Areca yield

ಅಡಿಕೆಗೆ ಬೇಸಿಗೆಯಲ್ಲಿ ಗೊಬ್ಬರ ಕೊಟ್ಟರೆ ಭಾರೀ ಪ್ರಯೋಜನ.

ಅಡಿಕೆ ತೆಂಗು ಗೆ ಹಾಗೆಯೇ ಯಾವುದೇ ಧೀರ್ಘಾವಧಿ ಬೆಳೆಗಳಿಗೆ ಪೋಷಕಗಳನ್ನು  ಬೇಸಿಗೆಯಲ್ಲಿ  ಕೊಡುವುದು ಅಧಿಕ ಇಳುವರಿ  ದೃಷ್ಟಿಯಿಂದ  ಉತ್ತಮ. ಇದರಲ್ಲಿ ಬೆಳೆಗಳಿಗೆ ಯಾವುದೇ ಹಾನಿ ಇರುವುದಿಲ್ಲ. ನಾವು ಕೊಡುವ ಪೋಷಕವನ್ನು ಸಸ್ಯಗಳು ಹೀರಿಕೊಳ್ಳಲು ಬೇರಿನ ಭಾಗದಲ್ಲಿ ತೇವಾಂಶ ಇರಬೇಕು. ಇದರ ಫಲಿತಾಂಶ ಅಧ್ಭುತ. ಮನುಷ್ಯ ಪ್ರಾಣಿ ಯಾವುದೇ ಜೀವಿಗಳ ಶರೀರದ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ವ್ಯಯ ಆಗುವುದು ಬೆವರುವ ಬೇಸಿಗೆ ಕಾಲದಲ್ಲಿ. ಈ ಸಮಯದಲ್ಲಿ ಹಸಿವು ಹೆಚ್ಚು. ತಿಂದದ್ದು ಬೇಗ ಜೀರ್ಣ ಆಗುತ್ತದೆ. ಶರೀರ ಹೆಚ್ಚು ಶಕ್ತಿಯನ್ನು…

Read more

ಕೊಕ್ಕೋ ಬೆಳೆದರೆ ನೀರು ಕಡಿಮೆ ಸಾಕು.

ಪ್ರತೀಯೊಂದೂ ಬೆಳೆಗೂ ಅದಕ್ಕೆ ಸೂಕ್ತವಾದ ತಾಪಮಾನ ಪ್ರಾಮುಖ್ಯ ಅಂಶ. ಕಡಿಮೆಯೂ ಆಗಬಾರದು, ಹೆಚ್ಚೂ ಆಗಬಾರದು.  ತಾಪಮಾನದ ಏರು ಪೇರನ್ನು ನಿಯಂತ್ರಿಸಲು ಸಸ್ಯಗಳಿಂದ ಮಾತ್ರ ಸಾಧ್ಯ. ಜೊತೆಗೆ ಮಣ್ಣಿನ ಫಲವತ್ತೆತೆ ಹೆಚ್ಚುತ್ತಾ ಇದ್ದರೆ ಮಾತ್ರ ಇಳುವರಿ ಸ್ಥಿರವಾಗಿರುವುದು. ಇದಕ್ಕೆಲ್ಲಾ   ಸಹಾಯವಾದ ಬೆಳೆ  ಕೊಕ್ಕೋ. ಇದು ತಾಪಮಾನ ಕಡಿಮೆ ಮಾಡುತ್ತದೆ. ಮಣ್ಣಿನ ಫಲವತ್ತತೆ  ಹೆಚ್ಚಿಸುತ್ತದೆ. ನೀರಿನ ಆವೀಕರಣ ತಡೆಯುತ್ತದೆ. ನೆಲಕ್ಕೆ ಬಿಸಿಲು ಹೆಚ್ಚು ಬಿದ್ದಷ್ಟೂ ಹೆಚ್ಚು ಹೆಚ್ಚು ನೀರಾವರಿ ಮಾಡಬೇಕಾಗುತ್ತದೆ. ನೆಲದ ಮೇಲು ಭಾಗದಲ್ಲಿ ಸಸ್ಯದ ಹಸಿರು ಹೊದಿಕೆ  ಇದ್ದಷ್ಟೂ…

Read more
ಅಡಿಕೆ ಯಾಕೆ ಸುರಿ ಬೀಳುತ್ತದೆ

ಅಡಿಕೆ ಯಾಕೆ ಸುರಿ ಬೀಳುತ್ತದೆ? – ಪರಿಹಾರ.

