ನಾಗನಿಗೆ ಹಾಲು ಎರೆಯುವುದರಿಂದ ಏನೇನು ಲಾಭವಿದೆ?

ನಾಗನಿಗೆ ಹಾಲೆರೆಯುವುದರಿಂದ ಏನೇನು ಲಾಭವಿದೆ?

ಆಷಾಡ ಮಾಸದ  ಅಮಾವಾಸ್ಯೆ ಕಳೆದು ತಕ್ಷಣ ಬರುವ ವಿಷೇಶ ದಿನಗಳಲ್ಲಿ ನಾಗರ ಪಂಚಮಿ  ಮೊದಲನೆಯದ್ದು.  ಇದು ದಕ್ಷಿಣಾಯನದ ಮೊದಲ ವಿಷೇಷ ದಿನ ಎನ್ನಲಾಗುತ್ತದೆ.ಇದರ ನಂತರ ಚೌತಿ, ಅಷ್ಟಮಿ, ನವರಾತ್ರೆ, ದೀಪಾವಳಿ ಮುಂತಾದ ವಿಷೇಷ ದಿನಗಳು ಬರುತ್ತವೆ. ಎಲ್ಲದಕ್ಕೂ ನಾಗರ ಪಂಚಮಿ ಮುಹೂರ್ತ. ಪಂಚಮಿಯಂದು ನಾಗನಕಲ್ಲಿಗೆ  ಅವರವರ ಶಕ್ತಿಯನುಸಾರ ಹಾಲೆರೆಯುತ್ತಾರೆ. ಹೂವು ಹಾಕುತ್ತಾರೆ. ಅರಶಿನ ಲೇಪಿಸುತ್ತಾರೆ. ಸಮರ್ಪಣೆ ಮಾಡುತ್ತಾರೆ. ನೈವೇದ್ಯ ಮಾಡುತ್ತಾರೆ. ಆರತಿ ಎತ್ತುತ್ತಾರೆ. ಧನ್ಯತಾ ಭಾವದಿಂದ ಕಲ್ಲಿನ ಮೂಲಕ ಹರಿದುಬಂದನ್ನು ತೀರ್ಥ ರೂಪದಲ್ಲಿ ಸೇವಿಸಿ ತಮ್ಮ ಮನೆ, ಬಾವಿ, ಹೊಲ, ಹಟ್ಟಿಗಳಿಗೆ ಚಿಮುಕಿಸುತ್ತಾರೆ. ಇದನ್ನು ಕೆಲವರು “ಕಲ್ಲಿಗೆ ಹಾಲೆರೆಯುವುದು” ಎನ್ನುವುದೂ ಇದೆ.

