ಅಡಿಕೆಯ ಧಾರಣೆ ಏನಾಗಬಹುದು? ಇಳಿಕೆಯೋ ಏರಿಕೆಯೋ

ಅಡಿಕೆಯ ಧಾರಣೆ ಏನಾಗಬಹುದು? ಇಳಿಕೆಯೋ ಏರಿಕೆಯೋ?

ಅಡಿಕೆ ಧಾರಣೆಯ ಈಗಿನ ಪರಿಸ್ಥಿತಿ ಬೆಳೆಗಾರರನ್ನು ಚಿಂತೆಗೀಡುಮಾಡಿದ್ದು, ಇಳಿಕೆಯಾದೀತೋ ಎಂಬ ಆತಂಕ ಉಂಟುಮಾಡಿದೆ. ಬೆಳೆಗಾರರು ಆತಂಕ ಪಡಬೇಕಾಗಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಈಗ ದರ ಇಳಿಕೆ ಆಗಿದೆ. ಮುಂದೆ ಇದು ಸರಿಯಾಗುತ್ತದೆ. ಈ ಸಮಯದಲ್ಲಿ ದರ ಇಳಿಕೆ ಆಗುವುದು ಸಹಜವಾಗಿದೆ.ಈಗ ಕೃಷಿಕರಿಗೆ ಹಣದ ಅಗತ್ಯ ಇರುತ್ತದೆ. ಬೆಳೆಗಾರರಿಗೆ ಮಾರಾಟ ಮಾಡದೆ ನಿರ್ವಾಹ ಇಲ್ಲದ ಸ್ಥಿತಿ ಇರುತ್ತದೆ. ಅದಕ್ಕೆ ಅನುಗುಣವಾಗಿ ದರ ಇಳಿಕೆ ಆಗುತ್ತದೆ. ಈಗ ಅದದ್ದೂ ಇದೆ. ಬೆಳೆಗಾರರೆಲ್ಲರೂ ಅಧಿಕ ಬೆಲೆ ಸಿಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಸಾಧ್ಯವಾದಷ್ಟು…

Read more
3 ವರ್ಷ ತುಂಬುತ್ತಿರುವ ಅಡಿಕೆ ಸಸಿ

3 ವರ್ಷಕ್ಕೆ ಅಡಿಕೆ ಫಲ ಕೊಡಬೇಕಾದರೆ ಏನೇನು ಮಾಡಬೇಕು?

ಅಡಿಕೆ ಸಸಿ ನೆಟ್ಟು ಅದು ಇಳುವರಿ ಬರಲು ಅಥವಾ ಹೂ ಗೊಂಚಲು ಮೂಡಲು ಕೇವಲ 3 ವರ್ಷ ಸಾಕು. ಅದು ನಾವು ಬೆಳೆಸುವ ಕ್ರಮ ಮತ್ತು ತಳಿ ಗುಣದಿಂದ ನಿರ್ಧಾರವಾಗುತ್ತದೆ. ಬಹುತೇಕ ಎಲ್ಲಾ ತಳಿಗಳೂ ಫಸಲು ಕೊಡುವುದು 1 ವರ್ಷ ವಿಳಂಬವಾದರೂ ಹೂ ಗೊಂಚಲನ್ನು ಕೇವಲ 3 ನೇ ವರ್ಷಕ್ಕೆ ತೋರಿಸುತ್ತದೆ. ಅಡಿಕೆ ಸಸಿಯಲ್ಲಿ ಹೂ ಗೊಂಚಲು ಬರಲು ಕೆಲವರು 4-5-6 ವರ್ಷ ತನಕವೂ ಕಾಯುತ್ತಾರೆ. ಇದು ಅವರ ಅಸಮರ್ಪಕ ತೋಟ ನಿರ್ವಹಣೆ ವಿಧಾನದಿಂದ ಆಗುವುದು. ಉತ್ತಮವಾದ…

Read more
ಕೆಂಪು ರಾಶಿ ಸ್ವಲ್ಪ ಹಿನ್ನಡೆ – ಚಾಲಿಗೆ ಬೇಡಿಕೆ

ಕೆಂಪು ರಾಶಿ ಸ್ವಲ್ಪ ಹಿನ್ನಡೆ – ಚಾಲಿಗೆ ಬೇಡಿಕೆ ಕಡಿಮೆ -ಮಾರುಕಟ್ಟೆಗೆ ಮಾಲು ಇಲ್ಲ.

