ಪೋಷಕ ಮತ್ತು ಶಿಲೀಂಧ್ರನಾಶಕ ಸಿಂಪರಣೆಗೆ ಸೂಕ್ತ ಸಮಯ.

Best Time for Nutrient and Fungicide Spraying.

ಕೃಷಿಕರು ತಾವು ಬೆಳೆಸುವ ಬೆಳೆಗಳಿಗೆ ಪೋಷಕಾಂಶ, ಶಿಲೀಂದ್ರ  ನಾಶಕ  ಹಾಗೆಯೇ ಕೀಟನಾಶಕಗಳನ್ನು ಸಿಂಪಡಿಸುತ್ತಾರೆ. ಆದರೆ ಹೆಚ್ಚಿನವರು ಅದಕ್ಕೆ ಸೂಕ್ತ ಸಮಯ ಯಾವುದು ಎಂದು ತಿಳಿದಿರುವುದಿಲ್ಲ. ಎಲ್ಲಾ ಪೋಷಕಾಂಶ, ಶಿಲೀಂದ್ರ ನಾಶಕ ಹಾಗೆಯೇ ಕೀಟನಾಶಕಗಳನ್ನು  ತಂಪಾದ ಜಾಗದಲ್ಲಿ (keep in cool place) ಇದಬೇಕು ಎಂದು ಹೇಳಿರುತ್ತಾರೆ. ಕಾರಣ ಅದರ ಕ್ರಿಯಾತ್ಮಕ ಗುಣ ಚೆನ್ನಾಗಿರಲು. ಹಾಗೆಯೇ ಸಿಂಪರಣೆಗೂ ಸಹ ತಂಪಾದ ಹವಾಮಾನ ಇದ್ದರೆ ಅದರ ಫಲಿತಾಂಶ ದುಪ್ಪಟ್ಟು.

ಇಂದು ಕೃಷಿಯಲ್ಲಿ ಫೋಲಿಯರ್ ಸಿಂಪಡಣೆ, ಪತ್ರ ಸಿಂಚನ (Foliar Spray) ಬಹಳ ಮುಖ್ಯವಾಗಿದೆ. ರೈತರು ಸಸ್ಯದ ಒಳ್ಳೆಯ ಬೆಳವಣಿಗೆಗೆ ಪೋಷಕಾಂಶಗಳನ್ನು ಎಲೆಗಳ ಮೇಲೆ ಸಿಂಪಡಿಸುತ್ತಾರೆ. ಹಾಗೆಯೇ ರೋಗ ತಡೆಯಲು ಶಿಲೀಂಧ್ರನಾಶಕಗಳನ್ನು ಬಳಸುತ್ತಾರೆ. ಆದರೆ ಈ ಸಿಂಪಡಣೆ ಯಾವ ಸಮಯದಲ್ಲಿ ಮಾಡಲಾಗುತ್ತದೆ ಎಂಬುದೇ ಅದರ ಯಶಸ್ಸನ್ನು ನಿರ್ಧರಿಸುತ್ತದೆ.

ಅನೇಕ ರೈತರು ಮಧ್ಯಾಹ್ನ ಬಿಸಿಲಿನಲ್ಲಿ ಸಿಂಪಡಣೆ ಮಾಡುವ ಅಭ್ಯಾಸ ಹೊಂದಿದ್ದಾರೆ. ಆದರೆ ಈ ಸಮಯದಲ್ಲಿ ಪೋಷಕಾಂಶದ ನಷ್ಟ ಹೆಚ್ಚು, ಶಿಲೀಂಧ್ರನಾಶಕದ ಪರಿಣಾಮ ಕಡಿಮೆ ಆಗುತ್ತದೆ. ಸರಿಯಾದ ಸಮಯದಲ್ಲಿ ಮಾಡಿದರೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಫಲಿತಾಂಶ ಸಿಗುತ್ತದೆ.

