ಜೈವಿಕ ಗೊಬ್ಬರವನ್ನು ಹೀಗೆ ಬಳಸಿದರೆ ಹೆಚ್ಚು ಫಲ ಸಿಗುತ್ತದೆ?

ಬೇರೆ ಬೇರೆ ಜೀವಾಣುಗಳ ಸಹಾಯದಿಂದ ಬೆಳೆ ಪೋಷಣೆ ಮತ್ತು ಬೆಳೆ ಸಂರಕ್ಷಣೆ ಮಾಡಬಹುದು. ಈ ಜೀವಾಣುಗಳನ್ನು ಹುಡಿ, ದ್ರವ ರೂಪದಲ್ಲಿ ರೈತರಿಗೆ ಒದಗಿಸಲಾಗುತ್ತದೆ. ಇದರ ಸಮರ್ಪಕ ಫಲಿತಾಂಶ ಯಾವ ಸಂದರ್ಭದಲ್ಲಿ ಚೆನ್ನಾಗಿ ನಡೆಯುತ್ತದೆ ಎಂಬುದು ಎಲ್ಲರೂ ತಿಳಿದಿರಬೇಕು. ಜೀವಾಣುಗಳನ್ನು ಬಳಸುವ ಮುನ್ನ ಅದರ ಬಗ್ಗೆ ರೈತರು ತಿಳಿದುಕೊಳ್ಳಬೇಕು. ಅದು ಜೀವಾಣು ಎಂದಲ್ಲ. ಯಾವುದೇ ಬೆಳೆ ಪೋಷಕ ಇರಲಿ ಬೆಳೆ ಸಂರಕ್ಷಕ ಇರಲಿ, ಬಳಸುವ ಮುನ್ನ ಅದರಲ್ಲಿ ಯಾವ ಅಂಶ ಇದೆ ಎಂಬುದನ್ನು ಯಾರು ಬಹಿರಂಗ ಗೊಳಿಸುತ್ತಾರೆಯೋ ಅವರಿಂದ…

Read more
green leaf carrying

ತೋಟಕ್ಕೆ ಈಗ ಹಸಿ ಸೊಪ್ಪು ಹಾಕಿದರೆ ತುಂಬಾ ಅನುಕೂಲ. ಯಾಕೆ?

ತೋಟಕ್ಕೆ ಹಸಿ ಸೊಪ್ಪುಗಳನ್ನು ಬಳಸುವ ಸರಿಯಾದ ಸಮಯ ಮಳೆಗಾಲದ ಪ್ರಾರಂಭದ ದಿನಗಳು. ಈ ಸಮಯದಲ್ಲಿ ಹಸಿ ಸೊಪ್ಪು ಹಾಕಿದರೆ ಅದು ಕರಗಿಸಿಕೊಡುವ ಜೀವಿಗಳಿಂದ ಚೆನ್ನಾಗಿ ಕರಗುತ್ತದೆ.  ಮಳೆಗಾಲ ಪ್ರಾರಂಭದಿಂದ ಕೊನೆತನಕವೂ ಮಣ್ಣು ತೇವ ಭರಿತವಾಗಿರುತ್ತದೆ, ವಾತಾವರಣ ತಂಪಾಗಿರುತ್ತದೆ. ಇವೆಲ್ಲದರ ಅನುಕೂಲ ಬಳಸಿಕೊಂಡು ಮಣ್ಣಿನಲ್ಲಿ ಇರುವ ಬಹುತೇಕ ಎಲ್ಲಾ ಸೂಕ್ಷ್ಮಾಣು ಜೀವಿಗಳೂ ಹೆಚ್ಚು ಚಟುವಟಿಕೆಯಲ್ಲಿರುತ್ತವೆ. ಈಗ ನೀವು ಏನೇ ಸಾವಯವ ತ್ಯಾಜ್ಯ ಹಾಕಿದರೂ ಅದು ತ್ವರಿತವಾಗಿ ಕರಗಿ ಮಣ್ಣಾಗುತ್ತದೆ. ಈಗ ಸೊಪ್ಪು ಸದೆ ಹಾಕಿದರೆ ಮಳೆ ಹನಿಗಳಿಂದಾಗುವ ಮಣ್ಣು ಸವಕಳಿಯನ್ನೂ ತಡೆಯುತ್ತದೆ. ಕಳೆ ನಿಯಂತ್ರಣಕ್ಕೂ ಸಹಕಾರಿ….

