ರೈತ ಸಮುದಾಯ ಆರೋಗ್ಯ- ಪಾಲಿಸಬೇಕಾದ ಸರಳ ಅಭ್ಯಾಸಗಳು.
ರೈತರು ರಾಷ್ಟ್ರಕ್ಕೆ ಆಹಾರವನ್ನು ಒದಗಿಸುತ್ತಾರೆ, ಆದರೆ ತಮ್ಮದೇ ಆರೋಗ್ಯದ ವಿಚಾರದಲ್ಲಿ ಅವರು ಬಹುಮಟ್ಟಿಗೆ ನಿರ್ಲಕ್ಷಿತರಾಗಿದ್ದಾರೆ. ಅವರ ವೃತ್ತಿ ನಿಜವಾಗಿ ಉಳಿದೆಲ್ಲಾ ವೃತ್ತಿಗಿಂತ ಆರೋಗ್ಯಪೂರ್ಣ ಜೀವನಕ್ಕೆ ಪೂರಕ. ಆದರೆ ತಿಳಿದೋ ತಿಳಿಯದೆಯೋ ನಾವು ಈ ಅವಕಾಶದಿಂದ ವಂಚಿತರಾಗುತ್ತಿದ್ದೇವೆ. ಕೃಷಿ ಎಂದರೆ ಕೇವಲ ಒಂದು ಉದ್ಯೋಗವಲ್ಲ — ಅದು ನಮ್ಮ ಆರೋಗ್ಯ ರಕ್ಷಕ ವೃತ್ತಿ. ಸರ್ಕಾರಿ ನೌಕರರಿಗೆ ಸರ್ಕಾರದ ಆರೋಗ್ಯ ಸೌಲಭ್ಯಗಳು, ವಿಮೆ ಇರುತ್ತದೆ. ಕೂಲಿಕಾರ್ಮಿಕರಿಗೂ ಕೆಲವು ಭದ್ರತೆಗಳು ದೊರೆಯುತ್ತವೆ. ಆದರೆ, ಭೂಮಿಯ ಮಾಲೀಕನಾದ ರೈತ ತನ್ನ ಕೂಲಿಕಾರ್ಮಿಕರ ಆರೋಗ್ಯದ…