ನಾಗನಿಗೆ ಕ್ಷೀರಾಭಿಶೇಕ ಎಂದರೆ ಕಲ್ಲಿಗೆ ಹಾಲನ್ನು ಚೆಲ್ಲುವುದು ಅಲ್ಲ. ಅಥವಾ ನೆಲಕ್ಕೆ ಚೆಲ್ಲಿ ವ್ಯರ್ಥ ಮಾಡುವುದೂ ಅಲ್ಲ. ಇದರಲ್ಲಿ ಬಹಳಶ್ಟು ವೈಜ್ಞಾನಿಕತೆಯೂ ಇದೆ.  ಇದು ಜಾತಿ, ಧರ್ಮ ಬೇಧವಿಲ್ಲದೆ ಮಾಡಬಹುದಾದ ಆಚರಣೆ. ನಮ್ಮ ಹಿರಿಯರು ಯಾವುದನ್ನು ಅರ್ಥ ಇಲ್ಲದೆ, ಕಾರಣ ಇಲ್ಲದೆ ಮಾಡಿದ್ದಿಲ್ಲ. ಅವರಿಗಿದ್ದ ಜ್ಞಾನದ ಮುಂದೆ ನಮ್ಮ ಜ್ಞಾನ  ತುಂಬಾ ಸಣ್ಣದು. ಪ್ರಕೃತಿಯ ಅರಾಧನೆ ಮತ್ತು ನಮ್ಮ ಬದುಕಿಗೆ ಸಂಬಂಧಪಟ್ಟಂತೆ ನಾಗಾರಾಧನೆಯನ್ನು ಪ್ರಾರಂಭಿಸಿದ್ದಾರೆ. ಅದಕ್ಕನುಗುಣವಾಗಿ ನಾಗರ ಹಾವಿನ ವಾಸಕ್ಕೆ ಅನುಕೂಲವಾಗುವಂತೆ ಬನ ನಿರ್ಮಿಸಿದ್ದಾರೆ. ನಾವು ಮೂರ್ಖರಾಗಿ ಬನವನ್ನು ನವೀಕರಿಸಿ ದೊಡ್ದ ಜನರೆಂದು ಮೆರೆದಿದ್ದೇವೆ.  ಬನ ಅಥವಾ ನಾಗಾಲಯ ಹೇಗಿರಬೇಕು, ಯಾಕಾಗಿ ನಮ್ಮ ಹಿರಿಯರು ಅಲ್ಲಲ್ಲಿ ಮಾಡಿದ್ದರು. ಕೃಷಿಗೂ ಜನ ಜೀವನಕ್ಕೂ ಬನದಿಂದ ಪ್ರಯೋಜನ ಏನು, ಹಾಲೆರೆಯುವುದರ ಅರ್ಥ ಏನು ಎಂಬುದನ್ನು ಪೂರ್ತಿಯಾಗಿ ತಿಳಿದುಕೊಂಡು ಕುತರ್ಕ ಅಥವಾ ಕುಹುಕು ಮಾತಾಡುವುದನ್ನು ಬಿಡೋಣ.

ಮುಂದಿನ ಕೆಲವು ದಿನಗಳಲ್ಲಿ ನಾವು ನಾಗರಪಂಚಮಿಯನ್ನು ಆಚರಿಸಲಿಕಿದ್ದೇವೆ. (ಆಷಾಢ ಮಾಸ ಮುಗಿದು ಶ್ರಾವಣ ಮಾಸ ಪ್ರಾರಂಭವಾಗುವ ನಾಲ್ಕನೇ ದಿನ ವೇ ಪಂಚಮಿ) ಕುಟುಂಬದ , ಊರಿನ ದೇವಸ್ಥಾನದ ಹೀಗೆ ಎಲ್ಲೆಲ್ಲಿಯೋ  ಇರುವ ನಾಗಮೂಲವನ್ನು ಹುಡುಕಿಕೊಂಡು  ಹೋಗಿ ಹಾಲೆರುವ ದಿನ ಅದು. ಇದರ ಅರ್ಥ ಏನು ಎಂದು ತಿಳಿದುಕೊಂಡರೆ ಆಚರಣೆ  ಇನ್ನೂ ಅರ್ಥಗರ್ಭಿತವಾಗಿರುತ್ತದೆ. ಭಕ್ತಿಯೂ ಹೆಚ್ಚಾಗುತ್ತದೆ. ಸಂತೊಷವೂ  ಇಮ್ಮಡಿಯಾಗುತ್ತದೆ.  ಬನ್ನಿ ತಿಳಿಯೋಣ.

ಬನ  ಏನು – ಅದು ಹೇಗಿರಬೇಕು?

