ಕರಿಮೆಣಸಿನ ಫಸಲಿಗೆ ವಾತಾವರಣದ ಅನುಕೂಲ ಅಗತ್ಯ.

ಮುಂಗಾರು ಮಳೆ ಪ್ರಾರಂಭದಲ್ಲಿ ಕರಿ ಮೆಣಸು ಹೂವು ಕರೆ ಬಿಡುವ ಸಮಯ. ಮೊದಲ ಮಳೆ ಸಿಂಚನವಾದ ಕೂಡಲೇ ಬಳ್ಳಿ ಚಿಗುರಲು ಪ್ರಾರಂಭವಾಗುತ್ತದೆ. ಕೆಲವು ಸ್ವಲ್ಪತಡವಾಗುತ್ತದೆ. ಮತ್ತೆ ಕೆಲವು ಮೇ ತಿಂಗಳ ಕೊನೆಗೇ ಹೂವು ಕರೆ  ಬಿಡಲು ಪ್ರಾರಂಭವಾಗುತ್ತದೆ. ಇದು ಬಳ್ಳಿಯ ಆರೋಗ್ಯ ಮತ್ತು  ತಳಿಯ ಮೇಲೆ  ಅವಲಂಭಿತವಾಗಿದೆ. ತಂಪು ವಾತಾವರಣ ಬೇಕು: ಕರಿಮೆಣಸಿನಲ್ಲಿ ಹೂವು ಕರೆ ಬಿಡುವಾಗ ತಂಪು ವಾತಾವರಣ  ಇರಬೇಕು. ಹಾಗಿದ್ದಾಗ ಅದು ಫಲಿತಗೊಂಡು  ಕಾಳುಗಳಾಗುತ್ತದೆ. ಒಂದು ವೇಳೆ ಬಿಸಿ ವಾತಾವರಣ ಇದ್ದರೆ ಕರೆಗಳು ಅರ್ಧಂಬರ್ಧ…

Read more
ಶುಂಠಿ ಕೊಳೆ ರೋಗಕ್ಕೆ ಪರಿಹಾರ

ಶುಂಠಿ ಕೊಳೆ ರೋಗಕ್ಕೆ ಒಂದೇ ಪರಿಹಾರ.

ಶುಂಠಿಯ ಗಿಡ ಹಳದಿಯಾಗಿ ಕೊಳೆಯುವ Rhizome rot / Soft rot ರೋಗಕ್ಕೆ Pythium aphanidermatum ಶಿಲೀಂದ್ರ,  ಕಾರಣ. ಶುಂಠಿ ಬೆಳೆಯಲ್ಲಿ ಇದರಿಂದಾಗಿ 80-90 % ತನಕ ಬೆಳೆ ನಷ್ಟವಾಗುತ್ತದೆ.  ಇದನ್ನು ಬೇರೆ ಬೇರೆ ವಿಧಾನದಲ್ಲಿ ಟ್ರಯಲ್ ಎಂಡ್ ಎರರ್ ಮಾದರಿಯಲ್ಲಿ ನಿಯಂತ್ರಿಸುವ ಪ್ರಯತ್ನ ಮಾಡಿ ಸಮಾಧಾನ ಮಾಡಿಕೊಳ್ಳುತ್ತಾರೆ. ಇದು ಬಂದ ನಂತರ ನಿಯಂತ್ರಣ ಅಷ್ಟಕ್ಕಷ್ಟೇ. ಮೊದಲೇ ನಿಯಂತ್ರಣ ಮಾಡಿದರೆ ಪರಿಣಾಮಕಾರಿ. ಶುಂಠಿ ರೋಗ ಹೇಗೆ ಬರುತ್ತದೆ:   ಬಿತ್ತನೆ ಗಡ್ಡೆಗಳ ಮೂಲಕ ಈ ರೋಗಕಾರಕ ಶಿಲೀಂದ್ರದ ಪ್ರವೇಶವಾಗುತ್ತದೆ. ಗಡ್ಡೆಗಳಲ್ಲಿ…

Read more
Nut meg mace

ಅಡಿಕೆ ತೋಟಕ್ಕೆ ಅತ್ಯುತ್ತಮ ಮಿಶ್ರ ಬೆಳೆ ಜಾಯೀಕಾಯಿ.

