ರೈತರೇ ಭೂಮಿ ಮಾರಿದರೆ ಹಳ್ಳಕ್ಕೆ ಬಿದ್ದೀರಿ- ಜೋಕೆ.

ಕೃಷಿ  ಭೂಮಿಗೆ  ಬಂಗಾರದ ಬೆಲೆ ಬರಬಹುದು. ಅಥವಾ ವಜ್ರದ ಬೆಲೆ ಬರಬಹುದು. ಆದರೆ ಅದು ಮಾರಾಟದ ಸ್ವತ್ತು ಅಲ್ಲ. ಕೊಳ್ಳುವ ಜನ ನಿಮ್ಮನ್ನು ಹಳ್ಳಕೆ ತಳ್ಳಿ, ಅವರು ದೋಣಿಯಲ್ಲಿ ಪಯಣಿಸುತ್ತಾರೆ. ಮನುಷ್ಯನಿಗೆ ಶನಿ ಅಂಟುವ ಮೊದಲ ಚಿನ್ಹೆ ನಮ್ಮ ಅನ್ನದ ಮೂಲವನ್ನು  ಪರರಿಗೆ ಮಾರಾಟ ಮಾಡುವುದಕ್ಕೆ ಮನಸ್ಸು ಒಪ್ಪುವುದು.  ಭೂಮಿ ಮಾರಾಟದ ಸ್ವತ್ತು ಅಲ್ಲ: ಭೂಮಿ ಒಂದು ಸ್ತಿರ ಆಸ್ತಿಯೇ ಹೊರತು ಚಲಾವಣೆಯ ಆಸ್ತಿ ಅಲ್ಲ. ಆಸ್ತಿಗಳಲ್ಲಿ ನಗದೀಕರಣ ಮಾಡಬಹುದಾದ  ಅಸ್ತಿ ಮತ್ತು ನಗದೀಕರಣ ಮಾಡಲಾಗದ ಆಸ್ತಿ…

Read more
ಅಡಿಕೆ ಗರಿಯಲ್ಲಿ ಸೂಕ್ಷ್ಮ ಪೋಷಕದ ಕೊರತೆ ಲಕ್ಷಣ

ಮೈಕ್ರೋ ನ್ಯೂಟ್ರಿಯೆಂಟ್ ಬಳಸಿದರೆ ಅಚ್ಚರಿಯ ಇಳುವರಿ.

ಭಾರತ ದೇಶದ ಬಹುತೇಕ ಮಣ್ಣಿನಲ್ಲಿ ಸೂಕ್ಷ್ಮಪೋಷಕಾಂಶಗಳ ಕೊರತೆ ಇದೆ. ಒಟ್ಟು ಕೃಷಿ ಭೂಮಿಯಲ್ಲಿ 49% ಸತುವಿನ ಕೊರತೆಯನ್ನೂ , 12% ಕಬ್ಬಿಣದ ಕೊರತೆಯನ್ನೂ , 5% ಮ್ಯಾಂಗನೀಸ್, ಮತ್ತು 3% ದಷ್ಟು ತಾಮ್ರದ ಕೊರತೆಯನ್ನು 33% ಬೋರಾನ್ ಮತ್ತು 11%  ಮಾಲಿಬ್ಡಿನಂ ಕೊರತೆಯನ್ನು ಹೊಂದಿದೆ ಎಂಬುದಾಗಿ ಅಧ್ಯಯನ ಹೇಳುತ್ತದೆ. ನಿಮ್ಮ ಯಾವುದೇ ಬೆಳೆಗೆ 1 ಲೀ. ನೀರಿಗೆ 1  ಗ್ರಾಂ ಪ್ರಮಾಣದಲ್ಲಿ ಮೈಕ್ರೋ ನ್ಯೂಟ್ರಿಯೆಂಟ್ ಮಿಶ್ರಣ ಮಾಡಿ ಸಿಂಪರಣೆ ಮಾಡಿ.ಆಗ ತಿಳಿಯುತ್ತದೆ ಅದರ ಮಹಿಮೆ ಏನು ಎಂಬುದು….

