ತೆಂಗಿನೆಣ್ಣೆ-ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ತೆಂಗಿನೆಣ್ಣೆಯೂ ವೈರಸ್ ವಿರುದ್ಧ ಕೆಲಸ ಮಾಡುತ್ತದೆ. ಇದು ಕೊರೋನಾ ವೈರಸ್ ಗೆ ಔಷಧಿ ,ತೆಂಗಿನೆಣ್ಣೆ ತಿನ್ನಿ ಎನ್ನುತ್ತಿದ್ದಾರೆ.  ಇದು ಸುಮ್ಮನೆ ಹೇಳಿದ ವಿಚಾರ ಅಲ್ಲ. ಈ ಬಗ್ಗೆ ಕೆಲವು ಅಧ್ಯಯನಗಳು ನಡೆಯುತ್ತಿವೆ.ಇತ್ತೀಚೆಗೆ ಕೆಲವರು ಈ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಲಾರಂಭಿಸಿದ್ದಾರೆ. ಶುದ್ಧ ತೆಂಗಿನೆಣ್ಣೆ ಎಂಬುದು ಅನಾದಿ ಕಾಲದಿಂದಲೂ ಪರಮೌಷಧಿ ಎಂದೇ ಪರಿಗಣಿಸಲ್ಪಟ್ಟಿದೆ.  ಕ್ಕೊಬ್ಬರಿ ಎಣ್ಣೆಯನ್ನು ತಲೆಗೆ ಹಾಕಿದರೆ ಕೂದಲು ಬೆಳೆಯುತ್ತದೆ.  ತುಟಿ ಒಡೆದರೆ ತೆಂಗಿನೆಣ್ಣೆ. ಗಾಯವಾದರೆ ತೆಂಗಿನೆಣ್ಣೆ. ಅಲರ್ಜಿ ಇಂದ ಕಣ್ಣು ಉರಿ, ಮೈ ಉರಿ ಬಂದರೆ…

Read more

ಕಾಡು ಪ್ರಾಣಿಗಳಿಗೆ ಇನ್ನು ಹೊಲವೇ ಖಾಯಂ ವಾಸ್ತವ್ಯ!

ಸರಕಾರ ಈಗ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದ ಸುಮಾರು 23 ಲಕ್ಷ ಎಕ್ರೆ ಅರಣ್ಯ ( ಡೀಮ್ದ್ ಫೋರೆಸ್ಟ್ )ನಲ್ಲಿ 15 ಲಕ್ಷ ಎಕರೆ  ಭೂಮಿಯನ್ನು ಸರಕಾರ ಕಂದಾಯ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಿದೆ. ಈಗಲೇ ಅರಣ್ಯ ನಾಶದಿಂದ  ಕೃಷಿಕರ 10- 20 % ದಷ್ಟು ಬೆಳೆ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಒಂದು ವೇಳೆ ಇನ್ನೂ ಕಾಡು ಕಡಿಮೆಯಾದರೆ  ಕೃಷಿಕರ ಹೊಲದಲ್ಲೇ ಕಾಡು ಪ್ರಾಣಿಗಳು ವಾಸಮಾಡಬಹುದು. ಬೆಳೆಗಳು ಕೋತಿ, ಆನೆ ಕಾಡೆಮ್ಮೆಗಳ ಪಾಲಾಗಬಹುದು. ಹಟ್ಟಿಯಲ್ಲಿರುವ ಹಸುಗಳು ಹುಲಿ, ಚಿರತೆಯ ಪಾಲಾದರೂ…

Read more
ತೆಂಗಿನ ಮರಗಳಿಗೆ ಯಾವಾಗ ಹೇಗೆ ಗೊಬ್ಬರ ಹಾಕಬೇಕು?

ತೆಂಗಿನ ಮರಗಳಿಗೆ ಯಾವಾಗ ಹೇಗೆ ಗೊಬ್ಬರ ಹಾಕಬೇಕು?