Read more

ಬಯೋ NPK ಒಂದೇ ಸಾಕು? ಇದೆಷ್ಟು ನಿಜ.

ಬಹುತೇಕ  ರೈತರ ಬಳಿಗೆ ಕೆಲವು ನೆಟ್ ವರ್ಕ್ ಸಂಘಟನೆಗಳು, ಹಾಗೆಯೇ ಕೆಲವು ಸಾವಯವ ಗೊಬ್ಬರ ಪ್ರಚಾರಕರು ಒಂದೆರಡೂ ಬಾಟಲಿಗಳನ್ನು ಅಥವಾ ಪ್ಯಾಕೆಟುಗಳನ್ನು  ಪರಿಚಯಿಸಿ ಈ ಪ್ಯಾಕೇಟ್/ಬಾಟಲಿಯ ದ್ರಾವಣ ಹಾಕಿದರೆ ಬೇರೆ ಗೊಬ್ಬರ ಬೇಕಾಗಿಲ್ಲ. ಭಾರೀ ಫಸಲು ಎಂದು  ಹೇಳುತ್ತಾರೆ. ಇದು ಬಯೋ( ಜೈವಿಕ) ಗೊಬ್ಬರ ಎಂಬುದಾಗಿಯೂ ಹೇಳುತ್ತಾರೆ. ಅಧಿಕ ಇಳುವರಿಯ ಆಶೆಯಲ್ಲಿ ಜನ ಖರೀದಿಸಿ ಬಳಸುತ್ತಾರೆ. ಇಂತಹ ಜೈವಿಕ ಗೊಬ್ಬರಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಬಯೋ NPK ಗೊಬ್ಬರ ಎಂದರೆ ಜೈವಿಕವಾಗಿ ಸಾರಜನಕ , ರಂಜಕ…

Read more
ರಾಸಾಯನಿಕ + ಸಾವಯವ ಎರಡು ಬಳಸಿ ಇಳುವರಿ

ರಾಸಾಯನಿಕ + ಸಾವಯವ = ಇಳುವರಿ ಉತ್ತಮ.

ನಾನು ರಾಸಾಯನಿಕ ಬಿಟ್ಟು ಬೇರೆ ಬಳಸುವುದೇ ಇಲ್ಲ. ನಾನು ಗೊಬ್ಬರಕ್ಕಾಗಿ ಹಸು ಸಾಕುವುದೇ ಇಲ್ಲ. ಕಡಿಮೆ ಖರ್ಚಿನಲ್ಲಿ ಗೊಬ್ಬರ ಆಗುತ್ತದೆ. ನನಗೆ ಇಳುವರಿಗೆ ಯಾವ ತೊಂದರೆಯೂ ಆಗಿಲ್ಲ ಎಂಬ ತರ್ಕ ಮಾಡುವ ರೈತರು ಒಂದಲ್ಲ ಒಂದು ದಿನ ತಮ್ಮ ಈ ಮನೋಭಾವನೆಯನ್ನು ಬದಲಿಸುತ್ತಾರೆ. ಈ ರಾಸಾಯನಿಕ ಗೊಬ್ಬರಗಳು ಮಣ್ಣಿನ ಧಕ್ಕೆ ಸಹನೆ ಇರುವಷ್ಟು ಸಮಯ ಮಾತ್ರ ಪ್ರಯೋಜನಕಾರಿ. ನಂತರ ಅದು ಕೆಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸಾವಯವ ತ್ಯಾಜ್ಯಗಳನ್ನು ಮಣ್ಣಿಗೆ ಸೇರಿಸುತ್ತಾ ಇದ್ದರೆ ಮಣ್ಣಿನ ರಚನೆ ಉತ್ತಮವಾಗಿ ರಸಗೊಬ್ಬರ…

Read more

ಹಳ್ಳಿಯ ಯುವಕರಿಗೆ ಉದ್ಯೋಗ ಕೊಡಬಲ್ಲ ಅಣಬೆ ಕೃಷಿ.

