ಗೋಬರ್ ಗ್ಯಾಸ್ ಡ್ರಮ್

ಗೋಬರ್ ಗ್ಯಾಸ್ ಇರುವವರು ಪ್ರಾಮಾಣಿಕರು ಮತ್ತು ಸಜ್ಜನರು.

ಗೋಬರ್ ಗ್ಯಾಸ್ ಹೊಂದಿರುವ  ಮನೆಯವರು ಸ್ವಾವಲಂಬಿ  ಬದುಕಿನಲ್ಲಿ ವಿಶ್ವಾಸ ಇಟ್ಟುಕೊಂಡವರು. ತಾವು ಬದುಕುವ ಜೊತೆಗೆ ಮನುಷ್ಯರನ್ನೇ ನಂಬಿ ಬದುಕುವ ಜಾನುವಾರುಗಳಲ್ಲಿ ಪ್ರೀತಿ ಹೊಂದಿದವರು. ಮನುಷ್ಯ ಸಾಕಿದರೆ ಮಾತ್ರ ಜಾನುವಾರುಗಳು ಉಳಿಯುತ್ತವೆ.  ಮನುಷ್ಯನಿಗೆ ಉಪಕಾರ ಮಾಡುತ್ತಾ ತನ್ನ  ಜೀವನ ಸವೆಸುವ ಈ ಜೀವಿಯ  ಉಳಿವಿಗೆ ಗೋಬರ್ ಗ್ಯಾಸ್ ಹೊಂದಿದವರ ಕೊಡುಗೆ ಅಪಾರ. ಅದೇ ಕಾರಣಕ್ಕೆ ಅವರು ಪ್ರಾಮಾಣಿಕರು. ಸಜ್ಜನರು. ಈ ಮಾತನ್ನು ಹೇಳಿದವರು ಮಂಗಳೂರಿನ  ಕೇಂದ್ರ ಮಾರುಕಟ್ಟೆಯ ಒಂದು ಬದಿಯಲ್ಲಿ ( ಸೌರಾಷ್ಟ್ರ  ಕ್ಲೋಥ್ ಸ್ಟೋರ್‍ ಪಕ್ಕ) ಒಬ್ಬರು…

Read more
Pepper

ಕರಿಮೆಣಸು ಬಳ್ಳಿಗೆ ರೋಗ ಬಾರದಂತೆ ರಕ್ಷಣೆ ಹೀಗೆ.

ಮಳೆಗಾಲ ಬಂದರೆ ಸಾಕು ಕರಿಮೆಣಸಿನ ಬೆಳೆಗೆ ಯಾವಾಗ ರೋಗ ಬರುತ್ತದೆ ಎಂಬುದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ.ಇದು ಕರಿಮೆಣಸು ಮಾತ್ರವಲ್ಲ ತೀರಾ ಸಪುರ ( ತೆಲೆಕೂದಲು ತರಹದ ) ಬೇರುಗಳಿರುವ ಎಲ್ಲಾ ಬೆಳೆಗಳೂ ಮಳೆಗಾಲ ಅಥವಾ ನೀರು ಹೆಚ್ಚಾಗಿ ಬೇರಿಗೆ ಉಸಿರು ಕಟ್ಟಿದ ತರಹದ  ಸನ್ನಿವೇಶ ಬಂದಾಗ ರೋಗಕ್ಕೆ  ತುತ್ತಾಗುತ್ತದೆ. ಕೆಲವು ಕಡೆ ರೋಗ ಹೆಚ್ಚು, ಇನ್ನು ಕೆಲವು ಕಡೆ ಕಡಿಮೆ. ಇದಕ್ಕೆ ಕಾರಣ ಅವರ ನಿರ್ವಹಣೆ. ಕರಿಮೆಣಸಿನ ಬಳ್ಳಿಯ ಬುಡ ಭಾಗದಲ್ಲಿ ಸುಮಾರು 20 ನಿಮಿಷಗಳ ಕಾಲ…

Read more
Poly bag fruit plant

ಮನೆಯ ಹಿತ್ತಲು, ಟೆರೇಸ್ ನಲ್ಲಿ ಹಣ್ಣು ಹಂಪಲು ಬೆಳೆಯುವ ವಿಧಾನ.