ಕೆಂಪು ರಾಶಿ ಅಡಿಕೆ ಮಾರುಕಟ್ಟೆ ಹೇಗಾದರೂ ಒಮ್ಮೆ 55,000 ತಲುಪಿತು. ಆದರೆ ಶುಕ್ರವಾರದ ಮಾರುಕಟ್ಟೆ, ಭಾನುವಾರದ ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಹಾಗೂ ಇಂದು 12-09-2022 ಸಾಗರ, ಶಿವಮೊಗ್ಗದಲ್ಲಿನ ವ್ಯವಹಾರ ನೋಡುವಾಗ ಸ್ವಲ್ಪ ಸ್ವಲ್ಪ ಹಿಂದೆ ಬರುವ ಲಕ್ಷಣ ಕಾಣಿಸುತ್ತಿದೆ.  ನಿಖರವಾಗಿ ಹಿಂದೆ ಬಂತು ಎಂಬಂತಿಲ್ಲ. ಇನ್ನೂ ಒಂದೆರಡು ದಿನಗಳ ಮಾರುಕಟ್ಟೆ ಸ್ಥಿತಿ ನೋಡಿ ಅಂದಾಜು ಮಾಡಬಹುದಷ್ಟೇ. ಚಾಲಿ ಮಾರುಕಟ್ಟೆಯಲ್ಲಿ ಖಾಸಗಿಯವರು ಸ್ವಲ್ಪ ಮುಂದೆ ಬಂದಿದ್ದಾರೆ. ಅಡಿಕೆ ಬರುತ್ತಿಲ್ಲ ಎಂಬ ಕಾರಣಕ್ಕೆ ದರ ಏರಿಸಲಾಗಿದೆ ಎನ್ನುತ್ತಾರೆ. ಚಾಲಿ ದರ ಏರಿಕೆ-…

Read more
cashew

ಗೇರು – ಈಗ ಮರಗಳ ಮೇಲೆ ಒಮ್ಮೆ ದೃಷ್ಟಿ ಹರಿಸುತ್ತಿರಿ

ಈ ಸಮಯದಲ್ಲಿ ಗೇರು ಮರಗಳಲ್ಲಿ ಗೇರು ಬೀಜದ ಕೊಯಿಲು ನಡೆಯುತ್ತಿರುತ್ತದೆ. ಗೇರು ಬೀಜ ಕೊಯಿಲಿಗೆ ಹೋಗುವ ಸಮಯದಲ್ಲಿ ಬುಡ ಭಾಗವನ್ನು ತಪ್ಪದೇ ಗಮನಿಸಿರಿ. ಈ ಸಮಯದಲ್ಲಿ ಬುಡದ ಕಾಂಡಕ್ಕೆ ಕಾಂಡ ಕೊರಕ ಹುಳು ಬಾಧಿಸುತ್ತದೆ. ಈ ಹುಳು ಬಾಧಿಸಿದ ಸಮಯದಲ್ಲಿ ಉಪಚಾರ ಮಾಡಿದರೆ  ಮಾತ್ರ ಅದನ್ನು ಬದುಕಿಸಲು ಸಾಧ್ಯ.  ಪತ್ತೆ ಕ್ರಮ: ಗೇರು ಮರಕ್ಕೆ ಮಾರಣಾಂತಿಕವಾಗಿ ಹಾನಿ ಮಾಡುವ ಕೀಟ ಕಾಂಡ ಕೊರಕ (Stem borer of cashew). ಈ ಸಮಯದಲ್ಲಿ ಕಾಂಡ ಕೊರಕ ಕೀಟ ಕಾಡದ…

Read more
ಗೇರು ಮರಕ್ಕೆ ಪುನಃಶ್ಚೇತನ

ಗೇರು – ಮಾವು- ಹಲಸು ಹಳೆ ಮರಗಳಿಗೆ ಪುನಃಶ್ಚೇತನ.