ಅಪರೂಪವಾಗಿ ಕಾಣಸಿಗುವ ಮಾದರಿ ನಾಗಬನ
ಅಪರೂಪವಾಗಿ ಕಾಣಸಿಗುವ ಮಾದರಿ ನಾಗಬನ
  • ಬನವನ್ನು ನಮ್ಮ ಹಿರಿಯರು ಅಲ್ಲಲ್ಲಿ ಮಾಡಿದ್ದರು.
  • ಸರಳವಾಗಿ ಹೇಳಬೇಕೆಂದರೆ ಒಂದಷ್ಟು  ಜನ ವಾಸ್ತವ್ಯ, ಹೊಲ ಬೇಸಾಯ  ಇರುವ ಕಡೆ ಅಷ್ಟು ಜನರಿಗೆ  ಸಮೀಪ ಇರುವಂತೆ ಒಂದು ಸ್ಥಾಪಿಸಿದ್ದರು. 
  • ಒಂದೊಂದು ಗ್ರಾಮದಲ್ಲಿ 50-100 ರಷ್ಟೂ ಇರಬಹುದು. ಕಡಿಮೆಯೂ ಇರಬಹುದು.
  • ವರ್ಷದ ಎಲ್ಲಾ ಋತುಮಾನದಲ್ಲೂ ನೀರಾಶ್ರಯ ಇರುವ ಕಡೆ ಸ್ವಲ್ಪ ಸ್ಥಳವನ್ನು ಅದಕ್ಕಾಗಿ ಮೀಸಲಿಟ್ಟು ಅಲ್ಲಿ ಒಂದು ಹಾವಿನ ಆಕೃತಿಯನ್ನು ಕಲ್ಲಿನಲ್ಲಿ ಕೆತ್ತನೆ ಮಾಡಿಸಿ ಸ್ಥಾಪಿಸುತ್ತಿದ್ದರು.
  • ನಾಗರಹಾವು ಎಂದರೆ ಭಯ – ಜೊತೆಗೆ ಭಕ್ತಿಯೂ. ಹಾಗಾಗಿ ಆ ಸ್ಥಳ  ನಿತ್ಯ ಸಂಚಾರ ಇರುವ ಸ್ಥಳವನ್ನು ಆಯ್ಕೆ ಮಾದುತ್ತಿರಲಿಲ್ಲ. 
  • ಕಲ್ಲನ್ನು ಸ್ಥಾಪಿಸಿದ ನಂತರ ಅಲ್ಲಿ ಭಯ – ಭಕ್ತಿ ಹೆಚ್ಚಾಯಿತು. ಅಲ್ಲಿಗೆ ಸಹಜವಾಗಿ ಸಂಚಾರ – ಹಸ್ತಕ್ಷೇಪ ಕಡಿಮೆಯಾಯಿತು.
  • ಅಲ್ಲಿ ಮರಮಟ್ಟುಗಳು, ಬಳ್ಳಿಗಳು ಬೆಳೆಯಲಾರಂಭಿಸಿತು.
  • ಅವುಗಳಲ್ಲಿ ಹೂವು ಕಾಯಿಗಳಾಗಿ ಅಲ್ಲಿ ಮತ್ತೆ ಸಂಖ್ಯಾಭಿವೃದ್ದಿಯಾಗತೊಡಗಿತು.
  • ಅದು ಒಂದು ಸಂರಕ್ಷಿತ ಕಡಾಗಿ ಪರಿವರ್ತನೆಯಾಯಿತು.