ಅವರವರ ಬಳಕೆಗೆ ಬೇಕಾಗುವ ಹಣ್ಣು ಹಂಪಲುಗಳನ್ನು ಹೀಗೆ ಬೆಳೆದರೆ ಉತ್ತಮ ಗುಣಮಟ್ಟದ ಸುರಕ್ಷಿತ ಹಣ್ಣುಗಳನ್ನು ತಿನ್ನಬಹುದು. ಒಂದು ಕುಟುಂಬಕ್ಕೆ ಮಾವಿನ ಹಣ್ಣು ಎಷ್ಟು ಬೇಕಾಗಬಹುದು? ವರ್ಷಕ್ಕೆ ಹೆಚ್ಚೆಂದರೆ 10 ಕಿಲೋ. ಇದನ್ನು ಉತ್ಪಾದಿಸಲು ಮಾವಿನ ತೋಟ ಮಾಡಬೇಕಾಗಿಲ್ಲ. ಮನೆಯ ಹಿತ್ತಲಲ್ಲಿ ಎಲ್ಲಿ ಗಾಳಿ ಬೆಳೆಕು ಚೆನ್ನಾಗಿ ಲಭ್ಯವಿರುತ್ತದೆಯೋ ಅಲ್ಲಿ ನೆಟ್ಟು ಫಲವನ್ನು ಪಡೆಯಬಹುದು. ಮಾವು ಮಾತ್ರವಲ್ಲ. ನಾವು ತಿನ್ನಬಯಸುವ ಎಲ್ಲಾ ನಮೂನೆಯ  ಹಣ್ಣು ಹಂಪಲುಗಳನ್ನೂ ಇದೇ ತರಹ ಬೆಳೆಸಿ ನಮ್ಮ ಕುಟುಂಬಕ್ಕೆ ಬೇಕಾದ ವಿಷಮುಕ್ತ ಹಣ್ಣು ಹಂಪಲು…

Read more
ಹಲಸಿನ ಕಾಯಿಯಾಗುವ ಕೌತುಕ

ಹಲಸು ಹೇಗೆ ಕಾಯಿಯಾಗುತ್ತದೆ. ಅದರ ಕೌತುಕ ಏನು?

ಹಲಸಿನ ಮರದಲ್ಲಿ ಹೂವು ಬಿಡುವುದು ಹಲಸಿನ ಕಾಯಿಯಾಗಲು. ಹಲಸಿನ ಕಾಯಿಯ ಮಿಡಿಯೇ ಅದರ ಹೂವು.  ಕಳ್ಳಿಗೆ ಮತ್ತು ಮೈ ಕಳ್ಳಿಗೆ ಎಂದು ಕರೆಯುವ ಇದು ಹೆಣ್ಣು ಮತ್ತು ಗಂಡು ಹೂವುಗಳು. ಚಳಿಗಾಲ ಪ್ರಾರಂಭವಾಗುವ ಸಮಯದಿಂದ ಆರಂಭವಾಗಿ ಶಿವರಾತ್ರೆ  ತನಕ ಹಲಸಿನ ಮರ ಹೂವು ಬಿಡುವ ಕಾಲ. ಈ ಸಮಯದಲ್ಲಿ ಕೆಲವು ಬೇಗ ಹೂವು ಬಿಟ್ಟರೆ ಮತ್ತೆ  ಕೆಲವು ನಿಧಾನವಾಗಿ ಶಿವರಾತ್ರೆ  ನಂತರವೂ ಹೂವು ಬಿಡುತ್ತವೆ. ಗಾಳಿ  ಬಂದಾಗ ಹೂವು ಬಿಡುವಿಕೆ ಜಾಸ್ತಿ ಎನ್ನುತ್ತಾರೆ. ವಾಸ್ತವವಾಗಿ ಹಾಗಲ್ಲ. ಶುಷ್ಕ…

Read more
ಮುತ್ತಿನ ಸರ

ಕೃಷಿಕರು ಮುತ್ತು ಉತ್ಪಾದಿಸಿ ಆದಾಯಗಳಿಸಬಹುದು.