ನಮ್ಮಲ್ಲಿ ಇರುವಂತಹ ಹಳೆಯ ಮಾವು- ಗೇರು-ಹಲಸು ಇನ್ಯಾವುದೇ ಹಣ್ಣಿನ  ತೊಟಗಳಲ್ಲಿ ಹೆಚ್ಚಿನವುಗಳು ಅನಾಮಧೇಯ ತಳಿಯ ಬೀಜಗಳಿಂದ ಆದವುಗಳು. ಇವು ಈಗಲೇ  ಹಳೆಯದಾಗಿ ಅನುತ್ಪಾದಕವೂ ಆಗಿರಬಹುದು. ಇಂತಹ ಮರಗಳು ಹೆಚ್ಚಾಗಿ ನಿರ್ವಹಣೆ ಇಲ್ಲದೇ ನಿರ್ಲಕ್ಷ್ಯದಿಂದ ಬೆಳೆದಿರುತ್ತವೆ. ಇವುಗಳನ್ನು ಇಳುವರಿ ಅಭಿವೃದ್ಧಿಯ ದೃಷ್ಟಿಯಿಂದ ಪುನಶ್ಚೇತನ ಮಾಡುವುದು ಉತ್ತಮ.  ಹಳೆಯ ಅಥವಾ ಕಡಿಮೆ ಇಳುವರಿ ಕೊಡುವಂತಹ ಮರಗಳನ್ನು ಸವರುವಿಕೆಯಿಂದ ಹಾಗು ಕಸಿ ವಿಧಾನದ ಮೂಲಕ ಪುನಶ್ಚೇತನಗೊಳಿಸಿದರೆ  ಹೊಸ ಮರವನ್ನಾಗಿ ಪರಿವರ್ತಿಸಬಹುದು. ಪುನಶ್ಚೇತನದ ಉದ್ದೇಶಗಳು : ಹಳೆಯ ಹಾಗೂ ಕಡಿಮೆ ಇಳುವರಿಯ ಗಿಡಗಳ…

Read more
ಚಾಲಿ ಅಡಿಕೆ ತುಸು ಹಿಮ್ಮುಖ- ಕೆಂಪು ರಾಶಿ ಮಾರುಕಟ್ಟೆ ಸ್ಥಿರ

ಚಾಲಿ ಅಡಿಕೆ ತುಸು ಹಿಮ್ಮುಖ- ಕೆಂಪು ರಾಶಿ ಮಾರುಕಟ್ಟೆ ಸ್ಥಿರ.

ಚಾಲಿ ಅಡಿಕೆ ಧಾರಣೆಯಲ್ಲಿ ಸ್ವಲ್ಪ ಹಿಮ್ಮುಖವಾಗಿದೆ ಎಂಬ ಸುದ್ದಿ. ಹಾಗೆಂದು ದೊಡ್ಡ ಇಳಿಕೆ ಆಗಿಲ್ಲ. ದರ ಮೇಲೆ ಏರಲಿಲ್ಲ ಎಂದಷ್ಟೇ ಹೇಳಬಹುದು. ಕ್ಯಾಂಪ್ಕೋ ತನ್ನ ಸೂಚಿತ ಮಾಮೂಲಿ ದರವನ್ನೇ ಮುಂದುವರಿಸಿದೆ. ಆದರೆ ಗುಣಮಟ್ಟದ ಹೆಸರಿನಲ್ಲಿ ಅಡಿಕೆ ಖರೀದಿಯಲ್ಲಿ  ಸ್ವಲ್ಪ ಹಿಮ್ಮುಖ ಅಷ್ಟೇ. ಒಳ್ಳೆಯ ಅಡಿಕೆಗೆ ಖಾಸಗಿಯವರು 48,000-48500  ತನಕ ಖರೀದಿ ಮಾಡುತ್ತಿದ್ದಾರೆ. ಪರಿಸ್ಥಿತಿ  ಪಿತೃ ಪಕ್ಷ ಮುಗಿಯುವ ತನಕ ಹೀಗೇ ಮುಂದುವರಿಯಲಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಬೆಳೆಗಾರರು ನಿರಾಶರಾಗಬೇಕಾಗಿಲ್ಲ. ಅಡಿಕೆಗೆ ಬೇಡಿಕೆ ಇದೆ. ಬೆಲೆಯೂ ಬರುತ್ತದೆ….

Read more
ಚಾಲಿ, ಕೆಂಪು ಎರಡೂ ತೇಜಿ

ಚಾಲಿ, ಕೆಂಪು ಎರಡೂ ತೇಜಿ- ಬೆಳೆಗಾರರ ಬೆಲೆ ನಿರೀಕ್ಷೆ ಇನ್ನೂ ಮುಂದೆ.

