pest problem

ಅಡಿಕೆ ಹೂಗೊಂಚಲು ಒಣಗುತ್ತಿದೆಯೇ ? ಯಾವ ಕಾರಣ- ಪರಿಹಾರ.

ಅಧಿಕ ಆದಾಯದ ಅಡಿಕೆ ಬೆಳೆಯಲ್ಲಿ ಹೂಗೊಂಚಲು ಒಣಗುವ ಸಮಸ್ಯೆ ಅತೀ ದೊಡ್ಡದು. ಇದಕ್ಕೆ ಪರಿಹಾರ ಸಿಂಗಾರಕ್ಕೆ ಸಿಂಪರಣೆ ಒಂದೇ.ರಾಸಾಯನಿಕ ಸಿಂಪರಣೆ ಇಷ್ಟವಿಲ್ಲದವರು ಮರದಲ್ಲಿ ಒಣಗಿದ ಹೂಗೊಂಚಲು ಶೇಷವನ್ನು ಸಂಪೂರ್ಣವಾಗಿ ತೆಗೆದು ಸ್ವಲ್ಪ ಮಟ್ಟಿಗೆ ನಷ್ಟದಿಂದ ಪಾರಾಗಬಹುದು. ಕಳೆದ ವರ್ಷ ಅಡಿಕೆ ಬೆಳೆಗಾರರು ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟ ಮಾಡಿಕೊಂಡಿದ್ದಾರೆ. ಕಾರಣ ಉತ್ತಮ ಹೂ ಗೊಂಚಲು ಇತ್ತು. ಆದರೆ ಹೂ ಗೋಂಚಲೆಲ್ಲಾ ಒಣಗಿ ಹಾಳಾಗಿದೆ. ಇದರಿಂದಾಗಿ ಬೆಳೆ ಸುಮಾರು 30% ನಷ್ಟವಾಗಿದೆ. ಈ ವರ್ಷ ಹಾಗಾಗಬಾರದು ಎಂದು ಬೆಳೆಗಾರರು…

Read more
betel leaf

ವೀಳ್ಯದೆಲೆ ಬೆಳೆಗಾರರೇ ನಿಮ್ಮ ಸಮಸ್ಯೆಗೆ ಇಲ್ಲಿದೆ ಉತ್ತರ.

ವೀಳ್ಯದೆಲೆ ಬೇಸಾಯ  ವಾರದ ಆದಾಯದ  ಬೆಳೆಯಾಗಿದ್ದು ಸಾಕಷ್ಟು ರೈತರು ನಿತ್ಯ ಖರ್ಚಿನ ಬೆಳೆಯಾಗಿ ಇದನ್ನು ಬೆಳೆಸುತ್ತಾರೆ. ಕರ್ನಾಟಕದಲ್ಲಿಇದರ ವಿಸ್ತೀರ್ಣ 8288 ಹೆಕ್ಟರ್ ಹಾಗೂ ಇಳುವರಿ 153600 ಮೆ.ಟನ್. ಎಲೆಗಳು ಉತ್ಪತ್ತಿಯಾಗುತ್ತಿದೆ.ಈ ಬೆಳೆಯಲ್ಲಿ ಇತ್ತೀಚೆಗೆ  ಕೆಲವು ರೋಗಗಳು ಬೆಳೆಗಾರರನ್ನು ಸೋಲಿಸುತ್ತಿದೆ. ಎಲೆ ಚುಕ್ಕೆ ರೋಗ, ಎಲೆ ಮುರುಟು ರೋಗ, ಹಾಗೆಯೇ ಎಲೆಯ ಸೊರಗು ರೋಗ, ಜೊತೆಗೆ ಬುಡ ಕೊಳೆಯುವ ರೋಗ ಹೆಚ್ಚಿನ ವೀಲ್ಯದೆಲೆ ಬೇಸಾಯಗಾರರು ಅನುಭವಿಸುತ್ತಿರುವ ಸಮಸ್ಯೆ. ಇಂತಹ ವೀಳ್ಯದೆಲೆಗೆ ಮಾರುಕಟ್ಟೆ ಮೌಲ್ಯ ಇರುವುದಿಲ್ಲ. ಕರ್ನಾಟಕದ ಪ್ರಮುಖ  ವೀಳ್ಯದೆಲೆ…

Read more
tender arecanut

ಅಡಿಕೆ ಬೆಳೆಗಾರರಿಗೆ ವರ – ಅಡಿಕೆ ಮಿಲ್.