ದಾಸ್ತಾನು ಇಟ್ಟ ಧವಸ ಧಾನ್ಯ ಏನೇ ಇದ್ದರೂ ಸಮರ್ಪಕವಾಗಿ ಇಲ್ಲದಿದರೆ ಅದಕ್ಕೆ ದಾಸ್ತಾನು ಕೀಟ (Storage pest) ಬಂದು ಸುರಿ ಬೀಳುವುದು  ಸಾಮಾನ್ಯ. ಈ ಕೀಟಗಳಲ್ಲಿ ಹಲವು ವಿಧಗಳು ಇದ್ದು, ಅಕ್ಕಿಗೆ ಬರುವ ಗುಗ್ಗುರು,ಅಡಿಕೆಗೆ ಬರುವ ಡಂಕಿ ಬೇರೆ ಹೀಗೆ ಬೇರೆ  ಬೇರೆ ಇದೆ. ಸಾಮಾನ್ಯವಾಗಿ ಸುಲಿದು ದಾಸ್ತಾನು ಇಡುವ ಅಡಿಕೆಗೆ ಈ ಸಮಸ್ಯೆ ಹೆಚ್ಚು. ಹಾಗೆಂದು ಸುಲಿಯದೇ ಇಡುವಲ್ಲಿಯೂ ಇಲ್ಲದಿಲ್ಲ. ಇದು ಮಹಾ ಮಾರಿ ಶತೃ ಎಂತಲೇ ಹೇಳಬಹುದು. ಒಮ್ಮೆ ಈ ಕೀಟ ಬಂದರೆ ಅದನ್ನು ಓಡಿಸುವುದೂ…

Read more

ಬೆಂಡೆ ಬೆಳೆಯಬೇಕೆಂದಿರುವಿರೇ? ಸ್ವಲ್ಪ ಓದಿ.

ಬೆಂಡೆ ಬೆಳೆಯಲ್ಲಿ ನಿಮ್ಮ ಕೈ ಮೀರಿ ಅಗುವ ನಷ್ಟ ಎಂದರೆ ಎಲೆ ಹಳದಿಯಾಗುವಿಕೆ. ಇದರಿಂದ ಗಣನೀಯ ಪ್ರಮಾಣದಲ್ಲಿ ಬೆಳೆ ನಷ್ಟವಾಗುತ್ತದೆ. ಇದಕ್ಕೆ ಕಾರಣ ಒಂದು ವೈರಸ್. ಈ ರೋಗ ಬಂದರೆ ಅದಕ್ಕೆ ಔಷಧಿ ಇಲ್ಲ. ಯಾವ ಗಿಡಕ್ಕೆ  ಯಾವಾಗ ಬರುತ್ತದೆ ಎಂಬುದೂ ಹೇಳಲಿಕ್ಕೆ  ಸಾಧ್ಯವಿಲ್ಲ. ಹೀಗಿರುವಾಗ ಬೆಂಡೆ ಬೆಳೆಸಬೇಕೆಂಬ ಆಸಕ್ತಿ ಇದ್ದರೆ , ಈ ರೋಗಕ್ಕೆ ನಿರೋಧಕ ಶಕ್ತಿ ಪಡೆದ ತಳಿಗಳನ್ನೇ ಬೆಳೆಸಿ. ಆಗ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗದು. ಈ ರೋಗಕ್ಕೆ ಔಷಧಿ ಇಲ್ಲದ…

Read more
ತೆಂಗಿನ ಮರಗಳು

ತೆಂಗಿನ ಮರಕ್ಕೆ ಈಗ ಹಾಕಿದ ಗೊಬ್ಬರದಿಂದ ಇಳುವರಿ ಸಿಗುವುದು ಯಾವಾಗ?