 ಆರ್ಥಿಕ ಸಂಕಷ್ಟದಿಂದ ಪಟ್ಟಣ ತೊರೆದು ಜನ ಹಳ್ಳಿಯೆಡೆಗೆ ಮುಖಮಾಡಿದ್ದಾರೆ. ಕೆಲವರಿಗೆ ಇನ್ನು ಪಟ್ಟಣದ ಸಹವಾಸವೇ ಬೇಡ ಎಂಬಂತಾಗಿದೆ.   ವೃತಿ ಅರಸುವ ಆಸಕ್ತರಿಗೆ  ಮನೆಯ ಕಡಿಮೆ ಸ್ಥಳಾವಕಾಶದಲ್ಲೂ  ಮಾಡಬಹುದಾದ ಲಾಭದ ಉದ್ದಿಮೆ ಅಣಬೆ ಬೇಸಾಯ. ವಿಶೇಷ ವಿಧ್ಯಾವಂತರೂ ಅಗಬೇಕಾಗಿಲ್ಲ. ಭಾರೀ ಬಂಡವಾಳವೂ ಬೇಕಾಗಿಲ್ಲ. ಇನ್ನೂ ಇದರೊಂದಿಗೆ ಜೇನು ಸಾಕಣೆಯಂತ ವೃತ್ತಿ ಮಾಡಿದರೆ ಮತ್ತೂ ಅನುಕೂಲ.     ಅಣಬೆ ಬೆಳೆಸಲು ಹೆಚ್ಚು ಬಂಡವಾಳ ಬೇಡ. ವೃತ್ತಿಯಲ್ಲಿ ಸ್ವಲ್ಪ ಶ್ರದ್ಧೆ ಇದ್ದರೆ ಸಾಕು. ಸೂಕ್ತ ತರಬೇತಿಯನ್ನು ಪಡೆದು ಪ್ರಾರಂಭಿಸಿದರೆ ಇದರಲ್ಲಿ ಹಿಂತಿರುಗಿ…

Read more

ಕಡಿಮೆ ಬೆಲೆಯ ಉತ್ತಮ ಜೈವಿಕ ಗೊಬ್ಬರಗಳು.

ಕೃಷಿ ಪದ್ಧತಿಯನ್ನು ಸುಸ್ಥಿರಗೊಳಿಸಲು ರಾಸಾಯನಿಕ ಗೊಬ್ಬರಗಳ ಬಳಕೆ ಮತ್ತು ಅವುಗಳ ಮೇಲಿನ ಅವಲಂಬನೆಯು ದೀರ್ಘ ಕಾಲದವರೆಗೂ ಮುಂದುವರೆಯಲು ಅಸಾಧ್ಯ.  ಸುಸ್ಥಿರ ಕೃಷಿಗೆ  ಮಣ್ಣಿನ ಆರೋಗ್ಯ ಅತ್ಯಗತ್ಯ. ಇದನ್ನು ಕಾಪಾಡುವಲ್ಲಿ ಹಸಿರು ಎಲೆ ಗೊಬ್ಬರ, ಜೈವಿಕ ಮತ್ತು ಸಾವಯವ ಗೊಬ್ಬರಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂದು ಹಲವಾರು ಖಾಸಗಿ ಜೈವಿಕ ಗೊಬ್ಬರ ಪೂರೈಕೆದಾರರು ಇದರ  ಸದುಪಯೋಗ  ಮಾಡಿಕೊಳ್ಳುತ್ತಿದ್ದಾರೆ. ಅದರೆ ಭಾರತೀಯ ತೋಟಗಾರಿಕಾ ಸಂಶೋಧನಾ  ಕೇಂದ್ರದಲ್ಲಿ ಇಂತಹ ಹಲವಾರು  ಸೂಕ್ಷ್ಮಾಣು ಜೀವಿಗಳ  ಉತ್ಪನ್ನಗಳನ್ನು ತಯಾರಿಕೆ ನಡೆಯುತ್ತಿದ್ದು, ಅರ್ಕಾ ಹೆಸರಿನಲ್ಲಿ ಇದು…

Read more

ಸಾವಯವ ಗೊಬ್ಬರ ನೀವೇ ಮಾಡುವುದು ಉತ್ತಮ.