ಬಿಸಿಲಿನಲ್ಲಿ ಸಿಂಪರಣೆಯ ದೋಷಗಳು

  • ಆವೇಶನ ನಷ್ಟ: ಬಿಸಿಲಿನಲ್ಲಿ ನೀರಿನ ಹನಿಗಳು ಬೇಗ ಆವಿಯಾಗಿ ಹಾರಿಹೋಗುತ್ತವೆ.
  • ಪೋಷಕಾಂಶ ವ್ಯರ್ಥ: ಎಲೆಗಳು ಪೋಷಕಾಂಶವನ್ನು ಹೀರಿಕೊಳ್ಳುವುದಕ್ಕೂ ಮುಂಚೆಯೇ ನಷ್ಟವಾಗುತ್ತದೆ.
  • ಔಷಧ ಹಾನಿ: ಕೆಲ ಶಿಲೀಂಧ್ರನಾಶಕಗಳು ಮತ್ತು ಪೋಷಕಾಂಶಗಳು ತೀವ್ರ ಸೂರ್ಯಕಿರಣದಲ್ಲಿ ಹಾಳಾಗುತ್ತವೆ.
  • ಎಲೆ ಸುಡುವಿಕೆ: ಬಿಸಿಲಿನಲ್ಲಿ ಸಿಂಪಡಿಸಿದರೆ ಎಲೆ ಸುಟ್ಟಂತೆ ಹಾನಿಯಾಗಬಹುದು.

ರೋಗಾಣುಗಳು ಮತ್ತು ಕೀಟಗಳ ಚಟುವಟಿಕೆ:

ಯಾವಾಗಲೂ ಕೀಟಗಳು, ರೋಗಾಣುಗಳು ಕ್ರಿಯಾತ್ಮಕವಾಗಿರುವ ಸಮಯದಲ್ಲಿ ಸಿಂಪರಣೆ ಮಾಡಬೇಕು. ಪೊಷಕಾಂಶ ಸಿಂಪರಣೆ ಮಾಡುವಾಗ ಎಲೆಗಳು ತಂಪಾಗಿರಬೇಕು. ಆಗ ಅವು ಹೀರಿಕೊಳ್ಳುವ ಪ್ರಮಾಣ ಜಾಸ್ತಿ.

  • ಶಿಲೀಂಧ್ರ ರೋಗಗಳು (ಡೌನಿ ಮಿಲ್ಡ್ಯೂ, ಎಲೆ ಚುಕ್ಕೆ, ಬ್ಲೈಟ್ ಮುಂತಾದವು) ಹೆಚ್ಚು ತೇವ ಮತ್ತು ಮೋಡದ ಸಮಯದಲ್ಲಿ ಹೆಚ್ಚುತ್ತವೆ.
  • ಆಫಿಡ್, ಮಿಡತೆ, ಮೀಲಿ ಬಗ್ಸ್, ವೈಟ್ ಫ್ಲೈ (ಬಿಳಿ ನೊಣ) ಮುಂತಾದ ಹೀರುವ ಕೀಟಗಳು ತಂಪಾದ, ತೇವದ ವಾತಾವರಣದಲ್ಲಿ ಚುರುಕಾಗುತ್ತವೆ.
  • ಹೀಗಾಗಿ, ಮಧ್ಯಾಹ್ನ ಸಿಂಪಡಣೆ ಮಾಡಿದರೆ ರೋಗ-ಕೀಟ ನಿಯಂತ್ರಣ ಪರಿಣಾಮಕಾರಿಯಾಗುವುದಿಲ್ಲ.

ಯಾವ ಸಮಯದಲ್ಲಿ ಸಿಂಪರಣೆ ಉತ್ತಮ?