ಹೆಚ್ಚಿನ ರೈತರು ಹೇಳುವುದುಂಟು, ಈ ವರ್ಷ ನಾವು  ತೆಂಗಿನ ಮರಕ್ಕೆ ಸಾಕಷ್ಟು ಗೊಬ್ಬರ ಕೊಟ್ಟಿದ್ದೇವೆ. ಮುಂದಿನ ವರ್ಷ  ಫಸಲು ಹೆಚ್ಚಬಹುದು ಎಂದು.  ಆದರೆ ವಾಸ್ತವಿಕತೆ ಬೇರೆಯೇ ಇದೆ. ಈ ವರ್ಷ ಹಾಕಿದ ಗೊಬ್ಬರದ ಫಲದಲ್ಲಿ ಮುಂದಿನ ವರ್ಷ ಇಳುವರಿಯಲ್ಲಿ  ದೊರೆಯುವುದಿಲ್ಲ. ಅದು ದೊರೆಯುವುದು ಮುಂದಿನ 32 ತಿಂಗಳ ನಂತರ. ತೆಂಗಿನ ಮರದ ಕಾಂಡದಲ್ಲಿ ಹುಟ್ಟುವ  ಅದರ ಹೂ ಗೊಂಚಲು ಮೊನ್ನೆ ಮೊನ್ನೆಮೂಡಿದ್ದು ಎಂದು ತಿಳಿಯದಿರಿ. ಇದರೆ ಹುಟ್ಟು,(Innitiation)  ಸುಮಾರು ಮೂರು ವರ್ಷಗಳ ಹಿಂದೆಯೇ ಆಗಿರುತ್ತದೆ. ಆಗಲೇ ಅದರಲ್ಲಿ…

Read more

ಬಾಳೆಗೆ 50% ಗೊಬ್ಬರ ಕಡಿಮೆ ಮಾಡಬಹುದಾದ ವಿಧಾನ.

ಬಾಳೆ ಬೆಳೆಗೆ ಅತ್ಯಧಿಕ ಪೋಷಕಾಂಶಗಳು ಬೇಕು. ಇದು ಕಡಿಮೆ  ಸಮಯದಲ್ಲಿ ದಷ್ಟ ಪುಷ್ಟವಾಗಿ ಬೆಳೆಯುವ ಸಸ್ಯವಾದ ಕಾರಣ ಅಷ್ಟೇ ಪೋಷಕಗಳು ಬೇಕಾಗುತ್ತವೆ. ನಾವು ಕೊಡುವ ಎಲ್ಲಾ ಪೋಷಕಗಳೂ  ಮೊದಲ ಬೆಳೆಗೇ ಬಳಕೆಯಾಗದೆ ಸ್ವಲ್ಪ ಬಾಳೆಯ ಅಂಗಾಂಶಗಳಲ್ಲಿ ಉಳಿದುಕೊಂಡಿರುತ್ತದೆ. ಅದನ್ನು ಸದುಪಯೋಗಮಾಡಿಕೊಂಡರೆ  ಮುಂದಿನ ಕೂಳೆ ಬೆಳೆ ಉತ್ತಮವಾಗಿರುತ್ತದೆ. ಕಂದುಗಳೂ ಆರೋಗ್ಯವಾಗಿರುತ್ತವೆ.   ಎಲ್ಲಾ ಬೆಳೆಗಳೂ ತಮ್ಮ ಬೆಳೆವಣಿಗೆಗೆ ಬಳಕೆ ಮಾಡಿದ ಪೋಷಕಗಳನ್ನು  ಪೂರ್ಣವಾಗಿ  ಉಪಯೋಗಿಸಿಕೊಂಡಿರುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಅದು ಎಲೆಗಳಲ್ಲಿ ಉಳಿದಿರುತ್ತದೆ. ಅದು ಉದುರಿ ಬಿದ್ದಾಗ ಅದರ ಜೊತೆಗೆ…

Read more

ತೆಂಗಿನ ಗಿಡ ಯಾಕೆ ಫಲಕೊಡುವುದಿಲ್ಲ.