ತೆಂಗಿನ ಮರ ತೋಟಗಾರಿಕಾ ಬೆಳೆಗಳಲ್ಲಿ ಅತೀ ಹೆಚ್ಚು  ಪೋಷಕಾಂಶಗಳನ್ನು ಬಯಸುವ ಬೆಳೆ. ವರ್ಷವಿಡೀ ಬೆಳವಣಿಗೆ ಇರುವ ಇದು ಎಲ್ಲಾ ಋತುಮಾನದಲ್ಲೂ ಏಕಪ್ರಕಾರ ಪೋಷಕಗಳನ್ನು ಬಯಸುತ್ತದೆ. ಬಹಳಷ್ಟು ರೈತರು ತೆಂಗಿಗೆ ಗೊಬ್ಬರ ಕೊಡುವ ವಿಚಾರದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಮರದ ಉತ್ತಮ ಬೆಳವಣಿಗೆ ಮತ್ತು ಉತ್ತಮ ಇಳುವರಿಗೆ ಯಾವ ರೀತಿಯಲ್ಲಿ ಗೊಬ್ಬರ ಹಾಕಬೇಕು ಎಂಬ ಪೂರ್ಣ ಮಾಹಿತಿ ಇಲ್ಲಿದೆ. ತೆಂಗಿನ ಮರದ ಶಿರ ಭಾಗ ಲಕ್ಷಣ ಅದರ ಆರೋಗ್ಯವನ್ನು ತಿಳಿಸುತ್ತದೆ. ಮರದ ಗರಿಗಳು ಚತ್ರಿಯಂತೆ ಬಿಡಿಸಿರಬೇಕು.  ಮರದಲ್ಲಿ 35…

Read more
ತೆಂಗು ಬೆಳೆಗಾರರನ್ನು ಉಳಿಸಿ- ಇಲ್ಲವಾದರೆ ತೆಂಗು ಬೆಳೆಯೇ ಕ್ಷೀಣಿಸಬಹುದು!

ತೆಂಗು ಬೆಳೆಗಾರರನ್ನು ಉಳಿಸಿ- ಇಲ್ಲವಾದರೆ ತೆಂಗು ಬೆಳೆಯೇ ಕ್ಷೀಣಿಸಬಹುದು!

ತೆಂಗು ಬೆಳೆಗಾರರ ನೆರವಿಗೆ ಸರಕಾರ ಮತ್ತು ತೆಂಗಿನ ಉತ್ಪನ್ನ ಬಳಕೆದಾರರು ಬಾರದೆ ಇದ್ದರೆ ಕೆಲವೇ ಸಮಯದಲ್ಲಿ ತೆಂಗಿನ ಬೆಳೆಯನ್ನೇ ರೈತರು ಬಿಡುವ ಸ್ಥಿತಿ ಬರಬಹುದು. ಕಲ್ಪವೃಕ್ಷ ತೆಂಗು, ಯಾವತ್ತೂ ಭವಿಷ್ಯವಿರುವ ಬೆಳೆ ಎಂದು ನಂಬಿದ್ದ ಬೆಳೆಗಾರರಿಗೆ ಯಾವತ್ತೂ  ಆಕರ್ಷಕ ಬೆಲೆ ಬರಲೇ ಇಲ್ಲ. ತೆಂಗಿನ ಬೆಳೆ ಕಡಿಮೆ ಇದ್ದ 30-40 ವರ್ಷಗಳ ಹಿಂದೆ ಇದ್ದ ಬೆಲೆಗಿಂತಲೂ ಕಡಿಮೆ ಬೆಲೆ ಈಗ ತೆಂಗಿನ ಕಾಯಿಯದ್ದು. ಈ ಬೆಲೆಯಲ್ಲಿ ತೆಂಗು ಬೆಳೆಗಾರರು ಉಳಿಯುವುದು ಸಾಧ್ಯವೇ? ಖಂಡಿತವಾಗಿಯೂ ಇಲ್ಲ. ಸರಕಾರ ತೆಂಗು…

Read more
ಸಕ್ಕರೆ ಹೆಚ್ಚಾಗಿದೆ- ರೈತರು ಕಬ್ಬು ಬೆಳೆಯಬೇಡಿ

ಸಕ್ಕರೆ ಉತ್ಪಾದನೆ ಹೆಚ್ಚಿದೆ- ರೈತರು ಕಬ್ಬು ಬೆಳೆಯಬೇಡಿ. ಸರಕಾರದ ಹೇಳಿಕೆ.

ದೇಶದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿದೆ. ಹಾಗಾಗಿ ಕಬ್ಬು ಬೆಳೆಯುವ ರೈತರು ಇನ್ನು ಬೆಳೆಯಬೇಡಿ. ಬೆಳೆ ಪರಿವರ್ತನೆ ಮಾಡಿ, ಇಂಧನ ಮತ್ತು ಶಕ್ತಿ ಉತ್ಪಾದನೆ ಕಡೆಗೆ ಗಮನಹರಿಸಬೇಕು ಎಂಬುದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಮಂತ್ರಿಗಳಾದ ನಿಥಿನ್ ಗಡ್ಕರಿಯವರ ಮಾತು.  ಭಾರತ ದೇಶದಲ್ಲಿ ಕಬ್ಬು ಬೆಳೆ ಹೆಚ್ಚಾಗುತ್ತಿದ್ದು, ಎಲ್ಲರೂ ಸಕ್ಕರೆ ಕಾರ್ಖಾನೆಗೆ ಕಬ್ಬು ಹಾಕುತ್ತಾರೆ. ಉತ್ಪಾದಿಸಿದ ಸಕ್ಕರೆ ಮಿಗತೆಯಾಗಿ ಕಾರ್ಖಾನೆಗಳು ನಷ್ಟಕ್ಕೊಳಗಾಗುತ್ತಿವೆಯಂತೆ. ನಮ್ಮ ದೇಶದಲ್ಲಿರುವ ಬಹುತೇಕ ಸಕ್ಕರೆ ಕಾರ್ಖಾನೆಗಳು ಈಗ ಸಕ್ಕರೆ ಉತ್ಪಾದನೆಗಾಗಿ ಕೆಲಸ ಮಾಡುತ್ತಿಲ್ಲ. ಬದಲಿಗೆ…

Read more
ಮಣ್ಣು ಪರೀಕ್ಷೆಗೆ ಮಾದರಿಯನ್ನು ತೆಗೆಯುವ ವಿಧಾನ

ಮಣ್ಣು ಪರೀಕ್ಷೆಗೆ ಮಾದರಿಯನ್ನು ತೆಗೆಯುವ ವಿಧಾನ

ಮನುಷ್ಯನ ದೇಹಾರೋಗ್ಯವನ್ನು ಕೆಲವು ಪರೀಕ್ಷೆಗಳಿಗೆ ಒಳಪಡಿಸಿ ಅನಾರೋಗ್ಯ ಪತ್ತೆ ಮಾಡಿ ಅದರ ಪ್ರಕಾರ ಚಿಕಿತ್ಸೆ ಮಾಡಲಾಗುತ್ತದೆ. ಹೀಗೆ ಮಾಡಿದಾಗ ಅದರ ಫಲಿತಾಂಶ  ಕರಾರುವಕ್ಕಾಗಿರುತ್ತದೆ. ಅದೇ ರೀತಿಯಲ್ಲಿ ಬೆಳೆಗಳಿಗೆ ಕೊಡುವ ಯಾವುದೇ ಪೋಷಕಗಳನ್ನು ಸಸ್ಯಕ್ಕೆ ಅಗತ್ಯವಿದ್ದರೆ ಮಾತ್ರ ಕೊಟ್ಟರೆ ಒಳ್ಳೆಯದು. ಯಾವುದು ಇದೆ, ಯಾವುದರ ಕೊರತೆ ಇದೆ, ಎಷ್ಟು ಕೊಡಬೇಕು ಎಂಬುದನ್ನು ಮಣ್ಣು ಪರೀಕ್ಷೆ ಮಾಡಿ ತಿಳಿಯಲಾಗುತ್ತದೆ.  ಮಣ್ಣು ಎಂಬುದು ಪ್ರಕೃತಿದತ್ತ ಅಮೂಲ್ಯ ಸಂಪತ್ತು. ನಾವು ಬೆಳೆಸುವ ಬೆಳೆಗಳಿಗೆಲ್ಲಾ ಮಣ್ಣೇ ಮೂಲಾಧಾರ. ಮಣ್ಣಿನ ಆರೋಗ್ಯ ಹದಗೆಟ್ಟರೆ ಬೆಳೆಗಳ ಹಾಗೂ…