  • ಯಾವಾಗ ಅಲ್ಲಿ ಜನ ಹಸಕ್ಷೇಪ ಕಡಿಮೆಯಾಯಿತೋ ಆಗ ಅಲ್ಲಿ ನಾಗರ ಹಾವೂ ಸೇರಿದಂತೆ ಬಹುತೇಕ ಎಲ್ಲಾ ಹಾವು, ಪಕ್ಷಿ , ಸರೀಸೃಪಗಳು. ಮುಂಗುಸಿ ಎಲ್ಲವೂ ವಾಸಸ್ಥಾನವನ್ನಾಗಿ ಪರ್ವರ್ತಿಸಿಕೊಂಡವು.
  • ಅದು ಅವುಗಳಿಗೆ ಸುರಕ್ಷಿತ ಸ್ಥಾನವಾಯಿತು.ಅಲ್ಲಿನ ಮಣ್ಣು ಸದಾ ಮರಮಟ್ಟು ಗಿಡಗಳ ಸೊಪ್ಪು ತರಗೆಲೆ ಒಣ ತ್ಯಾಜ್ಯಗಳ ವಯೊಸಹಜ ಉದುರುವಿಕೆಯಿಂದ  ಸಾವಯವ ಸಂಪನ್ನವಾಯಿತು. ಹುತ್ತಗಳು ಬೆಳೆದವು.
  • ಮಣ್ಣಿನಲ್ಲಿ ಇರಬೇಕಾದ ಎಲ್ಲಾ ನಮೂನೆಯ ಕಣ್ಣಿಗೆ ಕಾಣುವ ಸುಕ್ಷ್ಮಾಣು ಜೀವಿಗಳು ( ಎರೆಹುಳು, ಗೆದ್ದಳು  ಗಂಗೆ ಹುಳು, ಶತಪದಿ ಇತ್ಯಾದಿ) ಕಾಣಿಸದ ಅಸಂಖ್ಯಾತ  ಸೂಕ್ಷ್ಮಾಣು ಜೀವಿಗಳು  ಬದುಕಲು ಅನುಕೂಲವಾಯಿತು.
  • ಅಲ್ಲಿನ ಮಣ್ಣು ಮಣ್ಣಾಗಿರದೆ ಅದು ಮೃತ್ತಿಕಾ (ಪ್ರಸಾದ ರೂಪದ ಮಣ್ಣು) ಎಂಬ ಹೆಸರು ಪಡೆಯಿತು.
  • ಇವೆಲ್ಲಾ ಪ್ರಾಕೃತಿಕ ಮಾರ್ಪಾಡುಗಳಿಗೆ ಅನುಕೂಲವಾಗುವಂತೆ ಇರುವ ವ್ಯವಸ್ಥೆಯೇ ನಾಗಬನ.
  • ಆ ಭಾಗಕ್ಕೆ ಹೋಗುವುದಕ್ಕೂ ಅಂಜಿಕೆ  ಆಗಬೇಕು. ಅಲ್ಲಿ ನಿಂತು ಮಾತಾಡಲಿಕ್ಕೂ ಭಯವಾಗಬೇಕು.
  • ಅನ್ಯಾಯ ಅನಾಚಾರಗಳನ್ನು ಬದಿಗಿಟ್ಟು ನಿಶ್ಕಲ್ಮಶ ಭಾವದೊಂದಿಗೆ ಬನದ ಸಮಿಪ ಹೋಗಬಹುದು ಇಲ್ಲವಾದರೆ ದೋಷ ಎಂಬ ಬಾವನೆ  ಇರುವ ಸ್ಥಳವೇ ನಾಗಬನ. 
  • ಇದು ಒಂದು ಸಹಜ ಪ್ರಕೃತಿಯನ್ನು ನಮ್ಮ ತಲೆಮಾರಿನವರಿಗೆ ಉಳಿಸಿಕೊಡುವ ವ್ಯವಸ್ಥೆ. 