ತೆಂಗಿನ ಸಸಿಗಳಲ್ಲಿ ಗಿಡ್ದ, ಎತ್ತರದ ತಳಿಗಳು ಎಂಬ ಎರಡು ಬಗೆ. ಗಿಡ್ಡ ತಳಿಗಳು ನಾಟಿ ಮಾಡಿ ಮೂರು ವರ್ಷಕ್ಕೆ ಹೂ ಗೊಂಚಲು ಬಿಟ್ಟರೆ ಎತ್ತರದ ತಳಿ ನಾಟಿ ಮಾಡಿ 5  ವರ್ಷಕ್ಕೆ ಹೂಗೊಂಚಲು ಬಿಡುವುದು ವಾಡಿಕೆ. ಕೆಲವೊಮ್ಮೆ ಇದು ತಡವಾಗಬಹುದು, ಬೇಗವೂ ಆಗಬಹುದು. ಆದರೆ ಕೆಲವು ಮರಗಳು ತಮ್ಮ ಜೀವನ ಪರ್ಯಂತ ಇಳುವರಿ ಕೊಡುವುದೇ ಇಲ್ಲ. ಕಾರಣ ಅದರ ವಂಶ ಗುಣ. ತೆಂಗಿನ ಸಸಿ ಇಳುವರಿ ಪ್ರಾರಂಭಿಸುವುದಕ್ಕೆ ತಳಿ ಗುಣದ ಜೊತೆಗೆ ಆರೈಕೆಯೂ ಅಗತ್ಯ. ಪ್ರಾರಂಭಿಕ ಆರೈಕೆ…

Read more

ವಾಂದಾ ತಂದೀತೇ ಅಡಿಕೆ ಬೆಲೆಗೆ ಕುತ್ತು?.

ಅಡಿಕೆಯ ವ್ಯವಹಾರದಲ್ಲಿ 90% ಕ್ಕೂ ಹೆಚ್ಚು ಮುಂಗಡ ಹಣ ಪಡೆಯದೇ  ನಡೆಯುತ್ತದೆ. ಅಡಿಕೆ ಹೋಗುತ್ತದೆ, ದುಡ್ಡು ಬರುವು  ದು  ನಂತರ. ಮಾರುಕಟ್ಟೆ ಸರಿಯಿಲ್ಲ.  ಸೇಟು ಊರಿಗೆ ಹೋದ ಕಾರಣ ಹಣದ ಅಡಚಣೆ. ಮುಂತಾದ ಮಾತುಗಳನ್ನು ಕೇಳಿದ್ದೀರಲ್ಲಾ. ಅದೇ ಮಾಲು ಕಳುಹಿಸಿ ಅವರಿಂದ ಹಣ ಪಡೆಯುವಾಗ ನಡೆಯುವ ವಾಂದಾ ವ್ಯವಹಾರ. ವಾಂದಾ ಎಂದರೆ ತಕರಾರು. ಮಾಲು ಹೋದ ನಂತರ ತಕರಾರು ಮಾಡುವವರಿಗೆ ಸಾಕಷ್ಟು ಅವಕಾಶಗಳಿರುತ್ತವೆ. ಈ ತಕರಾರು ಮಾರುಕಟ್ಟೆಯನ್ನು ಬಹಳ ಅಲ್ಲಾಡಿಸುತ್ತದೆ. ಅದು ಮುಂದೆ ಅಡಿಕೆ ಮಾರುಕಟ್ಟೆ ತೆರೆಯುವ…

Read more
ಅಡಿಕೆ ಮರದ ಸುಳಿ ಬಂದ್ ರೋಗ ನಿವಾರಣೆ

ಅಡಿಕೆ ಮರದ ಸುಳಿ ಬಂದ್ ರೋಗ ನಿವಾರಣೆ ಹೇಗೆ ?

