ಅಲಸಂಡೆ ಬೆಳೆ

ರೋಗ- ಕೀಟಗಳ ಹಾನಿ ಕಡಿಮೆ ಮಾಡಲು ತರಕಾರಿ ಬೆಳೆಗೆ ಮಲ್ಚಿಂಗ್ ಶೀಟು ಹಾಕಿ.

ಇಂದು ನಾವು ಹೇರಳವಾಗಿ ತರಕಾರಿಗಳನ್ನು ಬೆಳೆದು ಬಳಸುತ್ತಿದ್ದರೆ, ಆ ಯಶಸ್ಸಿನ ಹಿಂದೆ ಮಲ್ಚಿಂಗ್ ಶೀಟು ಎಂಬ ತಂತ್ರಜ್ಞಾನದ ಕೊಡುಗೆ ಬಹಳ ಇದೆ. ಇದು ಇಲ್ಲವಾಗಿದ್ದರೆ ಬಹುಶಃ 25-30% ಬೆಳೆ ಕಡಿಮೆಯಾಗಿ, ರೈತರಿಗೆ ಲಾಭವೂ ಕಡಿಮೆಯಾಗುತ್ತಿತ್ತು. ಪ್ರತೀ ವರ್ಷವೂ ತರಕಾರಿ ಬೆಳೆಯುವರಿಗೆ ಒಂದಿಲ್ಲೊಂದು ತೊಂದರೆ.  ಬಾರೀ ಪ್ರಮಾಣದಲ್ಲಿ  ಮಳೆ ಹೊಡೆತಕ್ಕೆ ಸಿಕ್ಕಿ ಬೆಳೆ ಹಾಳಾಗುತ್ತದೆ. ಬೇಸಿಗೆಯಲ್ಲಿ ನೀರೊತ್ತಾಯವಾಗುತ್ತದೆ. ಕಳೆ ಬರುತ್ತದೆ. ಹುಳ ಬರುತ್ತದೆ. ಇದಕ್ಕೆಲ್ಲಾ ಮಲ್ಚಿಂಗ್ ಶೀಟು ಹಾಕಿ ಬೆಳೆದರೆ ಅಷ್ಟೊಂದು ಹಾನಿಇಲ್ಲ. ಕಾರಣ ಇಷ್ಟೇ. ಅಧಿಕ ತೇವಾಂಶವಾಗುವುದನ್ನು…

Read more
ಕೊಬ್ಬರಿ ಧಾರಣೆ

ದಿನಾಂಕ 29-10-2021 ಶುಕ್ರವಾರ- ಅಡಿಕೆ-ಕರಿಮೆಣಸು- ಶುಂಠಿ-ಕೊಬ್ಬರಿ- ರಬ್ಬರ್- ಧಾರಣೆ.

ರಾಜ್ಯದ ವಿವಿಧ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ  ಅಡಿಕೆ, ಕರಿಮೆಣಸು, ಹಸಿ ಶುಂಠಿ, ಕೊಪ್ಬ್ಬರಿ ರಬ್ಬರ್ ಕಾಫೀ, ಮುಂತಾದ ತೋಟಗಾರಿಕಾ ಬೆಳೆಗಳ  ಮಾರುಕಟ್ಟೆ ಧಾರಣೆ ಹೀಗಿತ್ತು. ಚಾಲಿ ದರ ಸ್ಥಿರವಾಗಿತ್ತು. ಕೆಂಪು ಯಲ್ಲಾಪುರ ಮತ್ತು ಶಿರಸಿಗಳಲ್ಲಿ ಸ್ವಲ್ಪ ತೇಜಿ. ಉಳಿದೆಡೆ ಯಥಾಪ್ರಕಾರ ಸ್ಥಿರ.  ದರ ಇಳಿಕೆ ಆಗುವ ಸಾಧ್ಯತೆ ಇಲ್ಲ. ಭಾರೀ ಏರುವ ಸಾಧ್ಯತೆಯೂ ಇಲ್ಲ. ಕರಿಮೆಣಸು ದರ ಇಂದೂ ಸ್ವಲ್ಪ ಏರಿಕೆ. 500 ರ ಗಡಿ ದಾಟಿ 51000 ಕ್ಕೆ ಕಾಲಿಟ್ಟಿದೆ. ಕೆಲವು ವರ್ತಕರು ದರ ಮೇಲೇರುವ…

Read more

ಕರಿಮೆಣಸಿನ ಕಾಳಿನ ತೂಕ ಹೆಚ್ಚಿಸುವುದು ಹೇಗೆ.

