ಬೆಳೆಗಳಿಗೆ ಸಾವಯವ ಗೊಬ್ಬರ ಹಾಕುವ ವೈಜ್ಞಾನಿಕ ವಿಧಾನ.
ಹಸಿ ಸಾವಯವ ಗೊಬ್ಬರಗಳನ್ನು ಹಾಕಿದ ಸ್ಥಳದಲ್ಲಿ ನೆಲದ ಹುಲ್ಲು ಇತ್ಯಾದಿ ಸತ್ತು ಹೋಗುತ್ತದೆ. ಕಳಿಯುವ ಕ್ರಿಯೆಯಲ್ಲಿ ಕೆಲವು ಆಮ್ಲಗಳು ಮತ್ತು ಶಾಖ ಬಿಡುಗಡೆಯಾಗಿ ನೆಲಕ್ಕೆ ಅದು ಸ್ವಲ್ಪ ಮಟ್ಟಿಗೆ ಪ್ರಸಾರವಾಗುತ್ತದೆ. ಒಂದು ವೇಳೆ ನೀವು ಹಸಿ ಸಾವಯವ ಗೊಬ್ಬರಗಳನ್ನು ಮರದ – ಸಸಿಯ ಬುಡಕ್ಕೆ ಹಾಕಿದರೆ ಅದರ ಕಾಂಡದ ಭಾಗಕ್ಕೆ ಘಾಸಿ ಉಂಟಾಗುತ್ತದೆ. ಮನುಷ್ಯ ಎಷ್ಟೇ ಉತ್ತಮ ಆಹಾರ ಸೇವನೆ ಮಾಡಿದರೂ ಸಹ, ಅದು ಸರಿಯಾಗಿ ಜೀರ್ಣ ಆಗಬೇಕಿದ್ದರೆ ಅದರ ಜೊತೆಗೆ ತೇವಾಂಶ ( ನೀರು) ಅಗತ್ಯ….