Read more
ಟಿ ಸೊಳ್ಳೆ ಬಾಧಿಸದ ಗೇರು ಮಿಡಿ

ಗೇರು ಬೆಳೆಯಲ್ಲಿ ಹೆಚ್ಚು ಫಸಲು ಪಡೆಯಲು ಈ ಕ್ರಮ ಅನುಸರಿಸಿ.

ಗೇರು ಬೆಳೆಗೆ ಅಗತ್ಯವಾಗಿ ಬೇಕಾದ ಆರೈಕೆ ಎಂದರೆ ಚಿಗುರು ಮತ್ತು ಹೂವು ಬರುವಾಗ ಕೀಟ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು. ಇಲ್ಲಿ ಉದಾಸೀನ ಮಾಡಿದರೆ ಫಸಲು ಭಾರೀ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಟಿ. ಸೊಳ್ಳೆ ಫಸಲಿನ ನಶ್ಟವನ್ನು ಉಂಟು ಮಾಡುತ್ತದೆ. ಗೋಡಂಬಿ ಬೆಳೆಯಲ್ಲಿ ಟಿ- ಸೊಳ್ಳೆ ಕೀಟವನ್ನು  ನಿಯಂತ್ರಿಸಿಕೊಂಡಲ್ಲಿ ಬೆಳೆ ಬಂಪರ್. ಆದಾಯವೂ ಸೂಪರ್. ಟಿ ಸೊಳ್ಳೆ ಕೀಟವನ್ನು ಸುರಕ್ಷಿತವಾಗಿ ನಿಯಂತ್ರಣ ಮಾಡುವುದು ಹೀಗೆ. ರಸ್ತೆ ಬದಿಯಲ್ಲಿರುವ ಗೇರು ಮರಗಳಿಗೆ ಯಾವ ಟಿ- ಸೊಳ್ಳೆಯ ಕಾಟವೂ ಇಲ್ಲ….

Read more
Organic University

ಕರ್ನಾಟಕದಲ್ಲಿ ಸಾವಯವ ಕೃಷಿಗಾಗಿ ವಿಶ್ವ ವಿಧ್ಯಾನಿಲಯ!

ಮಾನ್ಯ ಕೃಷಿ ಮಂತ್ರಿಗಳು ಸಾವಯವ ಕೃಷಿ ಸಂಶೋಧನೆಗಾಗಿ ಒಂದು ವಿಶ್ವ ವಿಧ್ಯಾನಿಲಯವನ್ನು ಸ್ಥಾಪಿಸಬೇಕು ಎಂಬ ಚಿಂತನೆ ನಡೆಸಿದ್ದಾರೆ. ಸುಮಾರು 10 ವರ್ಷಕ್ಕೆ ಹಿಂದೆ ನಮ್ಮ ರಾಜ್ಯದಲ್ಲಿ ಎರಡು ಕೃಷಿ ವಿಶ್ವ ವಿಧ್ಯಾನಿಲಯಗಳಿದ್ದವು. ಮತ್ತೊಂದು ಕೃಷಿ ವಿಶ್ವ ವಿಧ್ಯಾನಿಲಯ ಸೇರ್ಪಡೆಯಾಯಿತು. ತೋಟಗಾರಿಕಾ ವಿಶ್ವ ವಿಧ್ಯಾನಿಲಯವಾಯಿತು. ಪಶು ಸಂಗೋಪನಾ ವಿಶ್ವ ವಿಧ್ಯಾನಿಲಯ, ತೋಟಗಾರಿಕೆ ಮತ್ತು  ಕೃಷಿ ಜಂಟಿ ವಿಶ್ವ ವಿಧ್ಯಾನಿಲಯಗಳಾಯಿತು. ಇನ್ನು  ಉಳಿದದ್ದು ಸಾವಯವ ಕೃಷಿ ಒಂದೇ ಏನೋ ಎಂಬುದು ಮಾನ್ಯ ಕೃಷಿ ಸಚಿವರ ಇಂಗಿತದಲ್ಲಿ ಕಾಣುತ್ತದೆ. ಹಾಲೀ ಇರುವ…