  1. ಬೆಳಿಗ್ಗೆ (6:30 – 8:30 AM)
    • ಎಲೆಗಳ ಮೇಲೆ ಇರುವ ಹನಿಗಳು ಶೋಷಣೆಗೆ ಸಹಕಾರಿ.
    • ತಂಪಾದ ಹವಾಮಾನದಿಂದ ಆವೀಕರಣ ಕಡಿಮೆ.
    • ಸಸ್ಯದ ಎಲೆಗಳಲ್ಲಿ ರಂಧ್ರಗಳು (Stomata) ಸಕ್ರಿಯವಾಗಿರುವುದರಿಂದ ಹೀರಿಕೊಳ್ಳುವಿಕೆ ಹೆಚ್ಚು.
  2. ಸಂಜೆ (4:30 – 6:30 PM)
    • ತಂಪಾದ ವಾತಾವರಣದಿಂದ ಔಷಧ ಹಾಳಾಗುವುದಿಲ್ಲ.
    • ರೋಗ-ಕೀಟಗಳು ಹೆಚ್ಚು ಚುರುಕಾಗಿರುವುದರಿಂದ ನಿಯಂತ್ರಣ ಉತ್ತಮ.
    • ಸಿಂಪಡಿಸಿದ ಔಷಧ ರಾತ್ರಿ ಪೂರ್ತಿ ಎಲೆಗಳ ಮೇಲೆ ಉಳಿದುಕೊಳ್ಳುತ್ತದೆ.
    • ಎಲೆ ಸುಡುವ ಅಪಾಯವಿಲ್ಲ. ಗಾಳಿಗೆ ಎಲ್ಲೆಲ್ಲಿಗೋ ಹಾರುವ ಸಾಧ್ಯತೆಯೂ ಕಡಿಮೆ.

ಈ ಕಾರಣಗಳಿಂದಾಗಿ ಸಂಜೆಯ ಸಿಂಪಡಣೆ ಹೆಚ್ಚು ಪರಿಣಾಮಕಾರಿ ಎಂದು ತಜ್ಞರು ಹೇಳುತ್ತಾರೆ.

ಸರಿಯಾದ ಸಮಯದಲ್ಲಿ ಸಿಂಪಡಣೆಯ ಫಲಿತಾಂಶ

ಸಂಜೆ ಹೊತ್ತು ಸಿಂಪರಣೆ
  • ಪೋಷಕಾಂಶ ಶೋಷಣೆ ಹೆಚ್ಚಾಗಿ ವ್ಯರ್ಥ ಕಡಿಮೆ.
  • ಶಿಲೀಂಧ್ರ ರೋಗ ನಿಯಂತ್ರಣ ಉತ್ತಮ.
  • ಕಡಿಮೆ ವೆಚ್ಚದಲ್ಲಿ ಉತ್ತಮ ಫಲಿತಾಂಶ.
  • ಸಸ್ಯಗಳು ಹಸಿರು, ಆರೋಗ್ಯಕರವಾಗಿ ಬೆಳೆಯುತ್ತವೆ.
  • ಹೂವು, ಹಣ್ಣು ಮತ್ತು ಧಾನ್ಯ ಉತ್ಪಾದನೆ ಹೆಚ್ಚುತ್ತದೆ.

ರೈತರು ತಪ್ಪಿಸಬೇಕಾದ ದೋಷಗಳು

  • ಮಧ್ಯಾಹ್ನ ಬಿಸಿಲಿನಲ್ಲಿ ಸಿಂಪಡಣೆ – ವ್ಯರ್ಥ ಮತ್ತು ಹಾನಿ.
  • ಹೆಚ್ಚು ರಾಸಾಯನಿಕಗಳನ್ನು ಮಿಶ್ರಣ ಮಾಡುವುದು – ಪರಿಣಾಮ ಕಡಿಮೆ.
  • ಮಳೆ ಬರುವ ಮುಂಚೆ ಸಿಂಪರಣೆ – ಸಂಪೂರ್ಣ ನಷ್ಟ.
  • ಹೆಚ್ಚು ಪ್ರಮಾಣದಲ್ಲಿ ಪೋಷಕಾಂಶ ಸಿಂಪಡಣೆ – ಎಲೆ ಸುಡುವ ಅಪಾಯ.