ನಿಮ್ಮ ಕೃಷಿ ಹೊಲದಲ್ಲಿ  ನೀರಾವರಿಯ ಬಾವಿ ಇದೆಯೇ,  ಅಥವಾ ನಿಮ್ಮ ಸುಪರ್ದಿಯಲ್ಲಿ  ದೊಡ್ದ  ಕೆರೆ ಇದೆಯೇ ಹಾಗಿದ್ದರೆ, ಅಲ್ಲಿ  ಕೃಷಿಗೆ ಪೂರಕವಾಗಿ ಅತ್ಯಂತ ಲಾಭದಾಯಕವಾದ ವೃತ್ತಿ “ಮುತ್ತಿನ ಉತ್ಪಾದನೆ” ಮಾಡಬಹುದು. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಅವರ ಆಸ್ಥಾನದಲ್ಲಿ  ಮಾತ್ರ  ರಾಶಿ ರಾಶಿ ಮುತ್ತುಗಳಿತ್ತು. ಆಗ ಬೇರೆಯವರಿಗೆ ಅದನ್ನು ಹೊಂದುವ ಸಾಮರ್ಥ್ಯವೂ ಇರಲಿಲ್ಲ. ರಾಜಾಧಿಪಥ್ಯ ಕೊನೆಗೊಂಡ  ನಂತರ, ಎಲ್ಲರೂ ಮುತ್ತು ಹೊಂದುವ ಸ್ಥಿತಿಗೆ ಬಂದರು. ಆಗ ಅದರ ಬೇಡಿಕೆ ಹೆಚ್ಚಾಯಿತು. ಬೆಲೆಯೂ ಹೆಚ್ಚಾಯಿತು. ಮುತ್ತು ಸಾಮಾನ್ಯ ಬೆಲೆಯ…

Read more
hibiscus flower

ತೋಟದ ಬೇಲಿಯಲ್ಲಿ ದಾಸವಾಳ ನೆಟ್ಟರೆ ಭಾರೀ ಅನುಕೂಲ.

ಹಿಂದಿನವರು ತಮ್ಮ ಅಡಿಕೆ ತೋಟದ ಬೌಂಡ್ರಿಯ ಸುತ್ತ ದಾಸವಾಳದ ಗಿಡ ನೆಡುತ್ತಿದ್ದರು. ಇದರ ಹಿಂದೆ ಸಾಕಷ್ಟು ವೈಜ್ಞಾನಿಕತೆ ಅಡಗಿದೆ.  ವಿಟ್ಲ, ಪುತ್ತೂರು, ಸುಳ್ಯ , ಕಾಸರಗೋಡು, ಹಾಗೆಯೇ ಶ್ರಿಂಗೇರಿ, ಕೊಪ್ಪ, ಸಾಗರ, ಶಿರಸಿ  ಕಡೆಯ  ಹಳೆಯ ಅಡಿಕೆ ಕೃಷಿಕರ ತೋಟದ ಸುತ್ತ ಬೇಲಿಗಳಲ್ಲಿ ದಾಸವಾಳದ ಸಸ್ಯ ಇರುತ್ತದೆ. ದಾಸವಾಳ ಸಸಿ ಬೆಳೆಸುವುದು ಸುಲಭ. ಅಂದಕ್ಕೆ ಹೂವೂ ಆಗುತ್ತದೆ. ಬೇಲಿ ಧೀರ್ಘ ಕಾಲದ ತನಕ ಹಾಳಾಗುವುದಿಲ್ಲ. ಇದು ಬೇಲಿ ಮಾಡುವವರಿಗೆ ತಿಳಿದಿರುವ ಸಂಗತಿ. ತಮ್ಮ ಹಿರಿಯರು ಇದನ್ನು ಅನುಸರಿಸುತ್ತಿದ್ದರು….

Read more
error: Content is protected !!