Read more
ಬೋರ್ ವೆಲ್ ನೀರಿನಲ್ಲಿರುವ ಕಶ್ಮಲಗಳು

ಬೋರ್ ವೆಲ್ ನೀರಿನಲ್ಲಿರುವ ಕಶ್ಮಲಗಳ ನಿವಾರಣೆ

ಹನಿ ನೀರಾವರಿ ಎಂದರೆ ನಾವು ಬಳಸುವ ನೀರಿನ ಮೂಲದಲ್ಲಿ  ಯಾವ ಕಶ್ಮಲ  ಇದೆ ಎಂದು ಕೂಲಂಕುಶವಾಗಿ ಗಮನಿಸಿ , ಅದನ್ನು ಸೋಸಲು  ಮತ್ತು ಸ್ವಚ್ಚಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಂಡರೆ ಹನಿ ನೀರಾವರಿ 100% ಯಶಸ್ವಿ. ಹೆಚ್ಚಿನವರು ಕಡಿಮೆ ಖರ್ಚಿನಲ್ಲಿ ವ್ಯವಸ್ಥೆಗಳನ್ನು  ಮಾಡಿಕೊಳ್ಳುವ ಉದ್ದೇಶದಿಂದ ಅಗತ್ಯವಾದ ಸೋಸು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಅದರ ಫಲವಾಗಿ ಸೂಕ್ಷ್ಮ ನೀರಾವರಿ ವ್ಯವಸ್ಥೆ  ಕೆಡುತ್ತದೆ. ಯಾವ ನೀರಿನ ಮೂಲ: ನಾವು ನೀರಾವರಿಗಾಗಿ ಬಳಕೆ ಮಾಡುವ ನೀರಿನ ಮೂಲಗಳೆಂದರೆ ಬಾವಿ- ಕೆರೆ ನೀರು, ಕೊಳವೆ ಬಾವಿ…

Read more

ಅಡಿಕೆಯ ಮಿಳ್ಳೆ ಉದುರುವುದಕ್ಕೆ ಇದು ಕಾರಣ.

ಬೇಸಿಗೆಯಲ್ಲಿ ಅಡಿಕೆ ಬೆಳೆಗಾರರ ನಿದ್ದೆಗೆಡಿಸುವ ಸಮಸ್ಯೆ ಇದು. ಬೆಳೆಗಾರರು ಇದನ್ನು ಉಳಿಸಲು ಯಾವ ಉಪಚಾರಕ್ಕೂ ಸಿದ್ದರು. ಇದಕ್ಕೆ ಈ ತನಕ ಯಾರೂ ನಿಖರ ಕಾರಣವನ್ನು ನೀಡಿದವರಿಲ್ಲ.  ಆದರೆ ಯಾರೂ ಪರಿಹಾರ ಇಲ್ಲ ಎಂದು ಹೇಳುವವರಿಲ್ಲ. ಇದರ ಬಗ್ಗೆ ಕೆಲವು ಯಾರೂ ಹೇಳದ ವಿಚಾರಗಳು ಇಲ್ಲಿವೆ. ಅಡಿಕೆಯ ಮರದ ಹೂ ಗೊಂಚಲಿನಲ್ಲಿ ಗಂಡು  ಹಾಗೂ ಹೆಣ್ಣು ಹೂವುಗಳು ಇರುತ್ತವೆ. ಗಂಡು ಹೂವು ಉದುರಲಿಕ್ಕೇ ಇರುವುದು. ಹೆಣ್ಣು ಹೂವು ಮಾತ್ರ ಉದುರಬಾರದು. ಆದೆಲ್ಲವೂ ಉಳಿದರೆ ಅಡಿಕೆ ಫಸಲು ಉತ್ತಮವಾಗಿರುತ್ತದೆ. ಆದರೆ…

Read more
ginger in sprinkler irrigation

ಶುಂಠಿ ಬೆಳೆದ ಭೂಮಿ ಹಾಳಾಗುವುದು ನಿಜವೇ?