ಚಾಲಿ ಅಡಿಕೆ ಧಾರಣೆ ನಿರೀಕ್ಷೆಯಂತೆ ಈ ತಿಂಗಳಾಂತ್ಯದ ಒಳಗೆ ಕಿಲೋ.500 ತಲುಪುವುದು ಬಹುತೇಕ ಖಾತ್ರಿಯಾದಂತಾಗಿದೆ. ಜೊತೆಗೆ ಕೆಂಪಡಿಕೆಯೂ ಏರಿಕೆ ಕಂಡಿದೆ. ಅದರೆ ನಿರೀಕ್ಷೆ ಮಾತ್ರ 60,000 ದ ವರೆಗೆ ಎಂದಿತ್ತು. ಅದಕ್ಕೆ ಪೂರಕವಾಗಿ ಪರಿಸ್ಥಿತಿಯೂ ಇತ್ತು. ಆದರೆ ದರ ಆ ಮಟ್ಟಕ್ಕೆ ಏರಿಕೆಯಾಗಲಿಲ್ಲ. 49,000 ದ ಆಸುಪಾಸಿನಲ್ಲಿದ್ದುದು, 52,000 -53,000 ಕ್ಕೆ ಏರಿಕೆಯಾಯಿತಷ್ಟೇ. ಕೆಂಪಡಿಕೆಯ ಮಾರುಕಟ್ಟೆಯನ್ನು ಚಾಲಿ ನುಂಗಿದಂತಾಗಿದೆ. ಸಾಮಾನ್ಯವಾಗಿ ಹಿಂದೆ ಆಗಸ್ಟ್ ತಿಂಗಳಿನಿಂದ ಸಪ್ಟೆಂಬರ್ ತಿಂಗಳ ನವರಾತ್ರೆ ವರೆಗೆ ಅಡಿಕೆ ತೇಜಿ ಆಗುವುದು ಮಾಮೂಲು. ಹಿರಿಯ…

Read more
ಅಡಿಕೆ ಮಾರುಕಟ್ಟೆಗೆ ಹೊಸ ಹುರುಪು- ಕೆಂಪು 52,000 ಚಾಲಿ 48,500

ಅಡಿಕೆ ಮಾರುಕಟ್ಟೆಗೆ ಹೊಸ ಹುರುಪು- ಕೆಂಪು 52,500 ಚಾಲಿ 48,500

ಈ ವಾರದಲ್ಲಿ ಅಡಿಕೆ ಮಾರುಕಟ್ಟೆಗೆ ಹೊಸ ಹುರುಪು ಬಂದಿದೆ. ಚಾಲಿ ಅಡಿಕೆದರ ಏರುತ್ತಿದೆ. ಕೆಂಪಡಿಕೆಯೂ ಏರಿಕೆಯಾಗಲಾರಂಭಿಸಿದೆ. ಇಂದು ಹೊಸ ಚಾಲಿ ಖಾಸಗಿ ಮಾರುಕಟ್ಟೆಯಲ್ಲಿ 48,500 ತನಕ ಖರೀದಿ ಮಾಡುವುದಾಗಿ ದರ ಪ್ರಕಟಿಸಿರುತ್ತಾರೆ. ಕೆಂಪಡಿಕೆ ಸರಾಸರಿ 52,500 ದಾಟಿದೆ. ಅಡಿಕೆ ಬೆಳೆಗಾರರ ಬಹುದಿನಗಳ ಆಸೆ ಇನ್ನು ಮುಂದಿನ ದಿನಗಳಲ್ಲಿ ಈಡೇರುವ ನಿರೀಕ್ಷೆ ಇದೆ. ಎಲ್ಲೆಡೆಯಲ್ಲೂ ಅಡಿಕೆಗೆ ಬೆಲೆ ಏರಿದ್ದೇ ಸುದ್ದಿ, ಎಲ್ಲರಿಗೂ ಖುಷಿಯೋ ಖುಷಿ. ದೇಶದ ಮಾರುಕಟ್ಟೆಗೆ  ಮಲೇಶಿಯಾ, ಇಂಡೋನೇಶಿಯಾ, ಶ್ರೀಲಂಕಾ ಗಳಿಂದ ಅಡಿಕೆ ಆಮದು ಆಗುತ್ತಲೇ ಇದೆ….

Read more
ಫಸಲು ಕೊಡುವ ಅಡಿಕೆ ಮರ

ಫಸಲು ಕೊಡುವ ಅಡಿಕೆ ಮರಗಳಿಗೆ ಗೊಬ್ಬರ – ಯಾವುದು ಹೇಗೆ ಕೊಡಬೇಕು?