Read more
ಅಡಿಕೆ ಮಾರುಕಟ್ಟೆಯ ಗ್ರಹಣ ಮೋಕ್ಷ – ಬೆಲೆ ಏರಿಕೆ ಶುರು.

ಅಡಿಕೆ ಮಾರುಕಟ್ಟೆಯ ಗ್ರಹಣ ಮೋಕ್ಷ – ಬೆಲೆ ಏರಿಕೆ ಶುರು.

ಅಡಿಕೆ ಮಾರುಕಟ್ಟೆ ವರ್ಷದುದ್ದಕ್ಕೂ ಏಕಪ್ರಕಾರವಾಗಿ ಇರುವುದಿಲ್ಲ. ಒಮ್ಮೆ ಗ್ರಹಣ ಹಿಡಿದು ಬೆಲೆ ಕುಸಿಯುತ್ತದೆ. ಮತ್ತೆ ಗ್ರಹಣ ಮೋಕ್ಷ ಕಾಲ ಬಂದೇ ಬರುತ್ತದೆ. ಅಡಿಕೆ ಮಾರಾಟವಾಗಿ ಹಣ ಕೈಗೆ ಬರುವ ತನಕ ಗ್ರಹಣ ಕಾಲವೂ, ಹಣ ಬರಲಾರಂಭಿಸಿದ  ತರುವಾಯ ಅದು ಮುಗಿಯುವ ತನಕ ಗ್ರಹಣ ಮೋಕ್ಷವೂ  ನಡೆಯುತ್ತಾ ಇರುತ್ತದೆ. ಇವುಗಳ ಮಧ್ಯೆ ರೈತರು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬೇಕಾಗುತ್ತದೆ. ಸಪ್ಟೆಂಬರ್ ತಿಂಗಳಲ್ಲಿ ಮತ್ತೆ ಕೆಂಪಡಿಕೆ ಧಾರಣೆ ಸ್ವಲ್ಪ ಚೇತರಿಗೆ ಪ್ರಾರಂಭವಾಗಿದೆ. ಚಾಲಿಗೆ ಸ್ವಲ್ಪ ನೆರಳು ಕವಿದಿದೆ. ಅನಿರ್ಧಿಷ್ಟಾವಧಿಯ ತನಕ…

Read more
ಮಣ್ಣಿನ ಸ್ವಾಸ್ತ್ಯಕ್ಕೆ ಸುಣ್ಣದ ಬಳಕೆ: ಮಣ್ಣು ಮತ್ತು ಸಸ್ಯ ಆರೋಗ್ಯಕ್ಕೆ ಅಗತ್ಯ.

Lime Application for Soil Amendment: Boosting Soil Health and Plant Growth

Soil fertility is the backbone of sustainable farming, but in many regions, soil acidity reduces productivity and nutrient availability. Farmers often face poor crop growth due to acidic soils, where essential nutrients are locked and unavailable for plant uptake. One proven and eco-friendly solution is agriculture lime application. By neutralizing soil acidity, lime restores fertility,…

Read more
ಮದುವೆಯ ಸಂಧರ್ಭ

ಕೃಷಿಕರ ಮಕ್ಕಳಿಗೆ ಮದುವೆ ಭಾಗ್ಯ- ಯಾಕೆ ಕಷ್ಟವಾಗುತ್ತಿದೆ? ಪರಿಹಾರ ಏನು?