ಬನದಿಂದ ಪರಿಸರಕ್ಕೆ ಪ್ರಯೋಜನ ಏನು?

  • ಜನರ ಹಸ್ತಕ್ಷೇಪ ಎಲ್ಲವನ್ನೂ  ಹಾಳು ಮಾಡುತ್ತದೆ. ಕಾಡಿನಲ್ಲಿ ಹುಲಿಯೂ ಇರುತ್ತದೆ, ಜಿಂಕೆಯೂ ಇರುತ್ತದೆ. ಹಾವೂ ಇರುತ್ತದೆ. ಮುಂಗುಸಿಯೂ ಇರುತ್ತದೆ.
  • ಒಂದು ವೇಳೆ ಮನುಷ್ಯನೂ  ಜೊತೆಗೆ ಇರುತ್ತಿದ್ದರೆ ಅಲ್ಲಿ ಪ್ರಾಣಿಗಳು ಓಡಿ ಹೋಗುತ್ತಿದ್ದವೇನೋ.
  • ಮಾನವ ಒಬ್ಬ ಇಲ್ಲದಿದ್ದರೆ ಅಲ್ಲಿನ ಸ್ವಚ್ಚಂದ ಪರಿಸರಕ್ಕೆ ಯಾವ ಅಡ್ದಿಯೂ ಇರಲಾರದು.
  • ಅವನ ಹಸಕ್ಷೇಪ ಇಲ್ಲದ ವರ್ಷದಲ್ಲಿ ಒಂದು ಎರಡು ಸಲ ಮಾತ್ರ ನಯ ನಾಜೂಕಿನಲ್ಲಿ  ಅಲ್ಲಿಗೆ ಪ್ರವೇಶ ಮಾಡುವುದಿದ್ದರೆ ಅಲ್ಲಿನ ಪರಿಸರ ಯಾವ ಅಭ್ಯಂತರವೂ ಇಲ್ಲದೆ ಬೆಳೆಯುತ್ತಿರುತ್ತದೆ
  • ಪರಿಸರ ಎಂದರೆ ಬರೇ ಮರಮಟ್ಟು ಮಾತ್ರವಲ್ಲ.
  • ಎಲ್ಲಾ ನಮೂನೆಯ ಜೀವ ವೈವಿಧ್ಯಗಳ ನೆಲೆ.
  • ಅದು ಆಯಾ ಪ್ರಾದೇಶಿಕತೆಯಲ್ಲಿ ಅಲಲ್ಲಿ ಒಂದೊಂದು ಬೇಕು ಎಂಬ   ಮಹಾನ್ ಚಿಂತನೆಯಲ್ಲಿ ನಮ್ಮ ಹಿರಿಯರು ಬನವನ್ನು ಹುಟ್ಟು ಹಾಕಿರುತ್ತಾರೆ.
  • ಬನದಲ್ಲಿ  ಆ ಊರಿನಲ್ಲಿ ಇರುವ ಬಹುತೇಕ ಎಲ್ಲಾ ಸಸ್ಯವರ್ಗಗಳೂ ಕಾಣಲು ಸಿಗುತ್ತವೆ.
  • ಜೀವ ಜಂತುಗಳೂ ಇರುತ್ತವೆ.  ಹಾಗಾಗಿ ಅದನ್ನು ನೈಜ ಪರಿಸರ ಎಂದು  ಕರೆಯಲಾಗುತ್ತದೆ.

ನಾಗರ ಹಾವು ಅಥವಾ ಇನ್ನಿತರ ಹಾವುಗಳು ಜನ ವಸತಿ ಪ್ರದೇಶಕ್ಕೆ ಬರುವುದು ಆಹಾರ ಹುಡುಕಿಕೊಂಡು. ಬನವೆಂಬ ವ್ಯವಸ್ಥೆ ಅಲ್ಲಿಯೇ ಅವುಗಳಿಗೆ ಆಹಾರ ದೊರೆತು ಹೊರಗೆ ಜನವಸತಿ ಪ್ರದೇಶಕ್ಕೆ ಬಾರದಂತೆ ತಡೆಯುತ್ತದೆ ಸಹ.

ಹಾಲೆರೆಯುವುದು ಯಾಕೆ?