ಫಸಲು ಕೊಡುವ ಅಡಿಕೆ ಮರಲ್ಲಿ ವರ್ಷ ಪೂರ್ತಿ ಬೆಳೆವಣಿಗೆ ಇರುತ್ತದೆ. ಮಳೆಗಾಲದಲ್ಲಿ ಬೆಳೆಯುವ ಮಿಡಿಗಳು, ಚಳಿಗಾಲದಲ್ಲಿ ಬಲಿಯುತ್ತಿರುವ ಕಾಯಿಗಳು ಮತ್ತು ಮೂಡುತ್ತಿರುವ ಹೂ ಗೊಂಚಲು ಹಾಗೂ ಬೇಸಿಗೆಯಲ್ಲಿ ಅರಳುತ್ತಿರುವ ಹೂ ಗೊಂಚಲುಗಳು. ಈ ಮೂರೂ ಋತುಮಾನದಲ್ಲೂ ಅಗತ್ಯ ಪೋಷಕಗಳು ಬೇಕು. ಮಳೆಗಾಲ ಪ್ರಾರಂಭದಲ್ಲಿ ಪೋಷಕಗಳ ಕೊಟ್ಟರೆ ಅದು ಗರಿಷ್ಟ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಈಗ ಸಾರಜನಕ ಗೊಬ್ಬರವನ್ನು ಕಡಿಮೆ ಪ್ರಮಾಣದಲ್ಲೂ, ರಂಜಕ ಮತ್ತು ಪೊಟ್ಯಾಶ್ ಗೊಬ್ಬರಗಳನ್ನು  ನಿಗದಿತ ಪ್ರಮಾಣದಲ್ಲೂ ಕೊಡಬೇಕು. ಕಾರಣ ಮಳೆ ಸಿಡಿಲು ಮಿಂಚುಗಳಿಂದ ಸಾಕಷ್ಟು ಸಾರಜನಕ…

Read more
ಕೊಳೆರೋಗ ಹೆಚ್ಚಳಕ್ಕೂ ಸಸ್ಯ ಆರೋಗ್ಯ

ಕೊಳೆ ರೋಗ ಹೆಚ್ಚಳಕ್ಕೂ ಸಸ್ಯ ಆರೋಗ್ಯಕ್ಕೂ  ಸಂಬಂಧಗಳಿರಬಹುದೇ ಯೋಚಿಸಿ.

ಈ ವರ್ಷ ಬಹಳಷ್ಟು ಅಡಿಕೆ ಬೆಳೆಗಾರರು ಅಡಿಕೆ ಕಾಯಿಗಳಿಗೆ ಕೊಳೆ ರೋಗ ಬಂದಿದೆ ಎಂದು ಹೇಳುತ್ತಿದ್ದಾರೆ.  ಹೆಚ್ಚಿನ ಕಡೆ ಕೊಳೆ ರೋಗ ಬಂದಿದೆ. ಇದಕ್ಕೆ ಸಸ್ಯ ಆರೋಗ್ಯ  ಕಾರಣ ಇರಬಹುದೇ? ಕೆಲವು ದೃಷ್ಟಿಕೋನದಲ್ಲಿ ಇದು ನಿಜ ಎನ್ನಿಸುತ್ತದೆ. ಅಡಿಕೆಯ ಕೊಳೆ ರೋಗ ಬಂದಂತೆ ಅಡಿಕೆ ಸಸಿ/ ಮರಗಳಿಗೆ , ತೆಂಗಿನ ಮರಗಳಿಗೆ ಸುಳಿ ಕೊಳೆ ರೋಗವೂ  ಇತ್ತೀಚೆಗೆ ಬಹಳಷ್ಟು ಹೆಚ್ಚಾಗುತ್ತಿದೆ. ಪೋಷಕಾಂಶಗಳು ಅಸಮತೋಲನವಾಗಿ ಸಸ್ಯಕ್ಕೆ ಲಭ್ಯವಾಗದಿರುವುದೇ ಇದಕ್ಕೆ ಒಂದು ಕಾರಣ ಇರಬಹುದೇ ಎಂಬ ಬಗ್ಗೆ ಸಂಶಯವಿದೆ.  ನಾವೆಲ್ಲಾ…

Read more
error: Content is protected !!