ಬಹಳ ಜನ ಯುವಕರಿಗೆ ಕೃಷಿ ವೃತ್ತಿಯೇ ಆಗಬಹುದು ಎಂಬ ಆಸೆ ಇದೆ. ಅದರೆ ನಮಗೆ ಹೆಣ್ಣು ಸಿಗದೆ ಮದುವೆ ಭಾಗ್ಯದಿಂದ ವಂಚಿತರಾದೇವೋ ಏನೋ ಎಂಬ ಆತಂಕದಿಂದ, ಬೇರೆ ಉದ್ಯೋಗವನ್ನೇ  ಹುಡುಕುತ್ತಿದ್ದಾರೆ.ವಾಸ್ತವಾಗಿ ಪರಿಸ್ಥಿತಿಯೂ ಹೀಗೇ ಇದೆ. ಬರೇ ಕೃಷಿಕರಿಗೆ ಮಾತ್ರವಲ್ಲ. ಸಮಾಜದಲ್ಲಿ ಯಾರಿಗೆ ಖಾತ್ರಿಯ ಸಂಪಾದನೆ ಮೂಲ ಇಲ್ಲವೋ,ಯಾರಿಗೆ ಮೈ ಕೈ ಕೊಳಕು ಆಗದ ಬಿಳಿಕಾಲರಿನ ಉದ್ಯೋಗ ಇಲ್ಲವೋ, ಅವರಿಗೆಲ್ಲಾ ಈಗ ಮದುವೆಯೆಂಬ ಜೀವನದ ಅತ್ಯಂತ ಪ್ರಮುಖ ಘಟ್ಟ ಅನಿಶ್ಚಿತ. ಸರಕಾರಿ ಉದ್ಯೋಗ, ಸಾಪ್ಟ್ವೇರ್ ಮಂತಾದ ಅಧಿಕ ಸಂಪಾದನೆಯ…

Read more
ಹೃದಯ ಶ್ರೀಮಂತಿಕೆಯ ಕೃಷಿಕರು.

ಕೃಷಿಕರು ಹಣದಲ್ಲಿ ಶ್ರೀಮಂತರಲ್ಲದಿದ್ದರೂ ಹೃದಯ ಶ್ರೀಮಂತರು.

ನಾವು ಕೃಷಿಕರು ಬಡವರು. ನಮಗೆ ಏನೂ ಇಲ್ಲ ಎಂದು ಯಾವತ್ತೂ ಹೇಳಬೇಡಿ. ಕೃಷಿರಾದವರೇ ಸಮಾಜದಲ್ಲಿ ತೃಪಿಯ ಜೀವನ ನಡೆಸು ಹೃದಯ ಶ್ರೀಮಂತರು. ಬಡತನ, ಶ್ರೀಮಂತಿಕೆ ಮುಖ್ಯವಲ್ಲ. ಬಡವನಾದವನೇ ಮುಂದೆ ಶ್ರೀಮಂತನಾಗುವುದು. ಸಿರಿವಂತನಾದವನೇ ನಂತರ ಬಡವನಾಗುವುದು. ಇದೊಂದು ಚಕ್ರ. ಕೃಷಿಕರ ಜೀವನ ಕ್ರಮ ಎಂಬುದು ಸಮಾಜದಲ್ಲಿ ಯಾರೂ ಗಳಿಸದ ಸುಖೀ ಬದುಕನ್ನು ಅನುಭವಸಲಿಕ್ಕಾಗಿಯೇ ಇರುವುದು. ಸ್ವಾವಲಂಭಿ ಬದುಕು ಎಂಬುದು ಇದ್ದರೆ ಅದು ಕೃಷಿ ವೃತ್ತಿಯಲ್ಲಿ ಮಾತ್ರ. ಇಲ್ಲಿ ನಮಗೆ ನಾವೇ ಮಾಲಕರು. ಹೊಟ್ಟೆಗೆ ತಿನ್ನುವುದಕ್ಕೇನೂ ಕಡಿಮೆ ಇಲ್ಲ. ತಿಂದು…

Read more
error: Content is protected !!