ಅಡಿಕೆ ತೋಟದಲ್ಲಿ ವಾರ್ಷಿಕ ಮಿಶ್ರ ಬೆಳೆಗಳಿಗಿಂತ  ಬಹುವಾರ್ಷಿಕ ಮಿಶ್ರ ಬೆಳೆಗಳಿದ್ದರೆ ತಲೆಬಿಸಿ ಇಲ್ಲ. ಮರ ಸಾಂಬಾರವಾದ ಜಾಯೀಫಲ ಎಂಬುದು  ಅಡಿಕೆ ಮರಗಳ ಜೊತೆಗೆ ಯಾವುದೇ ಸ್ಪರ್ಧೆ ನಡೆಸದೆ, ಒಂದೆಡೆ ಆದಾಯ ಮತ್ತೊಂದೆಡೆ ಗಾಳಿ ಮತ್ತು ಬಿಸಿಲು ತಡೆಗೆ ಸಹಕರಿಸುವ  ಧೀರ್ಘಾವಧಿಯ ಬೆಳೆ. ಅಡಿಕೆ ತೋಟಕ್ಕೆ ಹೊಂದುವ ಮಿಶ್ರ ಬೆಳೆಗಳಲ್ಲಿ ಕರಿಮೆಣಸು, ಕೊಕ್ಕೋ ಬಹುವಾರ್ಷಿಕ ಮಿಶ್ರ ಬೆಳೆಗಳು. ಆದರೆ ಅವುಗಳ ರಕ್ಷಣೆ, ನಿರ್ವಹಣೆಯ ತೆಲೆಬಿಸಿ ದೊಡ್ಡದು. ಮರ ಸಾಂಬಾರವಾದ  ಜಾಯೀ ಫಲಕ್ಕೆ ಇದೆಲ್ಲಾ ಯಾವುದೂ ಇಲ್ಲ. ನೆಟ್ಟರೆ ಬೆಳೆಯುತ್ತಿರುತ್ತದೆ….

Read more
ಶುಂಠಿ ಹೊಲ

ಶುಂಠಿ ಬೆಳೆಯ ಪ್ರಮುಖ ಕೀಟ ಮತ್ತು ನಿಯಂತ್ರಣ

ಶುಂಠಿ ಬೆಳೆಯನ್ನು ತುಂಬಾ ನಿಗಾ ವಹಿಸಿ ಬೆಳೆದರೆ ಮಾತ್ರ ಅದು ಕೈ ಹಿಡಿಯುತ್ತದೆ. ನಾಟಿಯಿಂದ ಬೆಳೆವಣಿಗೆ ತನಕ ಪ್ರತೀ ಹಂತದಲ್ಲೂ ತೀವ್ರ ನಿಗಾ ಬೇಕು. ಅಷ್ಟೇ ಗಮನವೂ ಬೇಕು. ಶುಂಠಿಯಲ್ಲಿ ಸಸಿ ಹಂತದಲ್ಲಿ ನಿತ್ಯ ಗಮನಿಸಬೇಕಾದುದು ಅದರ ಕೀಟ ಹಾವಳಿ.ಶುಂಠಿಗೆ ಕಾಂಡ  ಕೊರಕ ಹುಳಿವಿನ ತೊಂಡರೆ ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ಕಂಡು ಬರುವ ಸಮಸ್ಯೆ. ಕಾಂಡ ಕೊರಕ ಹುಳು ಹೆಚ್ಚಾದರೆ ಬೆಳೆ ಗಣನೀಯವಾಗಿ ನಷ್ಟವಾಗುತ್ತದೆ. ಇದನ್ನು ನಿತ್ಯ ಗಮನಿಸಿ  ನಿರ್ವಹಣೆ ಮಾಡಬೇಕು. ಯಾವಾಗ ಹೆಚ್ಚು: ಕಾಂಡ ಕೊರಕ…

Read more

ಶುಂಠಿ- ಎಲೆಗೆಳು ಹಳದಿಯಾಗದಂತೆ ತಡೆಯುವ ವಿಧಾನ.