ಅಡಿಕೆ ಬೆಳೆಯಲ್ಲಿ ಎಲ್ಲಾ ಕಡೆ ಒಂದೇ ಸಮಯದಲ್ಲಿ ಅಡಿಕೆ ಕೊಯಿಲು ಆದಾಗ ಸುಲಿಯುವ ಕೆಲಸ ದೊಡ್ಡ ಕಷ್ಟ. ಜನ ಸಿಗುವುದಿಲ್ಲ. ಆ ಸಮಯದಲ್ಲಿ ಒಮ್ಮೆಗೇ ಟನ್ ಗಟ್ಟಲೆ ಅಡಿಕೆ ಸಿಪ್ಪೆ ತೆಗೆಯುವ ವ್ಯವಸ್ಥೆ ಎಂದರೆ ಅಡಿಕೆ ಮಿಲ್ ಗಳು. ಇದು ಬಾಡಿಗೆಯ ಆಧಾರದಲ್ಲಿ ಕೆಲಸ ಮಾಡಿ ಬೆಳೆಗಾರರಿಗೆ ತುಂಬಾ ಸಹಕಾರಿಯಾಗುತ್ತದೆ. ಭತ್ತವನ್ನು ಗದ್ದೆಯಿಂದ ಕೊಯಿಲು ಮಾಡಿ ಮಿಲ್ ಗೆ ಒಯ್ದರೆ ಅಲ್ಲಿ ಅದನ್ನು ಅಕ್ಕಿ ಮಾಡಿಕೊಡುವಂತೆ, ಅಡಿಕೆಗೂ ಇಂತಹ  ಒಂದು ವ್ಯವಸ್ಥೆ ಬಂದಿದೆ. ಈ ಯಾಂತ್ರಿಕ ವ್ಯವಸ್ಥೆಯಲ್ಲಿ…

Read more
coconut tree full of nuts

ತೆಂಗಿನ ತೋಟ – ಬೇಸಿಗೆಯಲ್ಲಿ ತೇವಾಂಶ ರಕ್ಷಣೆಗೆ ಹೀಗೆ ಮಾಡಿ.

ಬೇಸಿಗೆಯ ಕಾಲದಲ್ಲಿ ತೆಂಗಿನ ಮರ/ ಸಸಿಯ ಬೇರುಗಳಿರುವ ಭಾಗ ತೇವಾಂಶದಿಂದ ಕೂಡಿದ್ದರೆ ಇಳುವರಿ ಹೆಚ್ಚುತ್ತದೆ.ತೇವಾಂಶ ರಕ್ಷಣೆಗೆ ಹೀಗೆ ಮಾಡಬಹುದು. ಬೇಸಿಗೆಯ ಸಮಯದಲ್ಲಿ ನೀರಾವರಿ ಅತೀ ಪ್ರಾಮುಖ್ಯ ಕೆಲಸ. ಅದರ ಜೊತೆಗೆ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯೂ ನಡೆಯುತ್ತಿರಬೇಕು. ಹೀಗೆ ಆಗಲು ಬೆಳೆಗಾರರು ಮಾಡಬೇಕಾದ ಕೆಲವು ಅಗತ್ಯ ಕೆಲಸಗಳು ಹೀಗಿವೆ. ತೆಂಗಿನ ಮರ ಎಂದರೆ ನಾವು ಅದಕ್ಕೆ ಎಲ್ಲಾ ಸಾವಯವ ತ್ಯಾಜ್ಯಗಳನ್ನು ಬುಡಕ್ಕೆ ಹಾಕುತ್ತೇವೆ. ಅವು ಮಳೆಗಾಲದಲ್ಲಿ ಕರಗಿ ಬುಡದಲ್ಲಿ ಗೊಬ್ಬರವಾಗುತ್ತದೆ. ಬೇಸಿಗೆಯಲ್ಲಿ ಬಿಸಿಲಿಗೆ ಒಣಗುತ್ತಾ ಇರುತ್ತದೆ. ಬೇಸಿಗೆ…

Read more
ಅಡಿಕೆ ಗರಿ ತಿನ್ನುವ ತಿಗಣೆಯ ಹಾನಿ

ಅಡಿಕೆ ಗರಿಗಳು ಯಾಕೆ ಹೀಗಾಗುತ್ತವೆ- ಪರಿಹಾರ ಏನು?