  • ನಾಗನಿಗೆ ಹಾಲೆರೆಯುವುದು ಜೀವಂತ ಹಾವಿಗೆ ಅಲ್ಲ. ಹಾವಿನ ಪ್ರತಿರೂಪ ಅಥವಾ ಅದರ ಆವಾಹಿತ ಕಲ್ಲಿಗೆ ನಾವು ಅದನ್ನು ಹಾಕುತ್ತೇವೆ.
  • ಬರೇ ಹಾಲು ಮಾತ್ರವಲ್ಲ. ಅಲ್ಲಿ ಪಂಚಾಮೃತಗಳನ್ನೂ  ಎರೆಯುವ ಕ್ರಮ ಇದೆ.
  • ಹಾಲು, ಮೊಸರು, ಗೋಮೂತ್ರ, ಜೇನು, ತುಪ್ಪ ಇತ್ಯಾದಿಗಳನ್ನೂ ಸಹ ಕಲ್ಲಿಗೆ ಎರೆಯಲಾಗುತ್ತದೆ.
  • ಇದರಲ್ಲಿ ಸ್ವಲ್ಪ ತೀರ್ಥ ರೂಪವಾಗಿ ಸಂಗ್ರಸುವುದು ಬಿಟ್ಟರೆ  ಉಳಿದವುಗಳು ನೆಲಕ್ಕೆ  ಸೇರಿಕೊಳ್ಳುತ್ತದೆ.
  • ನೆಲದಲ್ಲಿ  ಇರುವ ಸಾವಯವ ವಸ್ತು ಹಾಗೂ  ಸೂಕ್ಷ್ಮಾಣು ಜೀವಿಗಳಿಗೆ ಅದು ಆಹಾರವಾಗುತ್ತದೆ. 
  • ಹಾಲನ್ನು ಹೊರವಾತಾವರಣಕ್ಕೆ ತೆರೆದಿಟ್ಟಾಗ  ಅದು ಮೊಸರಾಗುವುದು ಸಹಜ ( ಇಲ್ಲಿ  ಸ್ವಲ್ಪವಾದರೂ ಮೊಸರನ್ನೂ , ಜೇನು, ತುಪ್ಪ, ಹಾಗೂ ಗೋಮೂತ್ರ ಅರಶಿನ ಇತ್ಯಾದಿಗಳನ್ನು  ಸೇರಿಸಿರುತ್ತಾರೆ.
  • ಇದೂ ಸಹ ಭೂಮಿಯ ಜೀವಾಣುಗಳ ಪೋಷಣಾ ಆಹಾರಗಳು) ನಾಗಾರಧನೆಗೆ ಬಳಸುವ ಹಾಲು ಕಚ್ಚಾ ಹಾಲಾಗಿರುತ್ತದೆ.
  • ಇದರಲ್ಲಿ Lactobacillus, Leuconostoc ಮುಂತಾದ ಉಪಕಾರೀ ಬ್ಯಾಕ್ಟೀರಿಯಾಗಳು  ಇರುತ್ತವೆ.
  • ಇವು ನೆಲಕ್ಕೆ ಸೇರಿದಾಗ ಆ ಮಾಧ್ಯಮದಲ್ಲಿ  ಅಸಂಖ್ಯಾತ ಪ್ರಮಾಣದಲ್ಲಿ ಅಭಿವೃದ್ದಿಯಾಗಿ ಮಣ್ಣನ್ನು ಜೈವಿಕವಾಗಿ ಸಮೃದ್ಧಗೊಳಿಸುತ್ತವೆ.
  • ಮಣ್ಣಿನ ಫಲವತ್ತತೆ ಮತ್ತು ರೋಗ ರಕ್ಷಣೆಗೆ ಲ್ಯಾಕ್ಟೋ ಬ್ಯಾಸಿಲಸ್ ಬ್ಯಾಕ್ಟೀರಿಯಾಗಳ ಪಾತ್ರ ದೊಡ್ಡದು.
  • ಅದು ಸಮಯಾಧಾರಿಯವಾಗಿ ಮಣ್ಣಿಗೆ ಸೇರಿದಾಗ ಮಣ್ಣು ಸಂಪನ್ನವಾಗುತ್ತದೆ.
  • Lactic acid bacteria enhance soil fertility and nutrient uptake. Lactic acid bacteria control plant pathogens and diseases. Lactic acid bacteria increase plant growth and yield.