ಬ್ಯಾಕ್ಟೀರಿಯಾ ಸೊರಗು ಬರುವುದು ಮುಖ್ಯವಾಗಿ ಗಡ್ಡೆಗಳಲ್ಲಿ ಸೋಂಕು ಇರುವ ಕಾರಣದಿಂದ. ಗಡ್ಡೆಗಳನ್ನು ಆಯ್ಕೆ ಮಾಡುವಾಗ ತುಂಬಾ ಜಾಗರೂಕತೆ ಬೇಕು. ಮಣ್ಣು ಒಮ್ಮೆ ಬೆಳೆ ಬೆಳೆದ ಸ್ಥಳ ಆಗಿರಬಾರದು. ಬಿತ್ತನೆ ಗಡ್ಡೆಯನ್ನು  ಉಪಚರಿಸಿಯೇ ನಾಟಿ ಮಾಡಬೇಕು. ಬ್ಯಾಕ್ಟೀರಿಯಾ ಸೊರಗು ರೋಗವು ಗಿಡವನ್ನು ತಕ್ಷಣಕ್ಕೆ ಸಾಯುವಂತೆ ಮಾಡುವುದಿಲ್ಲ. ಎಲೆ ಹಳದಿಯಾಗುತ್ತಾ ಕೊನೆಗೆ ಸಾಯುತ್ತದೆ.  ಇದು ಬೆಳಯನ್ನು ಏಳಿಗೆಯಾಗಲು ಬಿಡದ ರೋಗ. ಇದು ಸುಡೋಮೋನಾಸ್ ಸೋಲನೇಸಿಯಾರಂ ಎಂಬ  ಬ್ಯಾಕ್ಟೀರಿಯಾ ( ದುಂಡಾಣು) ದಿಂದ ಬರುತ್ತದೆ. ಇದು ಮುಂಗಾರು ಮಳೆ ಪ್ರಾರಂಭವಾಗುವ ಸಮಯದಲ್ಲಿ…

Read more
ploy mulch of ginger

ಶುಂಠಿ ಸಸಿಗಳು ಯಾಕೆ ಕೊಳೆಯುತ್ತಿವೆ – ಏನು ಪರಿಹಾರ

ಶುಂಠಿ ಬೆಳೆಯ ಅತೀ ದೊಡ್ದ ಸಮಸ್ಯೆ ಎಂದರೆ ಎಲೆ ಕೊಳೆ ಮತ್ತು ಕಾಂಡ ಕೊಳೆ ರೋಗ. ಇದರಿಂದಾಗಿ 25 % ದಿಂದ 75% ತನಕವೂ ಬೆಳೆ ಹಾಳಾಗುತ್ತದೆ. ಇದರ ಮೂಲ ಗಡ್ಡೆ, ವಾತಾವರಣ ಮತ್ತು ನೀರು. ಇದನ್ನು ಮುನ್ನೆಚ್ಚರಿಕೆ ಕ್ರಮದಲ್ಲೇ ನಿಯಂತ್ರಣ ಮಾಡಬೇಕು. ಶುಂಠಿ  ಗಡ್ಡೆ ನಾಟಿ ಮಾಡಿದಲ್ಲಿ ಕೆಲವು ಗಡ್ಡೆಗಳು ಮೊಳಕೆ ಬಾರದೇ ಅಲ್ಲಿಗೆ ಕೊಳೆತು ಹೋಗುವುದಿದೆ. ಮತ್ತೆ ಕೆಲವು ಬಲವಿಲ್ಲದ ಮೊಳಕೆಗಳು, ಇನ್ನು ಕೆಲವು 4-5  ಎಲೆ ಬಂದ ನಂತರ ಹಳದಿಯಾಗುವುದು. ಸಸ್ಯಗಳು ಬೆಳೆಯುತ್ತಿದ್ದಂತೇ …