ಅಡಿಕೆಯ  ಸಸ್ಯದ ಎಲೆಗಳು ಗುಚ್ಚದ ತರಹ ಆಗುವ, ಸಸ್ಯ  ಬೆಳವಣಿಗೆಯನ್ನು ಹತ್ತಿಕ್ಕುವ  ಕೆಲವು ರಸ ಹೀರುವ ಕೀಟಗಳನ್ನು ನಿಯಂತ್ರಿಸದಿದ್ದರೆ  ಸಸಿ ಏಳಿಗೆ ಆಗುವುದೇ ಇಲ್ಲ. ಅಡಿಕೆ ಸಸಿ/ ಮರದ ಎಲೆ ಹಾಳಾದರೆ ಅದರ ಏಳಿಗೆಯೇ ಆಗುವುದಿಲ್ಲ. ಎಲೆಯ ರಸ ಹೀರಿ ತೊಂದರೆ ಮಾಡುವ ಕೆಲವು ತಿಗಣೆಗಳು ಇತ್ತೀಚಿನ ದಿನಗಳಲ್ಲಿ ಭಾರೀ  ತೊಂದರೆ ಮಾಡುತ್ತಿವೆ. ಒಂದು ಅಡಿಕೆ ನೆಟ್ಟು ಸುಮಾರು 5 ವರ್ಷಕ್ಕೆ ಅದು ಫಲ ಕೊಡಲು ಪ್ರಾರಂಭವಾಗಬೇಕು. ಆದರೆ ಇಂತಹ  ಕೀಟಗಳು ಧಾಳಿ ಮಾಡಿದವೆಂದರೆ ಅದರ ಬೆಳವಣಿಗೆಯೇ…

Read more
ಹುಳ ತಿಂದು ಸತ್ತ ತೆಂಗಿನ ಮರ

ತೆಂಗಿನ ಮರಗಳು ಸಾಯುತ್ತಿರುವುದಕ್ಕೆ ಕಾರಣ ಏನು?

ಸಿಡಿಲು, ಸುಳಿ ಕೊಳೆ, ಅಥವಾ ಇನ್ನೇನಾದರೂ ಕೀಟ ಬಾಧೆಯಿಂದ ತೆಂಗಿನ ಮರ ಸತ್ತರೆ ಅದನ್ನು ತಕ್ಷಣ ಕಡಿದು ಏನಿಲ್ಲವಾದರೂ ಸೌದೆ ಮಾಡಿಯಾದರೂ ವಿಲೇವಾರಿ ಮಾಡಿ. ಹೆಚ್ಚಿನ ರೈತರು  ತೆಂಗಿನ ಮರ ಸತ್ತು ಹೋದರೆ ಅದರಿಂದ ನಮಗೇನು ನಷ್ಟ ಎಂದು ಅದನ್ನು ಹಾಗೆ  ಬಿಡುತ್ತಾರೆ. ಸತ್ತು ಒಣಗಿ ಶಿಥಿಲವಾದ ಮೇಲೆ ವಿಲೇವಾರಿ ಸುಲಭ ಎಂಬ ಕಾರಣಕ್ಕೆ ಹೀಗೆ ಮಾಡುತ್ತಾರೆ. ಆದರೆ ಸತ್ತ ಮರವನ್ನು ಹಾಗೇ ಬಿಟ್ಟರೆ ಮತ್ತೆ ಒಂದೆರಡು ಮರ ಸಸಿ ಸಾಯುತ್ತದೆ ಏಕೆ ಗೊತ್ತೇ? ನಮ್ಮಲ್ಲಿ ಹಿರಿಯರು…

Read more
ತೆಂಗು-ಉತ್ತಮ ಆರೈಕೆಯಲ್ಲಿ ಬೆಳೆದ 4 ವರ್ಷದ ತೆಂಗು- 4 year yielding plant

ತೆಂಗು- 4 ವರ್ಷಕ್ಕೆ ಇಳುವರಿ ಪ್ರಾರಂಭವಾಗಲು ಹೇಗೆ ಸಾಕಬೇಕು?