ಸಾವಯವ ಗೊಬ್ಬರ ತಯಾರಿಸುವುದು  ನಮಗೇನೂ ಹೊಸತಲ್ಲ.  ಹತ್ತಿಪ್ಪತ್ತು ವರ್ಷದ  ಹಿಂದೆ ಇದನ್ನು ನಾವು ಕೊಂಡು ತರುತ್ತಿರಲಿಲ್ಲ. ನಮ್ಮಲ್ಲೇ ತಯಾರಿಸುತ್ತಿದ್ದೆವು. ಈಗ ನಮಗೆ ಹೊರಗಿನ ವಸ್ತು ಸುಂದರವಾಗಿ ಕಾಣುವ ಕಾರಣ ಅದಕ್ಕೆ ಮಾರು ಹೋಗುತ್ತಿದ್ದೇವೆ.  ನಮ್ಮಲೇ ಎಲ್ಲಾ ಪರಿಕರಗಳು ಇರುವಾಗ  ಯಾಕೆ ಬೇರೆ ಕಡೆಯಿಂದ ಗೊಬ್ಬರಗಳನ್ನು ತರಬೇಕು. ಯಾವ  ತಯಾರಕರಲ್ಲೂ ಮೂಲವಸ್ತುಗಳು ಅವರ  ಬಳಿ ಇಲ್ಲ. ಅವರೂ ಬೇರೆ ಕಡೆಯಿಂದ ತಂದು  ಹೊಸ ಚೀಲದಲ್ಲಿ ತುಂಬಿ ನಮಗೆ ಮಾರಾಟ ಮಾಡುವುದು. ಸಾವಯವ ಗೊಬ್ಬರ ನಾವು ಮಾಡಿದರೆ  ಚಿನ್ನ. ಕೊಂಡು…

Read more
leaf de composing on field

ತೋಟಕ್ಕೆ ಸೊಪ್ಪು ಹಾಕಿ- ಮಣ್ಣಿನ ಆರೋಗ್ಯ ಹೆಚ್ಚಿಸಿ.

ತೋಟಕ್ಕೆ, ಗದ್ದೆಗೆ  ಹಾಗೆಯೇ ಇನ್ನಿತರ ಬೆಳೆಗಳಿಗೆ ಅನಾದಿ ಕಾಲದಿಂದಲೂ  ರೈತರು ಸೊಪ್ಪು ಹಾಕುತ್ತಿದ್ದರು. ಸೊಪ್ಪು ಹಾಕುವುದರಿಂದ ತುಂಬಾ ಪ್ರಯೋಜನ ಇದೆ. ಇದು ಉತ್ತಮ ಬೇಸಾಯ ಕ್ರಮ.ಮಣ್ಣಿನ ಸೂಕ್ಷ್ಮಾಣು ಜೀವಿಗಳ ಉತ್ತಮ ಕಾರ್ಯಚಟುವಟಿಕೆಗೆ ನೆರವಾಗಲು ಹಸುರೆಲೆ ಗೊಬ್ಬರ ಸಹಾಯಕ. ಸೊಪ್ಪು ಎಂದರೆ ಹಸುರೆಲೆ ಗೊಬ್ಬರ. ಹಸುರೆಲೆಗಳಲ್ಲಿ ಮುಖ್ಯ ಹಾಗೂ ಲಘು ಪೋಷಕಾಂಶಗಳು ಇರುವ ಕಾರಣ ಇದು ಕರಗಿ ಮಣ್ಣಿಗೆ ಸೇರಿ ಪೋಶಕಾಂಶಗಳನ್ನು ಬಿಡುಗಡೆ ಮಾಡುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಹಸಿ ಸೊಪ್ಪನ್ನು ಹಾಕುತ್ತಾರೆ. ಅದು ಮಳೆಗಾಲ ಕಳೆಯುವಾಗ ಕರಗಿ ಗೊಬ್ಬರವಾಗುತ್ತದೆ….