ಕೀಟನಾಶಕ – ಶಿಲೀಂದ್ರ ನಾಶಕ, ಪೊಷಕಾಂಶ ಬಳಕೆ ಮಾಡುವಾಗ  ಕೆಲವೊಂದು ಅನಾರೋಗ್ಯ ಸಮಸ್ಯೆಯನ್ನು ಹೇಳುವುದು ಉಂಟು. ಇದಕ್ಕೆ ಒಂದು ಕಾರಣ ಸಮಯವಲ್ಲದ ಸಮಯದಲ್ಲಿ ಇವುಗಳ ಬಳಕೆ. ಹಾಗೆಯೇ ಅವೈಜ್ಞಾನಿಕ ಬಳಕೆ. ಇದನ್ನು ತಪ್ಪಿಸುವುದು ನಮ್ಮ ಆದ್ಯ ಕರ್ತವ್ಯ.

ರೈತರಿಗೆ ಉಪಯುಕ್ತ ಸಲಹೆಗಳು

  • ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಮಾತ್ರ ಸಿಂಪಡಣೆ ಮಾಡಿ.
  • ಸ್ವಚ್ಛ ನೀರನ್ನು ಬಳಸಿ, pH ಸರಿಯಾಗಿ ಹೊಂದಿಸಿ.
  • ಮಳೆಯ ಅಥವಾ ಮೋಡದ ಸಮಯದಲ್ಲಿ ಮುಂಚಿತವಾಗಿ ಶಿಲೀಂಧ್ರನಾಶಕ ಸಿಂಪಡಣೆ ಮಾಡಿ.
  • ಎಲೆಗಳ ಎರಡೂ ಬದಿಗೂ ಸಮಾನವಾಗಿ ಸಿಂಪಡಣೆ ಆಗುವಂತೆ ನೋಡಿಕೊಳ್ಳಿ.
  • ಸ್ವಯಂ ರಕ್ಷಣೆಗಾಗಿ ಸದಾ ಸುರಕ್ಷತಾ ಸಾಧನಗಳನ್ನು ಧರಿಸಿ.

ಪೋಷಕಾಂಶ ಮತ್ತು ಶಿಲೀಂಧ್ರನಾಶಕ ಸಿಂಪಡಣೆಗೆ ಸೂಕ್ತ ಸಮಯ ಬೆಳಿಗ್ಗೆ ಅಥವಾ ಸಂಜೆ. ಈ ಸಮಯದಲ್ಲಿ ಸಿಂಪಡಿಸಿದರೆ ನಷ್ಟ ಕಡಿಮೆ, ಪರಿಣಾಮ ಹೆಚ್ಚು. ಮಧ್ಯಾಹ್ನ ಬಿಸಿಲಿನಲ್ಲಿ ಮಾಡುವ ಸಿಂಪಡಣೆ ರೈತರಿಗೆ ಲಾಭದಾಯಕವಾಗುವುದಿಲ್ಲ.

ಸಮಯಕ್ಕೆ ಸರಿಯಾಗಿ ಮಾಡಿದ ಸಿಂಪಡಣೆ ಸಸ್ಯಗಳನ್ನು ಆರೋಗ್ಯಕರವಾಗಿಸಿ, ರೋಗ-ಕೀಟ ತಡೆದು, ಹೆಚ್ಚಿನ ಉತ್ಪಾದನೆ ನೀಡುತ್ತದೆ. ಕೃಷಿಯಲ್ಲಿ ಸಮಯವೇ ಯಶಸ್ಸಿನ ಕೀಲಿಕೈ.

Leave a Reply

Your email address will not be published. Required fields are marked *

error: Content is protected !!