ತೆಂಗಿನ ಸಸಿ ನೆಟ್ಟು ನಂತರ ಎಲ್ಲಾ ನಿರ್ವಹಣೆಯನ್ನೂ ಚಾಚೂ ತಪ್ಪದೆ ಮಾಡುತ್ತಾ ಬಂದರೆ ಅದು 4 ನೇ ವರ್ಷಕ್ಕೆ ಹೂ ಬಿಟ್ಟು 5 ವರ್ಷಕ್ಕೆ ಕಾಯಿ ಬಿಡಲು ಪ್ರಾರಂಭವಾಗುತ್ತದೆ. ಹೈಬ್ರೀಡ್ ತಳಿಗಳು ನಾಲ್ಕನೇ ವರ್ಷಕ್ಕೇ ಫಲ ಕೊಡಲು ಪ್ರಾರಂಭವಾಗುತ್ತದೆ.  ನಾವೆಲ್ಲಾ ತೆಂಗಿನ ಸಸಿ ನೆಡುತ್ತೇವೆ. ಫಲ ಬರುವ ತನಕ ಆರೈಕೆ ಮಾಡಲು ಉದಾಸೀನ ಮಾಡುತ್ತೇವೆ. ಫಲ ಬಂದ ನಂತರ ಹೆಚ್ಚು ಇಳುವರಿ ಬೇಕು ಎಂದು ಗೊಬ್ಬರ ಕೊಡುವ ಉತ್ಸಾಹ ತೋರುತ್ತೇವೆ. ಆದರೆ ಇದು ಸೂಕ್ತ ಕ್ರಮ ಅಲ್ಲ. ಸಸಿ ನೆಟ್ಟಾದಾಗಿನಿಂದ…

Read more
ಮಂಗಳ ಅಥವಾ ಇಂಟರ್ ಮಂಗಳ ಅಡಿಕೆ ಫಸಲು

ಇಂಟರ್ ಸಿ ಎಂದರೆ ಮಂಗಳ ತಳಿ. ಹೊಸ ತಳಿ ಅಲ್ಲ.

ಅಧಿಕ ಇಳುವರಿಗೆ ಇಂಟರ್ ಸಿ ಮಂಗಳಬೇ ಆಗಬೇಕು ಎಂದು ದುಂಬಾಲು ಬಿದ್ದು, ನೆಡ ಬಯಸುವವರು ಒಂದಷ್ಟು ವಿಚಾರಗಳನ್ನು ತಿಳಿದಿರಬೇಕು. ಇದು ಅಧಿಕ ಇಳುವರಿ ಕೊಡಬಹುದು.  ಆದರೆ ಅದು ಹಿಂದೆ ಇದ್ದ ಮಂಗಳ ತಳಿಯೇ ಆಗಿದೆ. . ಇಂಟರ್ ಸಿ ಮಂಗಳ  ತಳಿ ಎಂಬ ಹೆಸರೇ ಒಂದು ಪ್ರಚಾರ. ಇನ್ನು ಇದನ್ನು ಒಂದು ತಳಿ ಎಂದು ಮಾರಾಟ ಮಾಡುವವರ ಅವಿವೇಕತನಕ್ಕೆ ಏನು ಹೇಳಬೇಕೋ ತಿಳಿಯದು. ಒಂದು ಗಾದೆ ಇದೆ, ನಮ್ಮನ್ನು ಮಂಗ ಮಾಡುವುದಲ್ಲ, ನಾವು ಮಂಗ ಆಗುವುದು. ನಮ್ಮ ಅಸಹಾಯಕತೆಯೇ…

Read more
ಅಡಿಕೆ

ಇದು ಅಡಿಕೆಯ ಭಾರೀ ಹೆಸರುವಾಸಿ ತಳಿ.

