ಪರಿಹಾರ ಇಲ್ಲಿದೆ. ಯಾವಾಗಲೂ ಸಸ್ಯಗಳ ಎಲೆಗಳು ಹಸುರಾಗಿರಬೇಕು. ಆಗ ಅದರ ಉಸಿರಾಟ ನಡೆಸುವ ಅಂಗಗಳು (Stomata) ಚೆನ್ನಾಗಿ ಕೆಲಸ ಮಾಡುತ್ತದೆ. ಎಲೆಗಳ ಹಸುರು ಭಾಗ (ಪತ್ರ ಹರಿತ್ತು)ದಲ್ಲಿ ಈ ಸ್ಟೊಮಟಾ ಇರುತ್ತದೆ. ಹರಿತ್ತು ಕಡಿಮೆ ಅದಂತೆ ಸಸ್ಯ  ಬೆಳವಣಿಗೆ ಕುಂಠಿತವಾಗುತ್ತದೆ. ಬಹುತೇಕ ಎಲೆಗಳು ಹಳದಿಯಾಗಿ ಒಣಗಿದರೆ ಮರ ಸಾಯಲೂ ಬಹುದು.  ಇದಕ್ಕೆ ಕಾರಣ ಒಂದು ಬಿಸಿಲು. ಬಿಸಿಲಿನ…

Read more
error: Content is protected !!