
ರೈತ ಹೋರಾಟದಲ್ಲಿ ಸತ್ತವರಿಗೆ ಪರಿಹಾರವೇ ಇಲ್ಲವಂತೆ.
ಕೇಂದ್ರದ ಕೃಷಿ ಕಾಯಿದೆಯ ವಿರುದ್ದ ಹಗಲು ರಾತ್ರೆ ಎನ್ನದೆ ಒಂದು ವರ್ಷಕ್ಕೂ ಹೆಚ್ಚಿನ ಕಾಲ ಧರಣಿ ಪ್ರತಿಭಟನೆ ಮಾಡಿದ ರೈತರ ಪೈಕಿಯಲ್ಲಿ ಸುಮಾರು 700 ಮಂದಿ ಸತ್ತಿದ್ದಾರೆ ಎಂಬುದಾಗಿ ಸುದ್ದಿಗಳಿತ್ತು. ಸತ್ತವರಿಗೆ ಪರಿಹಾರ ಕೊಡಬೇಕು ಎಂಬುದಾಗಿ ವಿರೋಧ ಪಕ್ಷಗಳು ಬೊಬ್ಬಿಟ್ಟರೂ ಪ್ರಯೋಜನ ಆಗಲಿಲ್ಲ. ಸತ್ತವರು ಬೀದಿ ನಾಯಿ ಸತ್ತಂತೆ ಆಯಿತಲ್ಲಾ ದುರ್ಗತಿ! ಈ ತನಕ ಭಾರತದ ಇತಿಹಾಸದಲ್ಲೇ ನಡೆದಿರದ ಸುಧೀರ್ಘ ರೈತ ಹೋರಾಟ ಜಯವನ್ನೇನೋ ಪಡೆಯಿತು. ಆದರೆ ರೈತರೆಂದು ಹೋರಾಟದಲ್ಲಿ ಭಾಗವಹಿಸಿದವರು ಸತ್ತರೆ ಅವರ ದಾಖಲೆಯೇ ಇಲ್ಲವೆಂದರೆ…