ಕೆಲವರು ಹೇಳುತ್ತಾರೆ ಶುಂಠಿ ಬೆಳೆದರೆ ಆ ಮಣ್ಣು ಹಾಳಾಗುತ್ತದೆ. ಮತ್ತೆ ಅಲ್ಲಿ ಬೆಳೆ ಬೆಳೆಯಲಿಕ್ಕಾಗುವುದಿಲ್ಲ ಎಂದು. ಇದು ನಿಜವೇ? ಶುಂಠಿ ಬೆಳೆಗೆ ಬೇರೆ ಬೇರೆ ಪೊಷಕಾಂಶಗಳನ್ನು ಹಾಕುತ್ತಾರೆ. ಆದ ಕಾರಣ ಮಣ್ಣು ಜೀವ ಕಳೆದುಕೊಳ್ಳುತ್ತದೆ ಎಂಬ ಮಾತನ್ನು ಬಹಳ ಜನ ಇನ್ನೂ ನಂಬಿದ್ದಾರೆ. ಇದನ್ನು ಕೆಲವು ಜನ ರಂಗು ರಂಗಾಗಿ ವಿವರಿಸುತ್ತಾ  ಈ ವಿಷಯದಲ್ಲಿ ತಜ್ಞರಾಗುತ್ತಾರೆ. ಆದರೆ ವಾಸ್ತವವೇ ಬೇರೆ. ಶುಂಠಿ ಬೆಳೆ ಇರಲಿ ಇನ್ಯಾವುದೇ ಬೆಳೆ ಇರಲಿ ಅದು ಮಣ್ಣಿನಲ್ಲಿ ಪೊಷಕ ಇದ್ದರೆ ಅದನ್ನು ಬಳಸಿಕೊಳ್ಳುತ್ತದೆ….

Read more
ನೀರಿಗೆ ಬರ ಬಂದರೆ ? -. ಕಡಿಮೆ ನೀರಿನಲ್ಲಿ ಹೇಗೆ ಬೆಳೆ ಉಳಿಸಿಕೊಳ್ಳುವುದು

ನೀರಿಗೆ ಬರ ಬಂದರೆ ? ಕಡಿಮೆ ನೀರಿನಲ್ಲಿ ಹೇಗೆ ಬೆಳೆ ಉಳಿಸಿಕೊಳ್ಳುವುದು?  

2023 ನೇ ಇಸವಿ ನಮಗೆ ಮಳೆ ಇಲ್ಲದೆ ಬರಗಾಲದ ಸನ್ನಿವೇಶವನ್ನು ತೋರಿಸಿಯೇ ಬಿಡುತ್ತದೆಯೋ ಎಂಬ ಅನುಮಾನ ಮೂಡುತ್ತಿದೆ. ಜುಲೈ ತಿಂಗಳ ಕೊನೆಗೆ ಕಾಣೆಯಾದ ಮಳೆ ಮತ್ತೆ ಬಂದುದು ಆಗಾಗ ನೆಂಟರಂತೆ.  ಹೀಗೆ ಮುಂದುವರಿದರೆ ಬರಗಾಲ ಗ್ಯಾರಂಟಿ. ಯಾವುದಕ್ಕೂ ನಾವು ಸಿದ್ದರಾಗಿರಬೇಕು. ಕೆಲವು ಮೂಲಗಳ ಪ್ರಕಾರ ಇನ್ನು ಬರುವ  ಮಳೆ ಅಲ್ಪ ಸ್ವಲ್ಪ ಪ್ರಮಾಣದ್ದೇ ಹೊರತು, ತಳಕ್ಕಿಳಿದ ನೀರಿನ ಮಟ್ಟವನ್ನು ಮತ್ತೆ ಮೇಲಕ್ಕೇರಿಸುವಷ್ಟು  ಬಲವಾಗಿರುವುದಿಲ್ಲ. ಹಾಗಾಗಿ ನೀರಿನ ಕ್ಷಾಮ ಉಂಟಾಗಲೂಬಹುದು. ಅದಕ್ಕಾಗಿ ಈಗಲೇ ಸಿದ್ದರಾಗೋಣ. ಪ್ರಕೃತಿಯ ಮುಂದೆ ಮಾನವ…

Read more
ಸಂಪಧ್ಭರಿತ ಕಾಂಪೋಸ್ಟ್ ಗೊಬ್ಬರ ಹೇಗೆ ತಯಾರಿಸುವುದು

ಸಂಪಧ್ಭರಿತ ಕಾಂಪೋಸ್ಟ್ ಗೊಬ್ಬರ ಹೇಗೆ ತಯಾರಿಸುವುದು?

