
ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣಿಕೆ. ಮುಂದಿದೆ ಭಾರೀ ಅನಿಶ್ಚಿತತೆ.
ಅಡಿಕೆ ಮಾರುಕಟ್ಟೆಯಲ್ಲಿ ಭಾರೀ ತಲ್ಲಣಿಕೆ ಉಂಟಾಗಿದ್ದು, ವ್ಯಾಪಾರಿಗಳಿಗೇ ಅಂಜಿಕೆ ಹುಟ್ಟಿದೆ. ಎಲ್ಲಾ ಅಡಿಕೆ ವರ್ತಕರಿಗೂ ಮುಂದೇನಾಗುವುದೋ ಎಂಬ ಚಿಂತೆ ಉಂಟಾಗಿದೆ. ಇರುವ ದಾಸ್ತಾನನ್ನು ಹೇಗಾದರೂ ವಿಲೇವಾರಿ ಮಾಡುವ ಚಿಂತೆಯಲ್ಲಿದ್ದಾರೆ. ಖರೀದಿದಾರರು ಭಾರೀ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಧಾರಣೆ ಕುಸಿತವೂ ಆಗಬಹುದು. ಹೀಗೆಯೇ ಮುಂದುವರಿಯಲೂ ಬಹುದು. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಚೋಲ್ ಅಡಿಕೆ ಬೇಡ ಎಂಬ ಸ್ಥಿತಿ ಉಂಟಾಗಿ ಅಘೋಷಿತ ದರ ಕುಸಿತ ಉಂಟಾಗಿದೆ. ಖರೀದಿದಾರರಲ್ಲಿ ಭಾರೀ ಪ್ರಮಾಣದ ಸ್ಟಾಕು ಇದೆ ಎಂಬ ವರ್ತಮಾನ ಇದೆ….