ಎರಡು ತಿಂಗಳ ಕಾಲ ನಿರಂತರ ಮಳೆ ಬಂದು ನೆಲದ ಸಂಪದ್ಭರಿತ ಮಣ್ಣು ಕೊಚ್ಚಣೆಯಾಗಿ ಹೋಗಿರುತ್ತದೆ. ಆದರೆ ಬನವೆಂಬ ಸುರಕ್ಷಿತ ಜಾಗದಲ್ಲಿ ಸಾವಯವ ವಸ್ತುಗಳ ದಪ್ಪ ಹೊದಿಕೆ ಇದ್ದು ಕೊಚ್ಚಣೆಗೆ ಅವಕಾಶ ಇರುವುದಿಲ್ಲ. ಹಾಗಾಗಿ ಆ ಜಾಗದಲ್ಲಿ ಹಾಲಿನ ಹಾಗೂ ಇತರ ಪದಾರ್ಥಗಳಿಂದ ಜೀವಾಣುಗಳು ಅಭಿವೃದ್ದಿಯಾಗಿ ಅದು ನಿಧಾನವಾಗಿ ಸುತ್ತಮುತಲಿನ ನೆಲಕ್ಕೆ ಪ್ರಸಾರವಾಗಿ ಭೂಮಿ ಫಲವತ್ತಾಗುತ್ತದೆ ಎಂಬ ಕಾರಣಕ್ಕೆ ಈ ಸಂಪ್ರದಾಯವನ್ನು ಹಿರಿಯರು ಮಾಡಿದ್ದಾರೆ.

ಆಧುನಿಕ ನಾಗ ಬನ!
ಆಧುನಿಕ ನಾಗ ಬನ!

ತೀರ್ಥವಾಗಿ ಬಳಸುವುದರಿಂದ ಪ್ರಯೋಜನ ಎನು?

ನಾಗನಿಗೆ ಹಾಲು ಎರೆದು ಅಲ್ಲಿ ಸಂಗ್ರಹವಾದ ತೀರ್ಥವನ್ನು ಮನೆಗೆ ಒಯ್ದು ಅದನ್ನು ಸೇವಿಸುವುದು ಹಟ್ಟಿ, ಕೃಷಿ ಭೂಮಿ ಮನೆಗೆ ಚಿಮುಕಿಸುವುದರಿಂದ ಅಲ್ಲಿನ ಉಪಕಾರೀ ಬ್ಯಾಕ್ಟೀರಿಯಾಗಳು ಅದರ ಮೂಲಕ ಇಲ್ಲಿಗೂ ಪ್ರಸಾರವಾಗುತ್ತದೆ.

ಇವೆಲ್ಲ ಅನುಕೂಲಗಳು ನಮಗೆ ಪ್ರಾಪ್ತವಾಗುವುದು ನಮ್ಮ ಸಾಂಪ್ರದಾಯಿಕ ನಾಗಬನಗಳಿಂದ ಮಾತ್ರ. ಆಧುನಿಕ ಸಿಮೆಂಟ್ ಕಾಂಕ್ರೀಟಿನ ಬನಗಳು ಇವುಗಳು ವಾಸಿಸಲು ಅಂಜುವ ಸ್ಥಳಗಳಾಗಿವೆ.  ಹಾಗಾಗಿ ಬನಕ್ಕೆ ಆಧುನೀಕರಣ ಬೇಡ. ಹೇಗೆ ಬನ ಇದೆಯೋ ಅದನ್ನು  ಯಥಾಸ್ಥಿತಿಯಲ್ಲಿ ಉಳಿಸಿ. ವರ್ಷಕ್ಕೊಮ್ಮೆ ತಪ್ಪಿದರೆ ಮತ್ತೊಮ್ಮೆ ಹೋಗುವ ಸ್ಥಳ ಅದು.ನಾಗನಿಗೆ ವಾಸಿಸಲು ಬಿಲ ಬೇಕು.ಹೊರತಾಗಿ ಮನೆ ಬೇಡ. ಇವಿಷ್ಟನ್ನು ತಿಳಿದುಕೊಳ್ಳಿ.   

Leave a Reply

Your email address will not be published. Required fields are marked *

error: Content is protected !!