Read more

ಸೌರ ವಿದ್ಯುತ್ ಉತ್ಪಾದಿಸಿ – ಮಾರಾಟದಿಂದ ಆದಾಯ ಗಳಿಸಿ

ಸೂರ್ಯನ ಶಾಖದಲ್ಲೂ ದುಡ್ಡು ಮಾಡಬಹುದು ಎಂಬುದು ಸರಕಾರದ ಲೆಕ್ಕಾಚಾರ. ಇದು ಸೋಲಾರ್ ಎನರ್ಜಿ ಮನಿ. ಇದಕ್ಕೆ ಒಮ್ಮೆ ಬಂಡವಾಳ ಹಾಕಿದರೆ ಸಾಕು, ನಂತರ ಕೀಟ, ರೋಗ, ಮಾರುಕಟ್ಟೆ ಮುಂತಾದ ಸಮಸ್ಯೆಗಳೇ ಇಲ್ಲ. ನಿರಂತರ ಆದಾಯ  ಕೊಡುತ್ತಿರುತ್ತದೆ. ಉತ್ತರ ಕರ್ನಾಟಕದ ವರ್ಷದ ಹೆಚ್ಚಿನ ದಿನಗಳಲ್ಲಿ ಬಿಸಿಲು ಇರುವ ಕಡೆಗಳಲ್ಲಿ ಈಗ ಸೂರ್ಯನ ಬೆಳಕಿನಲ್ಲೂ ಹಣ ಮಾಡುವುದು ಸಾಧ್ಯವಾಗಿದೆ. ಸೌರ ವಿದ್ಯುತ್ ಉತ್ಪಾದಿಸಿ ಗ್ರಿಡ್ ಗೆ ಮಾರಿದರೆ ಅದಕ್ಕೆ ಹಣ ದೊರೆಯುತ್ತದೆ. ಹಲವಾರು ಜನ ಇದಕ್ಕೆ ಕೈ ಹಾಕಿದ್ದಾರೆ. ಕೆಲವು…

Read more

ಸಾವಯವ ಸಾರಜನಕ ಗೊಬ್ಬರಗಳ ಮೂಲ ಇವು.

ಸಾರಜನಕ ಎಂಬುದು ರಾಸಾಯನಿಕ ರೂಪದಲ್ಲಿರುವ ಯೂರಿಯಾ, ಅಮೋನಿಯಂ ಸಲ್ಫೇಟ್ ಅಥವಾ ನೈಟ್ರೇಟ್ ಮುಂತಾದ ಮೂಲಗಳಲ್ಲೇ ಬಳಸಬೇಕಾಗಿಲ್ಲ. ನಿಸರ್ಗ ಸಾರಜನಕ ಸತ್ವದ ಖಣಜ. ನಮ್ಮ ತುರ್ತು ಅವಶ್ಯಕತೆಗಾಗಿ ರಾಸಾಯನಿಕ ವಿಧಾನದ ಮೂಲಕ ಸಾರಜನಕ ಗೊಬ್ಬರವನ್ನು ಉತ್ಪಾದಿಸಿದ್ದು. ಮಣ್ಣಿನಲ್ಲಿ ಸಾಕಷ್ಟು ಸಾರಜನಕದ ಅಂಶ ಇದೆಯಾದರೂ ನಾವು ಯಾಕೆ ಬೇರೆ ಮೂಲದಿಂದ ಸಾರಜನಕವನ್ನು ಬಳಸುತ್ತಿದ್ದೇವೆ ಎಂಬುದು ಎಲ್ಲರ ಭಾವನೆ. ಇದು ಸತ್ಯ. ಕಾರಣ ಇಷ್ಟೇ ಇವು ಬೇರೆ ಬೇರೆ ಕಾರಣಗಳಿಂದ ನಷ್ಟವಾಗುತ್ತದೆ. ಇದನ್ನು ಪೂರ್ಣ ಉಳಿಸಲು ಅಸಾಧ್ಯ. ಪ್ರಯತ್ನ ಪಟ್ಟರೆ ಗರಿಷ್ಟ…

Read more
error: Content is protected !!