ಅಡಿಕೆ ಬೆಳೆಸುವವರು ಪ್ರಥಮತಹ  ಆಯ್ಕೆ  ಮಾಡಬೇಕಾದ ತಳಿ. ಉತ್ತಮ ತಳಿಯನ್ನು ಆಯ್ಕೆ ಮಾಡಿದ್ದೇ ಆದರೆ ಮುಂದಿನ ಬಹುತೇಕ ಕೆಲಸ ಸುಲಭ. ಇದು ಮನೆ ಕಟ್ಟುವುದಕ್ಕೆ ಪಂಚಾಂಗ ಹಾಕಿದಂತೆ. ಅಡಿಕೆ ತೆಂಗು ಬೆಳೆ ಮುಂತಾದ ಧೀರ್ಘಾವಧಿ ಬೆಳೆಗಳಲ್ಲಿ ಸೂಕ್ತ ತಳಿಯ ಬೀಜ ಆಯ್ಕೆ ಮಾಡಿಕೊಳ್ಳದೆ ಇದ್ದರೆ ಮುಂದೆ ಅದನ್ನು ಸರಿಪಡಿಸಲಿಕ್ಕೆ ಆಗುವುದಿಲ್ಲ. ಯಾವಾಗಲೂ  ತಳಿ ಆಯ್ಕೆ ಮಾಡುವಾಗ ತಳಿ ಮಿಶ್ರಣ ಆಗದಂತ ಜಾಗದಿಂದ, ಸೂಕ್ತ ವಿಧಾನದಿಂದ ಬೀಜವನ್ನು ಆಯ್ಕೆ ಮಾಡಿ ಅವರವರೇ ಸಸಿ ತಯಾರಿಸಿಕೊಂಡರೆ ಬಹಳ ಉತ್ತಮ.  ಕರ್ನಾಟಕದಲ್ಲಿ…

Read more
brinjal grower

ಇದು ಭಾರೀ ಬೇಡಿಕೆಯ ಗುಳ್ಳ ಬದನೆ.

ಕರಾವಳಿಯ ಬದನೆ ತಳಿಗಳಲ್ಲಿ ಹೆಸರುವಾಸಿಯಾದ ಮಟ್ಟು ಗುಳ್ಳಕ್ಕೆ ಸರಿಸಾಟಿಯಾದ ಮತ್ತೊಂದು ಗುಳ್ಳ ,ಇದೇ ಉಡುಪಿ ಜಿಲ್ಲೆಯ ಮತ್ತೊಂದೆಡೆಯೂ ಬೆಳೆಯುತ್ತಿದೆ. ಇದರ ಆಕಾರ ಬಣ್ಣ ಎಲ್ಲವೂ ಏಕಪ್ರಕಾರ. ಒಂದೇ ಒಂದು ವ್ಯತ್ಯಾಸ ಎಂದರೆ ಮಟ್ಟು ಗುಳ್ಳಕ್ಕೆ ತೊಟ್ಟಿನಲ್ಲಿ ಮುಳ್ಳು ಇದೆ. ಇದಕ್ಕೆ ಇಲ್ಲ.  ಕರಾವಳಿಯ ಜನರ ಬಲು ಅಚ್ಚುಮೆಚ್ಚಿನ  ಗುಳ್ಳ ಬದನೆಯ ಆಸೆಯನ್ನು ಪೂರೈಸಿದ ಬದನೆಯಲ್ಲಿ ಈ ಊರಿನ ಬದನೆ ಒಂದು. ಕರಾವಳಿಯ ಜನ ಎಲ್ಲೇ ಹೋಗಲಿ ಗುಳ್ಳ ಬದನೆ ಸಿಕ್ಕರೆ ಎಷ್ಟೇ ಬೆಲೆ ಕೊಟ್ಟಾದರೂ ಖರೀದಿ ಮಾಡುತ್ತಾರೆ….

Read more
error: Content is protected !!