ಅಡಿಕೆ ಸಸ್ಯದ ಸುಳಿಯ ಭಾಗದ ಎಲೆಗಳು ಮುರುಟಿ, ತುದಿ ಗಂಟು ಕಟ್ಟಿದಂತೆ ಅಗುವುದಕ್ಕೆ “ಬಂದ್ ರೋಗ” ಎನ್ನುತ್ತಾರೆ. ಇದು ರೋಗವಲ್ಲ ಬೇರು ಜಂತು ಹುಳ ಮುಖ್ಯ ಕಾರಣ. ಇದು ಬೇರನ್ನು ಬೆಳೆಯಲು ಬಿಡದೆ ಸಸ್ಯಕ್ಕೆ ಆಹಾರ ಸರಬರಾಜು ಕಡಿಮೆಯಾಗಿ ಅದರ ಬೆಳೆವಣಿಗೆಯನ್ನು ಹತ್ತಿಕ್ಕುತ್ತದೆ. ಇದನ್ನು ರಾಸಾಯನಿಕವಾಗಿಯೂ, ಜೈವಿಕವಾಗಿಯೂ ಹತೋಟಿ ಮಾಡಬಹುದು. ವರ್ಷದಿಂದ ವರ್ಷಕ್ಕೆ ಅಡಿಕೆ ಬೆಳೆಗಾರರ ತೋಟದಲ್ಲಿ ಮರಗಳ ಸುಳಿ ಭಾಗ ಕುಬ್ಜವಾಗುವುದು ಹೆಚ್ಚಾಗುತ್ತಿದೆ. ಮಲೆನಾಡಿನ ಶಿವಮೊಗ್ಗ ಭಾಗದಲ್ಲಿ  ಇದು ಸುಮಾರು 30-40  ವರ್ಷದ ಹಿಂದೆಯೇ ಇತ್ತು….

Read more

ತೆಂಗಿನ ಮರಕ್ಕೆ ಗೊಬ್ಬರವೇ ಬೇಕಾಗಿಲ್ಲ.

ಪ್ರಕೃತಿಯ ವೈಚಿತ್ರ್ಯ ನೋಡಿ. ಕಾಡಿನಲ್ಲಿರುವ ಒಂದು ಸಸಿ ಬೆಳೆಯಬೇಕಾದರೆ ಮತ್ತೊಂದು ದೊಡ್ದ ಮರದ ಆಸರೆ ಬೇಕು. ನಿರ್ದಿಷ್ಟ ಹಂತಕ್ಕೆ  ಬೆಳೆದ ಮೇಲೆ ಅದಕ್ಕೆ  ಯಾವ ಆಸರೆಯೂ ಬೇಡ. ಅದೇ ತನ್ನನ್ನು ದಷ್ಟ ಪುಷ್ಟವಾಗಿಸುತ್ತಾ ಬೆಳೆಸುತ್ತದೆ. ಅದೇ ತತ್ವ ನಾವು ಬೆಳೆಸುವ ಬೆಳೆಗಳಿಗೆ ಯಾಕೆ ಅನ್ವಯವಾಗಲಾರದು? ಆಗಿಯೇ ಆಗುತ್ತದೆ. ಕೃಷಿಯಲ್ಲಿ ನಮ್ಮ ಬೇಡಿಕೆಗಳು ದೊಡ್ದದು.  ಸಸ್ಯದ ಅವಶ್ಯಕತೆಗೆ ಬೇಕಾದುದನ್ನು ನಾವು  ಕಬಳಿಸುತ್ತೇವೆ.   ಉರುವಲಿಗೆ ಮತ್ತು ಇನ್ನಿತರ ಬಳಕೆಗೆ ನಾವು ತೆಂಗಿನ ಸರ್ವಾಂಗವನ್ನೂ  ಉಪಯೋಗಿಸುತ್ತೇವೆ. ಅದಕ್ಕೆ  ಮಾತ್ರ ಉಪವಾಸ….

Read more
error: Content is protected !!