ಇನ್ನೇನು ಕರಿಮೆಣಸಿನ ಕಾಳುಗಳು ಬೆಳೆಯುತ್ತಿವೆ. ಕೊಯಿಲು ತಡ ಮಾಡಿದಷ್ಟು ತೂಕ ಹೆಚ್ಚಾಗುತ್ತದೆ. ಒಂದು ಕಿಲೋ ಕರಿಮೆಣಸು ಆಗಲು ಎಷ್ಟು ಒಣ ಕಾಳುಗಳು ಬೇಕು. ಕೆಲವರು 2 ಸೇರು ಬೇಕು ಎನ್ನುತ್ತಾರೆ. ಮತ್ತೆ ಕೆಲವರು  1.75 ಸೇರು ಬೇಕು ಎನ್ನುತ್ತಾರೆ. ಮತ್ತೆ ಕೆಲವರು 1.5ಕಿಲೋ ಸಾಕು ಎನ್ನುತ್ತಾರೆ. ವಾಸ್ತವವಾಗಿ ಚೆನ್ನಾಗಿ ಬೆಳೆದ ಲೀಟರಿನ ಪಾತ್ರೆ (Liter waight)ತುಂಬ ಹಾಕಿದರೆ 750-800 ಗ್ರಾಂ  ಒಣ ತೂಕ ಬರುತ್ತದೆ. ಇದು ಹೇಗೆ ಇಲ್ಲಿದೆ ಮಾಹಿತಿ. ಮೆಣಸಿನ ಬಳ್ಳಿಗೆ ಆಹಾರ ನೀರು ದೊರೆತರೆ…

Read more
ಸಾಗುವಾನಿ ಮರಗಳಲ್ಲಿ ಅತ್ಯಧಿಕ ಎಲೆಗಳು

ಸಾಗುವಾನಿ ಬೆಳೆದರೆ ಮಣ್ಣು ಫಲವತ್ತಾಗುತ್ತದೆ.

ಜೀವಾಣುಗಳಿಂದ ಸಮೃದ್ಧವಾದ ಮಣ್ಣು  ಇರುವುದು ಮಾನವನ ಹಸ್ತಕ್ಷೇಪ ಇಲ್ಲದ ಕಾಡಿನ ಮಣ್ಣು ಮತ್ತು ಸಾಗುವಾನು ಮರದ ಬುಡದ ಮಣ್ಣಿನಲ್ಲಿ. ಯಾಕೆಂದರೆ ಸಾಗುವಾನಿ ಮರದ ಎಲೆಗಳ ರಚನೆಯೇ ಹಾಗೆ. ಸಾಗುವಾನಿ ಮರದ ಬುಡದಲ್ಲಿ  ಬೇಸಿಗೆಯಲ್ಲಿ ನಡೆದುಕೊಂದು ಹೋದರೆ  ಚಕ್ಕುಲಿ  ಹುಡಿಯಾದ ಸದ್ದು ಕೇಳಿಸುತ್ತದೆ. ಮಳೆಗಾಲದಲ್ಲಿ ನಡೆದುಕೊಂಡು ಹೋದರೆ  ಜಾರಿ ಬೀಳಬಹುದು ಅಷ್ಟು ಪ್ರಮಾಣದ ಮೆಕ್ಕಲು ಮಣ್ಣು ಬುಡದಲ್ಲಿ ಸಂಗ್ರಹವಾಗಿರುತ್ತದೆ. ಇದು ಸಾಗುವಾನಿ ಮರದ ವೈಶಿಷ್ಟ್ಯ. ಸಾಗುವಾನಿ ಅಥವಾ ತೇಗದ ಮರ ಎಲ್ಲಾ ಪ್ರದೇಶಗಳಲ್ಲೂ ಬೆಳೆಯುವ ಮರಮಟ್ಟು. ಕೃಷಿ ಅರಣ್ಯವೂ…

Read more
error: Content is protected !!