Read more

ಏಲಕ್ಕಿ ಬೆಳೆಗೆ ಇದು ಮಾರಕ ರೋಗ

ಏಲಕ್ಕಿ ಬೆಳೆಯಲಾಗುವ ಎಲ್ಲಾ ಕಡೆ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಕಟ್ಟೆ ಮತ್ತು ಕೊಕ್ಕೆ ಕಂದು ರೋಗ ಅಥವಾ ನಂಜಾಣು ರೋಗದ ಲಕ್ಷಣವನ್ನು ತೋರುವ ಸಸ್ಯಗಳಿವೆ. ಇದು ಸರಿಯಾಗುವ ರೋಗ ಅಲ್ಲ. ಹರಡುವ ರೋಗ. ಆದುದರಿಂದ  ಅದನ್ನು ಹಾಗೆಯೇ ಉಳಿಸಿಕೊಳ್ಳಬೇಡಿ. ಕಟ್ಟೆ ಅಥವಾ ಕೊಕ್ಕೆ ಕಂದು ರೋಗದ ಲಕ್ಷಣಕ್ಕೆ ಹೋಲಿಕೆ ಇದ್ದರೆ  ಅದನ್ನು ತೆಗೆದು ಬಿಡಿ. ರೋಗ ಅದರಲ್ಲೂ ನಂಜಾಣು ರೋಗ ಶಿಲೀಂದ್ರ ರೋಗಗಳು ಕೆಲವು ವಾಹಕಗಳ ಮೂಲಕ ಆರೋಗ್ಯವಂತ ಸಸ್ಯಕ್ಕೂ ಪ್ರಸಾರವಾಗುತ್ತದೆ. ಬಾಳೆಯಲ್ಲಿ  ನಂಜಾಣು ರೋಗ ಬಂದದ್ದನ್ನು…

Read more

ನೀವೇ ಮಾಡಬಹುದು- ಕರಿಮೆಣಸಿನ ಗಿಡ.

ಚಳಿಗಾಲ ಕಳೆದು ಬೇಸಿಗೆ ಬಂತೆಂದರೆ ಸಾಕು, ಸಸ್ಯಾಭಿವೃದ್ದಿಗೆ ಇದು ಸೂಕ್ತ ಕಾಲ. ಯಾವುದೇ ಸಸಿಯ ಸಸ್ಯಾಭಿವೃದ್ದಿಗೆ ಚಳಿಗಾಲ ಸೂಕ್ತವಲ್ಲ. ಈ ಸಮಯದಲ್ಲಿ ವಾತಾವರಣದಲ್ಲಿ ಆರ್ಧ್ರತೆ  ಹೆಚ್ಚು ಇದ್ದು ಬೇರು ಬರಲು, ಕಸಿ ಕೂಡಲು ಇದು ಸೂಕ್ತ ಕಾಲಾವಧಿ.ಈ ಸಮಯದಲ್ಲಿ  ಮಾಡಿದ ಸಸ್ಯಾಭಿವೃದ್ದಿಯಲ್ಲಿ 90% ಯಾಶಸ್ಸು ಸಾಧ್ಯ… ಯಾವ ಬಳ್ಳಿ ಸೂಕ್ತ: ನೆಲದಲ್ಲಿ ಹರಿದಾಡುವ ಹಬ್ಬು ಬಳ್ಳಿಗಳನ್ನು ಇದಕ್ಕಾಗಿ ಬಳಕೆ ಮಾಡಬೇಕು. ತೀರಾ ಎಳೆಯ ಬಳ್ಳಿಗಳು ಸೂಕ್ತವಲ್ಲ. ಸಾಧಾರಣ ಬೆಳೆದ ಬಳ್ಳಿಗಳನ್ನೇ ಆಯ್ಕೆ ಮಾಡಬೇಕು. ಹಬ್ಬು ಬಳ್ಳಿಗಳನ್ನು ಮೂಲ…

Read more
ಶುಂಠಿ - ಉತ್ತಮ ಬೀಜದ ಗಡ್ಡೆ ಆಯ್ಕೆ.

