12-10-2021 ರ ಅಡಿಕೆ, ಕರಿಮೆಣಸು,ಕೊಬ್ಬರಿ ಕಾಫೀ ಧಾರಣೆ.
ಕಳೆದ ಎರಡು ವಾರದಿಂದ ರಾಶಿ ಅಡಿಕೆ ಮತ್ತು ಚಾಲಿ ದರಗಳು ಇಳಿಮುಖ ಹಾದಿಯಲ್ಲಿ ಸಾಗುತ್ತಿರುವ ಕಾರಣ, ಬೆಳೆಗಾರರು ಮಾರಾಟಕ್ಕೆ ಮುಂದಾಗಿದ್ದಾರೆ. ಸಹಜವಾಗಿ ಬೆಲೆ ಇಂದು 12-10-2021 ರಂದು ಇಳಿಕೆಯೇ. ಕರಿಮೆಣಸಿನ ಬೆಲೆ ಏರುವ ಕಾರಣ ಕೊಡುವವರು ಕಡಿಮೆ.ಬೆಳೆಗಾರರ ನಡೆಯ ಮೇಲೆ ಮಾತ್ರ ಬೆಲೆ ಸ್ಥಿತರೆ ಹಾಗೂ ಏರಿಕೆ ಆಗಲು ಸಾಧ್ಯ ಇದನ್ನು ಬೆಳೆಗಾರರು ಅರ್ಥ ಮಾಡಿಕೊಳ್ಳಬೇಕಾಗಿದೆ. ದರ ಇಳಿಕೆಯಾದ ತಕ್ಷಣ ಅಧಿಕ ಪ್ರಮಾಣದಲ್ಲಿ ರೈತರು ಮಾರಾಟಕ್ಕೆ ಮುಂದಾಗುತ್ತಾರೆಯೋ ತಿಳಿಯುತ್ತಿಲ್ಲ. ಯಾವ ಬೆಳೆಗಾರನಿಗೂ ಮಾರುಕಟ್ಟೆಯಲ್ಲಿ ಗರಿಷ್ಟ ಬೆಲೆ ಬಂದು…