ಸಾವಯವ ಗೊಬ್ಬರದ ಪ್ರಮುಖ ಮೂಲ ಕಾಂಪೋಸ್ಟ್. ಬಹುತೇಕ ಎಲ್ಲಾ ಕೃಷಿಕರೂ ಸಾವಯವ ಗೊಬ್ಬರ ತಯಾರಿಸುತ್ತಾರೆ. ಆದರೆ ಹೆಚ್ಚಿನವರು ವೈಜ್ಞಾನಿಕವಾಗಿ ಹೇಗೆ ತಯಾರಿಸಬೇಕೋ ಹಾಗೆ ತಯಾರಿಸದ ಕಾರಣ ಅದರ ಬಳಕೆಯಿಂದ ಸರಿಯಾದ ಫಲವನ್ನು ಪಡೆಯುತ್ತಿಲ್ಲ.  ವೈಜ್ಞಾನಿಕವಾಗಿ  ತಯಾರಿಸಿದ ಕಾಂಪೋಸ್ಟ್ ಗೊಬ್ಬರ ಎರೆಹುಳು ಗೊಬ್ಬರದಷ್ಟೇ ಸತ್ವವನ್ನು ಒಳಗೊಂಡಿರುತ್ತದೆ ಹಾಗೆಯೇ  ಕೊಂಡು ತರುವ ಚೀಲದಲ್ಲಿ ತುಂಬಿದ ಸಾವಯವ ಗೊಬ್ಬರಕ್ಕಿಂತ  ಅದೆಷ್ಟೋ ಪಾಲು  ಫಲಿತಾಂಶವನ್ನು  ಕೊಡುತ್ತದೆ. ಇದನ್ನು ಮಾಡುವುದಕ್ಕೆ ಕಷ್ಟ ಏನೂ ಇಲ್ಲ. ಬರೇ ಸರಳ.ಆದರೆ ನಾವು ಅಜ್ಜ ನೆಟ್ಟ ಆಲದ ಮರಕ್ಕೆ…

Read more

ಸರಳ ವಿನ್ಯಾಸದ ಬಹು ಉಪಯೋಗಿ ಡ್ರೈಯರ್.

ಕೃಷಿ ಎಂದದೆ ಮಳೆಗಾಲದಲ್ಲಿ ಏನಾದರೂ ಒಣಗಿಸುವುದು ಇದ್ದೇ ಇರುತ್ತದೆ. ಅಂಗಡಿಯಿಂದ ತರುವ ಕೊತ್ತಂಬರಿ ಮೆಣಸು, ಮುಂತಾದವುಗಳನ್ನು ತೊಳೆದು ಒಣಗಿಸಿಯೇ ಬಳಸಬೇಕಾಗುತ್ತದೆ. ಮಳೆಗಾಲದಲ್ಲಿ ಇದು ತುಂಬಾ ಕಷ್ಟವಾಗುತ್ತದೆ. ಇಂಥ ಉದ್ದೇಶಕ್ಕೆ ಹಾಗೂ ಹಣ್ಣು ಹಂಪಲು, ಜಾಯೀಕಾಯಿ, ಕರಿಮೆಣಸು ಮುಂತಾದ ಆಹಾರ ವಸ್ತುಗಳು ಹಾಗೂ ಬೆಳೆಗಳಾದ ಅಲ್ಪ ಸ್ವಲ್ಪ ಕೊಬ್ಬರಿ, ಅಡಿಕೆ ಮುಂತಾದವುಗಳನ್ನು ಒಣಗಿಸಲು ಅವರರವರ ಅವಶ್ಯಕತೆಗೆ ಅನುಗುಣವಾಗಿ ಡ್ರೈಯರ್ ಗಳನ್ನು ಹೊಂದುವುದು ಉತ್ತಮ. ಇದರ ಒಂದು ವಿನ್ಯಾಸ ಇಲ್ಲಿ ಕೊಡಲಾಗಿದೆ. ಡ್ರೈಯರುಗಳಲ್ಲಿ ಅನುಕೂಲಕ್ಕೆ ತಕ್ಕುದಾಗಿ ಬೇರೆ ಬೇರೆ ಪ್ರಮಾಣ…

Read more
error: Content is protected !!