ಶುಂಠಿ – ಉತ್ತಮ ಬೀಜದ ಗಡ್ಡೆ ಆಯ್ಕೆ.

ಶುಂಠಿಯ ಬಿತ್ತನೆ  ಗಡ್ಡೆ ಮಾರಲು ಅದೆಷ್ಟು ಏಜೆಂಟರೋ. ಈಗಲೇ ಅವರ ವ್ಯವಹಾರ ಕುದುರುವುದು. ಅಮಾಯಕ  ಹೊಸ ಬೆಳೆಗಾರರು ಇವರ ಬಲೆಗೇ ಬೀಳುವುದು.  ಹೆಚ್ಚಿನ ರೈತರು ಬೀಜದ ಗಡ್ಡೆ ಆಯ್ಕೆ ಮಾಡುವಾಗ ತಪ್ಪುತ್ತಾರೆ. ಇದರಿಂದ ಮುಂದೆ ಬೆಳೆಯಲ್ಲಿ ರೋಗಗಳು ಖಾಯಂ ಆಗುತ್ತವೆ.ಶುಂಠಿಯ ಬೆಳೆಯಲ್ಲಿ ರೋಗ ಮುಕ್ತ  ಬಿತ್ತನೆ ಗಡ್ದೆಯೇ ಪ್ರಮುಖ ಹೆಜ್ಜೆ ! ಶುಂಠಿ ಬೆಳೆಸಬೇಕೆಂದಿರುವಿರಾದರೆ ನೀವು ಬೆಳೆ  ಇರುವ ಹೊಲವನ್ನು ನೋಡಿ ಬೀಜದ ಗಡ್ಡೆ ಆಯ್ಕೆ ಮಾಡಬೇಕು ಎನ್ನುತ್ತಾರೆ. ಹಲವಾರು ವರ್ಷಗಳಿಂದ ಶುಂಠಿ ಬೆಳೆಯುವ ಅನುಭವಿಗಳು ತಮಗೆ…

Read more

ಉತ್ತಮ ಮೆಣಸಿಗೆ 40 ರೂ. ಬೆಲೆ ಹೆಚ್ಚು.

ನಾವು ಹೆಚ್ಚಾಗಿ ಕೊಯಿಲಿನ ಸಮಯದಲ್ಲಿ ಅವಸರ ಮಾಡುತ್ತೇವೆ. ಇನ್ನೇನು ಜನವರಿ ಬಂದಿದೆ. ಕರಿಮೆಣಸು ಬೆಳೆದು ಹಣ್ಣಾದರೆ ಹಕ್ಕಿಗಳು ತಿಂದು ನಷ್ಟವಾಗುತ್ತದೆ ಎಂದು ಬಲಿಯುವ ಮುನ್ನ ಕೊಯಿಲಿಗೆ ಪ್ರಾರಂಭಿಸುತ್ತೇವೆ. ಇದರಿಂದ ನಾವು 25 % ಕ್ಕೂ ಹೆಚ್ಚು ತೂಕ ನಷ್ಟ ಮಾಡಿಕೊಳ್ಳುತ್ತೇವೆ. ಈ ನಷ್ಟವನ್ನು ಕಡಿಮೆ ಮಾಡಿಕೊಂಡರೆ 1 ಕ್ವಿಂಟಾಲು ಇಳುವರಿ ಪಡೆಯುವ ಬದಲು ಇನ್ನೂ 25 ಕಿಲೋ ಹೆಚ್ಚು ಪಡೆಯಬಹುದು ಎಂಬುದು ಕೆಲವು ಉತ್ತಮ ಮೆಣಸು ಬೆಳೆಗಾರರ ಅಭಿಪ್ರಾಯ. ಉತ್ತಮ ಗಾರ್ಬಲ್ ಮಾಡಿದ ಮೆಣಸಿಗೆ  ಇತರ ಮೆಣಸಿಗಿಂತ…

Read more
error: Content is protected !!